Author: editor.udayarashmi@gmail.com

ಇಂಡಿ: ಸೋಮವಾರ ತಾಲೂಕಿನ ಸಾಲೋಟಗಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎರಡೂ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆಯಿತು.ಅಧ್ಯಕ್ಷರಾಗಿ ವಿಜುಗೌಡ ಪಾಟೀಲ, ಉಪಾಧ್ಯಕ್ಷರಾಗಿ ಪಂಡಿತ ರಾಠೋಡ ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಘೋಷಿಸಿದರು.ಚುನಾವಣಾಧಿಕಾರಿಗಳು ಮೊದಲೆ ಸೂಚಿಸಿದಂತೆ ಸೋಮವಾರವೇ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ನಂತರ ಮತ ಎಣಿಕೆ ಕಾರ್ಯ ನಿಗದಿಯಾಗಿತ್ತು. ಎರಡೂ ಸ್ಥಾನಗಳಿಗೆ ತಲಾ ಒಂದೇ ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಎರಡೂ ಸ್ಥಾನಗಳು ಅವಿರೋಧ ಆಯ್ಕೆಯಾದವು ಎಂದು ಚುನಾವಣಾ ಅಧಿಕಾರಿ ನಿಜಣ್ಣ ಕಾಳೆ ಘೋಷಿಸಿದರು.ಈ ಸಂದರ್ಭದಲ್ಲಿ ತಾ.ಪಂ. ಮಾಜಿ ಸದಸ್ಯ ಜೀತಪ್ಪ ಕಲ್ಯಾಣಿ, ಮುಖಂಡರುಗಳಾದ ಶಿವಯೋಗೆಪ್ಪ ಚೆನ್ನಗೊಂಡ, ಅಶೋಕ ಬಗಲಿ, ದುಂಡಪ್ಪ ಹ್ಯಾಳದ, ಅಣ್ಣಾರಾಯ ಬಲ್ಲಾ, ರಮೇಶ ಕಲ್ಯಾಣಿ, ಯಮನಪ್ಪ ನಾಟಿಕಾರ, ಅರ್ಜುನ ಚಾಂದಕವಟೆ, ಚನ್ನಮಲ್ಲ ಚೆನ್ನಗೊಂಡ, ಔರಂಗಜೇಬ ವಾಲಿಕಾರ, ಬಸವರಾಜ ಬಗಲಿ, ಭೀಮರಾಯ ಭೋವಿ, ಶಿವಾನಂದ ಮಂಗೊಂಡ, ಗಂಗಾಧರ ಕರೋರ, ಶಿವಾನಂದ ಹೊಸೂರ, ಬಸವರಾಜ ಕರೂರ, ಸೋಮಶೇಖರ ಚೆನ್ನಗೊಂಡ, ಮಂಜೋರ ಇನಾಮದಾರ,…

