Author: editor.udayarashmi@gmail.com

ಸಿಂದಗಿ: ತಳವಾರ ಸಮಾಜ ಇಂದು ರಾಜಕೀಯ, ಆರ್ಥಿಕ, ಶೈಕ್ಷ ಣಿಕ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಮುಖ್ಯಗುರು ಎಸ್.ಆಯ್.ರಾಂಪೂರ ಹೇಳಿದರು.ತಾಲೂಕಿನ ಚಿಕ್ಕಸಿಂದಗಿ ಗ್ರಾಮದ ಚಿಕ್ಕ ಹಣಮಂತ ದೇವಸ್ಥಾನದಲ್ಲಿ ತಳವಾರ ಸಮಾಜ ಹಾಗೂ ತಳವಾರ ಸಮಾಜದ ನೌಕರ ಮಹಾಸಭಾ ಸಿಂದಗಿ ವತಿಯಿಂದ ನೂತನ ಸಿಂದಗಿ ಬ್ಲಾಕ ಕಾಂಗ್ರೆಸ್ ಉಪಾಧ್ಯಕ್ಷ ಚಂದ್ರಕಾಂತ ಬೂದಿಹಾಳ ಹಾಗೂ ಚಿಕ್ಕಸಿಂದಗಿ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಸದಸ್ಯ ಸಂಜೀವ ಬಮ್ಮನಳ್ಳಿ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.ಪ್ರಸ್ತುತ ದಿನಗಳಲ್ಲಿ ಸಮಾಜ, ಸಂಘ, ಸಂಘಟನೆ ತುಂಬಾ ಮುಖ್ಯವಾಗಿದೆ. ಒಗ್ಗಟ್ಟಿನಿಂದ ಎಲ್ಲರೂ ಇದ್ದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ಸಮಾಜ ನಿಂತ ನೀರಾಗಿರದೆ ಚಲಿಸುತ್ತಿರಬೇಕು. ಸಮಾಜ ಸಂಘಟನೆಯಲ್ಲಿ ಯುವಕರಿಗೆ ಜವಾಬ್ದಾರಿ ನೀಡಬೇಕು ಎಂದು ಸಲಹೆ ನೀಡಿದರು.ತಾಲೂಕು ನೌಕರ ಸಂಘದ ಅಧ್ಯಕ್ಷ ರಾಜಶೇಖರ ನರಗೋಧಿ ಮಾತನಾಡಿ, ಸಮಾಜವು ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕವಾಗಿ ಸದೃಢವಾಗಬೇಕಾದರೆ ಸಂಘಟನೆ ಬಹಳ ಅಗತ್ಯವಾಗಿದೆ ಎಂದರು.ಸರಳ ಸಮಾರಂಭದಲ್ಲಿ ಸಿಂದಗಿ ಬ್ಲಾಕ ಕಾಂಗ್ರೆಸ್ ನೂತನ ಉಪಾಧ್ಯಕ್ಷ ಚಂದ್ರಕಾಂತ…

