Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಕರ್ನಾಟಕ ರಾಜ್ಯೋತ್ಸವ ದಿನಾಚರಣೆ | ವಿಶ್ವ ಸಾಹಿತ್ಯಕ್ಕೆ ವಚನ ಸಾಹಿತ್ಯದ ಕೊಡುಗೆ ಅಪಾರ ಸಚಿವ ಡಾ.ಎಂ.ಬಿ.ಪಾಟೀಲ ಅಭಿಮತ ವಿಜಯಪುರ: ಕನ್ನಡ ಎನ್ನುವುದು ಕೇವಲ ಭಾಷೆ ಮಾತ್ರವಲ್ಲ, ಅದು ನಮ್ಮ ಸಂಸ್ಕೃತಿ. ಕನ್ನಡವು ಕರ್ನಾಟಕದಲ್ಲಿ ನೆಲೆಸಿರುವ ಎಲ್ಲ ಜನರ ಅಸ್ಮಿತೆಯಾಗಿದೆ. ಈ ಬಾರಿಯ ರಾಜ್ಯೋತ್ಸವವು ಏಳು ಕೋಟಿ ಕನ್ನಡಿಗರ ಪಾಲಿಗೂ ಸಂಭ್ರಮದ ಪರ್ವವಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ದಿ ಇಲಾಖೆ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಹೇಳಿದರು.ಬುಧವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ವಿವಿಧ ಕವಾಯತು ಪಡೆಗಳಿಂದ ಗೌರವ ವಂದನೆ ಸ್ವೀಕರಿಸಿದ ನಂತರ ಮಾತನಾಡಿದ ಅವರು,ನಮ್ಮ ರಾಜ್ಯಕ್ಕೆ `ಕರ್ನಾಟಕ’ವೆಂಬ ನಾಮಕರಣವಾದ ಶುಭ ಸಂದರ್ಭದ ಸುವರ್ಣ ಮಹೋತ್ಸವ ವರ್ಷವಿದು. ಕರ್ನಾಟಕವು ಮೊದಲಿನಿಂದಲೂ ಉದ್ಯಮಸ್ನೇಹಿ ರಾಜ್ಯವಾಗಿದೆ. ಐಟಿ, ಬಿಟಿ, ಇವಿ, ಸ್ಟಾರ್ಟಪ್, ಹೂಡಿಕೆ ಆಕರ್ಷಣೆ, ಕೈಗಾರಿಕೆಗಳಿಗೆ ಉತ್ತೇಜನ, ರಿಯಾಯಿತಿ/ವಿನಾಯಿತಿ, ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ, ಸಂಶೋಧನೆ ಮತ್ತು ಅಭಿವೃದ್ಧಿ, ಒಡಂಬಡಿಕೆಗಳು ಮತ್ತು ಸಹಭಾಗಿತ್ವ…
ಹಸಿರು ವಿಜಯಪುರ ಜಿಲ್ಲೆಯನ್ನಾಗಿ ಪರಿವರ್ತಿಸಲು ಕೋಟಿವೃಕ್ಷ ಅಭಿಯಾನ | ೩-೪ ತಿಂಗಳಲ್ಲಿ ವಿಮಾನ ನಿಲ್ದಾಣ ಉದ್ಘಾಟನೆ ವಿಜಯಪುರ: ಸಿದ್ದೇಶ್ವರ ಶ್ರೀಗಳ ನೆನೆಪಿನಲ್ಲಿ ಯುವಪೀಳಿಗೆಗೆ ಅವರ ಸಂದೇಶ ಮುಂದುವರೆಸಲು, ಹಸಿರು ವಿಜಯಪುರ ಜಿಲ್ಲೆಯನ್ನಾಗಿ ಪರಿವರ್ತಿಸಲು ಕೋಟಿವೃಕ್ಷ ಅಭಿಯಾನದ ಜೊತೆಗೆ ಗತವೈಭವ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಯಾಗುವ ನಿಟ್ಟಿನಲ್ಲಿ ಡಿ.೨೪ರಂದು ‘ವೃಕ್ಷೋಥಾನ್ ಹೆರಿಟೆಜ್ ರನ್’ ಹಮ್ಮಿಕೊಳ್ಳಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ದಿ ಇಲಾಖೆ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಹೇಳಿದರು.ಬುಧವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ವಿವಿಧ ಕವಾಯತು ಪಡೆಗಳಿಂದ ಗೌರವ ವಂದನೆ ಸ್ವೀಕರಿಸಿದ ನಂತರ ಮಾತನಾಡಿದ ಅವರು, ನಮ್ಮ ನೆಲದಲ್ಲಿ ಹುಟ್ಟಿ, ಆಧ್ಯಾತ್ಮಿಕ ಕ್ಷೇತ್ರದಲ್ಲಿ ಜಗತ್ತಿಗೆ ಬೆಳಕಾದವರು, ಪೂಜ್ಯ ಸಿದ್ದೇಶ್ವರ ಮಹಾಸ್ವಾಮಿಗಳವರು. ಅವರು ಬಯಲಲ್ಲಿ ಬಯಲಾಗಿ, ಬರುವ ಜನವರಿ ದಿ.೨ ಕ್ಕೆ ಒಂದು ವರ್ಷ ತುಂಬುತ್ತದೆ. ಪೂಜ್ಯರು ಕೃಷಿ, ಗ್ರಾಮೀಣ ಬದುಕು, ವಿದ್ಯಾರ್ಥಿಗಳು, ಶಿಕ್ಷಣ, ವಿಜ್ಞಾನ, ಕ್ರೀಡೆ, ಪರಿಸರ, ಪ್ರಕೃತಿಯಲ್ಲಿ…
*- ಸಂಪದಾ ಹಿರೇಮಠ*ನಿಡಗುಂದಿ: ಇಲ್ಲೊಂದು ಮನಕಲಕುವ ಸುದ್ದಿ. ಚಾಮರ ತಮ್ಮೆದುರಿಗಿದೆ. ಚಿಕ್ಕ ವಯಸ್ಸಿನ ಬಾಲಕಿಯೊಬ್ಬಳು ಇನ್ನಿಲ್ಲದ ನರಕಯಾತನೆ ಕ್ಷಣಕ್ಷಣವೂ ಅನುಭವಿಸಿ ಕಣ್ಣೀರಲ್ಲಿ ಉಸರಿಸುತ್ತಿದ್ದಾಳೆ. ಅವಳ ಬದುಕು ಅಯೋಮಯ. ಹೆತ್ತವರ ಕರುಳು ಕಿತ್ತಿ ಬರುವಂತಿದೆ. ದೇವರ ಆಟದ ಮುಂದೆ ಕೈಚೆಲ್ಲಿ ಕುಳಿತಿದೆ. ಆ ಕುಟುಂಬ ! ಈಗೇನಿದ್ದರೂ ಮಾನವೀಯ ಮೌಲ್ಯ ಮೆರೆಯಬೇಕಾಗಿದೆ. ಹೃದಯವಂತರು ನೆರವಿಗೆ ಧಾವಿಸಬೇಕಾಗಿದೆ. ಆ ದೈವ ನಿರೀಕ್ಷೆಯೇ ಅವಳ ಪಾಲಿಗೆ ಹೊಸ ಬದುಕು ಕಲ್ಪಿಸಿ ಕೊಡಬಹುದೇನೋ…?ಹಾಗಾದರೆ ಈ ಬರಹಗಳ ಮೇಲೆ ಒಮ್ಮೆ ಕಣ್ಣಾಡಿಸಿ. ಮನಸ್ಸು ಮಾನವೀಯತ್ತ ವಾಲಿದರೆ ಕೈಲಾದ ಮಟ್ಟಿಗೆ ನೆರವಿನ ಹಸ್ತ ಚಾಚಿ. ಪುಣ್ಯದ ಫಲದಲೊಂದು ಪರೋಪಕಾರದ ನೆಮ್ಮದಿಯ ಸಂತೃಪ್ತ ಭಾವ ಕಾಣಿಯಷ್ಟೇ.!ಮಗುವಿನ ಕಥೆ ವ್ಯಥೆ ಹೀಗಿದೆ..ನೋಡಿ ! ನಿಡಗುಂದಿ ತಾಲ್ಲೂಕಿನ ಯಲ್ಲಮ್ಮನ ಬೂದಿಹಾಳ ಗ್ರಾಮದ 14 ವರ್ಷದ ಬಾಲಕಿ ಮೂಳೆ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ತೀವ್ರ ನೋವಿನ ಯಾತನಾಮಯದಲ್ಲಿ ಜೀವನ ಸಾಗಿಸುತ್ತಿದ್ದಾಳೆ.ಅವಳ ಹೆಸರು ಮಂಗಲಾ ಹನುಮಂತ ವಾಲೀಕಾರ,ವಯಸ್ಸು 14. ಬಲಗಾಲಿನ ಮೊಣಕಾಲು ಸಂಪೂರ್ಣ ದಪ್ಪವಾಗಿದ್ದು, ಏಳಲು ಕೂಡಾ…
