ದೇವರಹಿಪ್ಪರಗಿ: ವಿದ್ಯುತ್ ದೀಪಗಳನ್ನೋಳಗೊಂಡ ದ್ವೀಪಥ ರಸ್ತೆ, ಚರಂಡಿ, ಪುಟ್‌ಪಾತ ಕಾಮಗಾರಿಗಳನ್ನು ಯಾವುದೇ ಒತ್ತಡಗಳಿಗೆ ಒಳಗಾಗದೇ ಗುಣಮಟ್ಟದಿಂದ ನಿರ್ವಹಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪಟ್ಟಣದಲ್ಲಿ ಬುಧವಾರ ಈ ಕುರಿತು ಪಟ್ಟಣ ಪಂಚಾಯಿತಿ ಸದಸ್ಯ ರಮೇಶ ಮಸಬಿನಾಳ, ತಾಲ್ಲೂಕು ಜಂಗಮಾಭಿವೃದ್ಧಿ ಸಂಘದ ಅಧ್ಯಕ್ಷ ಸೋಮಶೇಖರ ಹಿರೇಮಠ ಹಾಗೂ ಪ್ರಗತಿಪರ ವೇದಿಕೆಯ ನಜೀರ್ ಕಲಕೇರಿ ಮಾತನಾಡಿ, ಅಂಬೇಡ್ಕರ್ ವೃತ್ತದಿಂದ ೭೭೦ ಮೋಟರ್ ದೂರದ ಚನ್ನಮ್ಮ ವೃತ್ತದವರೆಗೆ ೨೦೨೨-೨೩ನೇ ಸಾಲಿನಲ್ಲಿ ರಸ್ತೆ ಮಧ್ಯದಲ್ಲಿ ಬೀದಿದೀಪಗಳನ್ನು ಒಳಗೊಂಡ ೩೦ ಮೀಟರ್ ಅಗಲದ ರಸ್ತೆಗೆ ಅನುದಾನ ಬಿಡುಗಡೆಗೊಂಡು ಭೂಮಿಪೂಜೆ ನೆರವೇರಿಸಲಾಗಿದೆ. ಈಗ ರಸ್ತೆ ಕಾಮಗಾರಿಗೆ ಗುತ್ತಿಗೆದಾರರು ಚಾಲನೆ ನೀಡಿದ್ದಾರೆ.
ರಸ್ತೆ ನಿರ್ಮಾಣಕ್ಕೆ ಸಹಕರಿಸಿ ಎಡಬಲಗಳಲ್ಲಿ ಇರುವ ವ್ಯಾಪಾರಸ್ಥರು ತಮ್ಮ ಅಂಗಡಿ, ಮಳಿಗೆಗಳನ್ನು ಬೇರೆಡೆ ಸ್ಥಳಾಂತರಿಸಿ ಸಹಕಾರ ನೀಡಿದ್ದಾರೆ. ಲೋಕೋಪಯೋಗಿ ಇಂಜನೀಯರ್ ಹಾಗೂ ಗುತ್ತಿಗೆದಾರರು ಸಹ ನಿರ್ಮಾಣದ ಹಂತದಲ್ಲಿ ಎಲ್ಲರಿಗೂ ಅನ್ವಯವಾಗುವಂತೆ ಮಧ್ಯದಿಂದ ಎಡಬಲಗಳಲ್ಲಿ ೧೫ ಮೀಟರ್ ಅಳತೆಮಾಡಿ ಯಾವುದೇ ಕಚೇರಿ, ಕಟ್ಟಡಗಳಿದ್ದರೂ ಏಕರೂಪತೆಯಿಂದ ಅಗಲೀಕರಣಗೊಳಿಸಬೇಕು. ಈ ಸಮಯದಲ್ಲಿ ಯಾವುದೇ ನಾಯಕರ ಒತ್ತಡಗಳಿಗೆ ಒಳಗಾಗದೇ, ತಾರತಮ್ಯ ನೀತಿ ಅನುಸರಿಸದೇ, ಟೆಂಡರ್ ಹಾಗೂ ಅಂದಾಜು ಪ್ರತಿಯಲ್ಲಿ ಇರುವಂತೆ ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು. ಈಗಾಗಲೇ ಗುತ್ತಿಗೆದಾರರು ಕಡ್ಲೇವಾಡದವರೆಗೆ ಗುಣಮಟ್ಟದ ರಸ್ತೆ ನಿರ್ಮಿಸಿದ್ದಾರೆ. ಇಲ್ಲಿಯೂ ಸಹ ಅದೇ ಗುಣಮಟ್ಟದ ದ್ವೀಪಥ ರಸ್ತೆ, ಬೀದಿದೀಪ, ಚರಂಡಿ, ಪುಟ್‌ಪಾತ ನಿರ್ಮಿಸಬೇಕು ಎಂದು ಆಗ್ರಹಿಸಿ, ಕಾಮಗಾರಿಯ ಎಲ್ಲ ಕಾರ್ಯಗಳಿಗೆ ಸಾರ್ವಜನಿಕರ ಸಹಕಾರವಿದೆ ಎಂದರು.
ಮಂಜುನಾಥ ಮಲ್ಲಿಕಾರ್ಜುನಮಠ, ಮನೋಹರ ಗಂಜಾಳ, ನಾಗೇಂದ್ರ ಇಂಡಿ, ವಿನೋದ ಚವ್ಹಾಣ ಸೇರಿದಂತೆ ವ್ಯಾಪಾರಸ್ಥರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment