ದೇವರಹಿಪ್ಪರಗಿ: ಪಟ್ಟಣ ಶಾಖೆಯ ಗ್ರಾಹಕರ ದೂರುಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ದೂರು ನೋಂದಾಯಿಸುವ ಕೇಂದ್ರ ಆರಂಭಿಸಲಾಗುತ್ತಿದೆ ಎಂದು ಇಂಡಿ ಹೆಸ್ಕಾಂ ಇಇ ಎಸ್.ಎ.ಬಿರಾದಾರ ಹೇಳಿದರು.
ಪಟ್ಟಣದ ಹೆಸ್ಕಾಂ ಕಚೇರಿ ಆವರಣದಲ್ಲಿ ಸೋಮವಾರ ಗ್ರಾಹಕರ ದೂರು ನೋಂದಾಯಿಸುವ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು. ಪಟ್ಟಣದ ವಿದ್ಯುತ್ ಪೂರೈಕೆ ಸೇರಿದಂತೆ ಯಾವುದೇ ಅಡತಡೆಗಳು ಹಾಗೂ ತ್ವರಿತ ಕ್ರಮಗಳಿಗಾಗಿ ದೂರು ನೋಂದಾವಣಿ ಕೇಂದ್ರ ಆರಂಭಗೊಂಡಿದೆ. ಗ್ರಾಹಕರು ಮೋ. ಸಂಖ್ಯೆ ೯೪೮೦೮೮೩೦೨೪ ಗೆ ಕರೆ ಮಾಡಿ ದೂರು ಸಲ್ಲಿಸಿ ತಕ್ಷಣವೇ ಪರಿಹಾರ ಕಂಡುಕೊಳ್ಳಬಹುದಾಗಿದೆ. ಈಗಾಗಲೇ ಕಂಪನಿಯಿಂದ ೨೪*೭ ವಿದ್ಯುತ್ ತುರ್ತುರಿಪೇರಿ ಸೇವೆಗೆ ಸಿಬ್ಬಂದಿ ಹಾಗೂ ವಾಹನವನ್ನು ನೀಡಲಾಗಿದೆ ಎಂದರು.
ಇಂಡಿ ಹೆಸ್ಕಾಂ ಎಇಇ ವಿಜಯಕುಮಾರ ಹವಾಲ್ದಾರ ವಿದ್ಯುತ್ ಸೇವೆಗಳು ಹಾಗೂ ಸಿಬ್ಬಂದಿಗಳ ಅಗತ್ಯತೆ ಕುರಿತು ಮಾತನಾಡಿದರು.
ದೇವರಹಿಪ್ಪರಗಿ ಹೆಸ್ಕಾಂ ಎಇಇ ಗಂಗಾಧರ ಲೋಣಿ, ಸಿಂದಗಿ ಎಇಇ ಚಂದ್ರಕಾಂತ ನಾಯಕ, ಸಿಂದಗಿ ಎಇ ಎಸ್.ಎನ್.ಗೌಡರ, ಶಾಖಾಧಿಕಾರಿಗಳಾದ ಉಮೇಶ ಪಟ್ಟಣ, ಅಶೋಕ ಕಂದಗಲ್, ಮೇಲ್ವಿಚಾರಕ ಶಿವಾನಂದ ಜಗನ್ನಾಥ, ಅಬ್ಬಾಸಲಿ ಅಗಸಿ, ದೇವೇಂದ್ರ ಯಾಳಗಿ, ಸದಾಶಿವ ನಿಂಗಪ್ಪ, ಸಂತೋಷ ಸಜ್ಜನ, ಅರವಿಂದ ರಾಠೋಡ, ಶ್ರೀಶೈಲ ನಾವಿ,ಹರೀಶ ಬಿರಾದಾರ, ಬಸಯ್ಯಾ ಹಿರೇಮಠ, ಮಲ್ಲನಗೌಡ ಪಾಟೀಲ,ಆರ್.ಎಸ್.ಬಜಂತ್ರಿ, ಸದ್ದಾಂ ಕೊರಬು, ಈರಯ್ಯಾ ಹಿರೇಮಠ ಪ್ರದೀಪ ಹಿರೇಮಠ, ಆನಂದ ಪಾಟೀಲ, ಮಲ್ಲನಗೌಡ ಬಿರಾದಾರ, ಪ್ರಭುಗೌಡ ಬಗಲಿ, ಮಹೇಶ ವಗ್ಗರ, ತೌಸೀಫ್, ಸುರೇಶ ನಡಗೇರಿ, ಅಶೋಕ ಫಿರಂಗಿ, ಗಾಲೀಬ್ ಕೊಕಟನೂರ ಸೇರಿದಂತೆ ವಿದ್ಯುತ್ ಗುತ್ತಿಗೆದಾರರಾದ ವಸಂತ ನಾಡಗೌಡ, ಕಾಶೀನಾಥ ಹಿರೇಮಠ, ಸಿದ್ದನಗೌಡ ಪಾಟೀಲ ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

