ನಿಡಗುಂದಿ: ಪಟ್ಟಣದಲ್ಲಿ ಭಾನುವಾರ ಆಗಮಿಸಿದ ಕನ್ನಡ ಜ್ಯೋತಿ ರಥಯಾತ್ರೆಗೆ ಅದ್ಧೂರಿ ಸ್ವಾಗತ ದೊರೆಯಿತು.
ಆಲಮಟ್ಟಿಯ ಎಂಎಚ್ ಎಂ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳ ಡ್ರಮ್ ಸೆಟ್ ವಾದನ, ಇಟಗಿಯ ಗಿಡ್ಡಯ್ಯ ಅಜ್ಜ ಸ್ಮಾರಕ ಪ್ರೌಡಶಾಲೆಯ ವಿದ್ಯಾರ್ಥಿನಿಯರ ಡೊಳ್ಳುವಾದನ, ಬೇನಾಳ ಆರ್ ಎಸ್ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಮಣಗೂರ ಸರ್ಕಾರಿ ಪ್ರೌಡಶಾಲೆಯ ವಿದ್ಯಾರ್ಥಿಗಳ ಲೇಜಿಮ್ ನೃತ್ಯ, ಬೇನಾಳ ಎನ್ ಎಚ್ ಶಾಲೆಯ ಕೋಲಾಟದ ನೃತ್ಯ, ಇಲಕಲ್ಲ ಸೀರೆ ಉಟ್ಟು ಕುಂಭ ಹೊತ್ತ ನಿಡಗುಂದಿ ಜಿವಿವಿಎಸ್ ಶಾಲೆಯ ವಿದ್ಯಾರ್ಥಿನಿಯರು, ಮಿಲಿಟರಿ ಪೋಷಾಕುವಿನಲ್ಲಿದ್ದ ನಿಡಗುಂದಿಯ ಸುಜ್ಞಾನ ಶಾಲೆಯ ವಿದ್ಯಾರ್ಥಿಗಳು, ಎನ್‌ಇಎಚ್‌ಎಸ್ ಶಾಲೆಯ ವಿದ್ಯಾರ್ಥಿನಿಯರ ಆರತಿ ಮೇಳಗಳು ಗಮನಸೆಳೆದವು.
ಮೆರವಣಿಗೆಯಲ್ಲಿ ಪಟ್ಟಣ ಸೇರಿದಂತೆ ತಾಲ್ಲೂಕಿನ ಹಲವಾರು ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಕ ಮುಖಂಡರು, ಕನ್ನಡ ಪರ ಸಂಘಟನೆಯ ಮುಖಂಡರು ಪಾಲ್ಗೊಂಡಿದ್ದರು.
ತಹಶೀಲ್ದಾರ್ ಎ.ಡಿ. ಅಮರವಾಡಗಿ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಹಾಸೀಂಪೀರ್ ವಾಲೀಕಾರ, ತಾಲ್ಲೂಕು ಪಂಚಾಯ್ತಿ ಇಓ ವಿ.ಎಸ್. ಹಿರೇಮಠ, ಸಿಪಿಐ ಶರಣಗೌಡ ಗೌಡರ, ಸುರೇಶ ಪಾಟೀಲ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಸಂಗಮೇಶ ಕೆಂಭಾವಿ, ನಜೀರ್ ಗುಳೇದ, ಶಿಕ್ಷಕ ಹಾಗೂ ನೌಕರರ ಸಂಘಟನೆಯ ಮುಖಂಡರಾದ ಬಿ.ಟಿ. ಗೌಡರ, ಎಂ.ಎಸ್. ಮುಕಾರ್ತಿಹಾಳ, ಎಂ.ಎಂ. ಮುಲ್ಲಾ, ಆರ್.ಎಸ್. ಕಮತ, ರಾಘವೇಂದ್ರ ವಡವಡಗಿ, ಸುರೇಶ ಹುರಕಡ್ಲಿ, ಪ್ರಶಾಂತ ಚಲವಾದಿ, ರಮೇಶ ಮಾಗಿ, ಡಾ ಪ್ರಕಾಶ ಗೋಡಖಿಂಡ್ಕಿ, ಚಂದ್ರಶೇಖರ ಹಳೇಮನಿ ಇನ್ನಿತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment