ಸಿಂದಗಿ: ಬಾಲ್ಯದಲ್ಲಿ ಉತ್ತಮ ಸಂಸ್ಕಾರಗಳನ್ನು ನೀಡುವುದರ ಜೊತೆಗೆ ಶಿಕ್ಷಣದ ಮಹತ್ವವನ್ನು ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರಗಳನ್ನು ನೀಡುವುದು ಮತ್ತು ಅವರನ್ನು ನೆಲೆಗೊಳಿಸುವುದು ಎಂದಿಗಿಂತಲೂ ಇಂದು ಮುಖ್ಯವಾಗಿದೆ ಎಂದು ಸಿ.ಎಮ್.ಮನಗೂಳಿ ಪದವಿ ಮಹಾವಿದ್ಯಾಲಯ ಪ್ರಾಧ್ಯಾಪಕ ಡಾ.ಅರವಿಂದ ಮ ಮನಗೂಳಿ ಅವರು ಹೇಳಿದರು.
ನಗರದ ಸರಕಾರಿ ಪದವಿ-ಪೂರ್ವ ಕಾಲೇಜ ಮಹಾವಿದ್ಯಾಲಯದ ಸಭಾಭವನದಲ್ಲಿ ಹಮ್ಮಿಕೊಂಡ ಬೀಳ್ಕೊಡುಗೆ, ವಾರ್ಷಿಕೋತ್ಸವ ಮತ್ತು ದಾನಿಗಳ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅವರು, ಸ್ವಯಂ-ಶಿಸ್ತು, ಉತ್ತಮ ಸಂಸ್ಕಾರ ವ್ಯಕ್ತಿತ್ವವನ್ನು ಹೆಚ್ಚಿಸುತ್ತವೆ. ವಿದ್ಯಾರ್ಥಿಗಳು ಉತ್ತಮ ಸಂಸ್ಕಾರಗಳನ್ನು ಜೀವನದಲ್ಲಿ ರೂಡಿಸಿಕೊಂಡು ಆದರ್ಶ ವಿದ್ಯಾರ್ಥಿಗಳಾಗಬೇಕು ಎಂದು ಹಾರೈಸಿದರು.
ಈ ವೇಳೆ ಆದಿಶೇಷ ಸಂಸ್ಥಾನ ಹಿರೇಮಠದ ರಾಜಯೋಗಿ ವಿರಾಜೇಂದ್ರ ಶಿವಯೋಗಿಗಳು ಸಾನಿಧ್ಯ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಬಾಲ್ಯದಲ್ಲಿ ಅಳವಡಿಸಿಕೊಂಡ ಸಂಸ್ಕಾರ, ವಿದ್ಯ ಜೀವನದುದಕ್ಕೂ ಶ್ರೀಮಂತ ಪ್ರತಿ ಫಲವನ್ನು ನೀಡುತ್ತದೆ ಎಂದು ಆಶೀರ್ವಚನ ನೀಡಿದರು.
ಸಮಾರಂಭದಲ್ಲಿ ಮಾಜಿ ಪುರಸಭೆ ಸದಸ್ಯ ಹಾಗೂ ತಾಲೂಕು ಕಸಾಪ ನಿಕಟ ಪೂರ್ವ ಅಧ್ಯಕ್ಷ ರಾಜಶೇಖರ ಕೂಚಬಾಳ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಣ ಮೂಲಕ ಉತ್ತಮ ಕೌಶಲ್ಯ, ಮಾನವೀಯ ಮೌಲ್ಯಗಳನ್ನು ಶಿಕ್ಷಕರು ಬೆಳೆಸಬೇಕೆಂದು ತಿಳಿಸಿದರು.
ಈ ವೇಳೆ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ, ಪ್ರಾಚಾರ್ಯ ಎನ್.ಆರ್.ಗಂಗನಳ್ಳಿ, ಸಿದ್ದರಾಮ ಚಿಂಚೋಳ್ಳಿ, ಡಾ.ಸುನೀಲ ಪಾಟೀಲ, ಗುರುರಾಜ ಹುರಕಡ್ಲಿ, ಬಸವರಾಜ ಅಗಸರ, ಎಂ.ಎಂ.ಯಾಳಗಿ, ಎಂ.ಆರ್ ಹೆಬ್ಬಳ್ಳಿ. ಎ.ಆರ್.ರಜಪೂತ, ಎಸ್.ಎಸ್.ಪಾಟೀಲ, ಜಿ.ಎನ್.ಹಿರೇಮಠ, ಜಿ.ಎಸ್.ಮೋರಟಗಿ, ಸೇರಿದಂತೆ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು. ಉಪನ್ಯಾಸಕ ಶಶಿಧರ ಅವಟಿ ಸ್ವಾಗತಿಸಿದರು. ಉಪನ್ಯಾಸಕ ಬಸನಗೌಡ ಬಿರಾದಾರ ನಿರೂಪಿಸಿದರು. ಉಪನ್ಯಾಸಕ ಎಸ್.ಎಸ್.ಸುರಪೂರ ವಂದಿಸಿದರು. ಅಂಬಿಕಾ ಗುಡ್ಯಾಳ ಪ್ರಾರ್ಥಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