Read More

ಇಂಡಿ: ದೇಶದ ಪ್ರತಿಯೊಬ್ಬ ಪ್ರಜೆಯೂ ಸಂವಿಧಾನದ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಂವಿಧಾನ ಪಾಲನೆ ಪ್ರತೀ ನಾಗರಿಕರ ಕರ್ತವ್ಯವಾಗಿದೆ ಎಂದು ಸಮಾಜ ಕಲ್ಯಾಣಾಧಿಕಾರಿ ಬಿ.ಜೆ. ಇಂಡಿ ಕರೆ ನೀಡಿದರು.ಅವರು ಭಾನುವಾರ ತಾಲ್ಲೂಕಿನ ಅಹಿರಸಂಗ ಗ್ರಾಮದಲ್ಲಿ ನಡೆದ ಸಂವಿಧಾನ ಜಾಗೃತ ಜಾಥಾದಲ್ಲಿ ಅವರು ಮಾತನಾಡಿದರು.ಸಂವಿಧಾನದ ಮೌಲ್ಯಗಳನ್ನು ಜೀವಂತವಾಗಿರಿಸಬೇಕೆಂಬ ಉದ್ದೇಶದಿಂದ ಸರ್ಕಾರ ಸಂವಿಧಾನ ಜಾಗೃತಿ ಜಾಥಾ ಹೊರಡಿಸಿದೆ. ಸಂವಿಧಾನ ಮಹಿಳೆಯರಿಗೆ ವಾಕ್ ಸ್ವಾತಂತ್ರ‍್ಯ ನೀಡಿ ಸಮಾನವಾಗಿ ಬದುಕುವ ಹಕ್ಕನ್ನು ನೀಡಿದೆ. ಆದ್ದರಿಂದ ಮಹಿಳೆಯರು ಸಂವಿಧಾನದ ಮೌಲ್ಯಗಳನ್ನು ಮರೆಯಬಾರದು ಎಂದರು.ಗ್ರಾಮ ಪಂಚಾಯತ ಅಧ್ಯಕ್ಷ, ಸದಸ್ಯರು, ಗ್ರಾಮಸ್ಥರು, ಯುವಕರು ಸೇರಿದಂತೆ ಸಾವಿರಾರು ಜನರು ಸಂವಿಧಾನ ಜಾಗೃತ ಜಾಥಾ ಸ್ಥಬ್ದ ಚಿತ್ರವನ್ನು ಪುಷ್ಪನಮನದೊಂದಿಗೆ ಸಲ್ಲಿಸಿ ಬಳಿಕ ಮುಖ್ಯ ರಸ್ತೆಯಿಂದ ಅಂಬೇಡ್ಕರ ವೃತ್ತದವರೆಗೆ ಮೆರವಣಿಗೆದೊಂದಿಗೆ ಅದ್ದೂರಿಯಾಗಿ ಸ್ವಾಗತಿಸಿದರು.ಸಾಮಾಜಿಕ ಹೋರಾಟಗಾರ್ತಿ ಭುವನೇಶ್ವವರಿ ಕಾಂಬಳೆ ಮಾತನಾಡಿದರು.ಸಂವಿಧಾನ ಪ್ರತಿ ಅಂಗದ ಅಧಿಕಾರ ವ್ಯಾಖ್ಯೆಯನ್ನು ನೀಡುವುದಲ್ಲದೆ ಅವುಗಳ ಜವಾಬ್ದಾರಿಯನ್ನೂ ಖಚಿತಪಡಿಸುತ್ತದೆ. ದೇಶದಲ್ಲಿ ತುಳಿತಕ್ಕೊಳಗಾದವರ ಶೋಷಿತರಿಗೆ ರಕ್ಷಣೆ ನೀಡುತ್ತಿರುವುದು ಡಾ .ಬಿ.ಆರ್. ಅಂಬೇಡ್ಕರ್ ಅವರು ರಚಿಸಿರುವ ಭಾರತ…

Read More

ಬಸವನಬಾಗೇವಾಡಿ: ಮಕ್ಕಳ ಅಸಕ್ತಿಯನ್ನು ಅರಿತು ಗುಣಮಟ್ಟದ ಶಿಕ್ಷಣ ನೀಡಿದರೆ ಅವರು ಸಾಧನೆಯತ್ತ ಗಮನಹರಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಕರ, ಪಾಲಕರ ಪಾತ್ರ ಮಹತ್ವದಾಗಿದೆ. ಶಿಕ್ಷಣದೊಂದಿಗೆ ಮಕ್ಕಳಿಗೆ ಉನ್ನತ ಮೌಲ್ಯ ತಿಳಿಸಿಕೊಡಬೇಕೆಂದು ಸಚಿವ ಶಿವಾನಂದ ಪಾಟೀಲ ಹೇಳಿದರು.ಪಟ್ಟಣದ ಬಸವೇಶ್ವರ ದೇವಾಲಯ ಅಂತರಾಷ್ಟ್ರೀಯ ಶಾಲೆ ಆವರಣದಲ್ಲಿರುವ ನಂದೀಶ್ವರ ರಂಗಮಂದಿರದಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಶಾಲೆಯ 12ನೇ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು,ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಗುರುತಿಸಿ ಅವರನ್ನು ಪ್ರೋತ್ಸಾಹಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿವೆ.ಇಲ್ಲಿನ ಅಂತರಾಷ್ಟ್ರೀಯ ಶಾಲೆಯು ಪಟ್ಣಣ ಸೇರಿದಂತೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರೊಂದಿಗೆ ಪ್ರಗತಿಪಥದತ್ತ ಸಾಗುತ್ತಿದೆ. ಈ ಶಾಲೆಯ ಅಭಿವೃದ್ಧಿಗೆ ಬೇಕಾದ ಸಹಕಾರ ನೀಡುವುದಾಗಿ ಭರವಸೆ ನೀಡಿದರು.ಧಾರವಾಡ ಉಪನ್ಯಾಸಕ ಶರಣು ಬಾಗೂರ ಮಾತನಾಡಿ, ಪಾಲಕರ ಹಾಗೂ ಶಿಕ್ಷಕರ ಸಂಬಂಧ ಉತ್ತಮವಾಗಿರಬೇಕು. ಶಾಲೆಯ ಅಭಿವೃದ್ಧಿಗೆ, ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪಾಲಕರು ಕೈಜೋಡಿಸಿದಾಗ ಮಗು ಸರ್ವಾಂಗೀಣ ಅಭಿವೃದ್ಧಿ ಕಾಣಲು ಸಾಧ್ಯ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಶಾಲಾ ಸಲಹಾ ಸಮಿತಿ ಅಧ್ಯಕ್ಷ ಅನಿಲ…

