Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಇಂಡಿ: ತಾಲೂಕಿನ ಲಚ್ಯಾಣ ಗ್ರಾಮದ ಮಹಾಂತೇಶ ರಾಮಚಂದ್ರಗೌಡ ಬಿರಾದಾರ ಇವರು ಸುಮಾರು ೨೨ ವರ್ಷಗಳ ಕಾಲ ಭಾರತಾಂಬೆಯ ಸುದೀರ್ಘ ಸೇವೆ ಸಲ್ಲಿಸಿ ಸೇವಾನಿವೃತ್ತಿಯಾಗಿ ಲಚ್ಯಾಣ ಗ್ರಾಮಕ್ಕೆ ಮರಳಿದ ಅವರಿಗೆ ಗ್ರಾಮಸ್ಥರಿಂದ ಭವ್ಯ ಸ್ವಾಗತ ದೊರೆಯಿತು.ಭಾರತಿಯ ಸೈನ್ಯದಲ್ಲಿ ೨೦೦೨ ರಲ್ಲಿ ಕೋರ್ ಇ ಎಮ್ ಇ ಸೇವೆಯನ್ನು ಪ್ರಾರಂಭಿಸಿ ದೇಶದ ಗಡಿಬಾಗಗಳಾದ ಜಮ್ಮು ಕಾಶ್ಮೀರದ ಪೂಂಚ್, ಓಡಿಸಾ,ಮಥುರಾ, ಅಂಡಮಾನ್ ನಿಕೋಬಾರ್, ಆಸಾಂ, ಹೀಗೆ ನಾನಾ ಭಾಗಗಳಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿ ಸೇವಾ ನಿವೃತ್ತಿಯಾದ ಅವರನ್ನು ಗ್ರಾಮದ ಶ್ರೀ ಸಿದ್ದಲಿಂಗ ಮಹಾರಾಜರ ಗೆಳೆಯರ ಬಳಗ ಆತ್ಮೀಯವಾಗಿ ಬರಮಾಡಿಕೊಂಡು ಊರಿನ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ಮಾಡಿದರು.ನಂತರ ಶ್ರೀ ಸಿದ್ದಲಿಂಗ ಮಹಾರಾಜರ ಮಠದ ಆವರಣದಲ್ಲಿ ನಡೆದ ಕಾರ್ಯಕ್ರಮದ ಸಾನಿಧ್ಯವನ್ನು ಅಭಿನವ ಮುರುಘರಾಜೇಂದ್ರ ಸ್ವಾಮೀಜಿ ಹೀರೆಮಠ ಶಾರಶ್ಯಾಡ ಮತ್ತು ಇಂಡಿ ಓಂಕಾರ ಮಠದ ಡಾ. ಸ್ವರೂಪಾನಂದ ಸ್ವಾಮೀಜಿ ವಹಿಸಿದ್ದರು.ಬಿಟ ಆಫೀಸರ್ ಡಿ ಎ ಮುಜಗೌಂಡ ಹೊರ್ತಿ ಮಾತನಾಡಿ, ರಾಜ್ಯದಲ್ಲಿಯೇ ಲಚ್ಯಾಣ ಗ್ರಾಮ ಜಿಲ್ಲೆಯಲ್ಲಿ ಅತಿ ಹೆಚ್ಚು ಸೈನಿಕರನ್ನು…
ವಿಜಯಪುರ: ಸಹಜವಾದ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದೆ. ಆದರೆ ಕೆಲವೊಂದು ವಿಕ್ಷಿಪ್ತ ಮನಸ್ಸುಗಳು ತಮ್ಮ ಸ್ವಾರ್ಥ ರಾಜಕಾರಣದ ಬೇಳೆ ಬೇಯಿಸಿಕೊಳ್ಳಲು ಸಾಮಾಜಿಕ ಜಾಲತಾಣದ ಮೂಲಕ ಅಪಪ್ರಚಾರ ಮಾಡಲು ಹೊರಟಿರುವುದು ನನ್ನ ಮನಸ್ಸಿಗೆ ನೋವಾಗಿದೆ. ನನ್ನ ಆರೋಗ್ಯದ ವಿಷಯವನ್ನು ಸಹ ರಾಜಕಾರಣಕ್ಕೆ ಬೆಸೆಯುವುದು ಎಷ್ಟು ಸರಿ? ಈ ಸಂದರ್ಭದಲ್ಲಿ ಸೌಜನ್ಯ ತೋರುವ ಬದಲು ಈ ರೀತಿಯಾಗಿ ಕೆಟ್ಟ ರೀತಿಯಲ್ಲಿ ವರ್ತಿಸುತ್ತಿರುವುದು ಸರಿಯಲ್ಲ, ನಾನು ಆರೋಗ್ಯವಾಗಿದ್ದೇನೆ, ಗುಣಮುಖನಾಗಿದ್ದೇನೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.ಶುಕ್ರವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ನಾನು ನವದೆಹಲಿಗೆ ಪ್ರಯಾಣಿಸುವಾಗ ಅನಾರೋಗ್ಯದ ಹಿನ್ನೆಲೆಯಲ್ಲಿ ಮಾರ್ಗಮಧ್ಯೆ ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಈಗ ಆಸ್ಪತ್ರೆಯಿಂದ ಗುಣಮುಖರಾಗಿ ವಾಪಾಸ್ಸಾಗುತ್ತಿರುವೆ. ನನ್ನ ಆರೋಗ್ಯ ವಿಷಯವನ್ನು ರಾಜಕಾರಣಕ್ಕೆ ಬೆರೆಸುವುದು ಸರಿಯಲ್ಲ, ಸಾಮಾನ್ಯವಾಗಿ ಕಾಣುವ ಸಮಸ್ಯೆ ನನಗೂ ಕಾಣಿಸಿದೆ, ಈ ಬಾರಿ ವಿಶ್ರಾಂತಿ ತೆಗೆದುಕೊಳ್ಳದ ಪರಿಣಾಮ ಸ್ವಲ್ಪ ಆರೋಗ್ಯದಲ್ಲಿ ಹೆಚ್ಚಿನ ವ್ಯತ್ಯಾಸ ಕಂಡು ಬಂದಿತ್ತು. ಈಗ ಸಂಪೂರ್ಣವಾಗಿ ಗುಣಮುಖನಾಗಿದ್ದೇನೆ, ಯಾವ ಆರೋಗ್ಯ ಸಮಸ್ಯೆಯೂ ಇಲ್ಲ…
ವಿಜಯಪುರ: ಬೆಂದರೆ ಮಾತ್ರ ಬೇಂದ್ರೆ ಎಂದು ಹೇಳಿದ ಮಾತು ನೂರಕ್ಕೆ ನೂರು ಸತ್ಯವಾಗಿದ್ದು, ಕವಿಯಾಗುವ ಮುನ್ನ ಕೇಳುವ ಕಿವಿಯಾಗಬೇಕು. ಇನ್ನೊಬ್ಬರ ನೋವಿಗೆ ಧ್ವನಿಯಾಗಬೇಕು. ಬೇರೊಬ್ಬರ ಭಾವನೆಗಳನ್ನು ನಾವು ಅರಿತುಕೊಂಡಾಗ ಮಾತ್ರ ಸುಂದರವಾದ ಕವಿತೆಯನ್ನು ಕಟ್ಟುವುದಕ್ಕೆ ಸಾಧ್ಯವಾಗುತ್ತದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕವಿ ಪ.ಗು.ಸಿದ್ಧಾಪುರ ಹೇಳಿದರು.ನಗರದ ಬೆಂಗಳೂರು ಹೋಟೆಲ್ ಸಭಾಂಗಣದಲ್ಲಿ ಬೇಂದ್ರೆಯವರ ಜನ್ಮ ದಿನದ ಪ್ರಯುಕ್ತ ಆಯೋಜಿಸಲಾಗಿದ್ದ ಪಿಡಿಜೆ ಕಾಲೇಜಿನ ಕನ್ನಡ ಉಪನ್ಯಾಸಕ ಸಂತೋಷ ವಿ.ಕುಲಕರ್ಣಿ ವಿರಚಿತ ಮೂರು ಕೃತಿಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಕನ್ನಡ ಭಾಷಾ ಶ್ರೀಮಂತಿಕೆಯನ್ನು ಹೆಚ್ಚು ಮಾಡಿದ ಸಾಹಿತ್ಯ ಇಂದು ಸೊರಗುತ್ತಿರುವುದು ಕಂಡು ಬರುತ್ತಿದೆ. ಆದರೂ ಅದರ ಮಧ್ಯದಲ್ಲಿ ಸಂತೋಷ ಕುಲಕರ್ಣಿಯಂತಹ ಕವಿಗಳು ಬರೆಯುವವರು ಇರುವ ವರೆಗೂ ಕೆಲವು ಜನವಾದರೂ ಆಸಕ್ತ ಓದುಗರು ಇದ್ದೇ ಇರುತ್ತಾರೆ. ಅವರ ಮನವನ್ನು ಮುಟ್ಟುವುದಕ್ಕಾಗಿಯಾದರೂ ನಾನು ಬರೆಯಬೇಕು ಎಂದು ಗಟ್ಟಿ ಧೈರ್ಯ ಮಾಡಿ ಮೂರು ಕೃತಿಗಳನ್ನು ಲೋಕಾರ್ಪಣೆ ಮಾಡಿದ್ದು ಸಾಹಿತ್ಯ ಉಪಾಸಕರ ಮನವನ್ನು ಗೆಲ್ಲುತ್ತವೆ ಎಂದು ಹೇಳಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ…
ದೇವರಹಿಪ್ಪರಗಿ: ಶ್ರೀಬಾಲಹನುಮಾನ ೧೦ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗಿದ ಸಂಗ್ರಾಣಿ ಕಲ್ಲು ಹಾಗೂ ಭಾರ ಎತ್ತುವ ಸ್ಪರ್ಧೆಗೆ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು.ಪಟ್ಟಣದ ಗಂಗಾನಗರದ ಶ್ರೀಬಾಲ ಹನುಮಾನನ ೧೦ನೇ ವರ್ಷದ ಜಾತ್ರೆಗೆ ಗುರುವಾರ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಜಾತ್ರೆಯ ಅಂಗವಾಗಿ ಪ್ರತಿ ವರ್ಷದಂತೆ ಈ ಬಾರಿಯು ದಿ.೦೭ ಬುಧವಾರ ದವರೆಗೆ ಪುರಾಣ, ವಿವಿಧ ಸ್ಫರ್ಧೆ ಹಾಗೂ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಅಂತೆಯೇ ಶುಕ್ರವಾರ ದೇವಸ್ಥಾನದ ಆವರಣದಲ್ಲಿ ಸಂಗ್ರಾಣಿ, ಗುಂಡು ಕಲ್ಲು ಸೇರಿದಂತೆ ಭಾರವಾದ ಚೀಲಗಳನ್ನು ಎತ್ತುವ ಸ್ಪರ್ಧೆಗೆ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು.೫ ಕಿಲೋದಿಂದ ಆರಂಭಿಸಿ ೭೦ ಕಿಲೋದವರೆಗೆ ಸಂಗ್ರಾಣಿ ಕಲ್ಲು ಹಾಗೂ ೧೭೦ ಕಿಲೋದವರೆಗೆ ಗುಂಡು ಕಲ್ಲುಗಳನ್ನು ಎತ್ತುವ ಸ್ಪರ್ಧೆಯಲ್ಲಿ ಪಟ್ಟಣ, ಮುಳಸಾವಳಗಿ ಸೇರಿದಂತೆ ವಿವಿಧ ಗ್ರಾಮಗಳ ಸ್ಪರ್ಧಿಗಳು ಪಾಲ್ಗೊಂಡಿದ್ದರು.ಜಾತ್ರಾ ಸಮೀತಿಯ ಅಧ್ಯಕ್ಷ ನಿಂಗು ಯಂಭತ್ನಾಳ, ಪಟ್ಟಣ ಪಂಚಾಯಿತಿ ಸದಸ್ಯ ಕಾಸುಗೌಡ ಬಿರಾದಾರ (ಜಲಕತ್ತಿ), ಪಿಕೆಪಿಎಸ್ ಅಧ್ಯಕ್ಷ ಶ್ರೀಶೈಲ ದೇಸಾಯಿ, ಬಂಡೆಪ್ಪ ಬಿರಾದಾರ (ದಿಂಡವಾರ), ಭೀಮು ಒಂಟೆತ್ತೀನ, ಸೋಮು ದೇವೂರ,…
ಬಸವನಬಾಗೇವಾಡಿ: ತಾಲೂಕಿನ ಹುಣಶ್ಯಾಳ ಪಿಬಿ ಗ್ರಾಮದ ಬಡಾವಣೆಯ ಸರಕಾರಿ ಹಿರಿಯ ಕನ್ನಡ ಗಂಡು ಮಕ್ಕಳ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಶಿಕ್ಷಕಿ ಎ.ಎಂ.ಸಗರನಾಳ ಅವರು ಸೇವಾ ನಿವೃತ್ತಿ ಹೊಂದಿದ ಪ್ರಯುಕ್ತ ಬುಧವಾರ ಜರುಗಿದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ರಾಜನಾಳ ಮಾತನಾಡಿ, ಸಮಾಜದಲ್ಲಿ ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು. ಇಂತಹ ವೃತ್ತಿಯಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿ ತಮ್ಮ ಸೇವೆಯನ್ನು ನಿಷ್ಠೆಯಿಂದ ಸೇವೆ ಸಲ್ಲಿಸಿ ಮಕ್ಕಳ ಬದುಕಿಗೆ ಎ.ಎಂ ಸಗರನಾಳ ಅವರು ಬೆಳಕು ಚೆಲ್ಲಿದ್ದಾರೆ. ಅವರ ಸೇವೆ ಮಾದರಿಯಾಗಿದೆ ಎಂದು ಹೇಳಿದರು.ಎಚ್. ಬಿ.ಬಾರಿಕಾಯಿ ಮಾತನಾಡಿ, ಸೇವಾ ನಿವೃತ್ತಿ ಹೊಂದಿದ ಗುರುಮಾತೆ ಅಮರಾವತಿ ಸಗರನಾಳ ಅವರು 35 ವರ್ಷ ಈ ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡುವುದರೊಂದಿಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮಕ್ಕಳು ಪಾಲ್ಗೊಳ್ಳಲು ಪ್ರೋತ್ಸಾಹಿಸಿ ಉತ್ತಮ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಸನ್ಮಾನ ಸ್ವೀಕರಿಸಿದ ಸೇವಾ ನಿವೃತ್ತಿ ಹೊಂದಿದ ಎ.ಎಂ.ಸಗರನಾಳ ಮಾತನಾಡಿದರು.ಶಿಕ್ಷಣ ಇಲಾಖೆಯ ತನಿಖಾಧಿಕಾರಿ ಈರಣ್ಣ ಜುಳು ಜುಳೆ,…
ವಿಜಯಪುರ: ಹಾಲುಮತ ಧರ್ಮವು ಅತ್ಯಂತ ಶ್ರೇಷ್ಠವಾಗಿದ್ದು, ಈ ಧರ್ಮದ ಸಾರವನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿಜಯಪುರದ ಹಾಲುಮತ ವಿದ್ವಾಂಸ ಚಂದ್ರಕಾಂತ ಬಿಜ್ಜರಗಿ ಗುರೂಜಿ ಹೇಳಿದರು.ತಾಳಿಕೋಟಿ ತಾಲೂಕಿನ ಬೂದಿಹಾಳ ಪಿಟಿ ಗ್ರಾಮಕ್ಕೆ ಭೇಟಿ ನೀಡಿದ ಅವರು, ಹಾಲುಮತದ ಪ್ರತಿಯೊಂದು ಮನೆಗೆ ಭೇಟಿ ನೀಡಿದ ಅವರು, ತಾವು ಬರೆದ ಹಾಲುಮತದ ಗ್ರಂಥ ಪ್ರತಿಯೊಬ್ಬರಿಗೂ ತಲುಪಿಸಿ, ಮಧ್ಯ, ಮಾಂಸ, ಸೇವನೆ ಮಾಡಬಾರದು. ಒಳ್ಳೆಯ ಮನುಷ್ಯರಾಗಿ ಧರ್ಮದ ಮೂಲಸಾರದಂತೆ ಬದುಕಬೇಕು ಎಂದು ಹೇಳಿದರು.ಹಾಲುಮತದ ಜನಾಂಗದವರು ತಮ್ಮ ಮಕ್ಕಳಿಗೆ ಶಿಕ್ಷಣವಂತರಾಗಿ ಮಾಡಲು ಶ್ರಮಿಸಬೇಕು. ಶಿಕ್ಷಣದಿಂದಲೇ ಧರ್ಮದ ಏಳಿಗೆ ಸಾಧ್ಯ ಎಂದು ಹೇಳಿದರುಈ ಸಂದರ್ಭದಲ್ಲಿ ಹಾಲುಮತದ ಮುಖಂಡರಾದ ಮಲ್ಲಿಕಾರ್ಜುನ್ ನಾಯ್ಕಲ್, ಗ್ರಾಮ ಪಂಚಾಯತಿ ಸದಸ್ಯರಾದ ಕುಮಾರ್ ಗೌಡ ಬಿರಾದಾರ್, ಮಲ್ಲಿಕಾರ್ಜುನ ಕುಳಗೇರಿ, ಹನುಮಂತರಾಯ ಮಡಿಕೆಶ್ವರ್, ದೇವಕಾಂತ್ ಬಿಜ್ಜರಗಿ, ಸತೀಶ್ ಅಡವಿ ಮುಂತಾದವರು ಉಪಸ್ಥಿತರಿದ್ದರು.
ಸಿಂದಗಿ: ಅಲೆಮಾರಿ ಜನಾಂಗದವರು ಬದುಕು ಕಟ್ಟಿಕೊಳ್ಳಬೇಕು ಎನ್ನುವ ಹಿನ್ನಲೆಯಲ್ಲಿ ಅಲ್ಲಿಯ ಭಾಷೆ, ಭಾವನೆ, ಬದುಕು, ಬವಣೆಯನ್ನು ಚಿಮಣಿ ಬೆಳಕಿನ ಬದುಕು ಕೃತಿಯಲ್ಲಿ ಕಟ್ಟಿ ಕೊಡಲಾಗಿದೆ ಎಂದು ಹಿರಿಯ ಜಾನಪದ ವಿದ್ವಾಂಸ ಡಾ.ಎಂ.ಎಂ ಪಡಶೆಟ್ಟಿ ಹೇಳಿದರು.ಪಟ್ಟಣದಲ್ಲಿ ‘ಚಿಮಣಿ ಬೆಳಕಿನ ಬದುಕು ಅನ್ನೋ ನಾಟಕ ಕೃತಿಯ ಮುಖಪುಟವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಈಗಾಗಲೆ ಕಥೆ, ಕವಿತೆ ಬರೆಯುತ್ತಿರುವ ನಾಗೇಶ ತಳವಾರ, ರಂಗ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಚಿಮಣಿ ಬೆಳಕಿನ ಬದುಕು ಕೃತಿಯ ಮೂಲಕ ನಾಟಕಕಾರರಾಗಿ ಹೊರಹೊಮ್ಮಿದ್ದಾರೆ ಎಂದು ಹಿರಿಯ ಕಥೆಗಾರ ಡಾ.ಚನ್ನಪ್ಪ ಕಟ್ಟಿ ಹೇಳಿದರು.ಮೈಸೂರು ಜಿಲ್ಲಾ ಸಾಹಿತ್ಯ ಪರಿಷತ್ ಸಹಯೋಗದೊಂದಿಗೆ ಸಿಂದಗಿಯ ಮಾಧ್ಯಮರಂಗ ಫೌಂಡೇಶನ್, ಮೈಸೂರಿನ ಸ್ವಜನ್ಯ ಕಲಾ ವೇದಿಕೆ ಜಂಟಿಯಾಗಿ, ಫೆ.೧೦ರಂದು ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜಿಸಿವೆ. ಚಾಮರಾಜನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಆರ್ ಗಂಗಾಧರ್ ಪುಸ್ತಕ ಬಿಡುಗಡೆಗೊಳಿಸಲಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ವಿಜಯಲಕ್ಷ್ಮಿ ಕರಿಕಲ್ ‘ಚಿಮಣಿ ಬೆಳಕಿನ ಬದುಕು’ ಕೃತಿ ಕುರಿತು ಮಾತನಾಡಲಿದ್ದಾರೆ. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್…
ಆಲಮಟ್ಟಿ: ಮಾನವ ಜೀವನ ಅತ್ಯಮೂಲ್ಯ. ಬಹು ಜನ್ಮಗಳ ಪುಣ್ಯದ ಫಲವಾಗಿ ಮಾನವ ಜೀವನ ಪ್ರಾಪ್ತವಾಗಿದೆ, ಕಾಯ ಕಣ್ಮರೆಯಾದರೂ ನೆನಹು ಶಾಶ್ವತವಾಗಿ ಉಳಿಯುವ ಹಾಗೆ ಬದುಕುವುದೇ ನಿಜವಾದ ಬದುಕು ಎಂದು ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಡಾ ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.ತಾಲ್ಲೂಕಿನ ಚಿಮ್ಮಲಗಿ ಭಾಗ-2 ಗ್ರಾಮದಲ್ಲಿ ಶುಕ್ರವಾರ ಸಂಜೆ ಜರುಗಿದ ಅರಳೆಲೆ ಕಟ್ಟಿಮನಿ ಹಿರೇಮಠದ ಲಿಂ.ಶ್ರೀ ನೀಲಕಂಠ ಸ್ವಾಮೀಜಿಗಳ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.ಮಾನವ ಜೀವನ ಶಾಶ್ವತವಲ್ಲ, ಹುಟ್ಟಿದ ಮನುಷ್ಯ ಒಂದಿಲ್ಲ ಒಂದು ದಿನ ಅಗಲುವುದು ಅನಿವಾರ್ಯ, ಹುಟ್ಟುವಾಗ ಹೆಸರು ಇರುವುದಿಲ್ಲ, ಉಸಿರು ಇರುತ್ತದೆ, ಉಸಿರು ನಿಂತರೂ ಹೆಸರು ಉಳಿಯುವ ಹಾಗೆ ಬದುಕಿದವರು ಲಿಂ. ನೀಲಕಂಠ ಶ್ರೀಗಳು ಎಂದರು.ಭಕ್ತ ಸಂಕುಲಕ್ಕೆ ಅವರು ಕೊಟ್ಟ ಸಂಸ್ಕಾರ ಮತ್ತು ಶೋಭಾಮೃತ ಜೀವನ ಶ್ರೇಯಸ್ಸಿಗೆ ಸ್ಪೂರ್ತಿ ತಂದಿದೆ, ಲಿಂ. ರಂಭಾಪುರಿ ವೀರಗಂಗಾಧರ ಜಗದ್ಗುರುಗಳ ಸೇವೆಯನ್ನು ಮಾಡಿ, ಅವರ ಅಂತಃಕರಣ ಆಶೀರ್ವಾದಕ್ಕೆ ಪಾತ್ರರಾಗಿದ್ದರು. ಅವರು ನಮ್ಮೆಲ್ಲರನ್ನು ಅಗಲಿ ವರ್ಷ ಕಳೆದರೂ ಅವರ ನೆನಪು ಸದಾ ಹಸಿರಾಗಿದೆ…
ಯಡ್ರಾಮಿ: ಜೇವರ್ಗಿ ಭಾಜಪ ತಾಲೂಕು ಘಟಕಕ್ಕೆ ಬಿಜೆಪಿ ಕಾರ್ಯಕರ್ತ ಜಗದೀಶ ತಳವಾರ ಮಳ್ಳಿ ಅವರನ್ನು ನೇಮಿಸುವಂತೆ ಪಕ್ಷದ ಕಾರ್ಯಕರ್ತರು ಪಕ್ಷದ ಮುಖಂಡರಲ್ಲಿ ಒತ್ತಾಯಿಸಿದ್ದಾರೆ.ಜಗದೀಶ ತಳವಾರ ಈ ಹಿಂದೆ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಪಕ್ಷದ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುವ ಮೂಲಕ ಸಕ್ರೀಯ ಮತ್ತು ಕ್ರಿಯಾಶೀಲ ಕಾರ್ಯಕರ್ತರಾಗಿ ಮೂರು ದಶಕಗಳಿಂದಲೂ ಪಕ್ಷಕ್ಕಾಗಿ ದುಡಿದಿದ್ದಾರೆ. ತಳವಾರ ಅವರ ಪಕ್ಷ ನಿಷ್ಠೆ, ಸಂಘಟನಾ ಶಕ್ತಿಯನ್ನು ಪರಿಗಣಿಸಿ ಅವರನ್ನು ಜೇವರ್ಗಿ ಭಾಜಪ ತಾಲೂಕು ಘಟಕದ ಅಧ್ಯಕ್ಷ ಸ್ಥಾನಕ್ಕೆ ನೇಮಿಸುವಂತೆ, ಯಡ್ರಾಮಿ ಶಕ್ತಿ ಕೇಂದ್ರದ ಅಧ್ಯಕ್ಷ ರುದ್ರಗೌಡ ಬಿರಾದಾರ ನಾಗರಹಳ್ಳಿ, ರಾಚಣ್ಣ ತಳವಾರ ಯಡ್ರಾಮಿ, ಶಂಕರಗೌಡ ಸುಂಬದ, ಮಂಜುನಾಥ ಹೂಗಾರ್, ಶ್ರೀಶೈಲ ಮಡಿವಾಳರ , ಸಂತೋಷ ಕೊರವಾರ, ರಾಘವೇಂದ್ರ ಕುಳಗೇರಿ, ಹಣಮಂತ ಕಾಚಾಪುರ, ಬರಗೂಡಿ ಬೀರಾಳ, ಬಸನಗೌಡ. ಎಸ್. ಪಾಟೀಲ್ ಮಳ್ಳಿ, ಮಲ್ಲಣ್ಣ ಕೊಗಟನೂರ, ಮಂಜುನಾಥ ಅಗಸರ, ವೀರೇಶ ಬ್ಯಾಕೋಡ, ಈರಣ್ಣ ಹೆಳವರ, ಈರಣ್ಣ ಸುಂಕದ ಯಡ್ರಾಮಿ ಇತರರು ಒತ್ತಾಯಿಸಿದ್ದಾರೆ.
