ಮುದ್ದೇಬಿಹಾಳ: ಮಾರ್ಚ ೫,೬,೭ ರಂದು ಜರುಗಲಿರುವ ತಾಲೂಕಿನ ಕುಂಟೋಜಿ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ದೇವರ ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಕುಂಟೋಜಿಯ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಫೆ.೧೨ ರಿಂದ ಪ್ರತಿದಿನ ಸಂಜೆ ೭ಗಂಟೆಗೆ ಮಹಾದಾಸೋಹಿ ಶ್ರೀ ಕಲಬುರ್ಗಿ ಶರಣಬಸವೇಶ್ವರ ಪುರಾಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜೊತೆಗೆ ವಾಲಪೋಸ್ಟರ್ ಬಿಡುಗಡೆ ಸಮಾರಂಭ ಸಹ ಜರುಗಲಿದೆ.
ಕಾರ್ಯಕ್ರಮದ ಸಾನಿಧ್ಯ ನಿಡಗುಂದಿಯ ರುದ್ರೇಶ್ವರ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ವಹಿಸಲಿದ್ದು, ಮಸೂತಿ ಗ್ರಾಮದ ಹಿರೇಮಠದ ಪ್ರಭುಕುಮಾರ ಶಿವಾಚಾರ್ಯ ಸ್ವಾಮಿಗಳು ಉದ್ಘಾಟಿಸುವರು. ಕಮತಗಿಯ ಹೊಳೆಹುಚ್ಚೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ಸೂಗೂರಿನ ರುದ್ರಮುನೇಶ್ವರ ಮಠದ ಪ್ರವಚನ ಭಾಸ್ಕರ ಎಂದೇ ಖ್ಯಾತರಾದ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು, ಬಸವನ ಬಾಗೇವಾಡಿಯ ಒಡೆಯರ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮಿಗಳು, ಗುಳೇದಗುಡ್ಡದ ಅಮರೇಶ್ವರಮಠದ ನೀಲಕಂಠ ಶಿವಾಚಾರ್ಯ ಸ್ವಾಮಿಗಳು ಪುರಾಣ ನುಡಿಗಳನ್ನಾಡಲಿದ್ದು, ಗುಂಡಕನಾಳದ ಗುರುಲಿಂಗ ಶಿವಾಚಾರ್ಯ ಸ್ವಾಮಿಗಳು, ಬಾದಾಮೆಯ ಶಿವಪೂಜೆ ಶಿವಾಚಾರ್ಯ ಸ್ವಾಮಿಗಳು, ತಾಳೊಕೋಟೆಯ ಸಿದ್ಧಲಿಂಗ ದೇವರು, ಹುನಶ್ಯಾಳದ ಆನಂದ ದೇವರು ಸಮ್ಮುಖದಲ್ಲಿ ಶಾಸಕ ಸಿ.ಎಸ್.ನಾಡಗೌಡ, ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಪ್ರಮುಖರಾದ ಸಂಹನಗೌಡ ಪಾಟೀಲ, ಗುರುಲಿಂಗಪ್ಪ ಸುಳ್ಳೋಳ್ಳಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Subscribe to Updates
Get the latest creative news from FooBar about art, design and business.
Related Posts
Add A Comment