ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಹಿರೇಮಠದಲ್ಲಿ ಭಾನುವಾರ ಲೋಕಾರ್ಪಣೆಗೊಂಡ ನೂತನ ರಥವನ್ನು ಪ್ರಪ್ರಥಮ ಬಾರಿಗೆ ಮಹಿಳೆಯರು ಎಳೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ರಥೋತ್ಸವ ಜಯಘೋಷದೊಂದಿಗೆ ಅದ್ದೂರಿಯಾಗಿ ಜರುಗಿತು.
ರಥೋತ್ಸವವು ಶ್ರೀಮಠದ ಶತಾಯುಷಿ ಸಂಗನಬಸವ ಕಲ್ಯಾಣ ಮಂಟಪದಿಂದ ಬಸವೇಶ್ವರ ಪಾದಗಟ್ಟೆಯವರೆಗೆ ಸಾಗಿ ಮತ್ತೆ ಕಲ್ಯಾಣ ಮಂಟಪಕ್ಕೆ ಮರಳಿತು.
ರಥೋತ್ಸವದಲ್ಲಿ ಅಭಿನವ ಸಂಗನಬಸವ ಶಿವಾಚಾರ್ಯರು, ವೀರಭದ್ರಮನಿ ಶಿವಾಚಾರ್ಯರು, ಚಂದ್ರಶೇಖರಗೌಡ ಪಾಟೀಲ, ವಿಶ್ವನಾಥ ಪಾಟೀಲ,ನಿಂಗನಗೌಡ ಬಿರಾದಾರ, ರಾಮು ಬಿರಾದಾರ, ಶರಣಯ್ಯ ನಂದಿಕೋಲಮಠ, ಮಾಂತೇಶ ಮನಗೂಳಿ, ಸಂಗಪ್ಪ ಪದಮಗೂಂಡ, ಮಲ್ಲಪ್ಪ ಬೆಳ್ಳೂರ, ದ್ಯಾಮು ತಳೇವಾಡ, ಶ್ರೀಕಾಂತ ಸಾರವಾಡ, ಬಸವರಾಜ ತಪಶೆಟ್ಟಿ, ಭೀಮು ಬನ್ನೂರ, ಈರಣ್ಣ ಬಾವಿಕಟ್ಟಿ, ಮಹಾಂತಪ್ಪ ತೊನಿಶ್ಯಾಳ, ತಾಯಂದಿರಾದ ಅಶ್ವಿನಿ ಬಿರಾದಾರ, ರೇಣುಕ ಮಣ್ಣೂರ, ಸುಮಕ್ಕ ಸಂಗಾಪುರ, ಕಾಳವ್ವ ತಪಶೆಟ್ಟಿ, ನೀಲಕ್ಕ ಹುಣಸಿಕಟ್ಟಿ, ಜ್ಯೋತಿ ಹಿಟ್ಟನಹಳ್ಳಿ, ಪ್ರೀತಿ ಹತ್ತಿರಕಿ , ಶೈಲಾ ಉಮನಾಬಾದಿ, ಅಶ್ವಿನಿ ತಪಶೆಟ್ಟಿ ,ಪ್ರಿಯಾಂಕ ಮನಗೂಳಿ, ಜೈಯಶ್ರೀ ಅರೋಟಗಿ, ಶೋಭಾ ಗುಜಗೊಂಡ ,ಜ್ಯೋತಿ ಬಿರಾದರ, ಶಿಲ್ಪ ಬಿರಾದಾರ, ಶಶಿ ಬೂದಿಹಾಳ, ಶಶಿ ಹುಣಸಿಕಟ್ಟಿ, ಶಾರದಾ ಲೇಸಪಗೋಳ, ಕಸ್ತೂರಿ ಚಿಮ್ಮಲಗಿ, ಶಾಂತಾ ಹತ್ತರಕಿ ಸೇರಿದಂತೆ ಸುಮಾರು 40 ಹಳ್ಳಿಯ ತಾಯಂದಿರು, ಭಕ್ತಾದಿಗಳು ಭಾಗವಹಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

