ಬಸವನಬಾಗೇವಾಡಿ:
ವಿಜಯಪುರ ಹೆಸ್ಕಾಂ ಸಿಪಿಐಯಾಗಿ ಕಾರ್ಯನಿರ್ವಹಿಸುತ್ತಿದ್ದ ಶರಣಗೌಡ ಗೌಡರ ಅವರು ಸೋಮವಾರ ನಿಡಗುಂದಿ ಸಿಪಿಐ ಆಗಿ ವರ್ಗಾವಣೆಗೊಂಡು ನಿಡಗುಂದಿಗೆ ಅಧಿಕಾರ ಸ್ವೀಕರಿಸಲು ತೆರಳುವ ಮುನ್ನ ಬಸವನಬಾಗೇವಾಡಿಯ ಬಸವೇಶ್ವರರ ದೇವಸ್ಥಾನಕ್ಕೆ ಬೇಟಿ ನೀಡಿ ದರ್ಶನ ಪಡೆದ ಸಂದರ್ಭದಲ್ಲಿ ರಾಷ್ಟ್ರೀಯ ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಅವರು ಬಸವೇಶ್ವರರ ಭಾವಚಿತ್ರ ನೀಡಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಬಸವನಬಾಗೇವಾಡಿಯಲ್ಲಿ ಸುಮಾರು ಮೂರು ವರ್ಷ ಪಿಎಸ್ಐ ಆಗಿ ಕಾರ್ಯ ನಿರ್ವಹಿಸಿದ್ದು ನನಗೆ ಬಹಳಷ್ಟು ತೃಪ್ತಿ ಇದೆ. ಬಸವನಬಾಗೇವಾಡಿಯ ಹಿರಿಯರು, ಯುವಕರು ,ಎಲ್ಲ ಸಂಘ- ಸಂಸ್ಥೆಗಳು ನನಗೆ ಬಹಳ ಸಹಕಾರವನ್ನು ಕೊಟ್ಟಿದ್ದು ಎಂದಿಗೂ ನಾನು ಮರೆಯುವುದಿಲ್ಲ ಎಂದು ಹೇಳಿದರು. ಶಂಕರಗೌಡ ಬಿರಾದಾರ ಮಾತನಾಡಿ, ಶರಣಗೌಡ ಗೌಡರ ನಮ್ಮ ಬಸವನಬಾಗೇವಾಡಿ ಠಾಣೆಯಲ್ಲಿ ಇದ್ದಾಗ ಎಲ್ಲ ಸಮುದಾಯದ ಜನರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು. ಕಾನೂನು ಸುವ್ಯವಸ್ಥೆ ಕಾಪಾಡುವುದರೊಂದಿಗೆ ಪೊಲೀಸರು ಸಾರ್ವಜನಿಕರ ಮದ್ಯ ಒಳ್ಳೆಯ ಸಂಬಂಧವನ್ನು ಬೆಳೆಸಿದ್ದರು.ಇಂತಹ ಅಧಿಕಾರಿ ಮುಂಬರುವ ದಿನದಲ್ಲಿ ಡಿಎಸ್ಪಿ ಆಗಿ ಮುಂಬಡ್ತಿ ಹೊಂದಿ ಬಸವನಬಾಗೇವಾಡಿಗೆ ಬರಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಜಟ್ಟಿಂಗರಾಯ ಮಾಲಗಾರ, ಸುರೇಶ ಪಡಶೆಟ್ಟಿ, ಪರಶುರಾಮ ತುಪ್ಪದ, ಸುಭಾಷ ಗುಂಡಾನವರ, ಅಣ್ಣಾಜಿ ಲಮಾಣಿ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

