ಬಸವನಬಾಗೇವಾಡಿ: ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ತಾಲೂಕಾ ಗಣಿತ ಶಿಕ್ಷಕರ ವೇದಿಕೆಯಿಂದ ಒಂದು ದಿನದ ಕಾರ್ಯಾಗಾರ ಜರುಗಿತು.
ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಕ್ಷೇತ್ರಶಿಕ್ಷಣಾಧಿಕಾರಿ ವಸಂತ ರಾಠೋಡ ಅವರು, ಗುಣಾತ್ಮಕ ಶಿಕ್ಷಣ ನೀಡುವುದರ ಮೂಲಕ ತಾಲೂಕಿನ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ ಉತ್ತಮಗೊಳಿಸಲು ಎಲ್ಲ ಶಿಕ್ಷಕರು ಪ್ರಯತ್ನಿಸಬೇಕೆಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಕೆ.ಎಸ್. ಚನ್ನವೀರ ಗಣಿತ ಭೋಧನೆ ಮತ್ತು ಕ್ಲಿಷ್ಟತೆಗಳ ಕುರಿತು ಪರಿಣಾಮಕಾರಿಯಾಗಿ ತಿಳಿಸಿ ಕೊಟ್ಟರು.
ಶಾಲೆಯ ಪ್ರಭಾರಿ ಮುಖ್ಯಗುರು ಪ್ರಭಾಕರ ಢವಳಗಿ ಅಧ್ಯಕ್ಷತೆ ವಹಿಸಿದ್ದರು.ಗಣಿತ ವೇದಿಕೆಯ ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ, ಎನ್.ಎಸ್. ಬಿರಾದಾರ,ಭಾರತಿ ಪಾಟೀಲ ,ದೈಹಿಕ ಶಿಕ್ಷಣಾಧಿಕಾರಿ ಎಸ್.ಎಸ್. ಅವಟಿ, ಮಲ್ಲಮ್ಮ ಲೋಣಿ ಇತರರು ಇದ್ದರು.
ಜಿ.ಎಂ. ಗಂಜಾಳ ಸ್ವಾಗತಿಸಿದರು.ಅಶೋಕ ಹಂಚಲಿ ನಿರೂಪಿಸಿದರು. ಶಿವಕುಮಾರ ಹುಲಸೂರ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

