ಆಲಮೇಲ: ಹುಬ್ಬಳ್ಳಿಯ ಉಮಾಶಂಕರ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ನೀಡುವ ಪ್ರಸಕ್ತ ಸಾಲಿನ ಪುಸ್ತಕ ಪ್ರಶಸ್ತಿಗೆ ಪಟ್ಟಣದ ವೈದ್ಯ ಸಾಹಿತಿ ಡಾ ಸಮೀರ ಹಾದಿಮನಿ ಅವರ ‘ನಗೆಗುಳಿಗೆ’ ಕೃತಿ ಆಯ್ಕೆ ಆಗಿದೆ.
ಚುನಾವಣೆ, ಕೋರೋನಾ, ಬೆಲೆಏರಿಕೆ, ರಾಜಕೀಯ, ಪ್ರಚಲಿತ ವಿದ್ಯಮಾನಗಳು ಹೀಗೆ ವಿವಿಧ ವಿಷಯಗಳ 108 ಪ್ರಕಟಿತ ವ್ಯಂಗ್ಯಚಿತ್ರಗಳ ಸಂಕಲನ ಆಗಿರುವ ಈ ಕೃತಿಗೆ ಖ್ಯಾತ ವ್ಯಂಗ್ಯಚಿತ್ರಕಾರ ಪಂಜು ಗಂಗೋಳ್ಳಿ ಮತ್ತು ದಿನೇಶ ಕುಕ್ಕುಜಡ್ಕ ಅವರು ಮುನ್ನುಡಿ-ಬೆನ್ನುಡಿ ಬರೆದಿರುವರು.
ವೃತ್ತಿಯಲ್ಲಿ ವೈದ್ಯರಾಗಿರುವ ಡಾ ಸಮೀರ ಹಾದಿಮನಿಯವರು ಉಪ್ಪು ನೀರಿನ ಸೆಲೆ, ಶ್ಲಾಘನೆ-ಖಂಡನೆ ಸೇರಿದಂತೆ ಐದು ಕೃತಿಗಳನ್ನು ರಚಿಸಿರುವರು. ಇವರು ಜಿಲ್ಲಾ ರಾಜ್ಯೋತ್ಸವ, ಸಗರನಾಡು ಸೇವಾ ಪ್ರತಿಷ್ಟಾನದ ಯುವ ಪ್ರಶಸ್ತಿ, ಬಸವಶಾಂತಿ ರಾಜ್ಯಪ್ರಶಸ್ತಿ ಮುಂತಾದ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಮಾರ್ಚ್ ೧೦ ರಂದು ಹುಬ್ಬಳ್ಳಿಯಲ್ಲಿ ಜರುಗಲಿರುವ ಭಾವಸಂಗಮ ಪ್ರತಿಷ್ಠಾನದ ದಶಮಾನೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಜರುಗಲಿದ್ದು, ಪ್ರಶಸ್ತಿಯು ಸ್ಮರಣಿಕೆ, ಪ್ರಶಸ್ತಿ ಫಲಕ ಮತ್ತು ಗೌರವ ಸನ್ಮಾನ ಒಳಗೊಂಡಿರುತ್ತದೆ ಎಂದು ಪ್ರತಿಷ್ಠಾನದ ಸಂಸ್ಥಾಪಕ ಕಾರ್ಯಾಧ್ಯಕ್ಷ ರಾಜೇಂದ್ರ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