ವಿಜಯಪುರ: ನಗರದ ಜಿಲ್ಲಾ ಆಸ್ಪತ್ರೆ ಯ krsna CT& MRI ವಿಭಾಗದಲ್ಲಿ ಬುಧವಾರ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಿವಾನಂದ ಮಾಸ್ತಿಹೊಳಿ ಹಾಗೂ krsna CT& MRI ವಿಭಾಗದ ಮುಖ್ಯಸ್ಥ ಡಾ.ರಾಜಶೇಖರ ಮುಚ್ಚಂಡಿ ಮಾತನಾಡಿ, ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ 50 ವರ್ಷ ತುಂಬಿದ ಸುವರ್ಣ ಸಂದರ್ಭದಲ್ಲಿ ನಾವಿದ್ದೇವೆ. ಈ ಸಂಭ್ರಮದಲ್ಲಿರುವ ನಾವು ಕನ್ನಡ ನಾಡು-ನುಡಿಯ ಬೆಳವಣಿಗೆಗೆ ಹಾಗೂ ನಮ್ಮ ನೆಲ-ಜಲದ ಉಳಿವಿಗೆ ಕಂಕಣಬದ್ಧರಾಗೋಣ. ಅನ್ನದ ಭಾಷೆಯಾಗಿರುವ ಕನ್ನಡವನ್ನು ಉಳಿಸಿ ಬೆಳೆಸೋಣ ಎಂದು ಕರೆ ನೀಡಿದರು.ವೈದ್ಯಾಧಿಕಾರಿ ಡಾ.ಸಿಎಂ.ರಾಠೋಡ, ಉಪ ಮುಖ್ಯ ವೈದ್ಯಾಧಿಕಾರಿಗಳಾದ ಡಾ.ಸುರೇಶ ಚವ್ಙಾಣ, ಡಾ.ಎ.ಜಿ.ಬಿರಾದಾರ, ಹಿರಿಯ ತಜ್ಞ ವೈದ್ಯರಾದ ಡಾ.ಪರಶುರಾಮ ದೇವಮಾನೆ, ಡಾ.ಮಹೇಶ ಮೋರೆ, ಹಿರಿಯ ವೈದ್ಯಾಧಿಕಾರಿ ಡಾ. ಎಸ್. ಎಂ. ತಿಮ್ಮಾಪೂರ, ಡಾ.ಪಾಂಡುರಂಗ ದೊಡಮನಿ, ಕೇಂದ್ರ ವ್ಯವಸ್ಥಾಪಕ ವಿಶಾಲ ಜಂಗಮ ಮತ್ತು krsna CT& MRI ವಿಭಾಗದ ಸಿಬ್ಬಂದಿ ಸೇರಿದಂತೆ ಹಲವರಿದ್ದರು.ಡಾ.ಮಹೇಶ ಮೋರೆ ನಾಡಗೀತೆ ಹಾಡಿದರು.
ಸಿಂದಗಿ: ಪಟ್ಟಣದ ಹೊರವಲಯದ ಲೊಯೋಲ ಶಾಲೆಯಲ್ಲಿ ೬೮ ನೆಯ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.ಸಮಾರಂಭದ ಮುಖ್ಯ ಅತಿಥಿ ಡಾ. ಸಮೀರ ಹಾದಿಮನಿ ಮಾತನಾಡಿ, ಕನ್ನಡ ಭಾಷೆಗೆ ಸುಮಾರು 2000 ವರ್ಷಗಳ ಸುಧೀರ್ಘ ಇತಿಹಾಸವಿದೆ. ಆಲೂರು ವೆಂಕಟರಾಯರಂತಹ ಅನೇಕ ಮಹನೀಯರ ಹೋರಾಟದ ಫಲವಾಗಿ ವಿವಿಧ ಪ್ರಾಂತಗಳಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡಿಗರೆಲ್ಲ ಒಂದಾದರು.1956 ನವೆಂಬರ್ 1 ರಂದು ಏಕೀಕರಣಗೊಂಡ ಕನ್ನಡ ನಾಡಿಗೆ ಮೈಸೂರು ರಾಜ್ಯ ಎಂದು ನಾಮಕರಣ ಮಾಡಲಾಯಿತು. 1973 ನವೆಂಬರ್ 1 ರಂದು ಕರ್ನಾಟಕ ಎಂದು ಮರು ನಾಮಕರಣ ಮಾಡಲಾಯಿತು. ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ 50 ವರ್ಷ ತುಂಬಿದ ಸುವರ್ಣ ಸಂದರ್ಭದಲ್ಲಿ ನಾವಿದ್ದೇವೆ. ಕನ್ನಡ ಸುವರ್ಣ ಸಂಭ್ರಮದಲ್ಲಿರುವ ನಾವು ಕನ್ನಡ ನಾಡು ನುಡಿಯ ಬೆಳವಣಿಗೆಗಾಗಿ ಕಂಕಣಭದ್ಧರಾಗಿ ನಿಲ್ಲೋಣ. ಕನ್ನಡವನ್ನು ಹೃದಯದ ಭಾಷೆಯಾಗಿ ಬೆಳೆಸೋಣ ಎಂದು ಹೇಳಿದರು.ಇನ್ನೋರ್ವ ಅತಿಥಿ ದಾನಪ್ಪಗೌಡಚನಗೊಂಡ ನ್ಯಾಯವಾದಿಗಳು ಮಾತನಾಡಿ, ಕನ್ನಡ ನಾಡು ವೀರರ, ಶೂರರ, ಧೀರರ ನಾಡು. ಶ್ರೀಗಂಧದ ಬೀಡು. ಉದಾತ್ತ ಸಂಸ್ಕೃತಿಯನ್ನು ಹೊಂದಿದ ನಾಡು.…
ಕಾಟಾಚಾರದ ರಾಜ್ಯೋತ್ಸವ ಆಚರಣೆಗೆ ಕನ್ನಡ ಪರ ಹೋರಾಟಗಾರರು ಗರಂ | ಮತ್ತೆ ಆಚರಿಸುವ ಭರವಸೆ ನಿಡಗುಂದಿ: ತಾಲೂಕಿನಲ್ಲಿ ಕನ್ನಡ ಪರ ಹೋರಾಟಗಾರರು ಬುಧವಾರ ಕನ್ನಡ ರಾಜ್ಯೋತ್ಸವ ಪ್ರಯುಕ್ತ ದ್ಯಾಮವ್ವನ ಗುಡಿಯಿಂದ ರಸ್ತೆ ಉದ್ದಕ್ಕೂ ಕಾಲ್ನಡಿಗೆಯ ಮೂಲಕ ಎಲ್ಲಾ ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸಮಸ್ತ ಶಾಲಾ ಶಿಕ್ಷಕ/ಕಿಯರು, ಕನ್ನಡ ಅಭಿಮಾನಿಗಳು ಮೆರವಣಿಗೆ ಮೂಲಕ ಕನ್ನಡ ಶಾಲೆಯ ಆವರಣದಲ್ಲಿ ಹಾಜರಾಗಿದರು.ತಾಲೂಕು ದಂಡಾಧಿಕಾರಿಗಳು ಹಾಗೂ ಪಟ್ಟಣ ಪಂಚಾಯತಿ ಅಧಿಕಾರಿಗಳು ಧ್ವಜಾರೋಹಣ ಮಾಡಿದರು.ಕಾರ್ಯಕ್ರಮ ಪ್ರಾರಂಭವಾಗುತ್ತಿದ್ದಂತೆ ಎಲ್ಲೆಡೆ ಧಿಕ್ಕಾರದ ಕೂಗು ಕೇಳಲಾರಂಭಿಸಿತು. ಕನ್ನಡ ಪರ ಹೋರಾಟಗಾರರು ಪಟ್ಟಣ ಪಂಚಾಯತಿ, ತಾಲೂಕಿನ ದಂಡಾಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು,ಕನ್ನಡದ ಹೋರಾಟಗಾರರ ಧಿಕ್ಕಾರದ ಕೂಗಿಗೆ ಕಾರಣ, ಅಧಿಕಾರಿಗಳು ಕನ್ನಡ ರಾಜ್ಯೋತ್ಸವವನ್ನು ಆಚರಿಸುವುದು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ಹಾಗಿತ್ತು. ಆಚರಣೆ ಬೇಡ, ನಮಗೆ ಅನ್ಯಾಯ ಆಗಿದೆ ಎಂದು ಕನ್ನಡ ಪರ ಹೋರಾಟಗಾರರು ಧಿಕ್ಕಾರ ಕೂಗಿದರು.ಧ್ವಜವನ್ನು ರಸ್ತೆ ಉದ್ದಕ್ಕೂ ಕಟ್ಟಿರುವುದಿಲ್ಲ, ವೇದಿಕೆಯನ್ನು ಸರಿಯಾಗಿ ಸಿದ್ದಪಡಿಸಿಲ್ಲ, ಕನ್ನಡಪರ ಹೋರಾಟಗಾರರನ್ನು ಹಾಗೂ ಕನ್ನಡ ಅಭಿಮಾನಿಗಳ ರಾಜ್ಯೋತ್ಸವವನ್ನು ಬೇಕು-ಬೇಡ ರೀತಿಯಲ್ಲಿ,…
ವಿಜಯಪುರ: ಭಾವೈಕ್ಯತೆಯ ಪ್ರತೀಕವಾಗಿರುವ ಬಾಬಾನಗರ ಪಾಣಿಸಾಹೇಬ ಜಾತ್ರೆ ಎಲ್ಲರಿಗೂ ಮಾದರಿಯಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.ಬುಧವಾರ ತಿಕೋಟಾ ತಾಲೂಕಿನ ಬಾಬಾನಗರದ ಹಜರತ ಬಾಬಾ ಪಾಣಿಸಾಹೇಬ ದರ್ಗಾ ಜಾತ್ರೆಯಲ್ಲಿ ಪಾಲ್ಗೋಂಡು ದೇವರ ಆಶೀರ್ವಾದ ಪಡೆದ ಬಳಿಕ ಸನ್ಮಾನ ಸ್ವೀಕರಿಸಿ ಮಾತನಾಡಿದರು.ಪಾಣಿಸಾಹೇಬರ ಜಾತ್ರೆಗೆ ಭಕ್ತನಾಗಿ ಬಂದಿದ್ದೇನೆ. ಸರ್ವಜನಾಂಗದ ಗ್ರಾಮದೇವತೆ ಇದಾಗಿದೆ. ಎಲ್ಲ ಧರ್ಮ, ಜಾತಿಯವರು ಭಕ್ತಿ, ಶ್ರದ್ಧೆಯಿಂದ ನಡೆದುಕೊಳ್ಳುತ್ತಾರೆ. ಇದು ವಿಶ್ವಕ್ಕೆ ಮಾದರಿಯಾಗಿದೆ. ಇಲ್ಲಿ ಹಿಂದೂಗಳೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ನಡೆದುಕೊಳ್ಳುವುದು ಕೋಮು ಸಾಮರಸ್ಯಕ್ಕೆ ಸಾಕ್ಷಿಯಾಗಿದೆ. ಪಾಣಿಸಾಹೇಬ ದೇವರು ನಮಗೆ ಜನಸೇವೆಗೆ ನಮಗೆ ಅವಕಾಶ ನೀಡಿದ್ದು, ಮುಂಬರುವ ದಿನಗಳಲ್ಲಿ ಎಲ್ಲ ಕಡೆ ಸುಖ, ಶಾಂತಿ, ಸಮೃದ್ಧಿ ನೀಡಲಿ. ಮತದಾರರು ಸುಖದಿಂದ ಇದ್ದರೆ ನಾವು ನೆಮದಿಯಿಂದ ಇದ್ದಂತೆ ಎಂದು ಹೇಳಿದರು.ಗ್ರಾಮದ ಮುಖಂಡ ಯಲ್ಲಾಲಿಂಗ ಹೊನವಾಡ ಮಾತನಾಡಿ, ಸಚಿವ ಎಂ. ಬಿ. ಪಾಟೀಲ ಅವರು ಕೇವಲ ನೀರಾವರಿಯನ್ನಷ್ಟೇ ಮಾಡಿಲ್ಲ. ಜನರ ಧಾರ್ಮಿಕ…
ಚಡಚಣ: ಪಟ್ಟಣದ ಎಂಇಎಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಬುಧವಾರ ಕನ್ನಡ ರಾಜ್ಯೋತ್ಸವ ದಿನವನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ಬೋಧಕ,ಬೋಧಕೇತರ ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವ ವಿಜಯಪುರ: ಕನ್ನಡ ಕೇವಲ ಭಾಷೆಯಲ್ಲ ದೊಡ್ಡ ಶಕ್ತಿ. ಕನ್ನಡ ಭಾಷೆ ವಿಶ್ವದ ಮೂರನೇ ಅತ್ಯಂತ ಹಳೆಯ ಭಾಷೆ. ವಿಶ್ವದ ಸಾವಿರಾರು ಭಾಷೆಗಳಲ್ಲಿ ಓದಿದಂತೆ ಬರೆಯುವ, ಬರೆದಂತೆ ಓದುವ ಹಾಗೂ ವೈಜ್ಞಾನಿಕವಾಗಿ ಅಕ್ಷರಗಳನ್ನು ವಿಂಗಡಿಸಿದ ವಿಶ್ವದ ಏಕೈಕ ಭಾಷೆ ಕನ್ನಡವಾಗಿದೆ ಎಂದು ಹಾಸ್ಯ ಭಾಷಣಕಾರರು ಹಾಗೂ ಎಸ್ .