Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ: ಬಬಲೇಶ್ವರ ತಾಲೂಕಿನ ನಿಡೋಣಿ ಗ್ರಾಮ ಪಂಚಾಯಿತಿಗೆ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಅವರು ಗುರುವಾರ ಭೇಟಿ ನೀಡಿ, ಗ್ರಾಪಂ ವ್ಯಾಪ್ತಿಯಲ್ಲಿನ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿದರು.ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನಿಡೋಣಿ ಗ್ರಾಮ ಪಂಚಾಯತಿ ಆವರಣದಲ್ಲಿ ನಿರ್ಮಾಣಗೊಂಡಿರುವ ನಕ್ಷತ್ರ ಗಾರ್ಡನ್ ಹಾಗೂ ಫೇವರ್ಸ ವೀಕ್ಷಿಸಿದರು. ಇ-ಸ್ವತ್ತು ಹಾಗೂ ತೆರಿಗೆ ಸಂಗ್ರಹಣೆಯ ಪಿ.ಓ.ಎಸ್ ಯಂತ್ರ ನಿರ್ವಹಣೆ ಕುರಿತು ಸಮಗ್ರ ಮಾಹಿತಿ ಪಡೆದುಕೊಂಡರು. ಕಣಮುಚನಾಳ ರಸ್ತೆಯಲ್ಲಿ ನಿರ್ಮಾಣಗೊಂಡಿರುವ ಅಮೃತ ಸರೋವರ ಕೆರೆಯ ವಿನ್ಯಾಸ, ಒಳಹರಿವು-ಹೊರಹರಿವು, ಕಲ್ಲು ಜೋಡಣೆ ವ್ಯವಸ್ಥೆ ವೀಕ್ಷಿಸಿದರು. ಅಮೃತ ಸರೋವರ ನಿರ್ಮಾಣದಿಂದ ಈ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ಕಳೆದ ನಾಲ್ಕು ವರ್ಷಗಳಿಂದ ಹೆಚ್ಚಾಗಿದೆ ಎಂದು ಮಾಹಿತಿ ನೀಡಲಾಯಿತು. ಜಲ ಸಂರಕ್ಷಣೆಯ ಕುರಿತು ಈ ತರಹದ ಯೋಜನೆಗಳು ಮಾದರಿ ಎನಿಸಿದೆ ಎಂದು ಮೆಚ್ಚುಗೆ ಸೂಚಿಸಿದರು.ಗ್ರಾಮ ಪಂಚಾಯತಿ ವ್ಯಾಪ್ತಿಯ ಸರ್ಕಾರಿ ಉರ್ದು ಶಾಲೆಗೆ ಭೇಟಿ ನೀಡಿ, ಬಿಸಿಯೂಟದ ಗುಣಮಟ್ಟ, ಮೂಲಭೂತ ಸೌಕರ್ಯಗಳ ಮಾಹಿತಿ ಪಡೆದುಕೊಂಡರು. ಶಾಲೆಗೆ…
ವಿವಿಧ ಸ್ಪರ್ಧಾತ್ಮಕ ತರಬೇತಿ ಪ್ರವೇಶ ಪರೀಕ್ಷೆವ್ಯವಸ್ಥಿತವಾಗಿ ಜರುಗಿಸಲು ರಾಜಶೇಖರ ಡಂಬಳ ಸೂಚನೆ ವಿಜಯಪುರ: ಕರ್ನಾಟಕ ಶಿಕ್ಷಣ ಸಂಸ್ಥೆಗಳ ಸಂಘದಡಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ ೬ನೇ ತರಗತಿಗೆ ಪ್ರವೇಶಾತಿಗಾಗಿ ಪ್ರವೇಶ ಪರೀಕ್ಷೆ ಹಾಗೂ ಸಮಾಜ ಕಲ್ಯಾಣ,ಹಿಂದುಳಿದ ವರ್ಗಗಳ ಇಲಾಖೆಯಿಂದ ಯುಪಿಎಸ್ ಸಿ,ಕೆ.ಎಎಸ್,ಗ್ರೂಪ್ ಸಿ,ಎಸ್ ಎಸ್ ಸಿ,ಬ್ಯಾಂಕಿಂಗ್,ಆರ್ ಆರ್ ಬಿ ಪರೀಕ್ಷೆಗಳಿಗೆ ತರಬೇತಿಗಾಗಿ ಪ್ರವೇಶ ಪರೀಕ್ಷೆಗಾಗಿ ಫೆ.೧೮ ರಂದು ವಿಜಯಪುರ ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ಪರೀಕ್ಷೆಗಳು ಜರುಗಲಿದ್ದು, ಪರೀಕ್ಷೆಗಳು ವ್ಯವಸ್ಥಿತವಾಗಿ ಜರುಗುವಂತೆ ನೋಡಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ರಾಜಶೇಖರ ಡಂಬಳ ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಪೂರ್ವಸಿದ್ಧತಾ ಸಭೆಯಲ್ಲಿ ಅವರು, ಫೆ.೧೮ ರಂದು ೬ನೇ ತರಗತಿಗೆ ಪ್ರವೇಶ ಪರೀಕ್ಷೆಯನ್ನು ಜಿಲ್ಲೆಯ ಹತ್ತು ತಾಲೂಕಿನ ೩೯ ಪರೀಕ್ಷಾ ಕೇಂದ್ರಗಳಲ್ಲಿ ಬೆಳಿಗ್ಗೆ ೧೧ರಿಂದ ಮಧ್ಯಾಹ್ನ ೦೧ರವರೆಗೆ ಪರೀಕ್ಷೆ ನಡೆಯಲಿದ್ದು ಒಟ್ಟು ೧೪,೦೪೮ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ.ಸಮಾಜ ಕಲ್ಯಾಣ,ಹಿಂದುಳಿದ ವರ್ಗಗಳ ಇಲಾಖೆಯಿಂದ ಯುಪಿಎಸ್ಸಿ,ಕೆ.ಎಎಸ್,ಗ್ರೂಪ್ ಸಿ,ಎಸ್ ಎಸ್ಸಿ,ಬ್ಯಾಂಕಿಂಗ್,ಆರ್ ಆರ್ ಬಿ ಪರೀಕ್ಷೆಗಳಿಗೆ ತರಬೇತಿಗಾಗಿ…
ವಿಜಯಪುರ: ವಿಜಯಪುರ ೧೧೦/೧೧ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕೆಪಿಸಿಎಲ್ ವತಿಯಿಂದ ೨೧೦ ಎಂ.ವಿ.ಎ. ಶಕ್ತಿ ಪರಿವರ್ತಕ ಬದಲು ೨೨೦ ಎಂ.ವಿ.ಎ. ಶಕ್ತಿ ಪರಿವರ್ತಕ ಅಳವಡಿಸುವ ಕಾಮಗಾರಿ ಫೆ.೧೮ರಂದು ಕೈಗೊಳ್ಳುವುದರಿಂದ ಅಂದು ಬೆಳಿಗ್ಗೆ ೮ ಗಂಟೆಯಿಂದ ಮಧ್ಯಾಹ್ನ ೨ ಗಂಟೆಯವರೆಗೆ ಸದರಿ ವಿದ್ಯುತ್ ಕೇಂದ್ರದಿಂದ ವಿತರಿಸಲ್ಪಡುವ ೧೧ಕೆವ್ಹಿ ಬಡಿಕಮಾನ, ಮಿನಾಕ್ಷಿ ಚೌಕ ಹಾಗೂ ಪವರ್ ಹೌಸ್, ಹೊರಡುವ ೧೧ ಕೆವ್ಹಿ ಫೀಡರ್‌ಗಳ ಮೇಲೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ವಿಜಯಪುರ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಇಂಡಿ: ಮಾನವ ನಿರ್ಮಿತ ಜೇನುಗುಡಗಳಲ್ಲಿ ಜೇನು ನೊಣಗಳ ಸಮೂಹಗಳನ್ನು ಅಥವಾ ಜೇನು ನೊಣಗಳ ಕುಟುಂಬಗಳನ್ನು ಪೋಷಣೆ ಕಡಿಮೆ ಖರ್ಚಿನಲ್ಲಿ ಮಾಡಿ ಹೆಚ್ಚು ಲಾಭ ಪಡೆಯಬಹುದಾಗಿದೆ ಎಂದು ರಾಷ್ಟ್ರೀಯ ಉತ್ತಮ ಜೇನು ಕೃಷಿ ರೈತ ಪ್ರಶಸ್ತಿ ವಿಜೇತ ಮಧುಕೇಶ್ವರ ಹೆಗಡೆ ಹೇಳಿದರು.ಪಟ್ಟಣದ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಜಯಪುರ ಜಿಲ್ಲಾ ಮಟ್ಟದ ಜೇನು ಕೃಷಿಯ ಸಾಧ್ಯತೆಗಳು ಮತ್ತು ಅವಕಾಶಗಳು ಒಂದು ದಿನದ ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ಮಾತನಾಡುತ್ತಿದ್ದರು.ಇಂದು ನಾವು ಜೇನು ಬೆಳೆಸಿ ಪರಿಸರ ಉಳಿಸಬೇಕಾಗಿದೆ. ಮನೆಯಲ್ಲಿ ಹೆಣ್ಣು ಮಾತೆ, ಕೊಟ್ಟಿಗೆಯಲ್ಲಿ ಗೊ ಮಾತೆ ಮತ್ತು ಪರಿಸರದಲ್ಲಿ ಮಧು ಮಾತೆ ಇದ್ದ ಹಾಗೆ, ಪ್ರಪಂಚದಲ್ಲಿ ಜೇನುಹುಳ ಇಲ್ಲದಿದ್ದರೆ ಮನುಷ್ಯಕುಲದ ಅಂತ್ಯವಾಗಬಹುದು ಎಂದರು.ಜೇನು ನೊಣಗಳು ಬೇರೆ ಬೇರೆ ಪ್ರದೇಶಕ್ಕೆ ಹೋಗಿ ಬೇರೆ ಬೇರೆ ಹೂವಿನ ಮಕರಂದ ಹಿರಿ ಜೇನುತುಪ್ಪ ತಯ್ಯಾರು ಮಾಡುತ್ತಿದ್ದು ಅದು ನಮ್ಮ ಅನೇಕ ರೋಗ ಹೋಗಲು ಕಾರಣ ವಾಗುತ್ತದೆ ಎಂದು. ಹೇಳಿದರು.ಶಿರಶಿಯ ಕೆವಿಕೆ ಮುಖ್ಯಸ್ಥೆ ರೂಪಾ ಪಾಟೀಲ್ ಜೇನು ನೊಣಗಳ ಪ್ರಬೇಧಗಳು,ಜೇನಿನ ಕಾರ್ಯವೈಖರಿ, ಜೀವನ…
ಕೊಲೆ ಪ್ರಕರಣದಲ್ಲಿ ನ್ಯಾಯವಾದಿ ಹೆಸರು | ನ್ಯಾಯಾಲಯದಿಂದ ಪೊಲೀಸ್ ಅಧೀಕ್ಷಕರ ಮೇಲೆ ಪ್ರಕರಣ ದಾಖಲು! ವಿಜಯಪುರ: ವಿಜಯಪುರದಲ್ಲಿ ಹಿಂದೆ ನಡೆದ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ದುರುದ್ದೇಶಪೂರ್ವಕವಾಗಿ ನ್ಯಾಯವಾದಿ ಸೈಯ್ಯದ ಆಸೀಫುಲ್ಲಾ ಖಾದ್ರಿ ಹೆಸರು ಸೇರ್ಪಡೆಗೊಳಿಸಿ ಬೇಕಾಯ್ದೆ ಬಂಧನ ಮಾಡಿ, ಮಾನವ ಹಕ್ಕುಗಳ ಉಲ್ಲಂಘನೆಯಾಗಿರುವ ಕುರಿತು ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರಿಂದ ವಿಜಯಪುರ ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತನಿಖೆ ನಡೆಸುವಂತೆ ಜಿಲ್ಲಾ ಪೋಲಿಸ್ ಅಧೀಕ್ಷಕರಿಗೆ ನಿರ್ದೇಶನ ನೀಡಿದ್ದು, ಈ ಪ್ರಕರಣದ ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸುವಂತೆ ಜಿಲ್ಲಾ ನ್ಯಾಯವಾದಿಗಳ ಸಂಘದ ಪದಾಧಿಕಾರಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.ವಿಜಯಪುರ ನಗರದಲ್ಲಿ ಹಿಂದೆ ನಡೆದ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ದುರುದ್ದೇಶಪೂರ್ವಕವಾಗಿ ನ್ಯಾಯವಾದಿ ಸೈಯ್ಯದ್ ಆಸೀಫುಲ್ಲಾ ಖಾದ್ರಿ ಅವರ ಹೆಸರು ಸೇರ್ಪಡೆ ಮಾಡಿ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿರುವ ಕುರಿತು ನ್ಯಾಯವಾದಿ ಖಾದ್ರಿ ಅವರು ನ್ಯಾಯಾಲಕ್ಕೆ ಖಾಸಗಿ ದೂರು ಸಲ್ಲಿಸಿದ್ದರು. ಈ ದೂರನ್ನು ಆಧರಿಸಿ ಪ್ರಕರಣದ ತನಿಖೆ ನಡೆಸುವಂತೆ ವಿಜಯಪುರ ಪ್ರಧಾನ ಜಿಲ್ಲಾ…
ಜನಪ್ರಿಯ ಬಜೆಟ್ :ಮುಶ್ರೀಪ್ ವಿಜಯಪುರ: “ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ೧೫ನೇ ಐತಿಹಾಸಿಕ ಬಜೆಟ್ನಲ್ಲಿ ಸರ್ವಜನಾಂಗದ ಶಾಂತಿಯ ಮಂತ್ರದ ಮೂಲಕ ಎಲ್ಲರ ಮನ ಗೆದ್ದಿದ್ದಾರೆ. ಬರಪೀಡಿತ ವಿಜಯಪುರ ಜಿಲ್ಲೆಗೂ ಉತ್ತಮ ಕೊಡುಗೆ ನೀಡಿದ್ದಾರೆ. ವಿಶೇಷವಾಗಿ ವಿಮಾನ ನಿಲ್ದಾಣಕ್ಕೆ ಹೆಚ್ಚುವರಿಯಾಗಿ ೯೪ ಕೋಟಿ ರೂಪಾಯಿಗಳನ್ನು ನೀಡಿದ್ದಾರೆ. ಇಟ್ಟಂಗಿಹಾಳದಲ್ಲಿ ಆಹಾರ ಪಾರ್ಕ್ ಸ್ಥಾಪನೆ, ನಮ್ಮ ಬಾಗದ ಕನಸಿನ ಯೊಜನೆಯಾದ ತೋಟಗಾರಿಕೆ ಕಾಲೆಜು ಸ್ಥಾಪನೆ ಸೇರಿದಂತೆ ಹಲವು ಯೋಜನೆಗಳನ್ನು ನೀಡಿದ್ದಾರೆ.” – ಅಬ್ದುಲ್ ಹಮೀದ್ ಮುಶ್ರೀಪ್ಕೆಪಿಸಿಸಿ ಸದಸ್ಯರು.
ವಿಜಯಪುರ: “ಬಡವರ, ಹಿಂದುಳಿದವರ ಆಶಾಕಿರಣ ಸಿಎಂ ಸಿದ್ದರಾಮಯ್ಯನವರು ಇಂದು ಮಂಡಿಸಿದ ಬಜೆಟ್ ಸರ್ವ ಜನಾಂಗದ ಏಳ್ಗೆಗೆ ಬದ್ಧವಾಗಿದೆ. ಸಾಮಾಜಿಕ ನ್ಯಾಯದಡಿ ಅಚಲ ನಂಬಿಕೆ ಇಟ್ಟು ಸಾಗುತ್ತಿರುವ ಅವರು ನೀರಾವರಿ, ನಗರಾಭಿವೃದ್ಧಿ, ಸೇರಿದಂತೆ ಎಲ್ಲ ಇಲಾಖೆಗಳಿಗೆ ಸೂಕ್ತ ಅನುದಾನ ನೀಡುವ ಮೂಲಕ ಜನಹಿತದೃಷ್ಟಿಯಿಂದ ಅನೇಕ ಜನಪರ ಯೋಜನೆಗೆ ಆದ್ಯತೆ ನೀಡಿದ್ದಾರೆ. ಗ್ಯಾರಂಟಿ ಯೋಜನೆಗಳ ಮುಂದುವರಿಕೆ ಭಾಗ್ಯ ಕಲ್ಪಿಸಿದ್ದಾರೆ. ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿಸಲು ಬದ್ಧತೆ ಪ್ರದರ್ಶಿಸಿದ್ದಾರೆ. ಹಾಸ್ಟೆಲ್ ಹೆಚ್ಚಳ, ಹೊಸ ಬಂದರು, ಸ್ಕಿಲ್ ಅಕಾಡೆಮಿ ಸ್ಥಾಪನೆ ಸೇರಿ ಅನೇಕ ಹೊಸ ಘೋಷಣೆ ಮಾಡಿದ್ದಾರೆ. ತಮ್ಮ ಆರ್ಥಿಕ ಜ್ಞಾನದ ಅಪಾರ ಅನುಭವದಿಂದ ದೂರದೃಷ್ಟಿಯ ಅಭಿವೃದ್ಧಿಪರ, ರಚನಾತ್ಮಕ ಬಜೆಟ್ ಮಂಡಿಸಿರುವುದು ಸ್ವಾಗತಾರ್ಹ.” – ದಿನೇಶ ಹಳ್ಳಿಉಪ ಪೌರರು, ವಿಜಯಪುರ ಮಹಾನಗರ ಪಾಲಿಕೆ.
ಆಲಮೇಲ: “ಬಜೆಟ್ ನಲ್ಲಿ ಶಿಕ್ಷಣ, ಉದ್ಯೋಗ, ನೀರಾವರಿ ಅಲ್ಲದೆ ಆರೋಗ್ಯಕ್ಕೂ ಆದ್ಯತೆ ನೀಡುವ ಮೂಲಕ ಮುಖ್ಯಮಂತ್ರಿಗಳು ತಮ್ಮ ಆರ್ಥಿಕ ಜ್ಞಾನವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.100 ಹೊಸ ಅಬ್ದುಲ್ ಕಲಾಂ ಶಾಲೆಗಳು, ಹಜ್ ಭವನಕ್ಕೆ 100 ಕೋಟಿ ಅನುದಾನ, ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗೆ 200 ಕೋಟಿ ಅಲ್ಲದೆ ಬೀದರನ ಸಿಕ್ಕರ ಯಾತ್ರಾ ಸ್ಥಳ ಅಭಿವೃದ್ಧಿ, ಜೈನ ಸಮೂದಾಯದ ಅಭಿವೃದ್ಧಿಗೂ ಅನುದಾನ ಘೋಷಿಸಿ ಅಲ್ಪಸಂಖ್ಯಾತರಿಗೆ ಬಂಪರ್ ಕೊಡುಗೆ ನೀಡಿದ್ದಾರೆ.ಅಲ್ಲದೆ ವಾರಣಾಸಿ, ಮಂತ್ರಾಲಯ, ಶ್ರೀಶೈಲ, ಗುಡ್ಡಾಪುರ ಮುಂತಾದ ಹೊರರಾಜ್ಯದ ಯಾತ್ರಾಸ್ಥಳಗಳಲ್ಲಿ ಕರ್ನಾಟಕದ ಭಕ್ತರಿಗೆ ಅನುಕೂಲವಾಗುವ ದೃಷ್ಟಿಯಿಂದ ಲಾಡ್ಜ್ ಗಳ ನಿರ್ಮಾಣವನ್ನೂ ಘೋಶಿಸಿದ್ದಾರೆ.ನಮ್ಮ ಆಲಮೇಲ ಭಾಗಕ್ಕೆ ಬಹು ನಿರೀಕ್ಷಿತ ತೋಟಗಾರಿಕೆ ಮಹಾವಿದ್ಯಾಲಯ ಘೋಷಣೆಯಾಗಿದ್ದು, ಇದರಿಂದ ಈ ಭಾಗದ ತೋಟಗಾರಿಕೆ ಬೆಳೆಗಳಿಗೆ ಹೆಚ್ಚಿನ ಉತ್ತೇಜನದೊಂದಿಗೆ ತಾಲೂಕಿನ ಅಭಿವೃದ್ಧಿಯಾಗುವುದು. ಸಮ್ಮಿಶ್ರ ಸರ್ಕಾರದಲ್ಲಿ ಮಂಜೂರಾಗಿ ರಾಜಕೀಯ ಕಾರಣಗಳಿಂದಾಗಿ ಸ್ಥಳಾಂತರಗೊಂಡಿದ್ದ ಕಾಲೇಜನ್ಬು, ಮರಳಿ ತರುವಲ್ಲಿ ಶಾಸಕ ಅಶೋಕ ಮನಗೂಳಿ ಅವರು ಯಶಸ್ಸಿಯಾಗಿದ್ದಾರೆ.” – ಡಾ ಸಮೀರ ಹಾದಿಮನಿವೈದ್ಯರು, ಆಲಮೇಲ
ವಿಜಯಪುರ: ಮಕ್ಕಳ ಕುತೂಹಲ, ಆಸಕ್ತಿ, ಬುದ್ಧಿಮತ್ತೆ, ಸೃಜನಶೀಲತೆಗೆ ಈ ವಸ್ತು ಪ್ರದರ್ಶನ ಕನ್ನಡಿಯಾಗಿತ್ತು. ಮಕ್ಕಳ ಕಲಿಕೆಯಲ್ಲಿ ಉತ್ಸಾಹ-ಹುಮ್ಮಸ್ಸು, ಕುತೂಹಲ ಬೆಳೆಸುವಲ್ಲಿ ಇಂತಹ ವಸ್ತು ಪ್ರದರ್ಶನಗಳು ಪುಷ್ಟಿ ನೀಡುತ್ತವೆ ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.ನಗರದ ಪದ್ಮಾoಜಲಿ ಸ್ಕೂಲ್ಸ್ ವತಿಯಿಂದ ಹಮ್ಮಿಕೊಂಡ ‘ಜ್ಞಾನ ಅನ್ವೇಷಣೆ ಪ್ರದರ್ಶನ’ ಶೀರ್ಷಿಕೆಯಡಿಯಲ್ಲಿ ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.ವಸ್ತು ಪ್ರದರ್ಶನದಿಂದ ಮಕ್ಕಳಲ್ಲಿ ಚಿಂತನೆ-ಆಲೋಚನೆ ಕೌಶಲ್ಯ ಬೆಳೆಯುತ್ತದೆ.ಅವರ ಕಲ್ಪನೆಗಳಿಗೆ ಮೂರ್ತರೂಪ ಸಿಗುತ್ತದೆ. ರಚನಾತ್ಮಕ ಹಾಗೂ ಗುಣಾತ್ಮಕ ಶಿಕ್ಷಣ ಪಡೆಯುವಲ್ಲಿ ಮಕ್ಕಳು ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದು ಅಗತ್ಯ. ಮಕ್ಕಳಲ್ಲಿ ಕ್ರಿಯಾತ್ಮಕ ಮನೋಭಾವ ಬೆಳೆಸುವಲ್ಲಿ ಈ ವಸ್ತು ಪ್ರದರ್ಶನ ಪರಿಪೂರ್ಣವಾಗಿದೆ ಎಂದು ಹೇಳಿದರು.ನಿರ್ಣಾಯಕಿ ಸುಜಾತಾ ಮಮದಾಪುರ ಮಾತನಾಡಿದರು.ಶಾಲಾ ಮುಖ್ಯ ಶಿಕ್ಷಕಿ ಆರ್ ಆರ್ ಕೋರೆ ಮಾತನಾಡಿದರು.