ಮುದ್ದೇಬಿಹಾಳ: ಪಟ್ಟಣದ ಮಾರುತಿ ನಗರದ ಯಲ್ಲಾಲಿಂಗ ದೇವಸ್ಥಾನದ ಬಳಿಯ ವಿದ್ಯಾಜ್ಯೋತಿ ಪಬ್ಲಿಕ್ ಶಾಲೆಯ ಎರಡನೇ ವಾರ್ಷಿಕೋತ್ಸವ ಸಮಾರಂಭವನ್ನು ಫೆ೧೨ ರಂದು ಸಂಜೆ ೫:೩೦ ಕ್ಕೆ ಆಯೋಜಿಸಲಾಗಿದೆ.
ಸಮಾರಂಭದ ದಿವ್ಯ ಸಾನಿಧ್ಯವನ್ನು ಬಿಲ್‌ಕೆರೂರಿನ ಬಿಲ್ವಾಶ್ರಮ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಲಿದ್ದು, ಪಟ್ಟಣದ ಮಾರುತಿ ನಗರದ ದೇವಿ ಉಪಾಸಕರಾದ ಲಾಲಲಿಂಗೇಶ್ವರ ಶರಣರು ಸಾನಿಧ್ಯವಹಿಸಲಿದ್ದಾರೆ. ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಅಧ್ಯಕ್ಷತೆ ವಹಿಸುವರು, ಕಾಂಗ್ರೇಸ್ ಮುಖಂಡ ಶಾಂತಗೌಡ ಪಾಟೀಲ ಉಪಸ್ಥಿತಿಯಲ್ಲಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ ಮತ್ತು ನಿವೃತ್ತ ದೈಹಿಕ ಶಿಕ್ಷಕ ಎಸ್.ಬಿ.ಚಲವಾದಿ ಉದ್ಘಾಟಿಸುವರು. ನಿವೃತ್ತ ಡಿ.ವಾಯ್.ಎಸ್.ಪಿ ಎಸ್.ಎಸ್.ಹುಲ್ಲೂರ, ಹೆಸ್ಕಾಂ ನ ಎ.ಇ.ಇ ರಾಜಶೇಖರ ಹಾದಿಮನಿ ಮುಖ್ಯ ಅತಿಥಿಗಳಾಗಿ, ಚಿಂತಕ ಅರವಿಂದ ಕೊಪ್ಪ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಎಂ.ಎಚ್.ಹಾಲ್ಯಾಳ, ಕಾಂಗ್ರೇಸ್ ಮುಖಂಡ ವಾಯ್.ಎಚ್.ವಿಜಯಕರ, ಮಂಗಳೂರು ಭಾಗದ ಪಿಡಿಓ ಮುತ್ತಪ್ಪ ಢವಳಗಿ ಅತಿಥಿಗಳಾಗಿ ಆಗಮಿಸಲಿರುವದಾಗಿ ಸಂಸ್ಥೆಯ ಕಾರ್ಯಾಧ್ಯಕ್ಷ ವಿರೇಶ ಗುರುಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment