Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ: ಹೋನಾಗನಹಳ್ಳಿ ಗ್ರಾಮದಿಂದ ಸಂವಿಧಾನ ಜಾಗೃತಿ ಜಾತಾ ರಥಕ್ಕೆ ಗ್ರಾಮ ಪಂಚಾಯತಿಯಿಂದ ಪುಂಡಲಿಕ ಮಾನವರ ಉಪ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ವಿಜಯಪುರ ಇವರು ರಥಕ್ಕೆ ಅದ್ದೂರಿ ಚಾಲನೆ ನೀಡಿದರು.ಅಲ್ಲಿಂದ ಸಂವಿಧಾನ ರಥವು ತಿಕೋಟ ತಾಲೂಕು ಕೋಮಟೆ ಗ್ರಾಮ ಪಂಚಾಯಿತಿ ಹಲವು ಗ್ರಾಮಗಳ ಮೂಲಕ ಬಬಲೇಶ್ವರ ತಾಲೂಕಿಗೆ ಬಂದು ತಲುಪಿದಾಗ ಸಂವಿಧಾನ ಜಾಗೃತಿ ಜಾತಾರಥಕ್ಕೆ ವಿಶೇಷವಾಗಿ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು,ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಿಜಯಪುರ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಸ್ ಎಂ ಪಾಟೀಲ ಮಾತನಾಡಿ, ಸಂವಿಧಾನವು ಜನತೆಯ ಹಕ್ಕುಗಳು ಮೂಲವಾಗಿದೆ. ವಿಶ್ವದ ದೀರ್ಘಸಂವಿಧಾನ ನಮ್ಮದು. ಹಾಗೂ ನಮ್ಮ ಸಂವಿಧಾನವು ಸೌಂದರ್ಯವೇ ಸಮಾನತೆ ಎಂದು ಹೇಳಿದರುಪ್ರತಿಯೊಬ್ಬರೂ ಸಂವಿಧಾನವನ್ನು ಓದಬೇಕು ಮಕ್ಕಳಿಗೆ ಓದಿ ಹೇಳಬೇಕು ಭಗವದ್ಗೀತೆ ಕುರಾನ್ ಬೈಬಲ್ ನಂತೆ ಸಂವಿಧಾನವು ಪ್ರತಿಯೊಬ್ಬರ ಮನೆಯಲ್ಲಿ ಅದರ ಪಠಣ ಮಾಡಬೇಕು ಎಂದು ಹೇಳಿದರು.ಸಮಾರಂಭದ ಇನ್ನೋರ್ವ ಅತಿಥಿ ಸದಾನಂದ ಬಡಿಗೇರವರು ಮನೆ ಮನಗಳಲ್ಲಿಯೂ ಸಂವಿಧಾನದ ಜ್ಯೋತಿ ಬೆಳಗಬೇಕು. ಮಕ್ಕಳಿಂದ ಹಿಡಿದು…
ಸರ್ವಾಧ್ಯಕ್ಷ ಸ್ಥಾನಕ್ಕೆ ಸಂಶೋಧಕ-ಸಾಹಿತಿ ಡಿ.ಎನ್. ಅಕ್ಕಿ ಆಯ್ಕೆ. – ಡಾ.ಸಂತೋಷ ನವಲಗುಂದಪತ್ರಕರ್ತ-ಲೇಖಕ ನಾಡಿನ ಸಂಶೋಧಕ-ಸಾಹಿತಿಗಳಲ್ಲಿ ಡಿ.ಎನ್.ಅಕ್ಕಿಯವರು ಮಹತ್ವದ ಸಂಶೋಧಕರಲ್ಲೊಬ್ಬರು. ಕಲ್ಯಾಣ ಕರ್ನಾಟಕದ ಈಗಿನ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಇವರ ಹುಟ್ಟೂರು. ಗ್ರಾಮದ ಪ್ರತಿಷ್ಠಿತ ವ್ಯಾಪಾರಸ್ಥ ಅಕ್ಕಿ ಮನೆತನದ ನಾಭಿರಾಜ ಮತ್ತು ಶ್ರೀಕಾಂತಮ್ಮ ದಂಪತಿಗಳ ಮಗನಾಗಿ ೩ನೇ ಅಕ್ಟೋಬರ್ ೧೯೪೮ರಲ್ಲಿ ಜನಿಸಿದರು. ಬಾಲ್ಯ ಕಳೆದು ಪ್ರೌಢಾವಸ್ಥೆ ತಲುಪುತ್ತಿದ್ದಂತೆ ಅನೇಕ ತೆರನಾದ ಕಷ್ಟಗಳನ್ನು ಎದುರಿಸುತ್ತಲೇ ಪ್ರೌಢ ಶಿಕ್ಷಣ ಮುಗಿಸಿಕೊಂಡರು. ನಂತರ ಗದಗದಲ್ಲಿ ಚಿತ್ರಕಲಾ ತರಬೇತಿಗೆಂದು ಹೋಗಿ ಅವರು ಅಲ್ಲಿ ಅನುಭವಿಸಿದ ಸಂಕಷ್ಟಗಳು ಅನೇಕ. ಆದರೆ ಗದಗದಲ್ಲಿ ಗೆಳಯರಾದ ಕಂಬಳಿಮಠ, ಗಾಣಿಗೇರ ಇನ್ನೂ ಅನೇಕ ಗೆಳೆಯರ ಸಹಾಯ-ಸಹಕಾರದಿಂದ ಯಶಸ್ವಿ ಚಿತ್ರಕಲಾ ತರಬೇತಿ ಶಿಕ್ಷಣ ಪಡೆದು, ಚಿತ್ರಕಲಾ ಶಿಕ್ಷಕರಾಗಿ ಸೇವೆ ಪ್ರಾರಂಭಿಸುತ್ತಾರೆ. ಅಷ್ಟೊತ್ತಿಗಾಗಲೇ ಮನೆಯಲ್ಲಿ ಸಾಲು ಸವಾಲುಗಳು ಅಕ್ಕಿಯವರ ಮುಂದೆ ನಿಂತಿದ್ದವು. ಅವೆಲ್ಲದಕ್ಕೂ ಸಮಾಧಾನಚಿತ್ತದಿಂದ ಪರಿಹಾರ ಕಂಡುಕೊಂಡು ಸಂಸಾರದ ನೊಗವ ಹೊತ್ತು, ಮನೆತನ ಮಾದರಿಯಾಗಿ ಮುನ್ನಡೆಸಿದರು. ಇಷ್ಟೆಲ್ಲಾ ತೊಂದರೆಗಳನ್ನು ಸಮರ್ಥವಾಗಿ ಎದುರಿಸಿ ವಿದ್ಯಾರ್ಥಿಗಳ ಪಾಲಿಗೆ…
ಸಿಂದಗಿ: ಪಟ್ಟಣದಲ್ಲಿ ಫೆ.೦೫ರಂದು ನಡೆಯಬೇಕಿದ್ದ ಸಿಂದಗಿ ತಾಲೂಕು ೬ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕೆಲವು ಕಾರಣಗಳಿಂದ ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ಶೀಘ್ರವೇ ತಿಳಿಸಲಾಗುವುದು ಎಂದು ಕಸಾಪ ತಾಲೂಕಾಧ್ಯಕ್ಷ ಶಿವಾನಂದ ಬಡಾನೂರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಾ.ಚೈತನಾ ಸಂಕೊಂಡ ರಚಿತ ’ಬಯಲು ಬೊಂಬೆ’ ಕೃತಿ ಲೋಕಾರ್ಪಣೆ ವಿಜಯಪುರ: ಸಂಶೋಧನಾ ಲೇಖನಗಳ ಸಂಗ್ರಹಿತ ’ಬಯಲು ಬೊಂಬೆ’ ಕೃತಿಯು ವಿಭಿನ್ನ ವಿಶೇಷ ಲೇಖನಗಳು, ಭಕ್ತಿ, ಸಾಮಾಜಿಕ ಚಿಂತನ, ವೈವಿಧ್ಯತೆಯನ್ನು ಒಳಗೊಂಡಿದೆ ಎಂದು ಪ್ರಾಚಾರ್ಯ ಡಾ:ಆರ್.ಎಂ.ಮಿರ್ದೆ ಹೇಳಿದರು.