ಚಿಮ್ಮಡ: ಫೆ.೨೪ ರಂದು ನಡೆಯಲಿರುವ ಗ್ರಾಮದ ದೇವಾಂಗ ಸಮಾಜದ ಆರಾದ್ಯ ದೇವತೆ ಶ್ರೀ ಬನಶಂಕರಿದೇವಿ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವ ಕಾರ್ಯಕ್ರಮವನ್ನು ಅಧ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಯಿತು.
ಸ್ಥಳೀಯ ಬನಶಂಕರಿ ದೇವಸ್ಥಾನದಲ್ಲಿ ಸೋಮವಾರ ನಡೆದ ಗ್ರಾಮದ ಸರ್ವ ಸಮಾಜ ಬಾಂಧವರ ಸಭೆಯಲ್ಲಿ ದೇವಸ್ಥಾನಕ್ಕೆ ಬರುವ ಭಕ್ತಾಧಿಗಳಿಗೆ ಈ ಬಾರಿ ಮುಂಬೈ ಮಾದೇಲಿ ಹಾಗೂ ಕಿಚಡಿಯನ್ನು ಮಹಾಪ್ರಸಾದರೂಪದಲ್ಲಿ ವಿತರಿಸುವ ಮೂಲಕ ಜಾತ್ರೆಯನ್ನು ಅಧ್ಧೂರಿಯಾಗಿ ಆಚರಿಸಲಾಗುವುದೆಂದು ಸಮಾಜದ ಪ್ರಮುಖರಾದ ಅಶೋಕ ಧಡೂತಿ ಸಭೆಯಲ್ಲಿ ತಿಳಿಸಿದರು.
ಸಭೆಯ ಅಧ್ಯಕ್ಷತೆಯನ್ನು ಪ್ರಮುಖರಾದ ಚಂದ್ರಕಾಂತ ಜಾಡಗೌಡರ ವಹಿಸಿದ್ದರು. ಪ್ರಮುಖರಾದ ರಾಮಣ್ಣ ಮುಗಳಖೋಡ, ಬಾಳಪ್ಪಾ ಹಳಿಂಗಳಿ, ಪುಂಡಲಿಕಪ್ಪಾ ಪೂಜಾರಿ, ಅಣ್ಣಪ್ಪಗೌಡ ಪಾಟೀಲ, ಪರಪ್ಪ ಪಾಲಭಾವಿ, ಬೀರಪ್ಪ ಹಳೆಮನಿ, ಬಸವರಾಜ ಕುಂಚನೂರ, ಪರಪ್ಪಾ ಜಾಡಗೌಡರ ಸೇರಿದಂತೆ ಹಲವಾರು ಜನ ಪ್ರಮುಖರು ಆಗಮಿಸಿದ್ದರು.
ಜಾತ್ರಾ ಮಹೋತ್ಸವದಲ್ಲಿ ವಿವಿಧ ಮನರಂಜನಾ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗುತಿದ್ದು ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀದೇವಿಯ ಕ್ರಪೆಗೆ ಪಾತ್ರಾಗಬೇಕೆಂದು ಬನಶಂಕರಿದೇವಿ ಸೇವಾ ಸಮೀತಿಯ ಅಧ್ಯಕ್ಷ ಮನೋಜ ಹಟ್ಟಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment