ವಿಜಯಪುರ: ಹೋನಾಗನಹಳ್ಳಿ ಗ್ರಾಮದಿಂದ ಸಂವಿಧಾನ ಜಾಗೃತಿ ಜಾತಾ ರಥಕ್ಕೆ ಗ್ರಾಮ ಪಂಚಾಯತಿಯಿಂದ ಪುಂಡಲಿಕ ಮಾನವರ ಉಪ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ವಿಜಯಪುರ ಇವರು ರಥಕ್ಕೆ ಅದ್ದೂರಿ ಚಾಲನೆ ನೀಡಿದರು.
ಅಲ್ಲಿಂದ ಸಂವಿಧಾನ ರಥವು ತಿಕೋಟ ತಾಲೂಕು ಕೋಮಟೆ ಗ್ರಾಮ ಪಂಚಾಯಿತಿ ಹಲವು ಗ್ರಾಮಗಳ ಮೂಲಕ ಬಬಲೇಶ್ವರ ತಾಲೂಕಿಗೆ ಬಂದು ತಲುಪಿದಾಗ ಸಂವಿಧಾನ ಜಾಗೃತಿ ಜಾತಾರಥಕ್ಕೆ ವಿಶೇಷವಾಗಿ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು,
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಿಜಯಪುರ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಸ್ ಎಂ ಪಾಟೀಲ ಮಾತನಾಡಿ, ಸಂವಿಧಾನವು ಜನತೆಯ ಹಕ್ಕುಗಳು ಮೂಲವಾಗಿದೆ. ವಿಶ್ವದ ದೀರ್ಘಸಂವಿಧಾನ ನಮ್ಮದು. ಹಾಗೂ ನಮ್ಮ ಸಂವಿಧಾನವು ಸೌಂದರ್ಯವೇ ಸಮಾನತೆ ಎಂದು ಹೇಳಿದರು
ಪ್ರತಿಯೊಬ್ಬರೂ ಸಂವಿಧಾನವನ್ನು ಓದಬೇಕು ಮಕ್ಕಳಿಗೆ ಓದಿ ಹೇಳಬೇಕು ಭಗವದ್ಗೀತೆ ಕುರಾನ್ ಬೈಬಲ್ ನಂತೆ ಸಂವಿಧಾನವು ಪ್ರತಿಯೊಬ್ಬರ ಮನೆಯಲ್ಲಿ ಅದರ ಪಠಣ ಮಾಡಬೇಕು ಎಂದು ಹೇಳಿದರು.
ಸಮಾರಂಭದ ಇನ್ನೋರ್ವ ಅತಿಥಿ ಸದಾನಂದ ಬಡಿಗೇರವರು ಮನೆ ಮನಗಳಲ್ಲಿಯೂ ಸಂವಿಧಾನದ ಜ್ಯೋತಿ ಬೆಳಗಬೇಕು. ಮಕ್ಕಳಿಂದ ಹಿಡಿದು ಹಿರಿಯರವರೆಗೂ ಸಂವಿಧಾನವನ್ನು ಓದಬೇಕು.ಅದು ನಮ್ಮ ನಿಮ್ಮೆಲ್ಲರಿಗೂ ಕರ್ತವ್ಯವಾಗಿದೆ ನಮ್ಮ ಜೀವನದ ಅವಿಭಾಜ್ಯ ವಿಚಾರಧಾರೆಗಳು ಸಂವಿಧಾನದಲ್ಲಿ ಅಡಕವಾಗಿವೆ ಅದನ್ನು ಅರಿತು ನಡೆದರೆ ನಮ್ಮ ದೇಶದ ಪ್ರಜಾಪ್ರಭುತ್ವವು ಗಟ್ಟಿಯಾಗಿ ಬೇರೂರುತ್ತದೆ ಎಂದರು.
ನಂತರ ಸಂವಿಧಾನ ಜಾಗೃತೆ ಜಾತ ರಥವು ಮುಖ್ಯರಸ್ತೆಯಲ್ಲಿ ಮೆರವಣಿಗೆ ಸಾಗಿತ್ತು. ವಾದ್ಯ ಮೇಳ ಡೊಳ್ಳು ಕುಣಿತ ಅದ್ದೂರಿ ಸಂಭ್ರಮದಿಂದ ಸಂವಿಧಾನ ಸ್ತಬ್ಧ ಚಿತ್ರವನ್ನು ಮೆರವಣಿಗೆ ಮಾಡಲಾಯಿತು. ಮೆರವಣಿಗೆ ಉದ್ದಕ್ಕೂ ಸಾಗಿದ ಯುವಕ ಯುವತಿಯರು ವಾದ್ಯ ಮೇಳದ ಸಂಗೀತಕೆ ಕುಣಿದು ಕುಪ್ಪಳಿಸಿದರು ಜಯ ಘೋಷ ಮುಳಗಿಸಿದರು
ಜಾಥ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಮತ್ತು ವಿವಿಧ ಇಲಾಖೆ ಅಧಿಕಾರಿ ಎ ಬಿ ಕಲಶೆಟ್ಟಿ, ಬಿ ವಿ ಚೆನ್ನಪ್ಪನವರ್, ಎನ್ ಹೆಚ್ ವಾಲಿಕಾರ, ಏ ಎಂ ಒ ಡಿಯರ್, ಎಸ್ ಎಸ್ ಕೆರೂರ, ಎ ಎಸ್ ಡಂಬಾಳ, ಪೂಜಾ ನಿಕಿಂ, ಸುಜಾತಾ ಟಕ್ಕಳಕಿ, ಇನಾಮ್ದಾರ್, ಪೂಜಾ ಮೇತ್ರಿ, ಪಾರ್ವತಿ ಮುಂತಾದವರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

