ಇಂಡಿ: ದೇಶದ ಪ್ರತಿಯೊಬ್ಬ ಪ್ರಜೆಯೂ ಸಂವಿಧಾನದ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಂವಿಧಾನ ಪಾಲನೆ ಪ್ರತೀ ನಾಗರಿಕರ ಕರ್ತವ್ಯವಾಗಿದೆ ಎಂದು ಸಮಾಜ ಕಲ್ಯಾಣಾಧಿಕಾರಿ ಬಿ.ಜೆ. ಇಂಡಿ ಕರೆ ನೀಡಿದರು.
ಅವರು ಭಾನುವಾರ ತಾಲ್ಲೂಕಿನ ಅಹಿರಸಂಗ ಗ್ರಾಮದಲ್ಲಿ ನಡೆದ ಸಂವಿಧಾನ ಜಾಗೃತ ಜಾಥಾದಲ್ಲಿ ಅವರು ಮಾತನಾಡಿದರು.
ಸಂವಿಧಾನದ ಮೌಲ್ಯಗಳನ್ನು ಜೀವಂತವಾಗಿರಿಸಬೇಕೆಂಬ ಉದ್ದೇಶದಿಂದ ಸರ್ಕಾರ ಸಂವಿಧಾನ ಜಾಗೃತಿ ಜಾಥಾ ಹೊರಡಿಸಿದೆ. ಸಂವಿಧಾನ ಮಹಿಳೆಯರಿಗೆ ವಾಕ್ ಸ್ವಾತಂತ್ರ‍್ಯ ನೀಡಿ ಸಮಾನವಾಗಿ ಬದುಕುವ ಹಕ್ಕನ್ನು ನೀಡಿದೆ. ಆದ್ದರಿಂದ ಮಹಿಳೆಯರು ಸಂವಿಧಾನದ ಮೌಲ್ಯಗಳನ್ನು ಮರೆಯಬಾರದು ಎಂದರು.
ಗ್ರಾಮ ಪಂಚಾಯತ ಅಧ್ಯಕ್ಷ, ಸದಸ್ಯರು, ಗ್ರಾಮಸ್ಥರು, ಯುವಕರು ಸೇರಿದಂತೆ ಸಾವಿರಾರು ಜನರು ಸಂವಿಧಾನ ಜಾಗೃತ ಜಾಥಾ ಸ್ಥಬ್ದ ಚಿತ್ರವನ್ನು ಪುಷ್ಪನಮನದೊಂದಿಗೆ ಸಲ್ಲಿಸಿ ಬಳಿಕ ಮುಖ್ಯ ರಸ್ತೆಯಿಂದ ಅಂಬೇಡ್ಕರ ವೃತ್ತದವರೆಗೆ ಮೆರವಣಿಗೆದೊಂದಿಗೆ ಅದ್ದೂರಿಯಾಗಿ ಸ್ವಾಗತಿಸಿದರು.
ಸಾಮಾಜಿಕ ಹೋರಾಟಗಾರ್ತಿ ಭುವನೇಶ್ವವರಿ ಕಾಂಬಳೆ ಮಾತನಾಡಿದರು.
ಸಂವಿಧಾನ ಪ್ರತಿ ಅಂಗದ ಅಧಿಕಾರ ವ್ಯಾಖ್ಯೆಯನ್ನು ನೀಡುವುದಲ್ಲದೆ ಅವುಗಳ ಜವಾಬ್ದಾರಿಯನ್ನೂ ಖಚಿತಪಡಿಸುತ್ತದೆ. ದೇಶದಲ್ಲಿ ತುಳಿತಕ್ಕೊಳಗಾದವರ ಶೋಷಿತರಿಗೆ ರಕ್ಷಣೆ ನೀಡುತ್ತಿರುವುದು ಡಾ .ಬಿ.ಆರ್. ಅಂಬೇಡ್ಕರ್ ಅವರು ರಚಿಸಿರುವ ಭಾರತ ಸಂವಿಧಾನ. ನಮ್ಮ ಸಂವಿಧಾನ ರಕ್ಷಣೆಗೆ ನಾವೆಲ್ಲರೂ ಕಟಿಬದ್ದರಾಗಿ ನಿಲ್ಲೋಣ. ಅಂಬೇಡ್ಕರವರು ದೇಶಕ್ಕೆ ಅವಶ್ಯಕ ಮತ್ತು ಅದ್ಬುತವಾದ ಸಂವಿಧಾನ ರಚಿಸಿಕೊಟ್ಟಿದರಿಂದ ಎಲ್ಲರ ಬದುಕು ಹಸನಾಗಿ ನೆಮ್ಮದಿಯ ಜೀವನ ನಡೆಸುವಂತಗಿದೆ. ಸಂವಿಧಾನದ ಮೀಸಲಾತಿ ಕೇವಲ ದಲಿತರಿಗೆ ಅಷ್ಠೇ ಅಲ್ಲ ಇಡೀ ದೇಶದ ಪ್ರತಿಯೊಬ್ಬ ನಾಗರೀಕರಿಗೆ ನೀಡಲಾಗಿದೆ. ಸಂವಿಧಾನದ ಬಗ್ಗೆ ಹಗುರವಾಗಿ ಮಾತನಾಡಿದರೆ ಎರಡನೇ ಕೋರೇಗಾಂವ್ ಆಗುವುದು ಖಚಿತ ಎಂದರು.
ಸಂವಿಧಾನ ಜಾಗೃತಿಜಾಥಾದ ಸಾನಿಧ್ಯವನ್ನು ರೇವಣಸಿದ್ದಯ್ಯಾ ಹಿರೇಮಠ ವಹಿಸಿದ್ದರು.
ಗ್ರಾಮ ಪಂಚಾಯತ ಅಧ್ಯಕ್ಷೆ ಶಬಾನಾ ಶೇಖ, ಉಪಾಧ್ಯಕ್ಷ ಸಾವಿತ್ರಿ ಪೂಜಾರಿ, ಹಸನಾಬ ಶೇಖ, ಪ್ರಭಾಕರ ಬಿರಾದಾರ, ಸಾಹೇಬಗೌಡ ಬಿರಾದಾರ, ಭೀಮವ್ವ ಶಿನಖೇಡ, ಮೈನೂದಿನ ಶೇಖ, ಶಬೀರ ಮುಲ್ಲಾ, ಸಿದ್ದರಾಮ ಕೊಡಹೊನ್ನ, ಯಲ್ಲಪ್ಪ ಪೂಜಾರಿ, ಅಮೋಘಿ ಪೂಜಾರಿ, ಆನಂದ ಬಿರಾದಾರ , ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಶಿವಾನಂದ ಪೂಜಾರಿ, ಬಿ.ಸಿ.ಎಂ ನೋಡಲ್ ಅಧಿಕಾರಿ ಮಹಾಂತಯ್ಯಾ ಮಠಪತಿ, ಶೇಖರ ಶಿವಶರಣ, ನಿಲಯ ಮೇಲ್ವೀಚಾರಕರಾದ ಹಣಮಂತ ಅರವತ್ತು, ಶಿವಾನಂದ ಅಂಗಡಿ ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