Read More

ಆರೋಗ್ಯ ಅಂಗಳ ಹನ್ನೆರಡು ವರ್ಷದ ಹುಡುಗ ತಮ್ಮ ತಂದೆಯ ಜೊತೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ, ಪ್ರಯಾಣದ ದಾರಿಯಲ್ಲಿ ಕಿಟಕಿಯಿಂದ ಕಾಣುವ ಗಿಡ, ಮರ, ಹಣ, ಪಕ್ಷಿ, ನದಿ, ಸೇತುವೆ, ವಾಹನಗಳನ್ನು ಕಂಡು ತುಂಬಾ ಖುಷಿಯಿಂದ ಕುಣಿದು ಉತ್ಸಾಹಪಡುತ್ತಿದ್ದೆ.ಇದನ್ನೆಲ್ಲಾ ಪಕ್ಕದಲ್ಲೆ ಕುಳಿತಿದ್ದ ಪ್ರಯಾಣಿಕನಿಗೆ ವಿಚಿತ್ರವೆನಿಸುತ್ತಿತ್ತು. ಹುಡುಗನ ಮೊದಲ ರೈಲು ಪ್ರಯಾಣ ಎಂದುಕೊಂಡು ಸುಮ್ಮನಿದ್ದೆ. ಆದರೂ ತುಂಬಾ ಹೊತ್ತಾದ ಬಳಿಕವು ಹುಡುಗನ ಉತ್ಸಾಹ ಕಡಿಮೆಯಾಗದ್ದನ್ನು ನೋಡಿ, ಸ್ವಲ್ಪ ಸಿಡಿಮಿಡಿಯಿಂದ ಅವನ ತಂದೆಯನ್ನು ನೋಡಿ, ಇಷ್ಟು ವಯಸ್ಸಾದ ನಿಮ್ಮ ಮಗ ಗಿಡ-ಮರ ನದಿ ವಾಹನಗಳನ್ನು ನೋಡಿ ಇಷ್ಟೇಕೆ ಉತ್ಸುಕುನಾಗಿದ್ದಾನೆ. ಸ್ವಲ್ಪ ಅವನ ಗಲಾಟೆಯನ್ನು ಕಡಿಮೆ ಮಾಡಲು ಹೇಳಿ ಎಂದ.ಅದಕ್ಕೆ ಹುಡುಗನ ತಂದೆ “ಇಲ್ಲಾ ಸರ್, ರೈಲಿನಲ್ಲಿ ತುಂಬಾ ಸಲ ಪ್ರಯಾಣಿಸಿದ್ದಾನೆ. ಆದರೆ ಇದೇ ಮೊದಲ ಬಾರಿಗೆ ಅವನ ಕಣ್ಣುಗಳಿಂದ ತನ್ನ ಸುತ್ತಲಿನ ಪರಿಸರವನ್ನು ನೋಡಿ ಅನುಭವಿಸುತ್ತಿದ್ದಾನೆ.”ಸಹ ಪ್ರಯಾಣಿಕನಿಗೆ ಅವರ ತಂದೆ ಹೇಳಿದ್ದು ಕೇಳಿ ಪ್ರಶ್ನಾರ್ಥಕ ಭಾವದಿಂದ ನೋಡತೊಡಗಿದ. ಹುಡುಗನ ತಂದೆ ತಮ್ಮ ಮಾತು ಮುಂದುವರೆಸಿ, “ಅವನು ೧…

Read More

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ ಹುಲಿ ಉಗುರು, ಆನೆ ದಂತ, ನವಿಲು ಗರಿ, ಜಿಂಕೆ – ಹುಲಿಯ ಚರ್ಮ, ಮೀನಿನ ವಾಸ್ತು, ಹಾವಿನ ವಿಷ, ಸಾರಂಗದ ಕೊಂಬು, ಆನೆ – ಕರಡಿಯ ಕೂದಲು ಹೀಗೆ ಕೆಲವು ಸಂರಕ್ಷಿತ ಪ್ರಾಣಿಗಳ ವಸ್ತುಗಳನ್ನು ಉಪಯೋಗಿಸುವ ಖಯಾಲಿ..ಪ್ರಕೃತಿಯ ಮಡಿಲಿನ ರಾಷ್ಟ್ರಕವಿ ಕುವೆಂಪು ಒಂದು ಕಡೆ ಹೇಳುತ್ತಾರೆ ” ಹೂವು ಬಳ್ಳಿಗೆ ಅಲಂಕಾರವೇ ಹೊರತು ವಿಗ್ರಹಕ್ಕಲ್ಲ”. ಹಾಗೆಯೇ ವಚನಕಾರ ಅಂಬಿಗರ ಚೌಡಯ್ಯ ಒಂದು ವಚನದಲ್ಲಿ ಹೇಳುವ ಸಾರಾಂಶ ಹೀಗಿದೆ..”ಆರೈಕೆಗೆ ಬಿತ್ತಿದ ಗಿಡದ ಹೂವನ್ನು ಕೊಯ್ದು, ಊರಿನವರು ಬಾಯಾರಿಕೆಗಾಗಿ ಕಟ್ಟಿಸಿದ ಕೆರೆಯ ನೀರನ್ನು ತಂದು, ನಾಡಿನ ಜನರೆಲ್ಲ ನೋಡಲಿ ಎಂದು ಆಡಂಬರಕ್ಕಾಗಿ, ಬಹಿರಂಗವಾಗಿ ಪೂಜೆ ಮಾಡುವುದು ತಪ್ಪು. ಹಾಗೆ ಪೂಜೆ ಮಾಡುವುದರಿಂದ ಅದರ ಪುಣ್ಯ ಹೂವಿಗೋ, ನೀರಿಗೋ ಅಥವಾ ಪೂಜಿಸಿದ ಮನುಷ್ಯನಿಗೋ ನನಗಂತೂ ಗೊತ್ತಿಲ್ಲ. ನಿನಗಾದರೂ ಗೊತ್ತಿದ್ದರೆ ಹೇಳು ಎಂದು ಅಂಬಿಗರ ಚೌಡಯ್ಯ ತನ್ನ ಇಷ್ಟ ದೈವವನ್ನು ಕೇಳುತ್ತಾರೆ “ಆದರೆ ಈ ಮೂರ್ಖ – ಅಮಾನವೀಯ ಕೆಲವು ಜ್ಯೋತಿಷ್ಯ…

Read More

ಗದಗ ತೋಂಟದ ಸಿದ್ದಲಿಂಗ ಶ್ರೀಗಳ 5 ನೇ ಪುಣ್ಯ ಸ್ಮರಣೆಯಲ್ಲಿ ಡಾ.ಸಿದ್ದರಾಮ ಸ್ವಾಮೀಜಿ ಅಭಿಮತ ಗದಗ: ಕನ್ನಡದ ವಿದ್ವತ್ಪೂರ್ಣ ವಲಯದಲ್ಲಿ ತಮ್ಮದೇ ವಿಶಿಷ್ಟವಾದ ಛಾಪುಗರಿ ಮೂಡಿಸಿರುವ ಲಿಂ, ತೋಂಟದ ಡಾ.ಸಿದ್ದಲಿಂಗ ಮಹಾಸ್ವಾಮಿಗಳು ಕರುನಾಡಿನ ಮೌಲಿಕ ವಿಚಾರಧಾರೆಯ ವಿರಾಟವುಳ್ಳ ಸ್ವಾಮೀಜಿಗಳಾಗಿ ಮಿನುಗಿದ್ದಾರೆ ಎಂದು ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಪೀಠಾಧಿಪತಿ ಡಾ.ಸಿದ್ದರಾಮ ಸ್ವಾಮೀಜಿ ಹೇಳಿದರು.ನಗರದ ತೋಂಟದಾರ್ಯ ಮಠದಲ್ಲಿ ಜರುಗಿದ ಲಿಂ,ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ಐದನೇ ಪುಣ್ಯಸ್ಮರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.ಸಿದ್ದಲಿಂಗ ಪೂಜ್ಯರ ಭಾವನಾ ಲೋಕದ ಸಂಬಂಧಗಳು, ಅಭಿಮಾನಗಳು ಅದ್ವೈತ, ವಿಶಿಷ್ಟಾದ್ವೈತದಲ್ಲಿ ಪರಿಮಳಿಸಿವೆ. ಸತ್ವ,ತತ್ವ ಗುಣಗಳಲ್ಲಿ ಪರಮ ಪಾವಿತ್ರ್ಯ ಪಡೆದಿವೆ. ಸಮಾಜಮುಖಿ ಸೇವೆಗಳಂತೂ ಮರೆಯಲಸಾಧ್ಯ. ಅವು ಮೌಲ್ಯಭರಿತ ಪ್ರಭಾವಿಗಳಾಗಿವೆ. ಪುಸ್ತಕ, ಗ್ರಂಥಗಳ ಉತ್ಕರ್ಷ ಭಾವದಲ್ಲಿ ಮೆರೆದಿರುವ ಪೂಜ್ಯರು ನಮಗೆಲ್ಲ ಆದರ್ಶಪ್ರಾಯರಾಗಿದ್ದಾರೆ. ತೋಂಟದ ಪೂಜ್ಯರು ಹಾಗೂ ಶ್ರೀಮಠ ವಿಶ್ವವಿದ್ಯಾಲಯ ಮಾಡದಂಥ ಪುಸ್ತಕ ಪ್ಪಕಟಣೆ ಕಾರ್ಯ ಮಾಡಿದ್ದು ನಾಡಿನಾದ್ಯಂತ ಮೆಚ್ಚುಗೆ ಪಡೆದಿದೆ ಎಂದು ಸಿದ್ದಲಿಂಗ ಶ್ರೀಗಳವರ ವ್ಯಕ್ತಿತ್ವ ಬಣ್ಣಿಸಿದರು.ನಾಡು, ನುಡಿ, ಜಲ, ನೆಲಕ್ಕಾಗಿ…

