Author: editor.udayarashmi@gmail.com

ದೇವರಹಿಪ್ಪರಗಿ: ಬಸವಣ್ಣ, ಮಾಚಿದೇವರು ಸೇರಿದಂತೆ ಎಲ್ಲ ಶರಣರ ವಚನಗಳು ನಮ್ಮ ಭವಿಷ್ಯಕ್ಕೆ ದಾರಿದೀಪಗಳಾಗಿವೆ. ಅವುಗಳ ಅರಿಕೆ ಹಾಗೂ ಅಳವಡಿಕೆ ಇಂದು ಅತ್ಯಂತ ಅಗತ್ಯವಾಗಿದೆ ಎಂದು ಬಸವ ಶರಣಸಂಗಮ ಸೇವಾ ಸಮೀತಿ ಅಧ್ಯಕ್ಷ ಸಂಗಣ್ಣ ತಡವಲ ಹೇಳಿದರು.ಪಟ್ಟಣದ ಚೈತನ್ಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಗುರುವಾರ ಜರುಗಿದ ಬಸವ ಶರಣ ಸಂಗಮ ವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ವಚನಗಳನ್ನು ಕೇವಲ ಕೇಳಿ ಆನಂದಿಸುವದಲ್ಲ. ಅವುಗಳ ಮಹತ್ವ ಹಾಗೂ ಅರಿಯುವಿಕೆ ಆಗಬೇಕಾಗಿದೆ. ಜೊತೆಗೆ ನಮ್ಮಗಳ ಜೀವನದಲ್ಲಿ ರೂಪಿಸಿಕೊಳ್ಳಬೇಕಾಗಿದೆ ಎಂದರು.ವಚನ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಜೆ.ಆರ್.ಬಿರಾದಾರ ಮಾತನಾಡಿದರು.ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಕಾರ್ಯದರ್ಶಿ ಗುರುರಾಜ್ ಕುಲಕರ್ಣಿ ಹಾಗೂ ಚುಟುಕು ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಬಿ.ಸಿ.ಹಿರೇಮಠ, ಬಸವಣ್ಣನವರು ಪ್ರಜಾಪ್ರಭುತ್ವಕ್ಕೆ ನೀಡಿದ ಕೊಡುಗೆ, ಶರಣರ ಆಚಾರ ವಿಚಾರಗಳ ಕುರಿತು ಮಾತನಾಡಿದರು.ಇದೇ ಸಂದರ್ಭದಲ್ಲಿ ಶರಣರ ವಚನ ಪಠಣ ಮಾಡಿದ ಎಲ್ಲ ವಿದ್ಯಾರ್ಥಿಗಳಿಗೆ ವಚನಭಂಡಾರಗಳನ್ನು ವಿತರಿಸಲಾಯಿತು.ಕಸಾಪ ತಾಲ್ಲೂಕು ಅಧ್ಯಕ್ಷ ಜಿ.ಪಿ.ಬಿರಾದಾರ, ಚೈತನ್ಯ ಸಂಸ್ಥೆಯ ರಮೇಶ ಕೋರಿ, ಆರ್.ಬಿ.ಕಲಕೇರಿ, ಶಶಿಕಾಂತ ಕಠಾರೆ ಸೇರಿದಂತೆ…

Read More

ಚಡಚಣ: ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಚಡಚಣ ಸಮೀಪದ ನಿವರಗಿಯ ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವಿಯ ಜಾತ್ರೆಯು ಭಾರತ ಹುಣ್ಣಿಮೆ ನಿಮಿತ್ತ ಜಾತ್ರೆಯನ್ನು ಅತೀ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಶುಕ್ರವಾರ ನಸುಕಿನ ಜಾವ 5.00 ಗಂಟೆಗೆ ಅಭಿಷೇಕ ಹಾಗೂ ಉಡಿ ತುಂಬುವ ಕಾರ್ಯಕ್ರಮ ಜರುಗುತ್ತದೆ. ಅದೇ ದಿವಸ ರಾತ್ರಿ 08.00 ಗಂಟೆಗೆ ಪಲ್ಲಕ್ಕಿ ಉತ್ಸವ ಮತ್ತು ಶ್ರೀ ಘೂಳೇಶ್ವರರಿಂದ ನುಡಿ ಮುತ್ತುಗಳು ಜರುಗುವುದು.ಮತ್ತು ದಿನಾಂಕ: 24.02.2024 ರಂದು ಶನಿವಾರ ಮುಂಜಾನೆ 11.00 ಗಂಟೆಗೆ ಜಾನುವಾರುಗಳ ಮೇಳ ಮತ್ತು ಮಧ್ಯಾಹ್ನ 3.30 ಗಂಟೆಗೆ ಟಗರಿನ ಕಾಳಗ ಜರುಗುವುದು ಅಂದೇ ರಾತ್ರಿ 09.30 ಗಂಟೆಗೆ ಸೊಸೆ ತಂದ ಸಂಪತ್ತು ಎಂಬ ಸಾಮಾಜಿಕ ನಾಟಕ ಇರುವದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಈ ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ಜಾತ್ರಾ ಕಮೀಟಿ ತಿಳಿಸಿದೆ.

Read More

ಆಲಮಟ್ಟಿಯಲ್ಲಿ ಸಂವಿಧಾನ ಜಾಗೃತಿ ಜಾಥಾ ಆಲಮಟ್ಟಿ: ಭಾರತವು ವೈವಿಧ್ಯಮಯ ದೇಶವಾಗಿದ್ದರೂ, ಏಕತೆಯನ್ನು ನಂಬುತ್ತದೆ, ನಾವು ನಮ್ಮ ಸಂವಿಧಾನವನ್ನು ರಕ್ಷಿಸಿದರೆ ಸಂವಿಧಾನ ನಮ್ಮೆಲ್ಲರನ್ನು ರಕ್ಷಿಸುತ್ತದೆ, ಪ್ರಜಾಪ್ರಭುತ್ವ ಉಳಿಯಬೇಕಾದರೆ ನಮ್ಮ ಸಂವಿಧಾನ ಉಳಿಯಬೇಕು, ಪ್ರಜಾಪ್ರಭುತ್ವ ಹತ್ತಿಕ್ಕುವ ಶಕ್ತಿಗಳ ವಿರುದ್ಧ ದೇಶಧ ಪ್ರತಿಯೊಬ್ಬ ಪ್ರಜೆ ಜಾಗರೂಕತೆಯಿಂದ ಇರಬೇಕು ಎಂದು ಬಂಡಾಯ ಸಾಹಿತಿ ಮುತ್ತುರಾಜ ಹೆಬ್ಬಾಳ ಅಭಿಪ್ರಾಯಪಟ್ಟರು.ಆಲಮಟ್ಟಿಯಲ್ಲಿ ಗುರುವಾರ ನಡೆದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು. ಡಾ.ಅಂಬೇಡ್ಕರ್, ಶೋಷಿತ, ದಮನಿತರ, ಕಾರ್ಮಿಕರ, ಮಹಿಳೆ, ರೈತರ ಹಿತವನ್ನು ಕಾಪಾಡುವ ಕೆಲಸವನ್ನು ಮಾಡಿದ್ದಾರೆ, ಅವರ ಅಪಾರ ಶ್ರಮ, ಸಂವಿಧಾನ ರಚನೆಯಲ್ಲಿಯ ಬದ್ಧತೆಯಿಂದಾಗಿ ಇಂದು ನಾವು ಚೆನ್ನಾಗಿದ್ದೇವೆ, ಇದಕ್ಕಾಗಿ ನಾವು ಬಾಬಾಸಾಹೇಬರಿಗೆ ಎಲ್ಲರೂ ಋಣಿಯಾಗಿರಬೇಕು ಎಂದರು.ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಕವಿತಾ ಬಡಿಗೇರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ತಾಲ್ಲೂಕು ಪಂಚಾಯ್ತಿ ಸಹಾಯಕ ನಿರ್ದೇಶಕ ವೆಂಕಟೇಶ ವಂದಾಲ ಸಂವಿಧಾನ ಪೀಠಿಕೆ ಪ್ರತಿಜ್ಞೆ ಬೋಧಿಸಿದರು.ಬಿಇಓ ವಿ.ಯು. ರಾಠೋಡ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಕವಿತಾ ಬಡಿಗೇರ, ಉಪಾಧ್ಯಕ್ಷೆ ಸಿದ್ದಮ್ಮ ವಾಲೀಕಾರ, ಗ್ರೇಡ್-2 ತಹಶೀಲ್ದಾರ್ ಎಚ್.ಎನ್.…

Read More

ಬೆಂಗಳೂರು: ರಾಜ್ಯದಲ್ಲಿ ಫೆಬ್ರವರಿ 27 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ಶಾಸಕರಿಗೆ ತಮ್ಮ ಮತಗಳನ್ನು ಖರೀದಿಸಲು ಆಫರ್ ನೀಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ.ಚುನಾವಣೆಗೆ ಹೋಗಲಿರುವ ನಾಲ್ಕು ಸ್ಥಾನಗಳಲ್ಲಿ ಒಂದನ್ನು ಮಾತ್ರ ಗೆಲ್ಲುವ ಶಕ್ತಿ ಮೈತ್ರಿಕೂಟಕ್ಕಿದೆಯಾದರೂ, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ತನ್ನ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರಿಂಗ ರಾಜ್ಯದಲ್ಲಿ ರಾಜ್ಯಸಭಾ ಚುನಾವಣಾ ಕಣ ಬಿಸಿಯಾಗಿದೆ.ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಕಾಂಗ್ರೆಸ್ ಘಟಕದ ಮುಖ್ಯಸ್ಥ ಶಿವಕುಮಾರ್, “ಎಚ್‌ಡಿ ಕುಮಾರಸ್ವಾಮಿ ಯಾರಿಗೆ ಫೋನ್ ಮಾಡುತ್ತಿದ್ದಾರೆ. ಏನು ಮಾತನಾಡುತ್ತಿದ್ದಾರೆ ಮತ್ತು ಏನು ಆಫರ್ ನೀಡುತ್ತಿದ್ದಾರೆ ಎಂಬುದು ನಮಗೆ ತಿಳಿದಿದೆ. ನಮ್ಮ ಶಾಸಕರು ನಮಗೆ ಎಲ್ಲ ಮಾಹಿತಿ ನೀಡಿದ್ದಾರೆ. ಬಿಜೆಪಿಯ ತಂತ್ರಗಾರಿಕೆ ನಮಗೆ ತಿಳಿದಿದೆ” ಎಂದು ಹೇಳಿದ್ದಾರೆ.ವಿರೋಧ ಪಕ್ಷಗಳು ಅಡ್ಡ ಮತದಾನಕ್ಕೆ ಯತ್ನಿಸುತ್ತಿವೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, “ಯಾವುದೇ ಕಾರಣವಿಲ್ಲದೆ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರಾ..? ತಮ್ಮ ಪ್ರಯತ್ನ ಮಾಡಲು ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ. ಫೆಬ್ರವರಿ…

Read More

63 ಸ್ಥಾನಗಳಿಗೆ ಸಮಾಜವಾದಿ ಪಕ್ಷ ಸ್ಪರ್ಧೆ | ಬಿಜೆಪಿಗೆ ಎಚ್ಚರಿಕೆ ನೀಡಿದ ಐಎನ್ಡಿಐ ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ 80 ಲೋಕಸಭಾ ಸ್ಥಾನಗಳ ಪೈಕಿ 17ರಲ್ಲಿ ಕಾಂಗ್ರೆಸ್ ಸ್ಪರ್ಧಿಸಲಿದ್ದು, ಉಳಿದ 63 ಸ್ಥಾನಗಳನ್ನು ಸಮಾಜವಾದಿ ಪಕ್ಷಕ್ಕೆ ನೀಡಲಾಗುವುದು ಎಂದು ಇಂಡಿಯಾ ಬಣದ ಸದಸ್ಯರು ಬುಧವಾರ ಸಂಜೆ ತಿಳಿಸಿದ್ದಾರೆ.2024 ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತೀಯ ಜನತಾ ಪಕ್ಷವನ್ನು ಸೋಲಿಸಲು ಜೂನ್‌ನಲ್ಲಿ ರಚಿಸಲಾದ ವಿರೋಧ ಪಕ್ಷದ ಮೈತ್ರಿಯು ಘೋಷಿಸಿದ ಮೊದಲ ಪ್ರಮುಖ ಸೀಟು ಹಂಚಿಕೆ ಒಪ್ಪಂದ ಇದಾಗಿದೆ.ಕಾಂಗ್ರೆಸ್ ತನ್ನ ಭದ್ರಕೋಟೆಗಳಾದ ರಾಯ್ಬರೇಲಿ ಮತ್ತು ಅಮೇಥಿ ಜೊತೆಗೆ ಕಾನ್ಪುರ ನಗರ, ಫತೇಪುರ್ ಸಿಕ್ರಿ, ಬಸ್ಗಾಂವ್, ಸಹರಾನ್ಪುರ್, ಪ್ರಯಾಗ್ರಾಜ್, ಮಹಾರಾಜ್ಗಂಜ್, ಅಮ್ರೋಹಾ, ಝಾನ್ಸಿ, ಬುಲಂದ್ಶಹರ್, ಘಾಜಿಯಾಬಾದ್, ಮಥುರಾ, ಶಾಜಿಯಾಬಾದ್ , ಬಾರಾಬಂಕಿ ಮತ್ತು ಡಿಯೋರಿಯಾ ಜೊತೆಗೆ, ಮೋದಿ ಗೆದ್ದಿರುವ ವಾರಣಾಸಿ ಕ್ಷೇತ್ರವನ್ನು ಪಡೆದುಕೊಂಡಿದೆ.ವಿವಿಧ ಪಕ್ಷಗಳಿಗೆ ಎಸ್‌ಪಿ ಸೀಟು ಹಂಚಿಕೆಸಮಾಜವಾದಿ ಪಕ್ಷವು ತನ್ನ ಪಾಲಿನಿಂದ ಪ್ರಾದೇಶಿಕ ಪಕ್ಷಗಳಿಗೆ ಸ್ಥಾನಗಳನ್ನು ನಿಗದಿಪಡಿಸುತ್ತದೆ.…

