ಬಸವನ ಬಾಗೆವಾಡಿ ತಾಲೂಕು ದಂಡಾಧಿಕಾರಿ ಯಮನಪ್ಪ ಸೋಮನಕಟ್ಟಿ ಅಭಿಮತ
ಬಸವನ ಬಾಗೆವಾಡಿ: ಕನ್ನಡ ಆಡಳಿತ ಭಾಷೆಯಾಗಿರುವದರಿಂದ ಪರಿಣಾಮಕಾರಿಯಾಗಿ ನಾಡಿನ ಎಲ್ಲ ಜನತೆ ಮಾತನಾಡಲಿ ಎಂದು ಬಸವನ ಬಾಗೆವಾಡಿ ತಾಲೂಕಾ ದಂಡಾಧಿಕಾರಿ ಯಮನಪ್ಪ ಸೋಮನಕಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ಶುಕ್ರವಾರ ಬಸವನಬಾಗೇವಾಡಿ ಪಟ್ಟಣದಲ್ಲಿ ತಾಯಿ ಭುವನೇಶ್ವರಿ ಹೊತ್ತ ಕನ್ನಡ ರಥ ಬಸವೇಶ್ವರ ದೇವಾಲಯದಿಂದ ಡಾ ಅಂಬೇಡಕರ ಹಾಗು ಸಂಗೋಳ್ಳಿ ರಾಯಣ್ಣ ವೃತ್ತ ಮುಖಾಂತರ ಬಸವ ಭವನ ಮೂಲಕ ಸಾವಿರಾರು ವಿದ್ಯಾರ್ಥಿಗಳು, ಶಿಕ್ಷಕರು, ಸಾಹಿತಿಗಳು. ಹೋರಾಟಗಾರರು ಕಂದಾಯ ಇಲಾಖೆ ,ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು,ಕನ್ನಡ ರಕ್ಷಣಾ ವೇದಿಕೆಯ ಅಧ್ಯಕ್ಷರು ಹಾಗು ಪದಾಧಿಕಾರಿಗಳ ನೇತೃತ್ವದಲ್ಲಿ ಬೃಹತ್ ಪ್ರಮಾಣದ ಮೆರವಣಿಗೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಕನ್ನಡ ಸಾಹಿತ್ಯದ ಮೂಲಕ ಕನ್ನಡ ಬೆಳೆಸೋಣ ಹಾಗು ಉಳಿಸೋಣ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ಕನ್ನಡ ಸಂಸ್ಕೃತಿ ಹಾಗು ಸಾಹಿತ್ಯ ಕನ್ನಡ ನಾಡನ್ನು ಶ್ರೀಮಂತಗೊಳಿಸಿದೆ. ನಾಡಿನ ಏಳು ಕೋಟಿ ಜನರು ಕನ್ನಡ ಬರೆಯುವ ಹಾಗು ಮಾತನಾಡುವದನ್ನು ಸರ್ಕಾರ ಕಡ್ಡಾಯಗೊಳಿಸಬೇಕು. ಮೈಸೂರು ರಾಜ್ಯ ಮರುನಾಮಕರಣ ಮಾಡಿ ಕನಾ೯ಟಕ ವೆಂದು ಹೆಸರಿಟ್ಟಿದ್ದು ಐವತ್ತು ವರ್ಷ ಗತಿಸಿದರಿಂದ ಕನಾ೯ಟಕ ಸುವರ್ಣ ಸಂಭ್ರಮ ನಿಮಿತ್ತ ನಾಡಿನಾದ್ಯಾಂತ ಕನ್ನಡ ರಥ ಜಾಗೃತಗೊಳಿಸುತ್ತಿದೆ ಎಂದರು
ಕನ್ನಡ ರಕ್ಷಣಾ ವೇದಿಕೆಯ ಅಧ್ಯಕ್ಷ ಅಶೋಕ ಹಾರಿವಾಳ ಮಾತನಾಡಿದರು.
ಪುರಸಭೆ ಮುಖ್ಯಾಧಿಕಾರಿ ಎಮ್ ಎನ್ ಚಿತ್ತರಗಿ, ತಾಲೂಕ ಪಂಚಾಯತ ಕಾಯ೯ನಿವಾ೯ಹಕ ಅಧಿಕಾರಿ ಯುವರಾಜ ಹನಗಂಡಿ, ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮಂಗಾನವರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ಅಭಿಷೇಕ ಚಕ್ರವರ್ತಿ, ರಾಜೇಸಾಬ ಶಿವನಗುತ್ತಿ ಬಸವರಾಜ ಸೋಮಪೂರ, ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಿವಾನಂದ ಡೋಣೂರ, ಪದಾಧಿಕಾರಿಗಳಾದ ಶಿವು ಮಡಕೇಶ್ವರ, ವಿಜಯಪುರ ಕೋಟ್ರೇಶ ಹಡಗಲಿ, ಬಸವರಾಜ ಮೇಟಿ, ಮಕಬುಲ್ ಅಂಗಡಗೇರಿ, ಬಿ ಬಿ ಚಕ್ರಮಣಿ, ಬಸವರಾಜ ಚಿಂಚೊಳ್ಳಿ, ರೋಹಿಣಿ ರೋಣದ, ಶ್ರೀದೇವಿ ಸಾಳುಂಕೆ, ಪುಷ್ಪಾ ಕುಲಕರ್ಣಿ, ಹಣಮಂತ ಮಾದರ, ಗೀತಾ ಗಬ್ಬೂರ, ಅನಸೂಯ ಜುಗತಿ, ಜಯಶ್ರೀ ಗದಗ, ವಿದ್ಯಾವತಿ ಕಿಣಗಿ, ಶಾರದಾ ಜಿಡ್ಡಿಮನಿ ಮುಂತಾದವರು ಉಪಸ್ಥಿತರಿದ್ದರು