ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಈಗಿರುವ ಪ್ರಾಚಾರ್ಯರನ್ನು ಮುಂದುವರಿಸಬೇಕೆಂದು ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದರು.
ಪ್ರತಿಭಟನೆ ಉದ್ದೇಶಿಸಿ ಕಾಲೇಜಿನ ಸಲಹಾ ಸಮಿತಿ ಸದಸ್ಯ, ವ್ಹಿಡಿಸಿಸಿ ಬ್ಯಾಂಕಿನ ನಿರ್ದೇಶಕ ಚಂದ್ರಶೇಖರಗೌಡ ಪಾಟೀಲ ಮಾತನಾಡಿ, ಮನಗೂಳಿ ಪಟ್ಟಣ ಸೇರಿದಂತೆ ಈ ಭಾಗದ ವಿದ್ಯಾರ್ಥಿಗಳಿಗೆ ಪದವಿ ಶಿಕ್ಷಣ ಸಿಗುವಂತಾಗಲಿ ಎಂಬ ಉದ್ದೇಶದಿಂದ ಇಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅನ್ನು ಸಚಿವ ಶಿವಾನಂದ ಪಾಟೀಲರ ಮುತುವರ್ಜಿಯಿಂದ ಆರಂಭವಾಗಿದೆ. ಮೊದಲು ಉರ್ದು ಶಾಲೆಯಲ್ಲಿ ಆರಂಭವಾಗಿತ್ತು. ಈ ಭಾಗದ ಜನರಿಗೆ ಮನದಟ್ಟು ಮಾಡುವ ಮೂಲಕ ತಮ್ಮ ಮಕ್ಕಳನ್ನು ಸರ್ಕಾರಿ ಪದವಿ ಕಾಲೇಜಿಗೆ ಪ್ರವೇಶ ಮಾಡುವಂತೆ ಮಾಡಲಾಗಿದೆ. ಅಲ್ಲದೇ ಸುಮಾರು ೫ ಕೋಟಿ ವೆಚ್ಚದಲ್ಲಿ ಕಾಲೇಜು ಕಟ್ಟಡ ನಿರ್ಮಾಣವಾಗಿದೆ. ಅಲ್ಲದೇ ವಿದ್ಯಾರ್ಥಿನಿಯರ ಅನುಕೂಲಕ್ಕಾಗಿ ವಸತಿ ನಿಲಯದ ಕಟ್ಟಡವನ್ನು ಸಹ ಸಚಿವರು ನಿರ್ಮಾಣ ಮಾಡಿಸಿದ್ದಾರೆ. ಪದವಿ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಐ.ಎಸ್. ಮಠಪತಿ ಎಂಬ ಉಪನ್ಯಾಸಕರು ಕಾಲೇಜಿನ ಸಲಹಾ ಸಮಿತಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ವಿದ್ಯಾರ್ಥಿಗಳಿಗೂ ತೊಂದರೆ ಕೊಡುತ್ತಿದ್ದಾರೆ. ಇಂತಹವರು ಕಾಲೇಜಿನ ಪ್ರಾಚಾರ್ಯರಾಗಬಾರದೆಂದು ವಿದ್ಯಾರ್ಥಿಗಳ ಬೇಡಿಕೆಯಿದೆ. ಕೂಡಲೇ ಅವರು ಈ ಕಾಲೇಜಿನಿಂದ ವರ್ಗಾವಣೆಯಾಗಿ ಬೇರೆಡೆ ಹೋಗಬೇಕು. ಈಗಿರುವ ಪ್ರಾಚಾರ್ಯರನ್ನು ಕಾಲೇಜಿನಲ್ಲಿ ಮುಂದುವರಿಸಿ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಸಿಗುವಂತೆ ಸಂಬಂಧಿಸಿದ ಮೇಲಾಧಿಕಾರಿಗಳು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ವಿದ್ಯಾರ್ಥಿಗಳು ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಸಚೀನ ಪಾಟೀಲ ಅವರ ಸ್ಥಾನಕ್ಕೆ ಬೇರೆಯವರು ಬೇಡ. ಪ್ರಾಚಾರ್ಯ ಸಚೀನ ಪಾಟೀಲ ಅವರು ಕಾಲೇಜಿನ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ಬಡ ವಿದ್ಯಾಥಿಗಳಿಗೆ ಸಾಕಷ್ಟು ಸಹಾಯ ಮಾಡಿದ್ದಾರೆ. ಇಂತಹ ಪ್ರಾಚಾರ್ಯರನ್ನು ಮುಂದುವರಿಸುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕಾಲೇಜಿನ ಸಲಹಾ ಸಮಿತಿ ಸದಸ್ಯರಾದ ಮುಖಂಡರಾದ ಬಸವರಾಜ ಸೋಮಪುರ, ವಿಶ್ವನಾಥಗೌಡ ಪಾಟೀಲ, ಶಿವಾನಂದ ಗುಜಗೊಂಡ, ಸಿದ್ದನಗೌಡ ಬಿರಾದಾರ, ಯಲ್ಲಪ್ಪ ರೊಳ್ಳಿ, ಶ್ರೀಕಾಂತ ಸಾರವಾಡ, ಸುಭಾಸ ಹಳೇಮನಿ, ಹಾಜಿಮಸ್ತಾನ ರೊಳ್ಳಿ, ಪರಸಪ್ಪ ಬಿದರಿ, ಪಟ್ಟಣ ಪಂಚಾಯತ ಸದಸ್ಯ ಶಂಕರ ಶಿವಮತ, ವಿದ್ಯಾರ್ಥಿಗಳಾದ ವಿಜು ರಜಪೂತ, ತನ್ವೀರ ಕೊಡಗಾನೂರ, ರೇವಣಸಿದ್ದ ತಳೇವಾಡ, ಭರತಸಿಂಗ ಹಜೇರಿ, ಸಚೀನ ರೊಳ್ಳಿ, ಸಂಗಮೇಶ ಚಿಮ್ಮಲಗಿ, ಐಶ್ವರ್ಯ ಹೊನವಾಡ, ಅಕ್ಷತಾ ನಾಗಮನಿ, ಅಶ್ವಿನಿ ಹಲಗೊಂಡ, ಕಾವೇರಿ ಪ್ರಭಾಕರ, ರಾಧಿಕಾ ಹೂಗಾರ, ಭಾಗ್ಯ ಬೀಳೂರ, ಭಾಗ್ಯ ಪಾಟೀಲ, ಭಾಗ್ಯ ಅಗಸರ, ಜ್ಯೋತಿ ಉಪ್ಪಾರ ಸೇರಿದಂತೆ ಇತರರು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
ಈಗಿದ್ದ ಪ್ರಾಚಾರ್ಯರನ್ನೇ ಮುಂದುವರಿಸಲು ವಿದ್ಯಾರ್ಥಿಗಳ ಪ್ರತಿಭಟನೆ
Related Posts
Add A Comment