ಮುದ್ದೇಬಿಹಾಳದಲ್ಲಿ ಸಿಎಂ ಸಿದ್ಧರಾಮಯ್ಯರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು ಮುದ್ದೇಬಿಹಾಳ: ಇಲ್ಲಿಯವರೆಗೆ ಯಾವ ಸರ್ಕಾರವೂ ನೀಡದ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ನೀಡಿದೆ. ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಬಂದಾಗ ಆಶ್ವಾಸನೆ ನೀಡಿದಂತೆ ೫ ಯೋಜನೆಗಳನ್ನು ಜಾರಿಗೆ ತರುವ ಮೂಲಕ ನುಡಿದಂತೆ ನಡೆದಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.ಶುಕ್ರವಾರ ಪಟ್ಟಣದ ವಿಬಿಸಿ ಹೈಸ್ಕೂಲ್ ಮೈದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು ಹಾಗೂ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.ಬಿಜೆಪಿಯವರು ನಮ್ಮ ಯೋಜನೆಗಳನ್ನು ಅನಿಷ್ಠಾನಗೊಳಿಸಲು ಸರ್ಕಾರದಲ್ಲಿ ಹಣ ಇಲ್ಲ ಅಂತಾರೆ, ಚುನಾವಣೆ ಪ್ರಚಾರದಲ್ಲಿ ಈ ೫ ಯೋಜನೆಗಳು ಜಾರಿಗೊಂಡರೆ ಸರ್ಕಾರ ದಿವಾಳಿ ಆಗುತ್ತೆ ಅಂದಿದ್ರು, ಜೂನ್ ನಿಂದಲೇ ಯೋಜನೆಗಳು ಜಾರಿಯಾಗಿವೆ. ದಿವಾಳಿ ಆಗಿದೆಯಾ ಎಂದು ಪ್ರಶ್ನಿಸಿದರು. ಜನತೆಯನ್ನು ತಪ್ಪುದಾರಿಗೆಳೆಯಲು ೫ ಗ್ಯಾರಂಟಿಗಳನ್ನು ಕೊಟ್ಟಿರುವ ಸಿದ್ಧರಾಮಯ್ಯನವರ ಸರ್ಕಾರದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಹಣ ಇಲ್ಲ ಅಂತಾ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸರ್ಕಾರದಲ್ಲಿ ದುಡ್ಡು ಇರದೇ ಇದ್ದರೆ ಈ ಅಭಿವೃದ್ಧಿ ಕಾಮಗಾರಿಗಳಿಗೆ ದುಡ್ಡು ಎಲ್ಲಿಂದ ಬರ್ತಿತ್ತು? ಸಮಾಜಕಲ್ಯಾಣ, ಲೊಕೋಪಯೋಗಿ,…
