ಡಾ.ಚೈತನಾ ಸಂಕೊಂಡ ರಚಿತ ’ಬಯಲು ಬೊಂಬೆ’ ಕೃತಿ ಲೋಕಾರ್ಪಣೆ
ವಿಜಯಪುರ: ಸಂಶೋಧನಾ ಲೇಖನಗಳ ಸಂಗ್ರಹಿತ ’ಬಯಲು ಬೊಂಬೆ’ ಕೃತಿಯು ವಿಭಿನ್ನ ವಿಶೇಷ ಲೇಖನಗಳು, ಭಕ್ತಿ, ಸಾಮಾಜಿಕ ಚಿಂತನ, ವೈವಿಧ್ಯತೆಯನ್ನು ಒಳಗೊಂಡಿದೆ ಎಂದು ಪ್ರಾಚಾರ್ಯ ಡಾ:ಆರ್.ಎಂ.ಮಿರ್ದೆ ಹೇಳಿದರು.
ನಗರದ ಬಿ ಎಲ್ ಡಿ ಇ ಸಂಸ್ಥೆಯ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದಲ್ಲಿ ಗ್ರಂಥ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಸಾಹಿತ್ಯ ಲೋಕದಲ್ಲಿ ಸಂಶೋದನಾ ಬಹಳಷ್ಟು ವಿರಳ ಅಂತಹದರಲ್ಲಿ ಸಂಶೋಧನಾ ಕೈಗೊಂಡಿರುವ ಉಪನ್ಯಾಸಕಿ ಡಾ.ಚೈತನಾ ಸಂಕೊಂಡ ಇವರ ಕಾರ್ಯ ನಿಜಕ್ಕೂ ಶ್ಲಾಘನೀಯವಾದದ್ದು ಎಂದರು.
ಈ ಗ್ರಂಥವು ವಿಭಿನ್ನ ವಿಶೇಷತೆಗಳನ್ನು ಹೊಂದಿದೆ. ರಾಮಾಯಣ ಮಹಾಭಾರತ, ಜೈನ ಧರ್ಮದ ದಿಗ್ದರ್ಶನ ಬಸವಣ್ಣನ ನವರ ವಿಚಾರ ಧಾರೆಗಳನ್ನು ಬಿತ್ತರಿಸುವ ಕಾಯ ವಾಚನ ಬಿತ್ತರಿಸುವ ಪಂಚವಿಂಶತಿ ಲೀಲೆಗಳು, ಸಂತ ಶರಣರ ಸಾಹಿತ್ಯದಲ್ಲಿ ಸಾಮಾಜಿಕ ಚಿಂತನೆ, ಕನಕದಾಸರ ಕೀರ್ತನೆಗಳಲ್ಲಿ ಭಕ್ತಿ, ನಿಜಗುಣ ಶಿವಯೋಗಿಗಳ ಅನುಭಾವ ಇಂತಹ ಹಲವಾರು ಸಾಮಾಜಿಕ ಸದೃಡ, ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಒಟ್ಟು ೧೩ ವಿಶೇಷ ಸಂಶೋಧನಾ ಲೇಖನಗಳ ವಿರಚಿತ ಈ ಗ್ರಂಥವು ಪ್ರಮುಖ ಸಾಹಿತ್ಯಾಸಕ್ತರಿಗೆ ಆಸಕ್ತಿಯುತವಾದ ಗ್ರಂಥವಾಗಿ ಹೊರಹೊಮ್ಮಿದೆ ಎಂದರು.
ಈ ವೇಳೆ ಬಬಲೇಶ್ವರ ಶಾಂತವೀರ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ವ್ಹಿ. ಆರ್ ಚೌಧರಿ ಗ್ರಂಥ ಪರಿಚಯಿಸಿ ಮಾತನಾಡಿ, ಚಿಕ್ಕ ವಯಸ್ಸಿನಲ್ಲಿನ ಈ ಸಾಧನೆ ಕಡಿಮೆ ಅವಧಿಯಲ್ಲೇ ಸಂಶೋಧನಾ ಕೈಗೊಂಡು ಮಹಾನ ಸಾಧನೆ ಮಾಡಿದ್ದಾರೆ. ಜೈನ್ ಧರ್ಮ, ವಚನಕಾರರ ಅವಲೋಕನ ಇವೆಲ್ಲದರ ವಿಶಿಷ್ಠವಾದ ಗ್ರಂಥವಾಗಿದೆ.
ಈ ಗ್ರಂಥದಲ್ಲಿ ಮರಾಠ ಅಭಂಗವನ್ನು ತೌಲನಿಕವಾಗಿ ತೆಗೆದುಕೊಂಡಿದ್ದಾರೆ.