ಬಿ ವಿಸ್ಡಮ್ ಕರಿಯರ್ ಅಕಾಡೆಮಿಯ ಕನ್ನಡ ಉಪನ್ಯಾಸಕ ಭಾಗೇಶ ಮುರಡಿ ಮುಖ್ಯ ಅತಿಥಿಯಾಗಿ ಮಾತನಾಡಿದರು.ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯಲ್ಲಿ ಕನ್ನಡ ವಿಭಾಗ ಮತ್ತು ಐಕ್ಯೂಎಸಿ ಅಡಿಯಲ್ಲಿ ಜರುಗಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನಡ ಬೆಳವಣಿಗೆಗೆ ನಮ್ಮ ಪೂರ್ವಜರ ಕೂಡುಗೆ ಅನನ್ಯವಾಗಿದೆ. ಇಂದು ಕನ್ನಡ ಭಾಷೆ ಉಳಿದಿರುವುದು ವಿದ್ಯಾವಂತರಿಂದಲ್ಲ, ಸಾಮಾನ್ಯ ಗ್ರಾಮೀಣ ಪ್ರದೇಶದ ಜನರಿಂದ ಆದ್ದರಿಂದ ನಾವು ಕನ್ನಡವನ್ನು ಎಲ್ಲ ವಲಯಗಳಲ್ಲಿ ಹೆಚ್ಚು ಹೆಚ್ಚು ಬಳಸುವ ಮೂಲಕ ಉಳಿಸಬೇಕು. ಅಂದಾಗ ಕರ್ನಾಟಕ ಏಕೀಕರಣಕ್ಕೆ ಶ್ರಮಿಸಿದ…
ಆಲಮಟ್ಟಿ : ಆಂಗ್ಲ ಮಾದ್ಯಮದ ಶಾಲೆ ಇದು. ಆದರೂ ಕನ್ನಡ ಮೋಹ ಉಮ್ಮಳಿಸಿ ಚಿತ್ತಾರದ ರೂಪದಲ್ಲಿ ಪರಿಮಳಿಸಿತು. ಇಲ್ಲಿ ಕನ್ನಡ ರಾಜ್ಯೋತ್ಸವದ ಕಹಳೆ ಕಂಪಾಗಿ, ಇಂಪಾಗಿ, ತಂಪಾಗಿ ಮೂಡಿಬಂತು. ಇಲ್ಲಿನ ಎಂ.ಎಚ್.ಎಂ.ಆಂಗ್ಲ ಮಾದ್ಯಮ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಗುರುಮಾತೆಯರು ಹಾಗೂ ಮಕ್ಕಳು ಕನ್ನಡ ಬಾವುಟ ಬಣ್ಣದ ಉಡುಪುಗಳನ್ನು ತೊಟ್ಟು ಕನ್ನಡ ಸಂಭ್ರಮದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಕನ್ನಡ ಬೆಳಗಲಿ ಎಂಬ ಭಾವದಿಂದ ದೀಪಗಳನ್ನು ಹಚ್ಚಿ ಪ್ರಾಥಿ೯ಸಿದ ನೋಟ ಗಮನ ಸೆಳೆಯಿತು. ಇನ್ನೊಂದೆಡೆ ಹಳಕಟ್ಟಿ ಪ್ರೌಢಶಾಲೆಯ ಮುಖ್ಯ ಗುರು ಜಿ.ಎಂ.ಕೋಟ್ಯಾಳ ಅವರನ್ನು ಶಾಲಾವರಣದಲ್ಲಿ ಚಿಣ್ಣರು ಭೇಟಿ ಮಾಡಿ ಕನ್ನಡ ರಾಜ್ಯೋತ್ಸವದ ಸವಿ ಶುಭಾಶಯ ಹಂಚಿಕೊಂಡು ಖುಷಿಪಟ್ಟಿದ್ದು ವಿಶೇಷವಾಗಿತ್ತು.
