ದೇವರಹಿಪ್ಪರಗಿ: ಶ್ರೀಬಾಲಹನುಮಾನ ೧೦ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗಿದ ಸಂಗ್ರಾಣಿ ಕಲ್ಲು ಹಾಗೂ ಭಾರ ಎತ್ತುವ ಸ್ಪರ್ಧೆಗೆ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು.
ಪಟ್ಟಣದ ಗಂಗಾನಗರದ ಶ್ರೀಬಾಲ ಹನುಮಾನನ ೧೦ನೇ ವರ್ಷದ ಜಾತ್ರೆಗೆ ಗುರುವಾರ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಜಾತ್ರೆಯ ಅಂಗವಾಗಿ ಪ್ರತಿ ವರ್ಷದಂತೆ ಈ ಬಾರಿಯು ದಿ.೦೭ ಬುಧವಾರ ದವರೆಗೆ ಪುರಾಣ, ವಿವಿಧ ಸ್ಫರ್ಧೆ ಹಾಗೂ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಅಂತೆಯೇ ಶುಕ್ರವಾರ ದೇವಸ್ಥಾನದ ಆವರಣದಲ್ಲಿ ಸಂಗ್ರಾಣಿ, ಗುಂಡು ಕಲ್ಲು ಸೇರಿದಂತೆ ಭಾರವಾದ ಚೀಲಗಳನ್ನು ಎತ್ತುವ ಸ್ಪರ್ಧೆಗೆ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು.
೫ ಕಿಲೋದಿಂದ ಆರಂಭಿಸಿ ೭೦ ಕಿಲೋದವರೆಗೆ ಸಂಗ್ರಾಣಿ ಕಲ್ಲು ಹಾಗೂ ೧೭೦ ಕಿಲೋದವರೆಗೆ ಗುಂಡು ಕಲ್ಲುಗಳನ್ನು ಎತ್ತುವ ಸ್ಪರ್ಧೆಯಲ್ಲಿ ಪಟ್ಟಣ, ಮುಳಸಾವಳಗಿ ಸೇರಿದಂತೆ ವಿವಿಧ ಗ್ರಾಮಗಳ ಸ್ಪರ್ಧಿಗಳು ಪಾಲ್ಗೊಂಡಿದ್ದರು.
ಜಾತ್ರಾ ಸಮೀತಿಯ ಅಧ್ಯಕ್ಷ ನಿಂಗು ಯಂಭತ್ನಾಳ, ಪಟ್ಟಣ ಪಂಚಾಯಿತಿ ಸದಸ್ಯ ಕಾಸುಗೌಡ ಬಿರಾದಾರ (ಜಲಕತ್ತಿ), ಪಿಕೆಪಿಎಸ್ ಅಧ್ಯಕ್ಷ ಶ್ರೀಶೈಲ ದೇಸಾಯಿ, ಬಂಡೆಪ್ಪ ಬಿರಾದಾರ (ದಿಂಡವಾರ), ಭೀಮು ಒಂಟೆತ್ತೀನ, ಸೋಮು ದೇವೂರ, ಭೀರಪ್ಪ ನಾಗಠಾಣ, ಶ್ರೀಕಾಂತ ನಾಯಿಕ(ಕುಂಟೋಜಿ), ರಮೇಶ ಮುಳಸಾವಳಗಿ ಸೇರಿದಂತೆ ಜಾತ್ರಾ ಸಮೀತಿಯ ಪದಾಧಿಕಾರಿಗಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

