ದೇವರಹಿಪ್ಪರಗಿ: ಶಿಕ್ಷಕರಾಗಿ ರಾಷ್ಟ್ರಪತಿಯಾದ ಎಸ್.ರಾಧಾಕೃಷ್ಣನ್ ನಮ್ಮೆಲ್ಲರ ಹೆಮ್ಮೆ ಎಂದು ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಎ.ಎಚ್.ವಾಲೀಕಾರ ಹೇಳಿದರು.
ತಾಲ್ಲೂಕಿನ ಪಡಗಾನೂರ ಎಲ್.ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ವಾಯ್.ಜಿ. ತಾವರಖೇಡ ಸೇವಾನಿವೃತ್ತಿಯಾದ ಸಂದರ್ಭದಲ್ಲಿ ಸನ್ಮಾನಿಸಿ ಮಾತನಾಡಿದರು.
ಶಾಲಾ ಮುಖ್ಯಗುರು ಎಸ್.ಪಿ.ಇಂಗಳೇಶ್ವರ, ಎಸ್.ಎಮ್.ಹೊಕ್ಕುಂಡಿ, ಖಾದ್ರಿ, ಬಾಳು ರಾಠೋಡ, ವಿಜಯಲಕ್ಷ್ಮಿ ನವಲಿ, ನಾಗೇಶ ನಾಗೂರ, ಜಿ.ಪಿ.ಬಿರಾದಾರ ನಿವೃತ್ತ ಶಿಕ್ಷಕರ ಸೇವೆಯ ಕುರಿತು ಮಾತನಾಡಿದರು.
ಸನ್ಮಾನಿತ ತಾವರಖೇಡ ಶಿಕ್ಷಕರು ಮಾತನಾಡಿ, ವೃತ್ತಿಯಲ್ಲಿ ನನಗೆ ಸಂತೃಪ್ತಿಯಿದೆ. ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಕಾರ್ಯ ನಿರ್ವಹಿಸಿದರೆ ಉತ್ತಮ ಪ್ರಜೆಗಳನ್ನು ನಿರ್ಮಿಸಬಹುದು. ಮಕ್ಕಳ ಉನ್ನತಿಯಲ್ಲಿಯೇ ನಮ್ಮ ಸಾರ್ಥಕ ಜೀವನ ಕಾಣಬೇಕು ಎಂದು ತಮ್ಮ ವೃತ್ತಿ ಜೀವನ ನೆನೆಸಿಕೊಂಡು ಭಾವುಕರಾದರು.
ಎಸ್‌ಡಿಎಮ್‌ಸಿ ಅಧ್ಯಕ್ಷ ಜಿ.ಎಚ್.ರಾಠೋಡ, ಗ್ರಾಮ ಪಂಚಾಯಿತಿ ಸದಸ್ಯ ರಾಜು ರಾಠೋಡ, ತಾರಾಸಿಂಗ್ ರಾಠೋಡ, ಗೀತಾ ರಾಠೋಡ, ಭೀಮರಾಯ ಪೋಲೇಶಿ, ದಾನು ರಾಠೋಡ, ಸಿ.ಆರ್.ನಾಯಿಕ್, ಎ.ಟಿ.ಲಮಾಣಿ, ಕವಿತಾ ಬ್ಯಾಳಿ, ಗಂಗಾಬಾಯಿ ಗುಡಿಮನಿ, ಅಮೃತಾ ಕರಾಬಿ, ಶೃತಿ ಪಾಟೀಲ, ಮಹಾದೇವಿ ಬಿರಾದಾರ, ಮಲ್ಲಿಕಾರ್ಜುನ ತಳಕೇರಿ, ಎಸ್.ಎಸ್.ತಳವಾರ ಸೇರಿದಂತೆ ಮಕ್ಕಳು, ಗ್ರಾಮಸ್ಥರು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