Read More

ಇಂಡಿಯಲ್ಲಿ ಅಖಂಡ ಕರ್ನಾಟಕ‌ ರೈತ ಸಂಘದಿಂದ ಮನವಿ ಸಲ್ಲಿಸಿ ಎಚ್ಚರಿಕೆ ಇಂಡಿ: ಜನ ಜಾನುವಾರುಗಳ ನೀರು ಕುಡಿಯುವ ಹಾಗೂ ಒಣಗುತ್ತಿರುವ ಬೆಳೆಗಳ ಸಲುವಾಗಿ ಗುತ್ತಿ ಬಸವಣ್ಣ ಕಾಲುವೆಗೆ ನೀರು ಹರಿಸಲು ಆಗ್ರಹಿಸಿ ಕಂದಾಯ ಉಪವಿಭಾಗ ಅಧಿಕಾರಿ ಆಬೀದ್ ಗದ್ಯಾಳ ಅವರಿಗೆ ಅಖಂಡ ‌ಕರ್ನಾಟಕ ರೈತ ಸಂಘದವರು ಗುರುವಾರ ಮನವಿ ಸಲ್ಲಿಸಿದರು.ಪ್ರತಿಭಟನಾಕಾರರು ಪಟ್ಟಣದ ಪ್ರವಾಸಿ ಮಂದಿರದಿಂದ ಚಿಟ್ಟ ಹಲಗೆ ಬಾರಿಸುತ್ತಾ ಪ್ರತಿಭಟನೆ ಪ್ರಾರಂಭಿಸಿದ ಅವರು ಹೃದಯಭಾಗದ ಬಸವೇಶ್ವರ ವೃತ್ ಹಾದು ಪ್ರಮುಖ ರಸ್ತೆಯಲ್ಲಿ ಅಧಿಕಾರಿಗಳ ಮತ್ತು ಸರಕಾರ ವಿರುದ್ಧ ದಿಕ್ಕಾರ ಕೂಗಿ ಪ್ರತಿಭಟನೆ ಮಾಡಿ, ತದನಂತರ ತಾಲೂಕು ಆಡಳಿತ ಸೌಧಕ್ಕೆ ತೆರಳಿದರು.ಆ ನಂತರ ಕಂದಾಯ ಉಪವಿಭಾಗ ಅಧಿಕಾರಿಗಳಿಗೆ ಗುತ್ತಿ ಬಸವಣ್ಣ ಕಾಲುಗೆ ನೀರು ಹರಿಸಲು ಆಗ್ರಹಿಸಿ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ರೈತ ಸಂಘದ ಅಧ್ಯಕ್ಷ ಭೀಮಣ್ಣ ಉಪ್ಪಾರ, ಗುರಪ್ಪ ಅಗಸರ ಹಾಗೂ ಕೆಂಚಪ್ಪ ನಿಂಬಾಳ ಮಾತಾನಾಡಿದ ಅವರು, ಬಹುತೇಕ ನಿರಂತರವಾಗಿ ಕೆಟ್ಟ ಬರಗಾಲ‌ ಅನುಭವಿಸುವ ಪ್ರದೇಶವಾಗಿದೆ. ಅದರಂತೆ ಈ ಬಾರಿ ಮುಂಗಾರು ಹಾಗೂ…

Read More

ಟಾಸ್ಕಪೋರ್ಸ ಸಮಿತಿ ಸಭೆಯಲ್ಲಿ ಶಾಸಕ ಯಶವಂತರಾಯಗೌಡ ಅಧಿಕಾರಿಗಳಿಗೆ ಸೂಚನೆ ಇಂಡಿ: ಮಳೆಯಾಗದ ಹಿನ್ನೆಲೆಯಲ್ಲಿ ೨೦೨೪ ಜೂನ್ ೮ ರ ವರೆಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಕ್ರಮ ವಹಿಸಬೇಕೆಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಟಾಸ್ಕ ಪೋರ್ಸ ಸಮಿತಿಯಿಂದ ನಡೆದ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.ಕುಡಿಯುವ ನೀರಿಗಾಗಿ ಆಣೆಕಟ್ಟಿನಲ್ಲಿ ೧೫ ಟಿಎಂ ಸಿ ನೀರು ಬೇಕಾಗುತ್ತದೆ. ಕಾರಣ ಜೂನ್ ವರೆಗೆ ನೀರು ಕಾಯದಿರಿಸಲು ಕೇಳಿಕೊಂಡರು. ಮತ್ತು ತಾಲೂಕಿನಲ್ಲಿಯ ಎಲ್ಲ ಕೆರೆಗಳನ್ನು ತುಂಬಬೇಕು ಎಂದರು. ಮತ್ತು ಕಾಲುವೆಗೆ ಕೊನೆಯ ಭಾಗದ ವರೆಗೂ ನೀರು ಹರಿಸಬೇಕು ಎಂದರು.ತಾಲೂಕಿನಲ್ಲಿರುವ ಕೆರೆಗಳಿಗೆ ಎಷ್ಟು ನೀರು ಬೇಕು ಅದನ್ನು ತಿಳಿದುಕೊಂಡು ಈ ಸಲ ಪರಿಸ್ಥಿತಿ ಮತ್ತು ಸನ್ನಿವೇಶ ಬೇರೆ ಇದ್ದು ಅದನ್ನು ಹೇಗೆ ನಿರ್ವಹಿಸಲು ಸಾದ್ಯ ಎಂಬುದನ್ನು ತಿಳಿದುಕೊಂಡು ಬೇಸಿಗೆಯಲ್ಲಿ ನೀರಿಕ್ಷಿಸಿದಷ್ಟು ಪೂರೈಸಬೇಕಾಗುತ್ತದೆ ಎಂದರು.ನಾರಾಯಣಪುರ ಜಲಾಶಯದ ಮುಖ್ಯ ಅಬಿಯಂತರಾದ ಆರ್. ಮಂಜುನಾಥ,ಭೀಮರಾಯನಗುಡಿ ಮುಖ್ಯ ಅಭಿಯಂತರ ಪ್ರೇಮಸಿಂಗ್,ರಾಂಪೂರ ಮುಖ್ಯ ಅಭಿಯಂತರ ರವಿಶಂಕರ, ಆಲಮಟ್ಟಿಯ ಶ್ರೀನಿವಾಸ, ರಮೇಶ ರಾಠೋಡ, ಗೋವಿಂದ ರಾಠೋಡ…

Read More

ದೇವರಹಿಪ್ಪರಗಿ ರಾವುತರಾಯ-ಮಲ್ಲಯ್ಯ ಜಾತ್ರೆ |3 ಬಾರಿ ಬಂಡಿಯ ಅಚ್ಚು ಮುರಿತ | ಆತಂಕಗೊಂಡ ಭಕ್ತರು ದೇವರ ಹಿಪ್ಪರಗಿ: ಐತಿಹಾಸಿಕ ಹಿನ್ನೆಲೆಯ ರಾವುತರಾಯ- ಮಲ್ಲಯ್ಯರ ಜಾತ್ರಾ ಮಹೋತ್ಸವ ಸಹಸ್ರಾರು ಭಕ್ತರ ಜಯಘೋಷದೊಂದಿಗೆ ಭಕ್ತಿ ಭಾವದೊಂದಿಗೆ ಗುರುವಾರ ಆರಂಭವಾಯಿತು.ಪಟ್ಟಣದ ರಾವುತರಾಯ ಅಶ್ವಾರೂಢನಾಗಿ ತೆರೆದ ಬಂಡಿಯಲ್ಲಿ ಆಸೀನನಾಗಿ ನಸುಕಿನಲ್ಲಿ ಮೂಲ ದೇವಸ್ಥಾನದಿಂದ ಹೊರಡುತ್ತಿದ್ದಂತೆಯೇ ಬಂಡಿಯ ಅಚ್ಚು ಮುರಿದ ಪರಿಣಾಮ ಸುಮಾರು ಎರಡು ಗಂಟೆಗಳ ಕಾಲ ಬಂಡಿಉತ್ಸವ ವಿಳಂಬವಾಗಿ ಬೆಳಗಿನ ೧೦ ಗಂಟೆಗೆ ಮಾನೆದೊಡ್ಡಿ ಎಂದೇ ಕರೆಯಲಾಗುವ ಸ್ಥಳವನ್ನು ತಲುಪಿತು. ಇಲ್ಲಿ ಭಕ್ತರು ಕಾಲ್ನಡಿಯಿಂದ ಹೊತ್ತು ತಂದ ಹೂ-ಹಾರ ಮುಡಿದು ಪುಷ್ಪಲಂಕಾರಗೊಂಡನು. ಇನ್ನೇನು ಸಡಗರದಿಂದ ಬಂಡಿ ಉತ್ಸವ ಆರಂಭಿಸಬೇಕು ಎನ್ನುವಷ್ಟರಲ್ಲಿ ಕೆಲವೇ ದೂರದ ಅಂತರದಲ್ಲಿ ಮಾನೆದೊಡ್ಡಿ ಸ್ಥಳದಲ್ಲಿ ಎರಡನೆಯ ಬಾರಿ ಬಂಡಿಯ ಅಚ್ಚು ಪುನಃ ಮುರಿದ ಕಾರಣ ೨ ಗಂಟೆಗಳ ಕಾಲ ಮತ್ತೆ ಉತ್ಸವಕ್ಕೆ ಅಡ್ಡಿಯಾಯಿತು. ಕೊನೆಗೆ ಮಧ್ಯಾನ್ಹ ೩.೩೦ ಗಂಟೆಯ ಸಮಯಕ್ಕೆ ಹೊಸದಾದ ಅಚ್ಚು ಜೋಡಿಸಿ ಉತ್ಸವ ಆರಂಭಿಸಲಾಯಿತು. ಕಳೆದ ಒಂದು ಶತಮಾನದ ಅವಧಿಯಲ್ಲಿ ಬಂಡಿಯ…

Read More

ವಿಜಯಪುರ: ನಗರ ಶಾಸಕ ಬಸನಗೌಡ ರಾ.ಪಾಟೀಲ ಯತ್ನಾಳ ಅವರ ಒತ್ತಾಯಕ್ಕೆ ಮಣಿದು, ಏಕಕಾಲದಲ್ಲಿ ನಿಗದಿಯಾಗಿದ್ದ ಎರಡೆರಡು ಇಲಾಖೆಗಳ ಪರೀಕ್ಷಾ ವೇಳಾ ಪಟ್ಟಿ ಬದಲಿಸಿ ಇಂದು ಆದೇಶ ಹೊರಡಿಸಿದ್ದರಿಂದ ಆಭ್ಯರ್ಥಿಗಳಿಗೆ ಆಗುತ್ತಿದ್ದ ಅನ್ಯಾಯ ತಪ್ಪಿದಂತಾಗಿದೆ.2022-23ನೇ ಸಾಲಿನ ಕಲ್ಯಾಣ ಕರ್ನಾಟಕ ಪೊಲೀಸ್ ಕಾನ್ ಸ್ಟೇಬಲ್ (ಸಿವಿಲ್) ಹಾಗೂ ಬ್ಯಾಕಲಾಗ್ 454 ಹುದ್ದೆಗಳ ಲಿಖಿತ ಪರೀಕ್ಷೆಯನ್ನು ನ.5 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 12-30 ರವರೆಗೆ ನಡೆಸಲು ನಿರ್ಧರಿಸಿ ಪ್ರಕಟಣೆ ಹೊರಡಿಸಲಾಗಿತ್ತು. ಆದರೆ, ಅದೇ ದಿನ ಕೆಪಿಎಸ್ ಸಿ ಲಿಖಿತ ಪರೀಕ್ಷೆಗಳು ಕೂಡ ನಿಗದಿಯಾಗಿವೆ.ಇದರಿಂದ ಎರಡು ಪರೀಕ್ಷೆಗಳನ್ನು ಬರೆಯಲು ಅರ್ಹರಾದ ಅಭ್ಯರ್ಥಿಗಳಿಗೆ ಅನ್ಯಾಯ ಆಗುವುದನ್ನು ಅರಿತು, ಕೆಪಿಎಸ್ ಸಿ ಹಾಗೂ ಕರ್ನಾಟಕ ಪೊಲೀಸ್ ಇಲಾಖೆಗಳ ಸಂಹವನದ ಕೊರತೆಯಿಂದ ಎರಡು ಪರೀಕ್ಷೆಗಳಿಗೆ ಶುಲ್ಕ ಭರಿಸಿದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ.ಅಧಿಕಾರಿಗಳ ಲೋಪ, ನಿರ್ಲಕ್ಷ್ಯದಿಂದ ಸಾವಿರಾರು ಅರ್ಹ, ಯೋಗ್ಯ, ಪ್ರತಿಭಾನ್ವಿತ ಅಭ್ಯರ್ಥಿಗಳ ಭವಿಷ್ಯ ಹಾಗೂ ಕಟ್ಟಿರುವ ಶುಲ್ಕ ವ್ಯರ್ಥ ಆಗಬಾರದು. ಈ ಕೂಡಲೇ ಪೊಲೀಸ್ ಇಲಾಖೆಯು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷೆಗಳನ್ನು…

