ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ವಿಜಯಪುರ ಜಿಲ್ಲಾ ಘಟಕ
ವಿಜಯಪುರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2024-25ನೇ ಸಾಲಿನ ಸದಸ್ಯತ್ವ ನವೀಕರಣ ಮತ್ತು ಹೊಸ ಸದಸ್ಯತ್ವಕ್ಕೆ ಅರ್ಹ ಪತ್ರಕರ್ತರಿಂದ ಅರ್ಜಿ ಆಹ್ವಾನಿಸಿದೆ.
ರಾಜ್ಯ ಘಟಕದ ಮಾರ್ಗಸೂಚಿಯಂತೆ ಸದಸ್ಯತ್ವ ನವೀಕರಣ ಮತ್ತು ಹೊಸ ಸದಸ್ಯತ್ವ ನೀಡಲಾಗುವುದು.
ನಿಯಮಿತವಾಗಿ ಪತ್ರಿಕೆಗಳನ್ನು ಹೊರತರುವ ಪತ್ರಕರ್ತರು ಸದಸ್ಯತ್ವ ನವೀಕರಣಕ್ಕೆ ಹಾಗೂ ಹೊಸ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಬೇಕು. ಪತ್ರಿಕೆಗಳನ್ನು ಹೊರತರದವರಿಗೆ ಸದಸ್ಯತ್ವ ನೀಡಲಾಗುವುದಿಲ್ಲ.
ಈ ಮಾನದಂಡಗಳೇ ತಾಲೂಕು ಘಟಕಗಳಿಗೆ ಅನ್ವಯವಾಗುತ್ತವೆ. ಹಾಗಾಗಿ ಆಯಾ ತಾಲೂಕು ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಈ ಮಾನದಂಡಗಳಡಿಯೇ ಸದಸ್ಯತ್ವ ನವೀಕರಣ ಹಾಗೂ ಹೊಸ ಸದಸ್ಯತ್ವಕ್ಕೆ ಅರ್ಜಿ ಸ್ವೀಕರಿಸಬೇಕು.
ಅರ್ಜಿ ಶುಲ್ಕ 10 ರೂ. ಜೊತೆ 500 ರೂ. ಸದಸ್ಯತ್ವ ಶುಲ್ಕ ಪಾವತಿಸಬೇಕು. ಜೊತೆಗೆ ತಮ್ಮ ಪತ್ರಿಕೆಯ ಸಂಪಾದಕರಿಂದ ಪಡೆದ ದೃಢೀಕರಣ ಪತ್ರ ಅರ್ಜಿಗೆ ಕಡ್ಡಾಯವಾಗಿ ಲಗತ್ತಿಸಬೇಕು.
ನವೀಕರಣ ಮಾಡಿಸುವವರು ಸಂಘದ ಹಳೆಯ ಕಾರ್ಡ್ ಝರಾಕ್ಸ್ ಪ್ರತಿ ಮತ್ತು ಆಧಾರ್ ಕಾರ್ಡ್ ಝರಾಕ್ಸ್ ಲಗತ್ತಿಸಬೇಕು. ಜೊತೆಗೆ 2 ಭಾವಚಿತ್ರ ನೀಡಬೇಕು.
ಯಾರ ನೇಮಕಾತಿ ಬಗ್ಗೆ ಅನುಮಾನವಿದ್ದರೆ ಅವರ ನೇಮಕಾತಿ ಪ್ರತಿ ಕೇಳಿದಾಗ ವರದಿಗಾರರು ಕೊಡಬೇಕು. ಒಂದು ವೇಳೆ ನೀಡದಿದ್ದಲ್ಲಿ ಸಂಘದ ಸದಸ್ಯತ್ವ ಸಿಗುವುದಿಲ್ಲ.
ನವೀಕರಣ ಹಾಗೂ ಹೊಸ ಸದಸ್ಯತ್ವಕ್ಕೆ ಫೆ. 24 (24-02-2024) ಕೊನೆ ದಿನ. ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಅರ್ಜಿ ನಮೂನೆಗಳನ್ನು ಹೊಸ ಪತ್ರಿಕಾ ಭವನದಲ್ಲಿ ಪಡೆದುಕೊಂಡು ನಿಗದಿತ ದಿನಾಂಕದೊಳಗೆ ಸಲ್ಲಿಸಬೇಕು.
ಜಿಲ್ಲಾ ಕೇಂದ್ರದಲ್ಲಿ ಸದಸ್ಯತ್ವ ನವೀಕರಣ ಹಾಗೂ ಹೊಸ ಸದಸ್ಯತ್ವಕ್ಕೆ ಸಂಘದ ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ ಮೊ : 9448210277, ಉಪಾಧ್ಯಕ್ಷ ಇಂದುಶೇಖರ ಮಣೂರ ಮೊ : 9008888340, ಕಾರ್ಯದರ್ಶಿ ಅವಿನಾಶ ಬಿದರಿ ಮೊ : 9513139595, ಖಜಾಂಚಿ ರಾಹುಲ್ ಆಪ್ಟೆ ಮೊ : 7019484700 ಹಾಗೂ ರಾಜ್ಯ ಸಮಿತಿ ಸದಸ್ಯ ಕೆ.ಕೆ. ಕುಲಕರ್ಣಿ ಮೊ: 9448210276 ಸಂಪರ್ಕಿಸಬಹುದಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ ತಿಳಿಸಿದ್ದಾರೆ.
ಹೆಲ್ತ್ ಕಾರ್ಡ್ ಪಡೆಯಿರಿ ಹೆಲ್ತ್ ಕಾರ್ಡ್ ವಿತರಣೆ ನಡೆದಿದೆ. ಯಾರೂ ಹೆಲ್ತ್ ಕಾರ್ಡ್ ಪಡೆದಿಲ್ಲವೋ ಅವರು ಇದೇ ವೇಳೆ ಪಡೆದುಕೊಳ್ಳಬಹುದಾಗಿದೆ