ದೇವರಹಿಪ್ಪರಗಿ: ಕಳೆದ ೧೦ ವರ್ಷಗಳಿಂದ ಪಟ್ಟಣದ ಬಾಲಹನುಮಾನ ಜಾತ್ರೆ ಮಾಲಾಧಾರಿಗಳ ನೇತೃತ್ವದಲ್ಲಿ ವಿಜೃಂಭಣೆಯಿಂದ ಜರುಗುತ್ತಿರುವುದು ಅವರ ಭಕ್ತಿಭಾವಕ್ಕೆ ಸಾಕ್ಷಿಯಾಗಿದೆ ಎಂದು ಶಾಸಕ ರಾಜುಗೌಡ ಪಾಟೀಲ(ಕುದರಿಸಾಲವಾಡಗಿ) ಹೇಳಿದರು
ಪಟ್ಟಣದ ಗಂಗಾನಗರದಲ್ಲಿ ಶನಿವಾರ ಬಾಲಹನುಮಾನ ದೇವಸ್ಥಾನದ ೧೦ನೇ ವರ್ಷದ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ನಮ್ಮ ಕಷ್ಟಕಾರ್ಪಣ್ಯಗಳನ್ನು ದೂರಮಾಡುವ ಮೂಲಕ ಹನುಮಾನ ಪ್ರತಿ ಗ್ರಾಮ, ಪಟ್ಟಣದಲ್ಲಿ ಪೂಜ್ಯನೀಯ ದೈವವಾಗಿದ್ದಾನೆ ಎಂದು ಹೇಳುತ್ತಾ, ಕ್ಷೇತ್ರದಲ್ಲಿ ಕೆರೆ, ಕಾಲುವೆಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಹನುಮನ ಆಶೀರ್ವಾದದಿಂದ ದೇಶದಲ್ಲಿ ಸಮೃದ್ಧತೆ ಕಾಣುವಂತಾಗಲಿ ಎಂದರು.
ಪಟ್ಟಣದ ಪ್ರಮುಖರಾದ ಬಿ.ಕೆ.ಪಾಟೀಲ ಮಾತನಾಡಿದರು.
ಧಾರವಾಡ ಶ್ರೀಗುರು ಚೈತನ್ಯ ಆಶ್ರಮದ ಸರ್ಪಭೂಷಣ ದೇವರು, ಪರದೇಶಿಮಠಶ್ರೀ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಜಾತ್ರಾ ಮಹೋತ್ಸವದ ಅಂಗವಾಗಿ ನಿಂಗು ಯಂಭತ್ನಾಳ ನೇತೃತ್ವದಲ್ಲಿ ಮಾಲಾಧಾರಿಗಳು ಬೆಳಿಗ್ಗೆ ಹೋಮ ಹವನಗಳು ಸೇರಿದಂತೆ ಪೂಜಾವಿಧಿ ವಿಧಾನಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿ ನಂತರ ಮಹಾಪ್ರಸಾದ ವಿತರಿಸಿದರು.
ನಿವೃತ್ತ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ಕೆ.ಕುದರಿ, ವಿಜಯಪುರ ಅನುಗ್ರಹ ಆಸ್ಪತ್ರೆಯ ದತ್ತಾತ್ರೇಯ ಹೊಸಮಠ, ಸಮೃದ್ಧಿ ಸಹಕಾರ ಸಂಘದ ಉಪಾಧ್ಯಕ್ಷ ರಿಯಾಜ್ ಯಲಗಾರ, ಪಟ್ಟಣ ಪಂಚಾಯಿತಿ ಸದಸ್ಯರಾದ ರಮೇಶ ಮಸಬಿನಾಳ, ಕಾಸುಗೌಡ ಬಿರಾದಾರ(ಜಲಕತ್ತಿ), ಗುರುರಾಜ್ ಗಡೇದ, ಕಾಶೀನಾಥ ಬಜಂತ್ರಿ, ಮಂಗಳೇಶ ಕಡ್ಲೇವಾಡ್, ಉಮೇಶ ರೂಗಿ, ರಾಜು ಮೆಟಗಾರ, ಸಹಿತ ಶಂಕರಗೌಡ ಪಾಟೀಲ(ಯರನಾಳ), ವಿನೋದ ಪಾಟೀಲ, ಮುನ್ನಾ ಮಳಖೇಡ, ಮಕಬೂಲ್ ಬಾಗವಾನ, ಹಾಜೀಲಾಲ್ ಮಸಳಿ, ಸೋಮು ದೇವೂರ, ಪ್ರಕಾಶ ಮಲ್ಲಾರಿ, ವಿನೋದ ಚವ್ಹಾಣ, ಮಲ್ಲು ಜಮಾದಾರ, ಕಾಶೀನಾಥ ತಳಕೇರಿ, ಪ್ರಕಾಶ ಗುಡಿಮನಿ ಹಾಗೂ ಜಾತ್ರಾ ಕಮೀಟಿಯ ಸದಸ್ಯರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

