ಕೊಲ್ಹಾರ: ಕೃಷ್ಣಾ ನದಿಯ ತಟದಲ್ಲಿರುವ ಕೊಲ್ಹಾರ ಪಟ್ಟಣದ ನೇಕಾರ ಬಡಾವಣೆಯಲ್ಲಿ ಬರುವ ಗ್ರಾಮದ ಆರಾದ್ಯ ದೇವತೆ ಬನಶಂಕರಿ ದೇವಿಯ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳು ದಿನಾಂಕ ೧೫ ಗುರುವಾರ, ೧೬ ಶುಕ್ರವಾರ, ೧೭ ಶನಿವಾರ ಮೂರು ದಿನಗಳ ಕಾಲ ಜರುಗುವದು ಎಂದು ಬನಶಂಕರಿ ದೇವಸ್ಥಾನ ಜೀರ್ಣೋದ್ದಾರ ಸಮೀತಿಯವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ದಿನಾಂಕ ೧೫ ಗುರುವಾರ ದಿವಸ ಮುಂಜಾನೆ ೧೦.೩೦ ಘಂಟೆಗೆ ಶಕ್ತಿಪೀಠ ಬದಾಮಿಯ ಬನಶಂಕರಿ ದೇವಿಯ ಅರ್ಚಕರಾದ ವೇದ ಬ್ರಹ್ಮ ಚಿದಂಬರ ಭಟ್ ಇವರಿಂದ ಪಂಚಲೋಹದ ಬನಶಂಕರಿ ದೇವಿಯ ಮೂರ್ತಿಗೆ ಅಷ್ಟೋತ್ತರ ಕುಂಕುಮಾರ್ಚನೆ ಕಾರ್ಯಕ್ರಮ ಪಟ್ಟಣದ ಸರ್ವ ಜನಾಂಗದವರ ಸಮ್ಮುಖದಲ್ಲಿ ನೆರವೇರುವದು. ಸಾಯಂಕಾಲ ೬ ಘಂಟೆಗೆ ಜಾಣರ ಜಗಲಿ ಕುಟುಂಬ ನಿರ್ವಹಣೆಯಲ್ಲಿ ಹೆಣ್ಣು ಮತ್ತು ಗಂಡಿನ ಪಾತ್ರ ಕುರಿತು ಎಂಬ ನಗೆ ಹಬ್ಬ ಕಾರ್ಯಕ್ರಮ ಜರುಗುವದು.
ದಿನಾಂಕ ೧೬ ಶುಕ್ರವಾರ ದಿವಸ ರಥ ಸಪ್ತಮಿಯ ಪವಿತ್ರ ದಿನದಂದು ದೇವಸ್ಥಾನದಲ್ಲಿರುವ ದೇವಿಯ ಬೆಳ್ಳಿ ಮೂರ್ತಿ ಹಾಗೂ ಶಿಲಾ ಮೂರ್ತಿಗೆ ಕೊಲ್ಹಾರ ಹಾಗೂ ಬೀದರ ಜಿಲ್ಲೆ ಬೇಲೂರಿನ ಹಿರೇಮಠದ ಪ್ರಭುಕುಮಾರ ಶಿವಾಚಾರ್ಯ, ಗೊಳಸಂಗಿ ದೇವಾಂಗ ಮಠದ ವೇದಮೂರ್ತಿ ರಾಘವೇಂದ್ರ ಮಹಾಸ್ವಾಮಿಗಳು ಮತ್ತು ದೇವಿಯ ಅರ್ಚಕರಾದ ಈರಣ್ಣ ಮೇಲಗಿರಿ ಇವರಿಂದ ರುದ್ರಾಭಿಷೇಕ, ಹೋಮ, ಹವನ ಕಾರ್ಯಕ್ರಮಗಳು ನಡೆಯುವವು.
ಅದೇ ದಿವಸ ಬೆಳಿಗ್ಗೆ ೧೦.೩೦ಕ್ಕೆ ದೇವಿಯ ಬೆಳ್ಳಿ ಮೂರ್ತಿಯ ಪಲ್ಲಕ್ಕಿ ಉತ್ಸವ ಕಳಸದ ಮೆರವಣಿಗೆ ಮುತ್ತೆöÊದೆಯರ ಆರತಿ, ಕುಂಭ ಮೇಳದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯ ಮೇಳಗಳೊಂದಿಗೆ ಸಂಚರಸಿ ಮರಳಿ ದೇವಸ್ಥಾನಕ್ಕೆ ಆಗಮಿಸುವದು. ತದನಂತರ ಅನ್ನ ಪ್ರಸಾದದ ವ್ಯವಸ್ಥೆ ಇರುವದು. ರಾತ್ರಿ ೧೦.೩೦ ಘಂಟೆಗೆ ಶ್ರೀ ಜೈಮಾತೃಭೂಮಿ ಕಲಾಸಂಘ ಲಕ್ಷೆö್ಮÃಶ್ವರ ಇವರಿಂದ ಕರುಣೆಯಿಲ್ಲದ ಕರುಳು ಅರ್ಥಾರ್ತ ಫಲಿಸದ ಪ್ರೀತಿ ಎಂಬ ಸುಂದರ ಸಾಮಾಜಿಕ ಹಾಸ್ಯ ನಾಟಕ ಇರುವದು.
ದಿನಾಂಕ ೧೭ ಶನಿವಾರ ದಿವಸ ರಾತ್ರಿ ೧೦.೩೦ ಘಂಟೆಗೆ ಶ್ರೀ ಶಿರಡಿ ಸಾಯಾಬಾಬಾ ನಾಟ್ಯಸಂಘ ನಿರ್ಣಾವಾಡಿ ಬೀದರ ಜಿಲ್ಲೆ ಇವರಿಂದ ರತ್ನ ಮಾಂಗಲ್ಯ ಎಂಬ ಸಾಮಾಜಿಕ ನಾಟಕ ಇರುವದು. ಸರ್ವ ಭಕ್ತಾಧಿಗಳು ದೇವಿಯ ಜಾತ್ರೆಯಲ್ಲಿ ಪಾಲ್ಗೊಳ್ಳಬೇಕೆಂದು ವಿನಂತಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment