Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ: ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಇಂದು ವಿವಿಧ ನಿಗಮ ಮಂಡಳಿಗಳ ನೇಮಕಾತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆ ಜರುಗಿತು. ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಶನಿವಾರ ನಗರದ ಪಿಡಿಜೆ ಕಾಲೇಜ್ ನಲ್ಲಿ ನಡೆದಿರುವ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.ಜಿಲ್ಲೆಯ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳನ್ನು ಅತ್ಯಂತ ಕಟ್ಟು ನಿಟ್ಟಾಗಿ ನಿರ್ವಹಿಸಬೇಕು. ಪರೀಕ್ಷಾ ಸಂದರ್ಭದಲ್ಲಿ ಯಾವುದೇ ಸಮಸ್ಯೆಗಳು ಉದ್ಭವಿಸದಂತೆ ಎಚ್ಚರಿಕೆ ವಹಿಸಬೇಕೆಂದು ಹೇಳಿದರು. ಯಾವುದೇ ಪರೀಕ್ಷಾ ಕೇಂದ್ರದಿಂದ ದೂರಿಗೆ ಆಸ್ಪದ ನೀಡದೇ ಪರೀಕ್ಷಾ ನಿಯಮಗಳನ್ನುನುಸರಿಸಿ,ವಹಿಸಿಕೊಟ್ಟ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂದು ಹೇಳಿದರು.ಈ ಸಂದರ್ಭದಲ್ಲಿ ಪರೀಕ್ಷಾ ಕೇಂದ್ರದ ವೀಕ್ಷಕರಾದ ಎಸ್.ಎ ಮುಜಾವರ್,ಉಪ ಮುಖ್ಯ ಪರೀಕ್ಷಾ ಅಧೀಕ್ಷಕರಾದ ಎ.ಎಸ್.ಮೋಟಗಿ, ಎಸ್.ಎನ್ ಗೌಡರ್ ಸೇರಿದಂತೆ ವಿಚಕ್ಷಣಾ ದಳ ಅಧಿಕಾರಿ,ಸಿಬ್ಬಂದಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ವ್ಯವಸ್ಥಿತ ನಿರ್ವಹಣೆಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ ವಿಜಯಪುರ: ಸಾರ್ವಜನಿಕರ ವಿವಿಧ ಸಮಸ್ಯೆ-ಅಹವಾಲುಗಳನ್ನು ಜಿಲ್ಲಾ ಮಟ್ಟದಲ್ಲಿಯೇ ಆಲಿಸಿ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಪ್ರತಿ ತಿಂಗಳು ಜನತಾ ದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳುವ ಸರ್ಕಾರದ ನಿರ್ದೇಶನದಂತೆ ನವೆಂಬರ್ ೨ ರಂದು ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಬೆಳಿಗ್ಗೆ ೧೧ ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಬಿ.ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡ ಜನತಾ ದರ್ಶನ ಕಾರ್ಯಕ್ರಮ ವ್ಯವಸ್ಥಿತವಾಗಿ ನಿರ್ವಹಣೆ ಮಾಡುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಕಳೆದ ಬಾರಿ ನಡೆದ ಜನತಾ ದರ್ಶನದಲ್ಲಿ ಸಾರ್ವಜನಿಕರಿಂದ ಸಲ್ಲಿಕೆಯಾದ ಒಟ್ಟು ೭೦೯ ಅರ್ಜಿಗಳಲ್ಲಿ ಈವರೆಗೆ ೫೪೨ ಅರ್ಜಿಗಳನ್ನು ವಿಲೇವಾರಿಗೊಳಿಸಿದ್ದು, ಬಾಕಿ ಇರುವ ೧೬೭ ಅರ್ಜಿಗಳನ್ನು ಕೂಡಲೇ ಬಾಕಿ ಉಳಿಸಿಕೊಳ್ಳದೇ ಇತ್ಯರ್ಥಪಡಿಸಲು ಕ್ರಮ ವಹಿಸುವಂತೆ ಸೂಚನೆ ನೀಡಿದರು.ಜನತಾ ದರ್ಶನ ಕಾರ್ಯಕ್ರಮದ ಕುರಿತು ಸಾರ್ವಜನಿಕರಲ್ಲಿ ಮಾಹಿತಿ ಒದಗಿಸಲು ವ್ಯಾಪಕ ಪ್ರಚಾರ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ನಗರ ಮತ್ತು…
ಡಿ.೨೪ರಂದು ವೃಕ್ಷೋತ್ಥಾನ ಹೆರಿಟೇಜ್ ರನ್ ಯಶಸ್ವಿಗೊಳಿಸಲು ಡಿಸಿ ಟಿ.ಭೂಬಾಲನ್ ಮನವಿ ವಿಜಯಪುರ: ಜಿಲ್ಲೆಯ ಐತಿಹಾಸಿಕ ಸ್ಮಾರಕಗಳ ರಕ್ಷಣೆಯೊಂದಿಗೆ ಪರಿಸರ ರಕ್ಷಣೆ ಕುರಿತು ಜಾಗೃತಿ ಮೂಡಿಸಲು ಇದೇ ಡಿ.೨೪ರಂದು ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ವೃಕ್ಷೋತ್ಥಾನ್ ಹೆರಿಟೇಜ್ ರನ್-೨೦೨೩ ಆಯೋಜಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ನೊಂದಾಯಿಸಿಕೊಳ್ಳುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಮನವಿ ಮಾಡಿಕೊಂಡಿದ್ದಾರೆ.ಶುಕ್ರವಾರ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರ ಅಧ್ಯಕ್ಷತೆಯಲ್ಲಿ ವೃಕ್ಷೋತ್ಥಾನ ಹೆರಿಟೇಜ್ ರನ್-೨೦೨೩ರ ಅಂಗವಾಗಿ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಈ ಓಟದಲ್ಲಿ ೩,೫,೧೦ ಮತ್ತು ೨೧ ಕಿ.ಮೀಗಳ ಓಟ ಇದ್ದು, ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಿಂದ ಆರಂಭಗೊಂಡು, ನಗರದ ವಿವಿಧ ಸ್ಮಾರಕಗಳ ಮುಂದೆ ಈ ಓಟ ನಡೆಯಲಿದೆ. ಹೊರಜಿಲ್ಲೆ, ರಾಜ್ಯಗಳಿಂದ ಹೆರಿಟೇಜ್ ರನ್ ಕಾರ್ಯಕ್ರಮದಲ್ಲಿ ಓಟಗಾರರು ಭಾಗವಹಿಸುವ ನಿರೀಕ್ಷೆ ಇದ್ದು, ಜಿಲ್ಲೆಯ ಶಾಲಾ ಕಾಲೇಜಿನ ಹಾಗೂ ವಸತಿ ನಿಲಯದ ವಿದ್ಯಾರ್ಥಿಗಳು, ಮಾಜಿ ಸೈನಿಕರು, ಪೊಲೀಸ್ ಇಲಾಖೆ, ಅಗ್ನಿ ಶಾಮಕ, ಬ್ಯಾಂಕು ಸೇರಿದಂತೆ ಎಲ್ಲಾ ಅಧಿಕಾರಿ, ಸಿಬ್ಬಂದಿ ಹಾಗೂ ಸಾರ್ವಜನಿಕರು ಹೆಚ್ಚಿನ…
ಸಿಂದಗಿಯಲ್ಲಿ ವಿವಿಧೆಡೆ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಸಿಂದಗಿ: ನಾವೆಲ್ಲರೂ ಕಾರ್ಯದೆಡೆಗೆ ಹೆಚ್ಚಿನ ಗಮನ ಹರಿಸಿದಾಗ ಮಾತ್ರ ಬದಲಾವಣೆಯಾಗಲು ಸಾಧ್ಯ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ತಾಲೂಕು ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ತಾಲೂಕು ಆಡಳಿತ ಸಹಯೋಗದೊಂದಿಗೆ ಶನಿವಾರ ಹಮ್ಮಿಕೊಂಡ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಅವರು, ನಾವು ಕೇವಲ ಭಾಷಣ ಮಾಡುವವರಾಗುತ್ತಿದ್ದೇವೆ. ಕೆಲಸಗಳಲ್ಲಿ ಕಾರ್ಯ ಪ್ರವೃತ್ತರಾಗುತ್ತಿಲ್ಲ. ಮಹಾನ್ ನಾಯಕರು ನೀಡಿದ ಸಂದೇಶಗಳು ನಾವು ಜಾರಿಗೆ ಬರುವಂತೆ ಮಾಡಬೇಕು. ಮತ್ತು ವಾಲ್ಮೀಕಿಸಮಾಜದ ಬಹು ಬೇಡಿಕೆಯಾದ ಸಮುದಾಯ ಭವನ ನನ್ನ ಮುಂದಿನ ೨ ವರ್ಷದ ಅವಧಿಯಲ್ಲಿ ಮಾಡಿಸಿಕೊಡುವೆ. ಹಾಗೂ ವೃತ್ತಕ್ಕೆ ಕೆಲವು ಕಾನೂನು ಅಡತಡೆಗಳಿವೆ. ಅದನ್ನು ಕುಳಿತು ಮಾತನಾಡಿ ಬಗೆಹರಿಸುವ ಕೆಲಸ ಮಾಡೋಣ ಎಂದು ಭರವಸೆ ನೀಡಿದರು. ಈ ವೇಳೆ ಮಹರ್ಷಿ ವಾಲ್ಮೀಕಿ ಕುರಿತು ಉಪನ್ಯಾಸ ನೀಡಿದ ವಾಯ್ ಸಿ ಮಯೂರ ಮಾತನಾಡಿ, ರಾಮ, ಲಕ್ಮಣ, ಸೀತಾ, ರಾವಣರನ್ನು ಜಗತ್ತಿಗೆ ಪರಿಚಯಿಸಿದ್ದು ಆದಿಕವಿ…
ವಿಜಯಪುರ: ಮಹರ್ಷಿ ವಾಲ್ಮೀಕಿ ರಾಮಾಯಣದಂತಹ ಮಹಾಕಾವ್ಯ ರಚಿಸಿ ಮಹಾನ್ ಕವಿಗಳ ಸಾಲಿಗೆ ಸೇರಿದ್ದಾರೆ. ಇವರು ಈ ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ತಮ್ಮ ಕಾವ್ಯದ ಮೂಲಕ ಉತ್ತಮ ವಿಚಾದಧಾರೆಗಳನ್ನು ಬಿತ್ತರಿಸಿದ್ದಾರೆ. ಇವರು ನಮ್ಮ ಬದುಕಿಗೆ ಮಾದರಿಯಾಗಬೇಕಿದೆ ಎಂದು ಪ್ರಾಚಾರ್ಯೆ ಡಾ.ಆರ್ ಎಂ.ಮಿರ್ದೆ ಹೇಳಿದರು.ಶನಿವಾರನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಮಾತನಾಡಿದ ಅವರು, ಮಹರ್ಷಿ ವಾಲ್ಮೀಕಿಯವರು ರಾಮನನ್ನು ಕಾವ್ಯದ ನಾಯಕನ್ನಾಗಿಸಿಕೊಂಡು ರಾಮಾಯಣದಂತಹ ಮಹಾಕಾವ್ಯವನ್ನು ರಚಿಸುವ ಮೂಲಕ ಸಾಹಿತ್ಯ ಲೋಕದ ಅಗ್ರಜರೆನಿಕೊಂಡಿದ್ದಾರೆ. ಇವರು ತಮ್ಮ ಕಾವ್ಯದ ಮೂಲಕ ಮೌಲ್ಯಯುತವಾದ ವಿಚಾರಧಾರೆಗಳನ್ನು ಬಿತ್ತರಿಸಿದ್ದಾರೆ. ಹೀಗಾಗಿಯೇ ಭಾರತದ ಮಹಾಕಾವ್ಯಗಳಲ್ಲಿ ರಾಮಾಯಣವನ್ನು ಪವಿತ್ರವೆಂದು ಪರಿಗಣಿಸಲಾಗುತ್ತಿದೆ. ಕ್ರೌಂಚ ಪಕ್ಷಿಯ ನಿವೇದನೆಯನ್ನೇ ಕಾವ್ಯಕ್ಕೆ ಪ್ರೇರಣೆಯಾಗಿಸಿಕೊಂಡಿರುವುದು ಮಹತ್ವದ ವಿಚಾರವಾಗಿದೆ. ಇಂಥವರು ನಮ್ಮ ಬದುಕಿಗೆ ಮಾದರಿಯಾಗಿದ್ದು, ಇವರ ಆಚಾರ ವಿಚಾರ ಮತ್ತು ತತ್ವಾದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳುವಂತಾಗಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಉಪ ಪ್ರಾಚಾರ್ಯ ಪ್ರೊ. ಎ.ಬಿ.ಪಾಟೀಲ, ಐಕ್ಯೂಎಸಿ ನಿರ್ದೇಶಕರಾದ ಡಾ.ಪಿ.ಎಸ್.ಪಾಟೀಲ,…
Udayarashmi kannada daily newspaper
ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಹೆಸರು ಮರುನಾಮಕರಣ ಕುರಿತು ಸಚಿವ ರಾಮಲಿಂಗಾರೆಡ್ಡಿ ಅಭಿಮತ ಬೆಂಗಳೂರು: ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಹೆಸರು ಮರುನಾಮಕರಣ ವಿಚಾರ ನನಗೆ ಗೊತ್ತಿಲ್ಲ. ಆದರೆ ಹೆಸರು ಬದಲಾವಣೆ ಮಾಡುವುದರಿಂದ ಯಾವುದೇ ತೊಂದರೆ ಇಲ್ಲ ಎಂದು ರಾಮನಗರ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.ಮಾಗಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಸರು ಬದಲಾವಣೆ ಮಾಡಿದರೆ ಯಾವುದೇ ನಷ್ಟ ಆಗಲ್ಲ. ಜೊತೆಗೆ ಜಿಲ್ಲೆಗೆ ಹೆಚ್ಚಿನ ಅನುದಾನ, ಮೂಲಭೂತ ಸೌಕರ್ಯಗಳು ಸಿಗಬೇಕು. ಆ ಉದ್ದೇಶದಿಂದ ಬದಲಾವಣೆ ಆದರೆ ತೊಂದರೆ ಇಲ್ಲ ಎಂದು ಹೇಳಿದರು.ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಸಚಿವರು ಐದು ತಿಂಗಳಿಂದ ಹಣ ತಿಂದಿಲ್ಲ ಎಂದು ಆಣೆ ಮಾಡಲಿ ಎನ್ನುವ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ , ಕುಮಾರಸ್ವಾಮಿ ಅವರ ಹೇಳಿಕೆಗೆ ಮಾನ್ಯತೆ ನೀಡಬೇಕಿಲ್ಲ ಎಂದು ನೇರವಾಗಿ ಹೇಳಿದರು.ಚುನಾವಣೆ ಬಂದಾಗ ಯಾವ ಪಕ್ಷ ಅಧಿಕಾರದಲ್ಲಿರಬೇಕು ಅಂತ ಜನ ತೀರ್ಮಾನ ಮಾಡುತ್ತಾರೆ. ಕಳೆದ ಐದು ತಿಂಗಳ ಹಿಂದೆ…
ವಿಧಾನ ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಅಭಿಮತ ವನ್ಯಪ್ರಾಣಿಗಳ ಕೂದಲು, ಹಲ್ಲು, ಉಗುರು, ದಂತ ಬಳಸಿದವರ ಮೇಲೆ ಕ್ರಮ ಚಿತ್ರದುರ್ಗ: ರಾಜ್ಯದಲ್ಲಿ ಹುಲಿ ಉಗುರು ಪ್ರಕರಣ ಬೆನ್ನಲ್ಲೇ ಕೆಲವೊಂದು ಮನೆಯಲ್ಲಿ ಆನೆ ದಂತದಿಂದ ಕುರ್ಚಿ ಮತ್ತು ಟೇಬಲ್ ಮಾಡಿಸಿದ್ದಾರೆ. ಅವುಗಳನ್ನು ಸಹ ಸೀಜ್ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಈ ಕುರಿತು ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫ್ಯಾಷನ್ ಗಾಗಿ ಹುಲಿ ಉಗುರು, ಕೂದಲು ಕಟ್ಟಿಕೊಳ್ಳೋದು ತಪ್ಪು ಎಂದು ಕಾನೂನು ರಕ್ಷಣೆ ಮಾಡೋರು ಕಾನೂನು ಮೀರಿ ವೈಭವೀಕರಿಸಿದರೆ ಕ್ರಮ ಆಗುತ್ತದೆ. ಅದು ಯಾರೇ ಎಷ್ಟೇ ದೊಡ್ಡವರು ಇದ್ದರೂ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.ಹುಲಿ ಸಂರಕ್ಷಣೆ ಮಾಡಿ ಅಂತ ಪ್ರಪಂಚದಲ್ಲಿ ಓಡಾಡ್ತಾ ಇದ್ದಾರೆ. ಅದಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡ್ತೀವಿ. ನೀವು ಅದರ ಉಗುರು ಧರಿಸಿ ಹುಲಿ ಸಿಂಹಗಳಿಗೆ ಅಣುಕಿಸುವ ಕೆಲಸ ಮಾಡ್ತಾ ಇದ್ದೀರಾ ಎಂದು ಪ್ರಶ್ನಿಸಿದ್ದಾರೆ.ವನ್ಯ ಪ್ರಾಣಿಗಳ ಕೂದಲು, ಹಲ್ಲು, ಉಗುರು, ದಂತ ಹಾಕುವವರ ವಿರುದ್ಧ…
ಭಾವರಶ್ಮಿ ಮಾನವನ ಶರೀರ ಭೂಮಂಡಲದಷ್ಟೇ ನಿಗೂಢ. ಎಷ್ಟೇ ಕೆದಕಿದರೂ, ಎಷ್ಟೇ ಅದನ್ನು ಅರಿತರೂ ಮೊಗೆದಷ್ಟು ಒಂದಾದರೊಂದರ ಮೇಲೆ ಹೊಸ ವಿಷಯಗಳು ತಿಳಿಯುತ್ತಲೇ ಹೋಗುತ್ತವೆ. ಇಂತಹ ಮಾನವನ ದೇಹದಲ್ಲಿ ಚಿತ್ರ ವಿಚಿತ್ರವಾದ ವಿಷಯಗಳು ಅಡಗಿವೆ. ಅದನ್ನು ಅರ್ಥ ಮಾಡಿಕೊಳ್ಳುವುದು ಸಹ ಅಷ್ಟೇ ಕಷ್ಟ. ಎಲ್ಲಿಯ ಕನೆಕ್ಷನ್ ಇನ್ನೆಲ್ಲಿಯೋ ಇರುತ್ತದೆ. ಎಲ್ಲೋ ಒಂದು ತೊಂದರೆಯಾದರೆ, ಮತ್ತಿನ್ನೆಲ್ಲೋ ಅದು ವ್ಯಕ್ತಪಡಿಸುತ್ತದೆ. ಒಟ್ಟಿನಲ್ಲಿ ಅದರ ಸೂತ್ರ ಒಂದು ಕಡೆಯಿದ್ದರೆ, ಅದರ ಪಾತ್ರ ನಿರ್ವಹಿಸುವಿಕೆ ಮತ್ತಿನ್ನೆಲ್ಲೋ ಇರುತ್ತದೆ. ಸರಿಯಾಗಿಯೇ ಕಾರ್ಯನಿರ್ವಹಿಸುತ್ತಿದ್ದ ದೇಹ, ದಿಢೀರನೆ ವ್ಯತ್ಯಾಸಗೊಂಡು ಅನಾರೋಗ್ಯಕ್ಕೆ ಈಡಾಗುತ್ತದೆ. ಅದೇಕೆ ಹಾಗಾಯಿತು, ಏನಾಯಿತು ಎಂದು ಪತ್ತೆ ಹಚ್ಚುವುದಕ್ಕೆ ಕೆಲವೊಮ್ಮೆ ಕಷ್ಟವಾಗಿ ಬಿಡುತ್ತದೆ. ಕೆಲವೊಮ್ಮೆ ಒಂದು ನೋವಿಗೂ ಇನ್ನೊಂದು ನೋವಿಗೂ ಸಂಬಂಧವಿದ್ದು ಕಾಯಿಲೆಗಳು ಒಂದಕ್ಕೊಂದು ಬೆಸೆದುಕೊಂಡಿದ್ದರೆ, ಮತ್ತೂ ಕೆಲವೊಮ್ಮೆ ಎರಡು ಮೂರು ಕಾಯಿಲೆ ನೋವುಗಳು ಒಟ್ಟೊಟ್ಟಿಗೆ ಶುರುವಾದರೂ, ಕಾರಣಗಳು ವಿಭಿನ್ನವಾಗಿರುತ್ತವೆ. “ಮಾನವನ ದೇಹವು ಮೂಳೆ ಮಾಂಸದ ತಡಿಕೆ” ಎಂದರೂ ಸಹ, ನಮ್ಮ ದೇಹ ಕಾರ್ಯನಿರ್ವಹಿಸಲು ಬೇಕಾಗುವ ಶಕ್ತಿ, ಕೆಲಸ ನಿರ್ವಹಿಸುವ ವೈಖರಿ,…
ಕಾವ್ಯರಶ್ಮಿ ಬಾಳ ಮುಂಜಾವಿನಲಿ ತುಂಬಿದೆ ಸಡಗರದಿನ ಬರುವ ಹೊಂಗಿರಣ ಬೀರುತ ಭಾಸ್ಕರನವ ಭಾವಗಳು ಬರಲು ಬಾಳಲಿ ಸ್ವೀಕಾರಬದುಕಿನ ಕ್ಷಣ ಕ್ಷಣವೂ ಆಗಿದೆ ಸುಂದರ ಬಾಳ ಮುಸ್ಸಂಜೆಯಲಿ ನೆನಪಿನ ಹಂದರಕಳೆದ ಸಂತಸದ ಕ್ಷಣಗಳ ಸುಂದರ ಚಿತ್ತಾರಗೂಡು ತೊರೆದ ಹಕ್ಕಿಗಳ ನೆನಪು ಬೇಸರಯಾರಿಲ್ಲ ಜೊತೆಗೆ ಒಂಟಿತನವೇ ಆಧಾರ