Read More

ವಿವಿಧ ನಿಗಮ ಮಂಡಳಿಗಳ ನೇಮಕಾತಿಗೆ ಅ.೨೮ ಹಾಗೂ ಅ.೨೯ರಂದು ಸ್ಪರ್ಧಾತ್ಮಕ ಪರೀಕ್ಷೆ ವಿಜಯಪುರ: ವಿವಿಧ ನಿಗಮ ಮಂಡಳಿಗಳ ನೇಮಕಾತಿಗೆ ಜಿಲ್ಲೆಯ ೬೪ ಪರೀಕ್ಷಾ ಕೇಂದ್ರಗಳಲ್ಲಿ ಅಕ್ಟೋಬರ್ ೨೮ ಹಾಗೂ ೨೯ ರಂದು ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಅತ್ಯಂತ ಅಚ್ಚುಕಟ್ಟಾಗಿ ಹಾಗೂ ವ್ಯವಸ್ಥಿತವಾಗಿ ನಡೆಸುವಂತೆ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಸೂಚನೆ ನೀಡಿದರು.ನಗರದ ಗಾಂಧಿವೃತ್ತದಲ್ಲಿರುವ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜ್ ಶಾರದಾ ಭವನದಲ್ಲಿ ಗುರುವಾರ ಆಯೋಜಿಸಿದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ವ್ಯವಸ್ತಿತ ಪರೀಕ್ಷೆಗಾಗಿ ೨೧ ಮಾರ್ಗಾಧಿಕಾರಿಗಳ ತಂಡ, ಪ್ರತಿ ಪರೀಕ್ಷಾ ಕೇಂದ್ರಕ್ಕೆ ಓರ್ವ ವೀಕ್ಷಕರಂತೆ ೬೪ ವೀಕ್ಷಕರು ಪ್ರತಿ ಪರೀಕ್ಷಾ ಕೇಂದ್ರಕ್ಕೆ ೦೧ ಉಪ ಮುಖ್ಯ ಅಧೀಕ್ಷಕರು ೦೧ ಪ್ರಶ್ನೆಪತ್ರಿಕೆ ಪಾಲಕರು ಮತ್ತು ೦೧ ವಿಶೇಷ ಸ್ಥಾನಿಕ ಜಾಗೃತ ದಳದ ಸದಸ್ಯರನ್ನು ನೇಮಕ ಮಾಡಲಾಗಿದೆ. ಅಕ್ಟೋಬರ್ ೨೮ರಂದು ನಡೆಯುವ ಪತ್ರಿಕೆ-೧ ಪರೀಕ್ಷೆಗೆ ೧೪೨೮೦ ಹಾಗೂ ಪತ್ರಿಕೆ-೨ ಪರೀಕ್ಷೆ ೧೪೩೭೫, ಅಕ್ಟೋಬರ್ ೨೯ ರಂದು ನಡೆಯುವ ಪತ್ರಿಕೆ-೧ ಪರೀಕ್ಷೆ ೨೪೧೮೯ ಹಾಗೂ ಪತ್ರಿಕೆ-೨…

Read More

ವಿಜಯಪುರ: ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯಡಿ ಜಿಲ್ಲೆಯ ೪,೫೫,೬೩೨ (ಶೆ.೮೭.೪೬) ಫಲಾನುಭವಿಗಳು ನೊಂದಾಯಿಸಿಕೊಂಡಿದ್ದು, ಈ ಯೋಜನೆಯಡಿ ೧೫ನೇ ಆಗಸ್ಟ್ ೨೦೨೩ರವರೆಗೆ ನೊಂದಣಿಯಾದ ೪,೨೦,೩೪೬ ಫಲಾನುಭವಿಗಳಿಗೆ ಮೊದಲನೆ ಕಮತು ರೂ.೮೪೦೬.೯೨ ಲಕ್ಷ ಹಾಗೂ ೧೬ನೇ ಆಗಸ್ಟ್ ೨೦೨೩ರಿಂದ ೧೫ನೇ ಸೆಪ್ಟಂಬರ್ ೨೦೨೩ರ ಮಾಹೆಯವರೆಗೆ ನೊಂದಣಿಯಾದ ೪,೨೪,೮೩೬ ಫಲಾನುಭವಿಗಳಿಗೆ ೨ನೇ ಕಂತು ರೂ.೮೪೯೬.೭೨ ಲಕ್ಷ ರೂ.ಗಳು ಸೇರಿದಂತೆ ಒಟ್ಟು ೧೬೯೦೩.೬೪ ಲಕ್ಷ ಅನುದಾನ ಬಿಡುಗಡೆಯಾಗಿದೆ.೪,೨೦,೩೪೬ ಫಲಾನುಭವಿಗಳ ಪೈಕಿ ೩೯೦೨೨೪ ಫಲಾನುಭವಿಗಳ ಅರ್ಜಿಗಳು ಹಾಗೂ ೨ನೇ ಕಂತಿನ ೪,೨೪,೮೩೬ ಫಲಾನುಭವಿಗಳ ಪೈಕಿ ೪,೦೫,೧೭೦ ಫಲಾನುಭವಿಗಳು ಡಿಬಿಟಿಯಿಂದ ಪುಶ್ ಆಗಿರುತ್ತವೆ. ಉಳಿದ ೪೯,೭೮೮ ಫಲಾನುಭವಿಗಳ ಅರ್ಜಿಗಳು ಡಿಬಿಟಿಗೆ ಬರಲು ಬಾಕಿ ಇರುತ್ತವೆ. ಮೊದಲನೇ ಕಂತಿನಲ್ಲಿ ಡಿಬಿಟಿಗೆ ಪುಶ್ ಆದ ೩,೯೦,೨೨೪ ಫಲಾನುಭವಿಗಳಲ್ಲಿ ೩,೫೫,೬೨೪ ಫಲಾನುಭವಿಗಳಿಗೆ ರೂ.೭೧,೧೨,೪೮,೦೦೦ ಹಾಗೂ ೨ನೇ ಕಂತಿನಲ್ಲಿ ೪,೦೫,೧೭೦ ಫಲಾನುಭವಿಗಳಲ್ಲಿ ೪,೦೩,೯೩೨ ಫಲಾನುಭವಿಗಳಿಗೆ ರೂ.೮೦,೭೮,೬೪,೦೦೦ ಖರ್ಚು ಭರಿಸಲಾಗಿದೆ.ಮೊದಲನೇ ಕಂತಿನಲ್ಲಿ ಸೌಲಭ್ಯ ಪಡೆಯಲು ಬಾಕಿ ಇರುವ ೩೪೬೦೦ ಫಲಾನುಭವಿಗಳು ಹಾಗೂ ೨ನೇ ಕಂತಿನಲ್ಲಿ ೧೨೩೮…

Read More