Read More

ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಹಿರೇಮಠದಲ್ಲಿ ಭಾನುವಾರ ಲೋಕಾರ್ಪಣೆಗೊಂಡ ನೂತನ ರಥವನ್ನು ಪ್ರಪ್ರಥಮ ಬಾರಿಗೆ ಮಹಿಳೆಯರು ಎಳೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ರಥೋತ್ಸವ ಜಯಘೋಷದೊಂದಿಗೆ ಅದ್ದೂರಿಯಾಗಿ ಜರುಗಿತು.ರಥೋತ್ಸವವು ಶ್ರೀಮಠದ ಶತಾಯುಷಿ ಸಂಗನಬಸವ ಕಲ್ಯಾಣ ಮಂಟಪದಿಂದ ಬಸವೇಶ್ವರ ಪಾದಗಟ್ಟೆಯವರೆಗೆ ಸಾಗಿ ಮತ್ತೆ ಕಲ್ಯಾಣ ಮಂಟಪಕ್ಕೆ ಮರಳಿತು.ರಥೋತ್ಸವದಲ್ಲಿ ಅಭಿನವ ಸಂಗನಬಸವ ಶಿವಾಚಾರ್ಯರು, ವೀರಭದ್ರಮನಿ ಶಿವಾಚಾರ್ಯರು, ಚಂದ್ರಶೇಖರಗೌಡ ಪಾಟೀಲ, ವಿಶ್ವನಾಥ ಪಾಟೀಲ,ನಿಂಗನಗೌಡ ಬಿರಾದಾರ, ರಾಮು ಬಿರಾದಾರ, ಶರಣಯ್ಯ ನಂದಿಕೋಲಮಠ, ಮಾಂತೇಶ ಮನಗೂಳಿ, ಸಂಗಪ್ಪ ಪದಮಗೂಂಡ, ಮಲ್ಲಪ್ಪ ಬೆಳ್ಳೂರ, ದ್ಯಾಮು ತಳೇವಾಡ, ಶ್ರೀಕಾಂತ ಸಾರವಾಡ, ಬಸವರಾಜ ತಪಶೆಟ್ಟಿ, ಭೀಮು ಬನ್ನೂರ, ಈರಣ್ಣ ಬಾವಿಕಟ್ಟಿ, ಮಹಾಂತಪ್ಪ ತೊನಿಶ್ಯಾಳ, ತಾಯಂದಿರಾದ ಅಶ್ವಿನಿ ಬಿರಾದಾರ, ರೇಣುಕ ಮಣ್ಣೂರ, ಸುಮಕ್ಕ ಸಂಗಾಪುರ, ಕಾಳವ್ವ ತಪಶೆಟ್ಟಿ, ನೀಲಕ್ಕ ಹುಣಸಿಕಟ್ಟಿ, ಜ್ಯೋತಿ ಹಿಟ್ಟನಹಳ್ಳಿ, ಪ್ರೀತಿ ಹತ್ತಿರಕಿ , ಶೈಲಾ ಉಮನಾಬಾದಿ, ಅಶ್ವಿನಿ ತಪಶೆಟ್ಟಿ ,ಪ್ರಿಯಾಂಕ ಮನಗೂಳಿ, ಜೈಯಶ್ರೀ ಅರೋಟಗಿ, ಶೋಭಾ ಗುಜಗೊಂಡ ,ಜ್ಯೋತಿ ಬಿರಾದರ, ಶಿಲ್ಪ ಬಿರಾದಾರ, ಶಶಿ ಬೂದಿಹಾಳ, ಶಶಿ ಹುಣಸಿಕಟ್ಟಿ, ಶಾರದಾ ಲೇಸಪಗೋಳ,…

Read More

ಬಸವನಬಾಗೇವಾಡಿ: ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ತಾಲೂಕಾ ಗಣಿತ ಶಿಕ್ಷಕರ ವೇದಿಕೆಯಿಂದ ಒಂದು ದಿನದ ಕಾರ್ಯಾಗಾರ ಜರುಗಿತು.ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಕ್ಷೇತ್ರಶಿಕ್ಷಣಾಧಿಕಾರಿ ವಸಂತ ರಾಠೋಡ ಅವರು, ಗುಣಾತ್ಮಕ ಶಿಕ್ಷಣ ನೀಡುವುದರ ಮೂಲಕ ತಾಲೂಕಿನ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ ಉತ್ತಮಗೊಳಿಸಲು ಎಲ್ಲ ಶಿಕ್ಷಕರು ಪ್ರಯತ್ನಿಸಬೇಕೆಂದು ಹೇಳಿದರು.ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಕೆ.ಎಸ್. ಚನ್ನವೀರ ಗಣಿತ ಭೋಧನೆ ಮತ್ತು ಕ್ಲಿಷ್ಟತೆಗಳ ಕುರಿತು ಪರಿಣಾಮಕಾರಿಯಾಗಿ ತಿಳಿಸಿ ಕೊಟ್ಟರು.ಶಾಲೆಯ ಪ್ರಭಾರಿ ಮುಖ್ಯಗುರು ಪ್ರಭಾಕರ ಢವಳಗಿ ಅಧ್ಯಕ್ಷತೆ ವಹಿಸಿದ್ದರು.ಗಣಿತ ವೇದಿಕೆಯ ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ, ಎನ್.ಎಸ್. ಬಿರಾದಾರ,ಭಾರತಿ ಪಾಟೀಲ ,ದೈಹಿಕ ಶಿಕ್ಷಣಾಧಿಕಾರಿ ಎಸ್.ಎಸ್. ಅವಟಿ, ಮಲ್ಲಮ್ಮ ಲೋಣಿ ಇತರರು ಇದ್ದರು.ಜಿ.ಎಂ. ಗಂಜಾಳ ಸ್ವಾಗತಿಸಿದರು.ಅಶೋಕ ಹಂಚಲಿ ನಿರೂಪಿಸಿದರು. ಶಿವಕುಮಾರ ಹುಲಸೂರ ವಂದಿಸಿದರು.

