ಯಡ್ರಾಮಿ: ಜೇವರ್ಗಿ ಭಾಜಪ ತಾಲೂಕು ಘಟಕಕ್ಕೆ ಬಿಜೆಪಿ ಕಾರ್ಯಕರ್ತ ಜಗದೀಶ ತಳವಾರ ಮಳ್ಳಿ ಅವರನ್ನು ನೇಮಿಸುವಂತೆ ಪಕ್ಷದ ಕಾರ್ಯಕರ್ತರು ಪಕ್ಷದ ಮುಖಂಡರಲ್ಲಿ ಒತ್ತಾಯಿಸಿದ್ದಾರೆ.
ಜಗದೀಶ ತಳವಾರ ಈ ಹಿಂದೆ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಪಕ್ಷದ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುವ ಮೂಲಕ ಸಕ್ರೀಯ ಮತ್ತು ಕ್ರಿಯಾಶೀಲ ಕಾರ್ಯಕರ್ತರಾಗಿ ಮೂರು ದಶಕಗಳಿಂದಲೂ ಪಕ್ಷಕ್ಕಾಗಿ ದುಡಿದಿದ್ದಾರೆ. ತಳವಾರ ಅವರ ಪಕ್ಷ ನಿಷ್ಠೆ, ಸಂಘಟನಾ ಶಕ್ತಿಯನ್ನು ಪರಿಗಣಿಸಿ ಅವರನ್ನು ಜೇವರ್ಗಿ ಭಾಜಪ ತಾಲೂಕು ಘಟಕದ ಅಧ್ಯಕ್ಷ ಸ್ಥಾನಕ್ಕೆ ನೇಮಿಸುವಂತೆ, ಯಡ್ರಾಮಿ ಶಕ್ತಿ ಕೇಂದ್ರದ ಅಧ್ಯಕ್ಷ ರುದ್ರಗೌಡ ಬಿರಾದಾರ ನಾಗರಹಳ್ಳಿ, ರಾಚಣ್ಣ ತಳವಾರ ಯಡ್ರಾಮಿ, ಶಂಕರಗೌಡ ಸುಂಬದ, ಮಂಜುನಾಥ ಹೂಗಾರ್, ಶ್ರೀಶೈಲ ಮಡಿವಾಳರ , ಸಂತೋಷ ಕೊರವಾರ, ರಾಘವೇಂದ್ರ ಕುಳಗೇರಿ, ಹಣಮಂತ ಕಾಚಾಪುರ, ಬರಗೂಡಿ ಬೀರಾಳ, ಬಸನಗೌಡ. ಎಸ್. ಪಾಟೀಲ್ ಮಳ್ಳಿ, ಮಲ್ಲಣ್ಣ ಕೊಗಟನೂರ, ಮಂಜುನಾಥ ಅಗಸರ, ವೀರೇಶ ಬ್ಯಾಕೋಡ, ಈರಣ್ಣ ಹೆಳವರ, ಈರಣ್ಣ ಸುಂಕದ ಯಡ್ರಾಮಿ ಇತರರು ಒತ್ತಾಯಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

