ವಿಜಯಪುರ: “ಬಡವರ, ಹಿಂದುಳಿದವರ ಆಶಾಕಿರಣ ಸಿಎಂ ಸಿದ್ದರಾಮಯ್ಯನವರು ಇಂದು ಮಂಡಿಸಿದ ಬಜೆಟ್ ಸರ್ವ ಜನಾಂಗದ ಏಳ್ಗೆಗೆ ಬದ್ಧವಾಗಿದೆ. ಸಾಮಾಜಿಕ ನ್ಯಾಯದಡಿ ಅಚಲ ನಂಬಿಕೆ ಇಟ್ಟು ಸಾಗುತ್ತಿರುವ ಅವರು ನೀರಾವರಿ, ನಗರಾಭಿವೃದ್ಧಿ, ಸೇರಿದಂತೆ ಎಲ್ಲ ಇಲಾಖೆಗಳಿಗೆ ಸೂಕ್ತ ಅನುದಾನ ನೀಡುವ ಮೂಲಕ ಜನಹಿತದೃಷ್ಟಿಯಿಂದ ಅನೇಕ ಜನಪರ ಯೋಜನೆಗೆ ಆದ್ಯತೆ ನೀಡಿದ್ದಾರೆ. ಗ್ಯಾರಂಟಿ ಯೋಜನೆಗಳ ಮುಂದುವರಿಕೆ ಭಾಗ್ಯ ಕಲ್ಪಿಸಿದ್ದಾರೆ. ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿಸಲು ಬದ್ಧತೆ ಪ್ರದರ್ಶಿಸಿದ್ದಾರೆ. ಹಾಸ್ಟೆಲ್ ಹೆಚ್ಚಳ, ಹೊಸ ಬಂದರು, ಸ್ಕಿಲ್ ಅಕಾಡೆಮಿ ಸ್ಥಾಪನೆ ಸೇರಿ ಅನೇಕ ಹೊಸ ಘೋಷಣೆ ಮಾಡಿದ್ದಾರೆ. ತಮ್ಮ ಆರ್ಥಿಕ ಜ್ಞಾನದ ಅಪಾರ ಅನುಭವದಿಂದ ದೂರದೃಷ್ಟಿಯ ಅಭಿವೃದ್ಧಿಪರ, ರಚನಾತ್ಮಕ ಬಜೆಟ್ ಮಂಡಿಸಿರುವುದು ಸ್ವಾಗತಾರ್ಹ.”
– ದಿನೇಶ ಹಳ್ಳಿ
ಉಪ ಪೌರರು, ವಿಜಯಪುರ ಮಹಾನಗರ ಪಾಲಿಕೆ.