Read More

ಬಸವನಬಾಗೇವಾಡಿ:ವಿಜಯಪುರ ಹೆಸ್ಕಾಂ ಸಿಪಿಐಯಾಗಿ ಕಾರ್ಯನಿರ್ವಹಿಸುತ್ತಿದ್ದ ಶರಣಗೌಡ ಗೌಡರ ಅವರು ಸೋಮವಾರ ನಿಡಗುಂದಿ ಸಿಪಿಐ ಆಗಿ ವರ್ಗಾವಣೆಗೊಂಡು ನಿಡಗುಂದಿಗೆ ಅಧಿಕಾರ ಸ್ವೀಕರಿಸಲು ತೆರಳುವ ಮುನ್ನ ಬಸವನಬಾಗೇವಾಡಿಯ ಬಸವೇಶ್ವರರ ದೇವಸ್ಥಾನಕ್ಕೆ ಬೇಟಿ ನೀಡಿ ದರ್ಶನ ಪಡೆದ ಸಂದರ್ಭದಲ್ಲಿ ರಾಷ್ಟ್ರೀಯ ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಅವರು ಬಸವೇಶ್ವರರ ಭಾವಚಿತ್ರ ನೀಡಿ ಸನ್ಮಾನಿಸಿದರು.ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಬಸವನಬಾಗೇವಾಡಿಯಲ್ಲಿ ಸುಮಾರು ಮೂರು ವರ್ಷ ಪಿಎಸ್ಐ ಆಗಿ ಕಾರ್ಯ ನಿರ್ವಹಿಸಿದ್ದು ನನಗೆ ಬಹಳಷ್ಟು ತೃಪ್ತಿ ಇದೆ. ಬಸವನಬಾಗೇವಾಡಿಯ ಹಿರಿಯರು, ಯುವಕರು ,ಎಲ್ಲ ಸಂಘ- ಸಂಸ್ಥೆಗಳು ನನಗೆ ಬಹಳ ಸಹಕಾರವನ್ನು ಕೊಟ್ಟಿದ್ದು ಎಂದಿಗೂ ನಾನು ಮರೆಯುವುದಿಲ್ಲ ಎಂದು ಹೇಳಿದರು. ಶಂಕರಗೌಡ ಬಿರಾದಾರ ಮಾತನಾಡಿ, ಶರಣಗೌಡ ಗೌಡರ ನಮ್ಮ ಬಸವನಬಾಗೇವಾಡಿ ಠಾಣೆಯಲ್ಲಿ ಇದ್ದಾಗ ಎಲ್ಲ ಸಮುದಾಯದ ಜನರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು. ಕಾನೂನು ಸುವ್ಯವಸ್ಥೆ ಕಾಪಾಡುವುದರೊಂದಿಗೆ ಪೊಲೀಸರು ಸಾರ್ವಜನಿಕರ ಮದ್ಯ ಒಳ್ಳೆಯ ಸಂಬಂಧವನ್ನು ಬೆಳೆಸಿದ್ದರು.ಇಂತಹ ಅಧಿಕಾರಿ ಮುಂಬರುವ ದಿನದಲ್ಲಿ ಡಿಎಸ್ಪಿ ಆಗಿ ಮುಂಬಡ್ತಿ ಹೊಂದಿ…

Read More

ತಿಕೋಟಾ: ಬರುವ 2024 ಮಾರ್ಚ್ ಎಪ್ರಿಲ್ ನ ಎಸ್. ಎಸ್.ಎಲ್. ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಫಲಿತಾಂಶವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಗ್ರಾಮೀಣ ವಲಯದ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದಿನಿ ಬಳೋಲಮಟ್ಟಿ ನೇತೃತ್ವದಲ್ಲಿ ಅಗಸ್ತ್ಯ ಫೌಂಡೇಶನದಲ್ಲಿ ಜಿಲ್ಲಾ ನುರಿತ ಸಂಪನ್ಮೂಲ ಶಿಕ್ಷಕರಿಂದ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಫೋನ್ ಇನ್ ನೇರ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಿದರು.ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಹಾಗೂ ಅವರ ಪಾಲಕರಿಗೆ ಪರೀಕ್ಷಾ ಭಯ ನಿವಾರಣೆ ಹಾಗೂ ಮೂರು ಪರೀಕ್ಷೆಗಳನ್ನು ನಡೆಸುವ ಕುರಿತು ಮಾಹಿತಿಯನ್ನು ನೀಡಿ ಪ್ರತಿ ವಿಷಯದಲ್ಲೂ ಸರಾಸರಿ ನೂರು ಮಕ್ಕಳು ಪ್ರಶ್ನೆಗಳನ್ನು ಕೇಳಿ ಸಮಸ್ಯೆ ಪರಿಹರಿಸಿಕೊಂಡರು. ಇದರಿಂದ ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸುವುದರ ಜೊತೆಗೆ ಪರೀಕ್ಷಾ ಫಲಿತಾಂಶವನ್ನು ಹೆಚ್ಚಿಸಲು ಸಾಕಷ್ಟು ಉಪಯೋಗಕಾರಿಯಾಯಿತು ಎಂದು ಬಿಇಓ ಬಳೋಲಮಟ್ಟಿ ಹೇಳಿದರು.ಈ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಹನುಮಂತ ಕುಡಚಿ, ಮಾಂತೇಶ ಅಂಗಡಿ, ಮಂದಾಕಿನಿ ಎಂ, ವಿಜಯೇಂದ್ರ ಪುರೋಹಿತ್, ಲತಾ ಜೋಶಿ, ಪ್ರಕಾಶ ಬಿರಾದಾರ, ಬಿ.ಎಸ್. ಬೆಳಂಡಗಿ, ಅಜಿತ್ ಜೋಶಿ, ಸಂದೀಪ್…

