ಇಂಡಿ: ತಾಲೂಕಿನ ಲಚ್ಯಾಣ ಗ್ರಾಮದ ಮಹಾಂತೇಶ ರಾಮಚಂದ್ರಗೌಡ ಬಿರಾದಾರ ಇವರು ಸುಮಾರು ೨೨ ವರ್ಷಗಳ ಕಾಲ ಭಾರತಾಂಬೆಯ ಸುದೀರ್ಘ ಸೇವೆ ಸಲ್ಲಿಸಿ ಸೇವಾನಿವೃತ್ತಿಯಾಗಿ ಲಚ್ಯಾಣ ಗ್ರಾಮಕ್ಕೆ ಮರಳಿದ ಅವರಿಗೆ ಗ್ರಾಮಸ್ಥರಿಂದ ಭವ್ಯ ಸ್ವಾಗತ ದೊರೆಯಿತು.
ಭಾರತಿಯ ಸೈನ್ಯದಲ್ಲಿ ೨೦೦೨ ರಲ್ಲಿ ಕೋರ್ ಇ ಎಮ್ ಇ ಸೇವೆಯನ್ನು ಪ್ರಾರಂಭಿಸಿ ದೇಶದ ಗಡಿಬಾಗಗಳಾದ ಜಮ್ಮು ಕಾಶ್ಮೀರದ ಪೂಂಚ್, ಓಡಿಸಾ,ಮಥುರಾ, ಅಂಡಮಾನ್ ನಿಕೋಬಾರ್, ಆಸಾಂ, ಹೀಗೆ ನಾನಾ ಭಾಗಗಳಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿ ಸೇವಾ ನಿವೃತ್ತಿಯಾದ ಅವರನ್ನು ಗ್ರಾಮದ ಶ್ರೀ ಸಿದ್ದಲಿಂಗ ಮಹಾರಾಜರ ಗೆಳೆಯರ ಬಳಗ ಆತ್ಮೀಯವಾಗಿ ಬರಮಾಡಿಕೊಂಡು ಊರಿನ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ಮಾಡಿದರು.
ನಂತರ ಶ್ರೀ ಸಿದ್ದಲಿಂಗ ಮಹಾರಾಜರ ಮಠದ ಆವರಣದಲ್ಲಿ ನಡೆದ ಕಾರ್ಯಕ್ರಮದ ಸಾನಿಧ್ಯವನ್ನು ಅಭಿನವ ಮುರುಘರಾಜೇಂದ್ರ ಸ್ವಾಮೀಜಿ ಹೀರೆಮಠ ಶಾರಶ್ಯಾಡ ಮತ್ತು ಇಂಡಿ ಓಂಕಾರ ಮಠದ ಡಾ. ಸ್ವರೂಪಾನಂದ ಸ್ವಾಮೀಜಿ ವಹಿಸಿದ್ದರು.
ಬಿಟ ಆಫೀಸರ್ ಡಿ ಎ ಮುಜಗೌಂಡ ಹೊರ್ತಿ ಮಾತನಾಡಿ, ರಾಜ್ಯದಲ್ಲಿಯೇ ಲಚ್ಯಾಣ ಗ್ರಾಮ ಜಿಲ್ಲೆಯಲ್ಲಿ ಅತಿ ಹೆಚ್ಚು ಸೈನಿಕರನ್ನು ಭಾರತ ಮಾತೆಯ ಸೇವೆಗೆ ಕಳುಹಿಸುವ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.
ಕಾರ್ಯಕ್ರಮಕ್ಕೆ ಶಾಸಕರ ಚಿರಂಜೀವಿ ವಿಠ್ಠಲಗೌಡ ಪಾಟೀಲ್ ಚಾಲನೆ ನೀಡಿದರು. ಸಿದ್ದಲಿಂಗ ಮಹಾರಾಜರ ಮತ್ತು ಸಂಗನಬಸವ ಶಿವಯೋಗಿಗಳ ಭಾವ ಚಿತ್ರಕ್ಕೆ ಬಿಜೆಪಿ ಮುಖಂಡ ಅನಿಲಗೌಡ ಬಿರಾದಾರ ನೆರವೇರಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