ಬಯಲು ಎಂಬ ಪದವು ಅಧ್ಯಾತ್ಮಿಕ ದೃಷ್ಟಿಕೋನದಿಂದ, ಲಿಂಗಾಂಗ ಸಾಮರಸ್ಯವನ್ನು, ಬಯಲಿನ ಸ್ವರೂಪದಲ್ಲಿ ಶಿವನ ಸ್ವರೂಪದ ನಿಲುವು ಸೃಷ್ಟಿಯ ಅದಿ ಅಂತ್ಯ ಶಿವನೆ ಈ ರೀತಿಯಾಗಿ ಸಾಹಿತ್ಯ ಗ್ರಂಥ ಆಕಾರದ ರೂಪದಲ್ಲಿ
ನೀಡಿದ್ದಾರೆ. ಜೈನ್ ಧರ್ಮದ ವಿಚಾರ ಧಾರೆಗಳು, ಕಾವ್ಯಗಳು ,ಜನ್ಮ ಜನ್ಮಾಂತರ ನಂಬಿಕೆಗಳು ಹೊಂದಿರುವ ಜೈನ ಧರ್ಮದ ಬಗ್ಗೆ ವಿಶ್ಲೇಷಿಸಿದ್ದಾರೆ. ಸಾಹಿತ್ಯ ಲೋಕಕ್ಕೆ ಹಿರಿಮೆ ಗರಿಮೆ ಬರಲಿ ಎಂದು ಶುಭ ಹಾರೈಸಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಕೆ.ರವೀಂದ್ರ ನಾಥ ಮಾತನಾಡಿ, ಈ ಸಂದರ್ಭದಲ್ಲಿ ಲೇಖಕಿ ಉಪನ್ಯಾಸಕಿ ಡಾ.ಚೈತನಾ ಸಂಕೊಂಡ ಮಾತನಾಡಿ ಈ ಸಾಧನೆಯ ಹೆಜ್ಜೆಗೆ ನನ್ನ ಗುರುವೃಂದ, ಅಜ್ಜ ಅಜ್ಜಿಯವರೇ ಸ್ಪೂರ್ತಿ, ಅವರ ಮಹಾಭಾರತ, ರಾಮಾಯಣ ಸನ್ನಿವೇಶಗಳನ್ನು ಕಥೆಗಳ ರೂಪದಲ್ಲಿ ನಮಗೆ ಉಣಬಡಿಸುತ್ತಿದ್ದರು. ಅದುವೇ ನನಗೆ ಸ್ಪೂರ್ತಿಯಾಯಿತು. ಅಲ್ಲದೆ ಡಾ.ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದ ಸಿಬ್ಬಂದಿ ನನಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಅವರ ಸಹಕಾರವೇ ಈ ಹೆಜ್ಜೆಗೆ ಸಾಕ್ಷಿಯಾಗಿದೆ ಎಂದು ಕೃತಜ್ಞತೆ ಸಲ್ಲಿಸಿದರು.
ಸಂಶೋಧನಾ ಕೇಂದ್ರದ ಕಾರ್ಯದರ್ಶಿ ಡಾ.ಎಂ.ಎಸ್.ಮದಭಾವಿ ಮಾತನಾಡಿದರು.
ಈ ಸಂದರ್ಭದಲ್ಲಿ ಡಾ.ಫ.ಗು ಹಳಕಟ್ಟಿ ಸಂಶೋಧನಾ ಕೇಂದ್ರದ ಸಂಯೋಜನಾಧಿಕಾರಿ ಡಾ.ಡಾ.ವ್ಹಿ.ಡಿ ಐಹೊಳ್ಳಿ, ಡಾ.ಎಂ.ಎಸ್.ಮದಭಾವಿ, ಎಸ್ಬಿ.ಕಲಾ & ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಆರ್.ಎಂ.ಮಿರ್ದೆ, ಉಪನ್ಯಾಸಕಿ, ಲೇಖಕರಾದ ಡಾ.ಚೈತನಾ ಸಂಕೊಂಡ, ಡಾ.ವ್ಹಿ.ಆರ್.ಚೌಧರಿ, ಸಾಹಿತಿ ಜಂಬುನಾಥ ಕಂಚ್ಯಾಣಿ, ಡಾ.ಶ್ರೀನಿವಾಸ ದೊಡ್ಡಮನಿ, ಉಪನ್ಯಾಸಕರು ಮತ್ತು ಸಂಶೋಧನಾರ್ಥಿಗಳು, ಉಪಸ್ಥಿತರಿದ್ದರು.
ಪ್ರೊ.ಎಸ್.ಹೆಚ್ ಹೂಗಾರ ವಚನ ಗಾಯನ ಮಾಡಿದರು, ಪ್ರೊ.ಎ.ಬಿ ಬೂದಿಹಾಳ ವಂದಿಸಿದರು. ಪ್ರೊ.ಸುಭಾಶ್ಚಂದ್ರ ಕನ್ನೂರ ನಿರೂಪಿಸಿದರು.

