ಚಡಚಣ: ಎಲ್ಲ ಧರ್ಮಗಳೂ ಪರಮಾತ್ಮನನ್ನು ಜ್ಯೋತಿ ರೂಪದಲ್ಲಿ ಕಾಣುತ್ತವೆ. ಅಂತಹ ಜ್ಯೋತಿಯು ನಮ್ಮ ಆತ್ಮದ ಜೊತೆ ಅನುಸಂಧಾನ ಹೊಂದಿರಬೇಕು. ಇಂಥಹ ಆಂತರಿಕ ಶಕ್ತಿಯು ಧ್ಯಾನದಿಂದ ಬರುತ್ತದೆ. ವ್ಯಾಯಾಮದಿಂದ ದೈಹಿಕ ಹಾಗೂ ವ್ಯವಹಾರದಿಂದ ಆರ್ಥಿಕ ಶಕ್ತಿ ಸಂಪಾದಿಸಿದರೆ, ಅಧ್ಯಯನದಿಂದ ಅಧ್ಯಾತ್ಮ ಶಕ್ತಿ ಪಡೆಯಬಹುದು ಎಂದು ಇಂಡಿ ತಾಲೂಕಾ ಬ್ರಹ್ಮಕುಮಾರಿ ಈಶ್ವರೀಯ ಅಧ್ಯಯನ ಕೇಂದ್ರದ ಸಂಚಾಲಕಿ ಬಿ.ಕೆ.ಯಮೂನಾಜಿಯವರು ಹೇಳಿದರು.
ಪಟ್ಟಣದಿಂದ ಪ್ರಜಾಪೀತ ಬ್ರಹ್ಮಕುಮಾರಿ ವಿಶ್ವವಿದ್ಯಾನಿಲಯದ ವತಿಯಿಂದ ಪಟ್ಟಣದಿಂದ ರಾಜಸ್ಥಾನ ಮೌಂಟ್ ಅಬುವಿಗೆ ೪೦ ಯಾತ್ರಾರ್ಥಿಗಳು ಅಧ್ಯಾತ್ಮಿಕ ದರ್ಶನಕ್ಕೆ ತೆರಳುತ್ತಿದ್ದು, ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ಮಾತುಗಳಿಗಿಂತ ಕೃತಿಗೆ ಬೆಲೆ ಇರುತ್ತದೆ. ಅದಕ್ಕೆ ನೈತಿಕತೆ, ಏಕಾಗ್ರತೆ, ಬದ್ಧತೆಗಳೆಲ್ಲ ಮುಖ್ಯವಾಗುತ್ತದೆ. ಈ ಗುಣಗಳು ಅಧ್ಯಾತ್ಮದಿಂದ ಬರುತ್ತವೆ ಎಂದು ಹೇಳಿದರು.
ಈ ವೇಳೆಯಲ್ಲಿ ಬ್ರಹ್ಮಕುಮಾರಿ ಈಶ್ವರೀಯ ಅಧ್ಯಯನ ಕೇಂದ್ರ ಚಡಚಣದ ಸಂಚಾಲಕಿ ಬಿ.ಕೆ.ಶ್ರೀದೇವಿ ಅಕ್ಕನವರು ಮಾತನಾಡುತ್ತ. ನಮ್ಮ ಚೇತನ ಅನಿಕೇತನ ಆಗಬೇಕು. ಬದುಕಿನಲ್ಲಿ ಆತ್ಮವಿಶ್ವಾಸ, ಸ್ವಾಭಿಮಾನ ತುಂಬಬೇಕು. ಕೀಳರಿಮೆ, ಮೇಲು-ಕೀಳು ಭಾವನೆಗಳನ್ನು ಹೊರಹಾಕಬೇಕು. ನಾವೆಲ್ಲ ಮಾನವರಾಗಬೇಕು ಎಂದರು.
ಈ ವೇಳೆಯಲ್ಲಿ ಗಂಗಾಧರ ಗಿಡವೀರ ದಂಪತಿಗಳು, ರಾಜು ಸರಸಂಬಿ ದಂಪತಿಗಳು, ಸಂಗಪ್ಪ ಪಾವಲೆ ದಂಪತಿಗಳು, ವಿನಾಯಕ ಕರಜಗಿ ದಂಪತಿಗಳು, ಎಂ.ಜಿ.ಸಾಂಗೋಲಿ ಪರಿವಾರ ಸೇರಿದಂತೆ ಪಟ್ಟಣದ ಇತರ ಯಾತ್ರಿಕರು ಯಾತ್ರೆ ಕೈಗೊಂಡರು.
Subscribe to Updates
Get the latest creative news from FooBar about art, design and business.
Related Posts
Add A Comment