ಬಸವನಬಾಗೇವಾಡಿ: ಮಕ್ಕಳ ಅಸಕ್ತಿಯನ್ನು ಅರಿತು ಗುಣಮಟ್ಟದ ಶಿಕ್ಷಣ ನೀಡಿದರೆ ಅವರು ಸಾಧನೆಯತ್ತ ಗಮನಹರಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಕರ, ಪಾಲಕರ ಪಾತ್ರ ಮಹತ್ವದಾಗಿದೆ. ಶಿಕ್ಷಣದೊಂದಿಗೆ ಮಕ್ಕಳಿಗೆ ಉನ್ನತ ಮೌಲ್ಯ ತಿಳಿಸಿಕೊಡಬೇಕೆಂದು ಸಚಿವ ಶಿವಾನಂದ ಪಾಟೀಲ ಹೇಳಿದರು.
ಪಟ್ಟಣದ ಬಸವೇಶ್ವರ ದೇವಾಲಯ ಅಂತರಾಷ್ಟ್ರೀಯ ಶಾಲೆ ಆವರಣದಲ್ಲಿರುವ ನಂದೀಶ್ವರ ರಂಗಮಂದಿರದಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಶಾಲೆಯ 12ನೇ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು,
ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಗುರುತಿಸಿ ಅವರನ್ನು ಪ್ರೋತ್ಸಾಹಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿವೆ.
ಇಲ್ಲಿನ ಅಂತರಾಷ್ಟ್ರೀಯ ಶಾಲೆಯು ಪಟ್ಣಣ ಸೇರಿದಂತೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರೊಂದಿಗೆ ಪ್ರಗತಿಪಥದತ್ತ ಸಾಗುತ್ತಿದೆ. ಈ ಶಾಲೆಯ ಅಭಿವೃದ್ಧಿಗೆ ಬೇಕಾದ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಧಾರವಾಡ ಉಪನ್ಯಾಸಕ ಶರಣು ಬಾಗೂರ ಮಾತನಾಡಿ, ಪಾಲಕರ ಹಾಗೂ ಶಿಕ್ಷಕರ ಸಂಬಂಧ ಉತ್ತಮವಾಗಿರಬೇಕು. ಶಾಲೆಯ ಅಭಿವೃದ್ಧಿಗೆ, ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪಾಲಕರು ಕೈಜೋಡಿಸಿದಾಗ ಮಗು ಸರ್ವಾಂಗೀಣ ಅಭಿವೃದ್ಧಿ ಕಾಣಲು ಸಾಧ್ಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಸಲಹಾ ಸಮಿತಿ ಅಧ್ಯಕ್ಷ ಅನಿಲ ಅಗರವಾಲ ಮಾತನಾಡಿದರು.
ಪ್ರಾಚಾರ್ಯ ರೋಹಿಣಿ ರೋಣದ ಶಾಲಾ ವಾರ್ಷಿಕ ವರದಿ ವಾಚನ ಮಾಡಿದರು. ಶಾಲಾ ಸಲಹಾ ಸಮಿತಿ
ಉಪಾಧ್ಯಕ್ಷ ಎಸ್.ಎಸ್.ಝಳಕಿ, ಸದಸ್ಯರಾದ ಮಹಾಂತೇಶ ಆದಿಗೊಂಡ, ಸದಾನಂದ ಯಳಮೇಲಿ, ಸುರೇಶಗೌಡ ಪಾಟೀಲ, ಸಚೀನ ಬಾಗೇವಾಡಿ, ಸೋಮನಾಥ ಪಾಟೀಲ, ಶಬ್ಬೀರಅಹ್ಮದ ನದಾಫ, ಶೈಲಶ್ರೀ ತೇರದಾಳಮಠ, ಪ್ರಭಾವತಿ ರಾಯಗೊಂಡ, ಲಕ್ಷ್ಮೀ ಮಾಲಗಾರ, ಬೇಬಿ ಗಣಾಚಾರಿ, ಮೀನಾಕ್ಷಿ ಮೋದಿ, ಶೋಭಾ ಚಿಕ್ಕೊಂಡ, ಸದಾಶಿವ ಓಡಗಲ್, ಲಕ್ಷ್ಮೀ ಹಿಟ್ನಳ್ಳಿ, ಪ್ರತಿಭಾ ಮಸಬಿನಾಳ, ಮುತ್ತಪ್ಪ ಪೂಜಾರಿ, ಅನಸೂಯಾ ಕುಲಕರ್ಣಿ, ದೀಪಾ ಅಂಕಲಗಿ ಇದ್ದರು.
ಶ್ರೀಶೈಲ ಬಿಷ್ಟಗೊಂಡ ಸ್ವಾಗತಿಸಿದರು. ಶ್ರೀದೇವಿ ಸಾಳುಂಕೆ, ಬಸವರಾಜ ಹಂಚಲಿ ನಿರೂಪಿಸಿದರು. ಸಂತೋಷ ತಾಂಬೆ ವಂದಿಸಿದರು.
ಕಾರ್ಯಕ್ರಮದಲ್ಲಿ ಸಚಿವ ಶಿವಾನಂದ ಪಾಟೀಲ ಅವರನ್ನು ಸನ್ಮಾನಿಸಲಾಯಿತು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ನಂತರ ಜರುಗಿದ ಮಕ್ಕಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ಸೂರೆಗೊಂಡವು
Subscribe to Updates
Get the latest creative news from FooBar about art, design and business.
ಮಕ್ಕಳಿಗೆ ಶಿಕ್ಷಣದೊಂದಿಗೆ ಉನ್ನತ ಮೌಲ್ಯ ಕಲಿಸಿ :ಸಚಿವ ಶಿವಾನಂದ
Related Posts
Add A Comment

