ವಿಜಯಪುರ: ನಗರದ ವಿವಿಧ ಕಡೆಗಳಲ್ಲಿ ನಡೆದ ಕಳ್ಳತನ ಪ್ರಕರಣಗಳನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಎಸ್ಪಿ ಋಷಿಕೇಶ ಸೋನಾವಣೆ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಈ ವಿಷಯ ತಿಳಿಸಿದ ಅವರು, ಬಂಧಿತ ಆರೋಪಿಗಳನ್ನು ರವಿ ಬಸವರಾಜ ಬಾಕಲಿ ಹಾಗೂ ರಾಜು ಶಿವಾನಂದ ಹೊಸಮನಿ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳಿಂದ ೬೬೬ ಗ್ರಾಂ ಚಿನ್ನಾಭರಣ, ೧೯೦ ಗ್ರಾಂ ಬೆಳ್ಳಿಯ ಆಭರಣ, ೨೧ ಸಾವಿರ ರೂ. ನಗದು ಸೇರಿದಂತೆ ೪೨.೩೦ ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತು ಮಾಡಿಕೊಳ್ಳಲಾಗಿದೆ ಎಂದರು.
ನಗರದ ಆದರ್ಶ ನಗರ, ಜಲನಗರ, ಗೋಳಗುಮ್ಮಟ ಸೇರಿದಂತೆ ೯ ಕಳ್ಳತನ ಪ್ರಕರಣಗಳಲ್ಲಿ ಆರೋಪಿಗಳು ಭಾಗಿಯಾಗಿರುವ ಬಗ್ಗೆ ತಿಳಿದು ಬಂದಿದೆ ಎಂದು ಎಸ್.ಪಿ. ತಿಳಿಸಿದರು.
ಪದೇ ಪದೇ ಮನೆಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವುದನ್ನು ತಡೆಗಟ್ಟಿ ಕಳ್ಳರನ್ನು ಹೆಡೆಮುರಿಕಟ್ಟಲು ಪೊಲೀಸ್ ಇಲಾಖೆ ವಿಶೇಷ ತಂಡ ರಚಿಸಿತ್ತು. ಈ ತನಿಖಾ ತಂಡ ಸಾಂಗ್ಲಿ, ಸೊಲಾಪೂರ, ಬೆಳಗಾವಿ ಮೊದಲಾದ ಕಡೆಗಳಲ್ಲಿ ಆರೋಪಿಗಳ ತಪಾಸಣೆಯಲ್ಲಿದ್ದ ಸಂದರ್ಭದಲ್ಲಿ ಸೊಲಾಪೂರ ನಾಕಾ ಬಳಿ ಪ್ರಥಮ ಆರೋಪಿ ರವಿಯನ್ನು ಬಂಧಿಸಲಾಗಿದೆ, ನಂತರ ಅವನಿಗೆ ವಿಚಾರಣೆ ನಡೆಸಿ ಇನ್ನೋರ್ವ ಆರೋಪಿಯನ್ನು ಬಂಧಿಸಲಾಗಿದೆ ಎಂದರು.
ಡಿವೈಎಸ್‌ಪಿ ಬಸವರಾಜ ಯಲಿಗಾರ, ಪೊಲೀಸ್ ಅಧಿಕಾರಿಗಳಾದ ಮಲ್ಲಯ್ಯ ಮಠಪತಿ, ಜ್ಯೋತಿ ವಾಲೀಕಾರ, ಸುರೇಶ ಮಂಟೂರ, ಪಿ.ಆರ್. ಹಿಪ್ಪರಗಿ, ಸಿಬ್ಬಂದಿಗಳಾದ ವೈ.ಪಿ. ಕಬಾಡೆ,ಎಂ.ಎ. ಜಾಧವ, ಎಸ್.ಎ. ಬನಪಟ್ಟಿ, ಮಹೇಶ ಸಾಲಿಕೇರಿ, ಜೆ.ಎಸ್. ವನಜಂಕರ, ಶ್ರೀಶೈಲ ಗಾಯನ್ನವರ, ಎಸ್.ಕೆ. ಕಲಾದಗಿ, ಸಂಜು ಬಿರಾದಾರ, ಮಹೇಶ ಸಾಲಿಕೇರಿ, ಸಚೀನ್, ನಂದೇಶ, ಗುಂಡು ಗಿರಣಿವಡ್ಡರ, ಮೊಹ್ಮದ್ ಬಾಗವಾನ, ಜಬ್ಬಾರ ಇಲಕಲ್ ಅವರನ್ನೊಳಗೊಂಡ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಎಸ್.ಪಿ. ಋಷಿಕೇಶ ಶ್ಲಾಘಿಸಿದರು.
ಎಎಸ್‌ಪಿ ಶಂಕರ ಮಾರಿಹಾಳ, ಅಪರಾಧ ವಿಭಾಗದ ಎಎಸ್‌ಪಿ ರಾಮನಗೌಡ ಹಟ್ಟಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
ಮನೆಗಳ್ಳತನ ಆರೋಪಿಗಳ ಬಂಧನ: ರೂ.೪೨.೩೦ಲಕ್ಷ ಮೌಲ್ಯದ ವಸ್ತು ವಶ
Related Posts
Add A Comment