ಕೋರವಾರದಲ್ಲಿ ಶಿಕ್ಷಣ ಕ್ಷೇತ್ರದ ಸಾಧಕರಿಗೆ ಮಕ್ಕಳಮಿತ್ರ ಪ್ರಶಸ್ತಿ ಪ್ರಧಾನ
ದೇವರಹಿಪ್ಪರಗಿ: ಮಕ್ಕಳು ದೇವರ ಸಮಾನ ಅವರ ಸೇವೆ ಮಾಡಿದರೆ ದೇವರ ಸೇವೆ ಮಾಡಿದಂತೆ ಎಂದು ಮಕ್ಕಳ ಸಾಹಿತಿ, ಚಿಂತಕ ಹ.ಮ.ಪೂಜಾರ ಹೇಳಿದರು.
ತಾಲ್ಲೂಕಿನ ಕೋರವಾರ ಗ್ರಾಮದ ಸರಕಾರಿ ಕನ್ನಡ ಗಂಡು ಮಕ್ಕಳ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶುಕ್ರವಾರ ಉಜ್ವಲ ಗ್ರಾಮೀಣಭಿವೃದ್ಧಿ ಸೇವಾಸಂಸ್ಥೆ, ಇಂಡಿಯಾ ಲಿಟ್ರಸಿ ಪ್ರೋಜೆಕ್ಟ್ “ಶಿಕ್ಷಣಯಾತ್ರೆ” ಯೋಜನೆ ಹಾಗೂ ಜಿಲ್ಲಾ ಆಡಳಿತ ಸಹಯೋಗದೊಂದಿಗೆ ಜರುಗಿದ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಕ್ಕಳಲ್ಲಿ ಕ್ರಿಯಾಶೀಲತೆ ಅಡಗಿದೆ ಅದನ್ನು ಹೊರ ತರುವಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯ. ಮಕ್ಕಳ ಅಭಿವೃದ್ಧಿಗಾಗಿ ಗ್ರಂಥಾಲಯ, ಶಿಕ್ಷಣ, ಮಕ್ಕಳ ಹಕ್ಕುಗಳು ಬಹಳ ಅಗತ್ಯ ಎಂದರು.
ಉಜ್ವಲ ಸಂಸ್ಥೆಯ ಅಧ್ಯಕ್ಷೆ ಗೌರಮ್ಮ ರೆಡ್ಡಿ ಮಾತನಾಡಿ, ಮಕ್ಕಳು ಎಂದರೆ ನಗು, ಹಬ್ಬ, ಯಾವ ಗ್ರಾಮ ಮತ್ತು ಪಟ್ಟಣದಲ್ಲಿ ಮಕ್ಕಳ ಪರ ಚಿಂತಕರು ಇರುತ್ತಾರೆಯೋ ಅದು ಸ್ವರ್ಗವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಸಹಾಯಕ ಯೋಜನಾಧಿಕಾರಿ ಎಸ್.ಎ.ಕೋರವಾರ, ಯಶೋಧಾ ಜೋಷಿ ಉಜ್ಜಲ ಸಂಸ್ಥೆಯ-ಐಎಲ್‌ಪಿ ಯೋಜನೆ ನಿರ್ದೇಶಕ ವಾಸುದೇವ ತೋಳಬಂದಿ, ಶಿಕ್ಷಣ ಇಲಾಖೆ ಬಿಆರ್‌ಪಿ ಶ್ರೀದೇವಿ ರೆಬಿನಾಳ ಮಾತನಾಡಿದರು.
ಮಕ್ಕಳ ಕ್ಷೇತ್ರದಲ್ಲಿ ಸಾಧನೆ ಮಾಡಿದ ಜಾಲವಾದ ಕರ್ನಾಟಕ ಪಬ್ಲಿಕ್ ಪ್ರೌಡಶಾಲೆಯ ಮುಸ್ತಾಫ್ ಕುಡಚಿ, ಕಡಕೋಳ ಶಾಲೆಯ ರಘು ಎಸ್, ಯಾಳವಾರ ಶಾಲೆಯ ಸಹಶಿಕ್ಷಕಿ ಜ್ಯೋತಿ ಮೇತ್ರಿ, ಜಾಲವಾದ ಗ್ರಾಮದ ಸಹಶಿಕ್ಷಕಿ ತಸ್ಲೀಮಾ ಆಯಿಶಾ, ಅಂಗನವಾಡಿ ಕಾರ್ಯಕರ್ತೆಯರಾದ ಶಾಂತಾಬಾಯಿ ಚಿಗರಿ(ಮಣೂರ) ಮಧುಮತಿ ಕಮತಗಿ(ಪಡಗಾನೂರ), ಪ್ರೇಮಾ ಕುಳೇಕುಮಟಗಿ (ಕೋರವಾರ) ಇವರಿಗೆ ಮಕ್ಕಳಮಿತ್ರ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಎಸ್‌ಡಿಎಮ್‌ಸಿ ಅಧ್ಯಕ್ಷ ಸೋಮಶೇಖರ ಹಿರೇಮಠ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೈನಾಜೀಬಿ ಬ್ಯಾಕೋಡ, ಉಪಾಧ್ಯಕ್ಷ ಮಹಾದೇವಪ್ಪ ರಾಮನಳ್ಳಿ, ಉಜ್ಜಲ ಸಂಸ್ಥೆಯ ಯೋಜನಾ ನಿರ್ದೇಶಕಿ ಸುನಂದಾ ತೋಳಬಂದಿ, ಗ್ರಾಮ ಪಂಚಾಯಿತಿ ಸದಸ್ಯರಾದ ರಾಜಶೇಖರ ಛಾಯಗೋಳ, ಬಸನಗೌಡ ಬಿರಾದಾರ, ಯಾಶೀನ್ ವಡಗೇರಿ, ಹಣಮಂತ ದೊಡ್ಡಮನಿ, ದಯಾನಂದ ಗುತ್ತರಗಿಮಠ, ಶರಣಗೌಡ ನಾಯ್ಕಲ್, ಮುತ್ತು ರಾಠೋಡ್, ಅರವಿಂದ ರಾಠೋಡ, ಭೀಮಪ್ಪ ಮೋಪಗಾರ, ಆಯೂಬ್ ತುರಕನಗೇರಿ, ಗ್ರಾಮದ ಪ್ರಮುಖರಾದ ರಾಜಶೇಖರಗೌಡ ಪೋ.ಪಾಟೀಲ, ರಾಘವೇಂದ್ರ ಜೋಶಿ, ವೈದ್ಯಾಧಿಕಾರಿ ಸಿದ್ದಪ್ಪ ಚಿರ್ಚಿನಕಲ್ಲ, ಸಂಸ್ಥೆಯ ಸಂಯೋಜಕ ಸಾಗರ ಘಾಟಗೆ, ಭೀಮಬಾಯಿ ಹೇರೂರ, ಮಲ್ಲಮ್ಮ ಹೊನ್ನಳ್ಳಿ , ಶಶಿಕಾಂತ ಸುಂಗಠಾಣ, ಭಾಗಣ್ಣ ಹಾಳಕಿ, ಶ್ರೀಶೈಲ ಜೋಗೂರ ಇದ್ದರು.