ತಿಕೋಟಾ: ಬರುವ 2024 ಮಾರ್ಚ್ ಎಪ್ರಿಲ್ ನ ಎಸ್. ಎಸ್.ಎಲ್. ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಫಲಿತಾಂಶವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಗ್ರಾಮೀಣ ವಲಯದ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದಿನಿ ಬಳೋಲಮಟ್ಟಿ ನೇತೃತ್ವದಲ್ಲಿ ಅಗಸ್ತ್ಯ ಫೌಂಡೇಶನದಲ್ಲಿ ಜಿಲ್ಲಾ ನುರಿತ ಸಂಪನ್ಮೂಲ ಶಿಕ್ಷಕರಿಂದ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಫೋನ್ ಇನ್ ನೇರ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಿದರು.
ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಹಾಗೂ ಅವರ ಪಾಲಕರಿಗೆ ಪರೀಕ್ಷಾ ಭಯ ನಿವಾರಣೆ ಹಾಗೂ ಮೂರು ಪರೀಕ್ಷೆಗಳನ್ನು ನಡೆಸುವ ಕುರಿತು ಮಾಹಿತಿಯನ್ನು ನೀಡಿ ಪ್ರತಿ ವಿಷಯದಲ್ಲೂ ಸರಾಸರಿ ನೂರು ಮಕ್ಕಳು ಪ್ರಶ್ನೆಗಳನ್ನು ಕೇಳಿ ಸಮಸ್ಯೆ ಪರಿಹರಿಸಿಕೊಂಡರು. ಇದರಿಂದ ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸುವುದರ ಜೊತೆಗೆ ಪರೀಕ್ಷಾ ಫಲಿತಾಂಶವನ್ನು ಹೆಚ್ಚಿಸಲು ಸಾಕಷ್ಟು ಉಪಯೋಗಕಾರಿಯಾಯಿತು ಎಂದು ಬಿಇಓ ಬಳೋಲಮಟ್ಟಿ ಹೇಳಿದರು.
ಈ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಹನುಮಂತ ಕುಡಚಿ, ಮಾಂತೇಶ ಅಂಗಡಿ, ಮಂದಾಕಿನಿ ಎಂ, ವಿಜಯೇಂದ್ರ ಪುರೋಹಿತ್, ಲತಾ ಜೋಶಿ, ಪ್ರಕಾಶ ಬಿರಾದಾರ, ಬಿ.ಎಸ್. ಬೆಳಂಡಗಿ, ಅಜಿತ್ ಜೋಶಿ, ಸಂದೀಪ್ ದೇಶಪಾಂಡೆ, ಪರೀಕ್ಷೆ ನೋಡಲ್ ರವೀಂದ್ರ ಚಿಕ್ಕಮಠ, ಪ್ರಭು ಬಿರಾದಾರ, ಗುರುಶಾಂತ್ ಕಾಗವಾಡ, ಸುಭಾಷ್ ರಾಥೋಡ್, ಸಿ. ಎಂ. ಕೋರೆ, ರವಿ ಪವಾರ ಹಾಜರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

