ಆಲಮೇಲ: “ಬಜೆಟ್ ನಲ್ಲಿ ಶಿಕ್ಷಣ, ಉದ್ಯೋಗ, ನೀರಾವರಿ ಅಲ್ಲದೆ ಆರೋಗ್ಯಕ್ಕೂ ಆದ್ಯತೆ ನೀಡುವ ಮೂಲಕ ಮುಖ್ಯಮಂತ್ರಿಗಳು ತಮ್ಮ ಆರ್ಥಿಕ ಜ್ಞಾನವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
100 ಹೊಸ ಅಬ್ದುಲ್ ಕಲಾಂ ಶಾಲೆಗಳು, ಹಜ್ ಭವನಕ್ಕೆ 100 ಕೋಟಿ ಅನುದಾನ, ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗೆ 200 ಕೋಟಿ ಅಲ್ಲದೆ ಬೀದರನ ಸಿಕ್ಕರ ಯಾತ್ರಾ ಸ್ಥಳ ಅಭಿವೃದ್ಧಿ, ಜೈನ ಸಮೂದಾಯದ ಅಭಿವೃದ್ಧಿಗೂ ಅನುದಾನ ಘೋಷಿಸಿ ಅಲ್ಪಸಂಖ್ಯಾತರಿಗೆ ಬಂಪರ್ ಕೊಡುಗೆ ನೀಡಿದ್ದಾರೆ.ಅಲ್ಲದೆ ವಾರಣಾಸಿ, ಮಂತ್ರಾಲಯ, ಶ್ರೀಶೈಲ, ಗುಡ್ಡಾಪುರ ಮುಂತಾದ ಹೊರರಾಜ್ಯದ ಯಾತ್ರಾಸ್ಥಳಗಳಲ್ಲಿ ಕರ್ನಾಟಕದ ಭಕ್ತರಿಗೆ ಅನುಕೂಲವಾಗುವ ದೃಷ್ಟಿಯಿಂದ ಲಾಡ್ಜ್ ಗಳ ನಿರ್ಮಾಣವನ್ನೂ ಘೋಶಿಸಿದ್ದಾರೆ.
ನಮ್ಮ ಆಲಮೇಲ ಭಾಗಕ್ಕೆ ಬಹು ನಿರೀಕ್ಷಿತ ತೋಟಗಾರಿಕೆ ಮಹಾವಿದ್ಯಾಲಯ ಘೋಷಣೆಯಾಗಿದ್ದು, ಇದರಿಂದ ಈ ಭಾಗದ ತೋಟಗಾರಿಕೆ ಬೆಳೆಗಳಿಗೆ ಹೆಚ್ಚಿನ ಉತ್ತೇಜನದೊಂದಿಗೆ ತಾಲೂಕಿನ ಅಭಿವೃದ್ಧಿಯಾಗುವುದು. ಸಮ್ಮಿಶ್ರ ಸರ್ಕಾರದಲ್ಲಿ ಮಂಜೂರಾಗಿ ರಾಜಕೀಯ ಕಾರಣಗಳಿಂದಾಗಿ ಸ್ಥಳಾಂತರಗೊಂಡಿದ್ದ ಕಾಲೇಜನ್ಬು, ಮರಳಿ ತರುವಲ್ಲಿ ಶಾಸಕ ಅಶೋಕ ಮನಗೂಳಿ ಅವರು ಯಶಸ್ಸಿಯಾಗಿದ್ದಾರೆ.”
– ಡಾ ಸಮೀರ ಹಾದಿಮನಿ
ವೈದ್ಯರು, ಆಲಮೇಲ