ನಗರದ ಬಿ ಎಲ್ ಡಿ ಇ ಸಂಸ್ಥೆಯ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದಲ್ಲಿ ಗ್ರಂಥ ಲೋಕಾರ್ಪಣೆಗೊಳಿಸಿ ಮಾತನಾಡಿದರು.ಸಾಹಿತ್ಯ ಲೋಕದಲ್ಲಿ ಸಂಶೋದನಾ ಬಹಳಷ್ಟು ವಿರಳ ಅಂತಹದರಲ್ಲಿ ಸಂಶೋಧನಾ ಕೈಗೊಂಡಿರುವ ಉಪನ್ಯಾಸಕಿ ಡಾ.ಚೈತನಾ ಸಂಕೊಂಡ ಇವರ ಕಾರ್ಯ ನಿಜಕ್ಕೂ ಶ್ಲಾಘನೀಯವಾದದ್ದು ಎಂದರು.ಈ ಗ್ರಂಥವು ವಿಭಿನ್ನ ವಿಶೇಷತೆಗಳನ್ನು ಹೊಂದಿದೆ. ರಾಮಾಯಣ ಮಹಾಭಾರತ, ಜೈನ ಧರ್ಮದ ದಿಗ್ದರ್ಶನ ಬಸವಣ್ಣನ ನವರ ವಿಚಾರ ಧಾರೆಗಳನ್ನು ಬಿತ್ತರಿಸುವ ಕಾಯ ವಾಚನ ಬಿತ್ತರಿಸುವ ಪಂಚವಿಂಶತಿ ಲೀಲೆಗಳು, ಸಂತ ಶರಣರ ಸಾಹಿತ್ಯದಲ್ಲಿ ಸಾಮಾಜಿಕ ಚಿಂತನೆ, ಕನಕದಾಸರ ಕೀರ್ತನೆಗಳಲ್ಲಿ ಭಕ್ತಿ, ನಿಜಗುಣ ಶಿವಯೋಗಿಗಳ ಅನುಭಾವ ಇಂತಹ ಹಲವಾರು ಸಾಮಾಜಿಕ ಸದೃಡ, ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಒಟ್ಟು ೧೩ ವಿಶೇಷ ಸಂಶೋಧನಾ ಲೇಖನಗಳ ವಿರಚಿತ ಈ ಗ್ರಂಥವು…
ದೇವರಹಿಪ್ಪರಗಿ: ಶಿಕ್ಷಕರಾಗಿ ರಾಷ್ಟ್ರಪತಿಯಾದ ಎಸ್.ರಾಧಾಕೃಷ್ಣನ್ ನಮ್ಮೆಲ್ಲರ ಹೆಮ್ಮೆ ಎಂದು ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಎ.ಎಚ್.ವಾಲೀಕಾರ ಹೇಳಿದರು.ತಾಲ್ಲೂಕಿನ ಪಡಗಾನೂರ ಎಲ್.ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ವಾಯ್.ಜಿ. ತಾವರಖೇಡ ಸೇವಾನಿವೃತ್ತಿಯಾದ ಸಂದರ್ಭದಲ್ಲಿ ಸನ್ಮಾನಿಸಿ ಮಾತನಾಡಿದರು.ಶಾಲಾ ಮುಖ್ಯಗುರು ಎಸ್.ಪಿ.ಇಂಗಳೇಶ್ವರ, ಎಸ್.ಎಮ್.ಹೊಕ್ಕುಂಡಿ, ಖಾದ್ರಿ, ಬಾಳು ರಾಠೋಡ, ವಿಜಯಲಕ್ಷ್ಮಿ ನವಲಿ, ನಾಗೇಶ ನಾಗೂರ, ಜಿ.ಪಿ.ಬಿರಾದಾರ ನಿವೃತ್ತ ಶಿಕ್ಷಕರ ಸೇವೆಯ ಕುರಿತು ಮಾತನಾಡಿದರು.ಸನ್ಮಾನಿತ ತಾವರಖೇಡ ಶಿಕ್ಷಕರು ಮಾತನಾಡಿ, ವೃತ್ತಿಯಲ್ಲಿ ನನಗೆ ಸಂತೃಪ್ತಿಯಿದೆ. ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಕಾರ್ಯ ನಿರ್ವಹಿಸಿದರೆ ಉತ್ತಮ ಪ್ರಜೆಗಳನ್ನು ನಿರ್ಮಿಸಬಹುದು. ಮಕ್ಕಳ ಉನ್ನತಿಯಲ್ಲಿಯೇ ನಮ್ಮ ಸಾರ್ಥಕ ಜೀವನ ಕಾಣಬೇಕು ಎಂದು ತಮ್ಮ ವೃತ್ತಿ ಜೀವನ ನೆನೆಸಿಕೊಂಡು ಭಾವುಕರಾದರು.ಎಸ್‌ಡಿಎಮ್‌ಸಿ ಅಧ್ಯಕ್ಷ ಜಿ.ಎಚ್.ರಾಠೋಡ, ಗ್ರಾಮ ಪಂಚಾಯಿತಿ ಸದಸ್ಯ ರಾಜು ರಾಠೋಡ, ತಾರಾಸಿಂಗ್ ರಾಠೋಡ, ಗೀತಾ ರಾಠೋಡ, ಭೀಮರಾಯ ಪೋಲೇಶಿ, ದಾನು ರಾಠೋಡ, ಸಿ.ಆರ್.ನಾಯಿಕ್, ಎ.ಟಿ.ಲಮಾಣಿ, ಕವಿತಾ ಬ್ಯಾಳಿ, ಗಂಗಾಬಾಯಿ ಗುಡಿಮನಿ, ಅಮೃತಾ ಕರಾಬಿ, ಶೃತಿ ಪಾಟೀಲ, ಮಹಾದೇವಿ ಬಿರಾದಾರ, ಮಲ್ಲಿಕಾರ್ಜುನ ತಳಕೇರಿ, ಎಸ್.ಎಸ್.ತಳವಾರ ಸೇರಿದಂತೆ ಮಕ್ಕಳು,…
ದೇವರಹಿಪ್ಪರಗಿ: ಕಳೆದ ೧೦ ವರ್ಷಗಳಿಂದ ಪಟ್ಟಣದ ಬಾಲಹನುಮಾನ ಜಾತ್ರೆ ಮಾಲಾಧಾರಿಗಳ ನೇತೃತ್ವದಲ್ಲಿ ವಿಜೃಂಭಣೆಯಿಂದ ಜರುಗುತ್ತಿರುವುದು ಅವರ ಭಕ್ತಿಭಾವಕ್ಕೆ ಸಾಕ್ಷಿಯಾಗಿದೆ ಎಂದು ಶಾಸಕ ರಾಜುಗೌಡ ಪಾಟೀಲ(ಕುದರಿಸಾಲವಾಡಗಿ) ಹೇಳಿದರುಪಟ್ಟಣದ ಗಂಗಾನಗರದಲ್ಲಿ ಶನಿವಾರ ಬಾಲಹನುಮಾನ ದೇವಸ್ಥಾನದ ೧೦ನೇ ವರ್ಷದ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ನಮ್ಮ ಕಷ್ಟಕಾರ್ಪಣ್ಯಗಳನ್ನು ದೂರಮಾಡುವ ಮೂಲಕ ಹನುಮಾನ ಪ್ರತಿ ಗ್ರಾಮ, ಪಟ್ಟಣದಲ್ಲಿ ಪೂಜ್ಯನೀಯ ದೈವವಾಗಿದ್ದಾನೆ ಎಂದು ಹೇಳುತ್ತಾ, ಕ್ಷೇತ್ರದಲ್ಲಿ ಕೆರೆ, ಕಾಲುವೆಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಹನುಮನ ಆಶೀರ್ವಾದದಿಂದ ದೇಶದಲ್ಲಿ ಸಮೃದ್ಧತೆ ಕಾಣುವಂತಾಗಲಿ ಎಂದರು.ಪಟ್ಟಣದ ಪ್ರಮುಖರಾದ ಬಿ.ಕೆ.ಪಾಟೀಲ ಮಾತನಾಡಿದರು.ಧಾರವಾಡ ಶ್ರೀಗುರು ಚೈತನ್ಯ ಆಶ್ರಮದ ಸರ್ಪಭೂಷಣ ದೇವರು, ಪರದೇಶಿಮಠಶ್ರೀ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಜಾತ್ರಾ ಮಹೋತ್ಸವದ ಅಂಗವಾಗಿ ನಿಂಗು ಯಂಭತ್ನಾಳ ನೇತೃತ್ವದಲ್ಲಿ ಮಾಲಾಧಾರಿಗಳು ಬೆಳಿಗ್ಗೆ ಹೋಮ ಹವನಗಳು ಸೇರಿದಂತೆ ಪೂಜಾವಿಧಿ ವಿಧಾನಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿ ನಂತರ ಮಹಾಪ್ರಸಾದ ವಿತರಿಸಿದರು.ನಿವೃತ್ತ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ಕೆ.ಕುದರಿ, ವಿಜಯಪುರ ಅನುಗ್ರಹ ಆಸ್ಪತ್ರೆಯ ದತ್ತಾತ್ರೇಯ ಹೊಸಮಠ, ಸಮೃದ್ಧಿ ಸಹಕಾರ ಸಂಘದ…
ಸಿಂದಗಿ: ಬಾಲ್ಯದಲ್ಲಿ ಉತ್ತಮ ಸಂಸ್ಕಾರಗಳನ್ನು ನೀಡುವುದರ ಜೊತೆಗೆ ಶಿಕ್ಷಣದ ಮಹತ್ವವನ್ನು ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರಗಳನ್ನು ನೀಡುವುದು ಮತ್ತು ಅವರನ್ನು ನೆಲೆಗೊಳಿಸುವುದು ಎಂದಿಗಿಂತಲೂ ಇಂದು ಮುಖ್ಯವಾಗಿದೆ ಎಂದು ಸಿ.ಎಮ್.ಮನಗೂಳಿ ಪದವಿ ಮಹಾವಿದ್ಯಾಲಯ ಪ್ರಾಧ್ಯಾಪಕ ಡಾ.ಅರವಿಂದ ಮ ಮನಗೂಳಿ ಅವರು ಹೇಳಿದರು.ನಗರದ ಸರಕಾರಿ ಪದವಿ-ಪೂರ್ವ ಕಾಲೇಜ ಮಹಾವಿದ್ಯಾಲಯದ ಸಭಾಭವನದಲ್ಲಿ ಹಮ್ಮಿಕೊಂಡ ಬೀಳ್ಕೊಡುಗೆ, ವಾರ್ಷಿಕೋತ್ಸವ ಮತ್ತು ದಾನಿಗಳ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅವರು, ಸ್ವಯಂ-ಶಿಸ್ತು, ಉತ್ತಮ ಸಂಸ್ಕಾರ ವ್ಯಕ್ತಿತ್ವವನ್ನು ಹೆಚ್ಚಿಸುತ್ತವೆ. ವಿದ್ಯಾರ್ಥಿಗಳು ಉತ್ತಮ ಸಂಸ್ಕಾರಗಳನ್ನು ಜೀವನದಲ್ಲಿ ರೂಡಿಸಿಕೊಂಡು ಆದರ್ಶ ವಿದ್ಯಾರ್ಥಿಗಳಾಗಬೇಕು ಎಂದು ಹಾರೈಸಿದರು.ಈ ವೇಳೆ ಆದಿಶೇಷ ಸಂಸ್ಥಾನ ಹಿರೇಮಠದ ರಾಜಯೋಗಿ ವಿರಾಜೇಂದ್ರ ಶಿವಯೋಗಿಗಳು ಸಾನಿಧ್ಯ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಬಾಲ್ಯದಲ್ಲಿ ಅಳವಡಿಸಿಕೊಂಡ ಸಂಸ್ಕಾರ, ವಿದ್ಯ ಜೀವನದುದಕ್ಕೂ ಶ್ರೀಮಂತ ಪ್ರತಿ ಫಲವನ್ನು ನೀಡುತ್ತದೆ ಎಂದು ಆಶೀರ್ವಚನ ನೀಡಿದರು.ಸಮಾರಂಭದಲ್ಲಿ ಮಾಜಿ ಪುರಸಭೆ ಸದಸ್ಯ ಹಾಗೂ ತಾಲೂಕು ಕಸಾಪ ನಿಕಟ ಪೂರ್ವ ಅಧ್ಯಕ್ಷ ರಾಜಶೇಖರ ಕೂಚಬಾಳ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಣ ಮೂಲಕ ಉತ್ತಮ ಕೌಶಲ್ಯ,…
ಸಿಂದಗಿ: ಎಲ್. ಕೆ.ಅಡ್ವಾಣಿ ಅವರಿಗೆ ಭಾರತ ರತ್ನ ನೀಡುತ್ತಿರುವುದು ತುಂಬಾ ಸಂತೋಷದ ಸಂಗತಿ. ಅವರೊಬ್ಬ ಅಪ್ಪಟ ದೇಶಭಕ್ತ ನಿಷ್ಠಾವಂತ ಹಿಂದು ಕಾರ್ಯಕರ್ತರು ಆಗಿದ್ದರು ಯೋಗ್ಯ ವ್ಯಕ್ತಿಗೆ ಯೋಗ್ಯ ಗೌರವ ಸಂದಿದ್ದು ಅತ್ಯಂತ ಹೆಮ್ಮೆಯ ಸಂಗತಿ ಎಂದು ಪಟ್ಟಣದ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಸ್ವಾಗತಿಸಿದ್ದಾರೆ.
ಮುದ್ದೇಬಿಹಾಳ: ಪಟ್ಟಣಕ್ಕೆ ವಿವಿಧ ಕಾಮಗಾರಿಗಳ ಶಂಕು ಸ್ಥಾಪನೆ, ಅಡಿಗಲ್ಲು ಸಮಾರಂಭ ಹಾಗೂ ತಾಲೂಕಿನ ಕವಡಿಮಟ್ಟಿ ಗ್ರಾಮದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಅನಾವರಣ ವೇಳೆ ಆಗಮಿಸಿದ್ದ ರಾಜ್ಯದ ಮುಖ್ಯಮಂತ್ರಿಗಳು ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿಯೇ ಮೂರು ಬಾರಿ ತಿರುಗಾಡಿದರೂ ಸೌಜನ್ಯಕ್ಕೂ ಮಾಲಾರ್ಪಣೆ ಮಾಡದೇ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದನ್ನು ತೀವ್ರವಾಗಿ ಖಂಡಿಸುವದಾಗಿ ಭಾಜಪಾ ಎಸ್.ಸಿ.ಮೋರ್ಚಾ ಸಾಮಾಜಿಕ ಜಾಲತಾಣದ ರಾಜ್ಯಾಧ್ಯಕ್ಷ ಮಂಜುನಾಥ ಚಲವಾದಿ ತಿಳಿಸಿದರು.ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿಯವರ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.ಅದೇ ರೀತಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಕಾಮಗಾರಿ ಅಪೂರ್ಣಗೊಂಡಿದ್ದು ಅದನ್ನು ಪ್ರಶ್ನಿಸಲು ಮುಂದಾದ ನಮ್ಮ ಸಮಾಜದ ಮುಖಂಡರಾದ ಹರೀಶ ನಾಟೆಕಾರ ಮತ್ತು ಬಸವರಾಜ ಸಿದ್ದಾಪೂರ ಸೇರಿದಂತೆ ಇನ್ನೀತರರನ್ನು ಬಂಧಿಸಿ ಗುಪ್ತ ಸ್ಥಳದಲ್ಲಿಡುವ ಮೂಲಕ ದಲಿತರ ಹಕ್ಕುಗಳನ್ನು ಹತ್ತಿಕ್ಕಿದ ಶಾಸಕ ಸಿ.ಎಸ್.ನಾಡಗೌಡ್ರ ಧೋರಣೆಗೆ ವಿಷಾದ ವ್ಯಕ್ತಪಡಿಸಿದರು.ಕಳೆದ ಚುನಾವಣೆಯಲ್ಲಿ ದಲಿತರ, ಹಿಂದುಳಿದವರ, ಅಲ್ಪಸಂಖ್ಯಾತರ ಪರವಾಗಿದ್ದೇವೆ ಎಂದು ಡೋಂಗಿ ಮಾತುಗಳನ್ನು ಹೇಳಿ ಮತಗಳನ್ನು ಪಡೆದು ಈಗ…
ಬಸವನ ಬಾಗೇವಾಡಿ: ನಾಡಿನಲ್ಲಿ ಮಠಗಳು ಬಸವಣ್ಣನವರ ಕಾಯಕ, ದಾಸೋಹ ತತ್ವ ಅಳವಡಿಸಿಕೊಳ್ಳುವ ಮೂಲಕ ಜನಪರ ಕಾರ್ಯಗಳನ್ನು ಮಾಡುತ್ತಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.ತಾಲೂಕಿನ ಮನಗೂಳಿಯಲ್ಲಿ ಲಿಂ.ಡಾ.ಮಹಾಂತ ಶಿವಾಚಾರ್ಯ ಸ್ವಾಮೀಜಿಯವರ 11ನೇ ಪುಣ್ಯಾರಾಧನೆ, ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿಯವರ ಪಟ್ಟಾಧಿಕಾರದ ದಶಮಾನೋತ್ಸವ, ಸಂಗನಬಸವ ಕಲ್ಯಾಣಮಂಟಪ, ನೂತನ ರಥೋತ್ಸವ ಲೋಕಾರ್ಪಣೆ ಸಾಮೂಹಿಕ ವಿವಾಹದ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಧರ್ಮಸಭೆ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಮಠಗಳು ನಾಡಿನ ಅಭಿವೃದ್ಧಿ ಶ್ರಮಿಸುತ್ತಿರುವದು ಶ್ಲಾಘನೀಯ. ರಾಜ್ಯಕ್ಕೆ ಶಕ್ತಿ ತುಂಬುವ ಕೆಲಸ ಮಠಗಳು ಮಾಡುತ್ತಿವೆ ಎಂದು ಹೇಳಿದರು.ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮಠಗಳ ಅಭಿವೃದ್ಧಿಗೆ ಆರ್ಥಿಕ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ. ಮಠಾಧೀಶರ, ಜನರ ಆಶೀರ್ವಾದದಿಂದ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ರೈತ ಕುಟುಂಬದಲ್ಲಿ ಜನಿಸಿರುವ ನನ್ನ ತಂದೆ ರೈತರು, ಸೈನಿಕರನ್ನು ಎರಡು ಕಣ್ಣುಗಳೆಂದು ತಿಳಿದು ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರು ಎಂದು ಹೇಳಿದರು.ರಾಜ್ಯದಲ್ಲಿ ಭೀಕರ ಬರಗಾಲ ಇದೆ. ತೋಟಗಾರಿಕೆ ಬೆಳೆಗೆ ಸಮರ್ಪಕ ವಿದ್ಯುತ್ ಸಿಗುತ್ತಿಲ್ಲ.…