Read More

ದೇವರಹಿಪ್ಪರಗಿ: ಪಟ್ಟಣ ಶಾಖೆಯ ಗ್ರಾಹಕರ ದೂರುಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ದೂರು ನೋಂದಾಯಿಸುವ ಕೇಂದ್ರ ಆರಂಭಿಸಲಾಗುತ್ತಿದೆ ಎಂದು ಇಂಡಿ ಹೆಸ್ಕಾಂ ಇಇ ಎಸ್.ಎ.ಬಿರಾದಾರ ಹೇಳಿದರು.ಪಟ್ಟಣದ ಹೆಸ್ಕಾಂ ಕಚೇರಿ ಆವರಣದಲ್ಲಿ ಸೋಮವಾರ ಗ್ರಾಹಕರ ದೂರು ನೋಂದಾಯಿಸುವ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು. ಪಟ್ಟಣದ ವಿದ್ಯುತ್ ಪೂರೈಕೆ ಸೇರಿದಂತೆ ಯಾವುದೇ ಅಡತಡೆಗಳು ಹಾಗೂ ತ್ವರಿತ ಕ್ರಮಗಳಿಗಾಗಿ ದೂರು ನೋಂದಾವಣಿ ಕೇಂದ್ರ ಆರಂಭಗೊಂಡಿದೆ. ಗ್ರಾಹಕರು ಮೋ. ಸಂಖ್ಯೆ ೯೪೮೦೮೮೩೦೨೪ ಗೆ ಕರೆ ಮಾಡಿ ದೂರು ಸಲ್ಲಿಸಿ ತಕ್ಷಣವೇ ಪರಿಹಾರ ಕಂಡುಕೊಳ್ಳಬಹುದಾಗಿದೆ. ಈಗಾಗಲೇ ಕಂಪನಿಯಿಂದ ೨೪*೭ ವಿದ್ಯುತ್ ತುರ್ತುರಿಪೇರಿ ಸೇವೆಗೆ ಸಿಬ್ಬಂದಿ ಹಾಗೂ ವಾಹನವನ್ನು ನೀಡಲಾಗಿದೆ ಎಂದರು.ಇಂಡಿ ಹೆಸ್ಕಾಂ ಎಇಇ ವಿಜಯಕುಮಾರ ಹವಾಲ್ದಾರ ವಿದ್ಯುತ್ ಸೇವೆಗಳು ಹಾಗೂ ಸಿಬ್ಬಂದಿಗಳ ಅಗತ್ಯತೆ ಕುರಿತು ಮಾತನಾಡಿದರು.ದೇವರಹಿಪ್ಪರಗಿ ಹೆಸ್ಕಾಂ ಎಇಇ ಗಂಗಾಧರ ಲೋಣಿ, ಸಿಂದಗಿ ಎಇಇ ಚಂದ್ರಕಾಂತ ನಾಯಕ, ಸಿಂದಗಿ ಎಇ ಎಸ್.ಎನ್.ಗೌಡರ, ಶಾಖಾಧಿಕಾರಿಗಳಾದ ಉಮೇಶ ಪಟ್ಟಣ, ಅಶೋಕ ಕಂದಗಲ್, ಮೇಲ್ವಿಚಾರಕ ಶಿವಾನಂದ ಜಗನ್ನಾಥ, ಅಬ್ಬಾಸಲಿ ಅಗಸಿ, ದೇವೇಂದ್ರ ಯಾಳಗಿ, ಸದಾಶಿವ ನಿಂಗಪ್ಪ,…

Read More

ವಿಜಯಪುರ: ಕ್ಷುಲ್ಲಕ ಕಾರಣಕ್ಕೆ ಓರ್ವನ ಮೇಲೆ ದುಷ್ಕರ್ಮಿಗಳುಹಲ್ಲೆಗೈದಿರುವ ಘಟನೆವಿಜಯಪುರ ನಗರದ ಕೋರ್ಟ್ ಸರ್ಕಲ್‌ನಲ್ಲಿ ಸೋಮವಾರ ನಡೆದಿದೆ.ತಲ್ವಾರ್‌ನಿಂದ ಫಿರೋಜ್ ಮುಲ್ಲಾ (32) ಮೇಲೆ ಹಲ್ಲೆಗೈದುದುಷ್ಕರ್ಮಿಗಳು ಎಸ್ಕೆಪ್ ಆಗಿದ್ದಾರೆ.ಫಿರೋಜ್ ಮುಲ್ಲಾ ಹೂವಿನವ್ಯಾಪಾರ ಮಾಡುತ್ತಿದ್ದನು.ಸ್ಥಳಕ್ಕೆ ಜಲನಗರ ಪೊಲೀಸರ ಭೇಟಿಪರಿಶೀಲನೆ ನಡೆಸಿದ್ದಾರೆ. ಜಲನಗರ ಪೊಲೀಸ ಠಾಣಾವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

Read More

ವಿಜಯಪುರ: ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡ ಸಂವಿಧಾನ ಜಾಗೃತಿ ಜಾಥಾದ ಸ್ತಭ್ದಚಿತ್ರಕ್ಕೆ ಫೆ.೨ ರಂದು ವಿಜಯಪುರ ಉಪ ವಿಭಾಗದ ತಿಕೋಟಾ ಗ್ರಾಮ ಪಂಚಾಯತಿಯಲ್ಲಿ ಹಾಗೂ ಫೆ.೩ ರಂದು ಬಬಲೇಶ್ವರ ಹಾಗೂ ಇಂಡಿ ಉಪವಿಭಾಗದ ಬಬಲಾದ, ರೂಗಿ ಗ್ರಾಮಗಳಲ್ಲಿ ಅತ್ಯಂತ ವಿಜೃಂಭಣೆಯಿಂದ ಸ್ವಾಗತಿಸಲಾಯಿತು.ಸರ್ಕಾರದ ಆದೇಶದ ಮೇರೆಗೆ ಸಮಾಜ ಕಲ್ಯಾಣ ಇಲಾಖೆಯಿಂದ “ಸಂವಿಧಾನ ಜಾಗೃತಿ ಜಾಥಾ” ರಾಜ್ಯಾಧ್ಯಾಂತ ಹಮ್ಮಿಕೊಂಡಿದ್ದು, ಅದರಂತೆ ವಿಜಯಪುರ ಜಿಲ್ಲೆಯಲ್ಲಿ ವಿವಿಧ ಗ್ರಾಮಗಳಲ್ಲಿ ಸಂವಿಧಾನ ಜಾಗೃತಿ ಜಾಥಾದ ರಥವು ಸಂಚರಿಸಿ ಗ್ರಾಮಸ್ಥರಲ್ಲಿ ಅರಿವು ಮೂಡಿಸಿತು.ಸದರಿ ಗ್ರಾಮ ಪಂಚಾಯತಿಗಳ ಆವರಣದಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಗ್ರಾಮಸ್ಥರು ಸೇರಿ ಅತ್ಯಂತ ವಿಜೃಂಬಣೆಯಿಂದ “ಸಂವಿಧಾನ ಜಾಗೃತಿ ಜಾಥಾ”ದಲ್ಲಿ ಭಾಗವಹಿಸಿ ವಿಶೇಷ ಉಪನ್ಯಾಸ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಂವಿಧಾನದ ಕುರಿತು ಜಾಗೃತಿ ಮೂಡಿಸಲಾಯಿತು.ಫೆ.೨ರಂದು ಬಾಬಾನಗರ, ಹೊನವಾಡ, ಕೋಟ್ಯಾಳದಲ್ಲಿ ಸಂಚರಿಸಿ ಅರಿವು ಮೂಡಿಸಲಾಯಿತು. ಸಂಜೆ ತಿಕೋಟಾ ಗ್ರಾಮ ಪಂಚಾಯತಿ ವತಿಯಿಂದ ಅತ್ಯಂತ ವಿಜೃಂಭಣೆಯಿಂದ ಸ್ವಾಗತಿಸಲಾಯಿತು. ಫೆ.೩ರಂದು ಹೊನಗನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಸಂವಿಧಾನ ಜಾಗೃತಿ ಕುರಿತು…

Read More