ಮುದ್ದೇಬಿಹಾಳ: ಪಟ್ಟಣಕ್ಕೆ ವಿವಿಧ ಕಾಮಗಾರಿಗಳ ಶಂಕು ಸ್ಥಾಪನೆ, ಅಡಿಗಲ್ಲು ಸಮಾರಂಭ ಹಾಗೂ ತಾಲೂಕಿನ ಕವಡಿಮಟ್ಟಿ ಗ್ರಾಮದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಅನಾವರಣ ವೇಳೆ ಆಗಮಿಸಿದ್ದ ರಾಜ್ಯದ ಮುಖ್ಯಮಂತ್ರಿಗಳು ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿಯೇ ಮೂರು ಬಾರಿ ತಿರುಗಾಡಿದರೂ ಸೌಜನ್ಯಕ್ಕೂ ಮಾಲಾರ್ಪಣೆ ಮಾಡದೇ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದನ್ನು ತೀವ್ರವಾಗಿ ಖಂಡಿಸುವದಾಗಿ ಭಾಜಪಾ ಎಸ್.ಸಿ.ಮೋರ್ಚಾ ಸಾಮಾಜಿಕ ಜಾಲತಾಣದ ರಾಜ್ಯಾಧ್ಯಕ್ಷ ಮಂಜುನಾಥ ಚಲವಾದಿ ತಿಳಿಸಿದರು.
ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿಯವರ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಅದೇ ರೀತಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಕಾಮಗಾರಿ ಅಪೂರ್ಣಗೊಂಡಿದ್ದು ಅದನ್ನು ಪ್ರಶ್ನಿಸಲು ಮುಂದಾದ ನಮ್ಮ ಸಮಾಜದ ಮುಖಂಡರಾದ ಹರೀಶ ನಾಟೆಕಾರ ಮತ್ತು ಬಸವರಾಜ ಸಿದ್ದಾಪೂರ ಸೇರಿದಂತೆ ಇನ್ನೀತರರನ್ನು ಬಂಧಿಸಿ ಗುಪ್ತ ಸ್ಥಳದಲ್ಲಿಡುವ ಮೂಲಕ ದಲಿತರ ಹಕ್ಕುಗಳನ್ನು ಹತ್ತಿಕ್ಕಿದ ಶಾಸಕ ಸಿ.ಎಸ್.ನಾಡಗೌಡ್ರ ಧೋರಣೆಗೆ ವಿಷಾದ ವ್ಯಕ್ತಪಡಿಸಿದರು.
ಕಳೆದ ಚುನಾವಣೆಯಲ್ಲಿ ದಲಿತರ, ಹಿಂದುಳಿದವರ, ಅಲ್ಪಸಂಖ್ಯಾತರ ಪರವಾಗಿದ್ದೇವೆ ಎಂದು ಡೋಂಗಿ ಮಾತುಗಳನ್ನು ಹೇಳಿ ಮತಗಳನ್ನು ಪಡೆದು ಈಗ ದಲಿತರ ವಿರೋಧಿ ನಿಲುವುಗಳನ್ನು ವ್ಯಕ್ತಪಡಿಸಿದ್ದಾರೆ. ದಲಿತ ಹೋರಾಟಗಾರರು ಯಾರೂ ಅವರನ್ನ ಪ್ರಶ್ನಿಸಬಾರದು, ಬೆಳಕಿಗೆ ಬರಬಾರದು, ಬೆಳೆಯಬಾರದು, ತಾಲೂಕು ಜಿಲ್ಲಾ ಪಂಚಾಯತಿಗಳಲ್ಲಿ ಗೆಲ್ಲಬಾರದು ಅಂತಾ ನಿರಂತರವಾಗಿ ದಲಿತರನ್ನು ಶೋಷಣೆ ಮಾಡುತ್ತ ಬಂದಿದ್ದಾರೆ. ಹಿಂದೆ ಊಳುವವನೆ ಭೂ ಒಡೆಯ ಕಾಯ್ದೆ ಬಂದಾಗ ನಾಡಗೌಡ್ರ ಮನೆಯತನದ ಸುಮಾರು ಜಮೀನು ಸರ್ಕಾರಕ್ಕೆ ಹೋಗಿತ್ತು. ಆಗ ಸಾವಿರಾರು ದಲಿತ ಕುಟುಂಬಗಳಿಗೆ ಭೂಮಿ ಹಂಚಿಕೆಯಾದಾಗ ಇದೇ ನಾಡಗೌಡ್ರ ಕುಟುಂಬ ಎಲ್ಲ ಟ್ರಿಮಿನಲ್ ಫೈಲ್‌ಗಳನ್ನು ನಾಪತ್ತೆ ಮಾಡಿ ಎಷ್ಟೋ ಬಡವರ ಭೂಮಿಗಳನ್ನು ಮರಳಿ ಕಿತ್ತುಕೊಂಡು ದಲಿತ ವಿರೋಧಿ ಎಂಬ ಪಟ್ಟ ಕಟ್ಟಿಕೊಂಡಿದ್ದರು.
ಮೊನ್ನೆ ಮುಖ್ಯ ಮಂತ್ರಿಗಳಿಗೆ ಮನವಿ ಕೊಡಲು ಭಾಜಪಾ ದ ವೈದ್ಯಕೀಯ ಪ್ರಕೋಷ್ಠದ ಜಿಲ್ಲಾಧ್ಯಕ್ಷ ಡಾ.ಬಾಬುರಾಜೇಂದ್ರ ನಾಯಕ ಸೇರಿದಂತೆ ಮತ್ತೀತರನ್ನೂ ಕೂಡ ಬಂಧಿಸಿ ದಲಿತ ಕುಲ ತಾಲೂಕಿನಲ್ಲಿ ಉದ್ಧಾರವಾಗಬಾರದು, ಮುಖ್ಯವಾಹಿನಿಯಲ್ಲಿ ಬರಬಾರದು ಎಂಬ ಮನಸ್ಥಿತಿಯನ್ನು ಹೊಂದಿದ್ದಾರೆ. ಅಲ್ಲದೇ ಅವರ ಬೆಂಬಲಿಗರಾದ ಸಿದ್ದಣ್ಣ ಮೇಟಿ ಅವರು ಪತ್ರಿಕಾಗೋಷ್ಠಿ ನಡೆಸಿ ಮಾಜಿ ಶಾಸಕರಿಗೆ ಏಕವಚನದಲ್ಲಿ ಮಾತನಾಡಿದ್ದಾರೆ. ನಮಗೂ ಏಕವಚನ ಬಳಸಿ ಮಾತನಾಡಲು ಬರುತ್ತೆ, ಆದರೆ ನಮ್ಮ ಪಕ್ಷ ಅದನ್ನು ಕಲಿಸಿಲ್ಲ. ಒಟ್ಟಾರೆಯಾಗಿ ಮುಖ್ಯ ಮಂತ್ರಿಗಳು ಸುದ್ದಿಗೋಷ್ಠಿ ನಡೆಸಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಆದ ಅಪಮಾನಕ್ಕೆ ಸಮಸ್ತ ನಾಡಿನ ಜನತೆಗೆ ಕ್ಷಮೆ ಯಾಚಿಸಬೇಕು. ಅದರಂತೆ ಸ್ಥಳೀಯ ಶಾಸಕರು ನಮ್ಮ ನಾಯಕರನ್ನು ಬಂಧಿಸಿದ್ದಕ್ಕಾಗಿ ಮತ್ತು ದಲಿತರ ಮೇಲೆ ಅನುಕಂಪ, ಪ್ರೀತಿ, ಗೌರವ ಇದೆ ಎಂದಾದ್ರೆ ದಲಿತ ನಾಯಕರಿಗೆ ಕ್ಷಮೆ ಯಾಚಿಸಬೇಕು ಇಲ್ದಿದ್ರೆ ಶಾಸಕರ ಪ್ರತಿಯೊಂದು ಕಾರ್ಯಕ್ರಮದಲ್ಲಿ, ಗಲ್ಲಿ ಗಲ್ಲಿ ಬಂದಾಗ, ಪ್ರತೀ ಹಳ್ಳಿಗೆ ಬಂದಾಗ ಕಪ್ಪು ಬಾವುಟ ಪ್ರದರ್ಶಿಸುತ್ತೇವೆ ಎಂದು ಎಚ್ಚರಿಸಿದರು.
ಈ ವೇಳೆ ಉಪಾಧ್ಯಕ್ಷರುಗಳಾದ ಶೇಕು ಆಲೂರ, ಮಹಾಂತೇಶ ತಮದಡ್ಡಿ, ಪ್ರಕಾಶ ಜಲಪೂರ ಇದ್ದರು.
Subscribe to Updates
Get the latest creative news from FooBar about art, design and business.
ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡದ ಸಿಎಂ :ಬಿಜೆಪಿ ಖಂಡನೆ
Related Posts
Add A Comment