ನಿರ್ಣಾಯಕರಾಗಿ ಜಯಶ್ರೀ ಪಾಟೀಲ, ವಿ ಆರ್ ಕಟ್ಟಿ ಕಾರ್ಯ ನಿರ್ವಹಿಸಿದರು. ಮುಖ್ಯ ಶಿಕ್ಷಕಿ ಅನಿತಾ ಸೊನ್ನಗಿ,ಶಿಕ್ಷಕರಾದ ಅನಿಲಕುಮಾರ ನಾಯಿಕ, ಅಶ್ವಿನಿ ಬಿರಾದಾರ, ಪ್ರಮೋದಾ ಬಿರಾದಾರ, ಶ್ವೇತಾ ಆಕಳವಾಡಿ,ಶೋಭಾ ನಿಂಬರಗಿ,…
ವಿಜಯಪುರ: “ಸಿಎಂ ಸಿದ್ದರಾಮಯ್ಯ 15ನೇ ಬಾರಿ ರೂ.3,71,383 ಕೋಟಿ ಗಾತ್ರದ ಬಜೆಟ್ ಮಂಡಿಸಿದ್ದಾರೆ. ಮೀನುಗಾರರಿಗೆ ಕ್ಷೇತ್ರದ ಸರ್ವೋತೋಮುಖ ಅಭಿವೃದ್ಧಿಗಾಗಿ 3೦೦೦ ಕೋಟಿ ರೂಪಾಯಿಗಳಷ್ಟು ಬೃಹತ್ ಗಾತ್ರದ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುವುದಾಗಿ ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಹೊನ್ನಾವರ ತಾಲೂಕಿನ ಮಂಕಿ ಕಾಸರ್ಕೋಡಿನಲ್ಲಿ ಸಂಶೋಧನಾ ಕೇಂದ್ರ ಸ್ಥಾಪನೆ , ಭದ್ರಾವತಿಯಲ್ಲಿ ಅತ್ಯಾಧುನಿಕ ಮೀನು ಮಾರುಕಟ್ಟೆ ಸ್ಥಾಪನೆ, ಆಕ್ವಾ ಪಾರ್ಕ್ ಸ್ಥಾಪನೆ , ಮುರುಡೇಶ್ವರದಲ್ಲಿ ಸುಸಜ್ಜಿತ ಹೊರಬಂದರು ನಿರ್ಮಾಣ, ಆಲಮಟ್ಟಿಯಲ್ಲಿ ಒಳನಾಡು ಮೀನುಗಾರಿಕೆ ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪನೆ ಮಾಡುವುದಾಗಿ ಸಿಎಂ ಹೇಳಿದ್ದಾರೆ. ಮತ್ಸ್ಯ ಆಶಾಕಿರಣ ಯೋಜನೆಯಡಿ ಕರಾವಳಿಯ ಮೀನುಗಾರಿಕೆಯ ಪರಿಹಾರ 1500 ರೂ ಗಳಿಂದ 3000 ರೂಪಾಯಿಗಳಿಗೆ ಏರಿಕೆ ಮಾಡಿದ್ದಾರೆ. ಅಪಘಾತ ಅಥವಾ ಅವಘಡಕ್ಕೆ ಒಳಗಾಗುವ ಮೀನುಗಾರರನ್ನು ತ್ವರಿತವಾಗಿ ದಡಕ್ಕೆ ತರಲು ರಾಜ್ಯದಲ್ಲಿ ಪ್ರಪ್ರಥಮ ಸಮುದ್ರ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿರುವುದು ನಿಜಕ್ಕೂ ಮೆಚ್ಚವಂತದ್ದು. ವಿವಿಧ ವಸತಿ ಯೋಜನೆಯಡಿಯಲ್ಲಿ 10,000 ವಸತಿ ರಹಿತ ಮೀನುಗಾರರಿಗೆ ಮನೆಗಳನ್ನು ನಿರ್ಮಿಸಿ ಕೊಡುವುದಾಗಿ ಹೇಳಿದ್ದಾರೆ. ಘೊಷಣೆಯಾಗಿರುವ ಈ ಯೋಜನೆಗಳು ಕೇವಲ…