Read More

ವಿಜಯಪುರ: ಜಿಲ್ಲೆಯಲ್ಲಿ ಇನ್ನೂ ಶೇಕಡಾ 20% ಕಬ್ಬು ರೈತರ ಜಮೀನಿನಲ್ಲಿ ಇದೆ, ಅವುಗಳು ಮುಗಿಯುವವರೆಗೂ ಕಾರ್ಖಾನೆ ಕಬ್ಬು ಖರೀದಿಸುವುದನ್ನು ಮುಂದುವರೆಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಅವರು ಪತ್ರಿಕೆಯ ಮೂಲಕ ಕಾರ್ಖಾನೆಯ ಆಡಳಿತ ಮಂಡಳಿಗೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.ಸಕ್ಕರೆ ಕಾರ್ಖಾನೆಯನ್ನೆ ಅವಲಂಬನೆ ಇಟ್ಟುಕೊಂಡು ಕಬ್ಬು ಬೆಳೆದಿರುವ ರೈತರಿಗೆ ಕಬ್ಬು ಕಾರ್ಖಾನೆಗೆ ಕಳುಹಿಸದಿದ್ದರೆ ತುಂಬಾ ನಷ್ಟವಾಗುವುದು, ಇನ್ನೊಂದು ಹದಿನೈದು ದಿನಗಳ ವರೆಗೆ ಕಬ್ಬು ಖರೀದಿ ಮುಂದುವರೆಸಬೇಕು, ಇನ್ನು ಅಲ್ಲಲ್ಲಿ ಉಳಿದ ಕಬ್ಬನ್ನು ರೈತರು ಕಳಿಸಲು ಸಾಧ್ಯವಾಗುತ್ತದೆ .ಒಂದು ವೇಳೆ ಎಲ್ಲಾ ರೈತರ ಕಬ್ಬು ಮುಗಿಯುವ ಮುಂಚೆನೆ ಕಬ್ಬು ಕರೀದಿ ಬಂದ್ ಮಾಡಿದ್ದೆ ಆದರೆ ಉಗ್ರವಾದ ಹೋರಾಟ ಮಾಡುವುದು ಅನಿವಾರ್ಯವಾಗಲಿದೆ ಎಂದು ಸಂಗಮೇಶ ಸಗರ ಅವರು ಪತ್ರಿಕೆಯ ಮೂಲಕ ಆಗ್ರಹಿಸಿದ್ದಾರೆ.

Read More

ವಿಜಯಪುರ: ವಿದ್ಯಾರ್ಥಿಗಳ ಬದುಕಿನಲ್ಲಿ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳು ಪ್ರಮುಖ ಘಟ್ಟವಾಗಿದೆ. ಈ ಪರೀಕ್ಷೆಗಳಲ್ಲಿ ಯಶಸ್ಸು ನಿಮ್ಮದಾಗಿಸಿಕೊಳ್ಳಲು ಅಧ್ಯಯನದಲ್ಲಿ ತೊಡಗಿಕೊಂಡು, ಪರೀಕ್ಷೆಗೆ ಸಿದ್ಧರಾಗಲು ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.ಮಾ.1 ರಿಂದ 22 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ಹಾಗೂ ಮಾ.25 ರಿಂದ ಏ.6 ವರೆಗೆ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಗಳು ನಡೆಯಲಿದ್ದು, ವಿದ್ಯಾರ್ಥಿಗಳು ಯಾವುದೇ ರೀತಿಯ ಆತಂಕ, ಗೊಂದಲ, ಒತ್ತಡಕ್ಕೆ ಒಳಗಾಗದೆ, ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಬರೆಯಬೇಕು.ಪರೀಕ್ಷೆಗೆ ಅತ್ಯಂತ ಕಡಿಮೆ ಸಮಯ ಉಳಿದಿರುವುದರಿಂದ, ವಿದ್ಯಾರ್ಥಿಗಳು ಒಂದು ಕ್ಷಣವನ್ನೂ ವ್ಯರ್ಥ ಮಾಡದೆ, ಅಧ್ಯಯನದಲ್ಲಿ ತೊಡಗಿಕೊಳ್ಳಬೇಕು. ಶಿಕ್ಷಕರು ಹಾಗೂ ಪಾಲಕರು ವಿದ್ಯಾರ್ಥಿಗಳ ಯಶಸ್ವಿಗಾಗಿ ಸಹಕರ, ಅಗತ್ಯ ಮಾರ್ಗದರ್ಶನ ನೀಡಬೇಕು ಎಂದು ಸಲಹೆ ನೀಡಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ.

Read More

ಇಂಡಿ: ವಾಣಿಜ್ಯ ಹಾಗೂ ಕೃಷಿ ಕ್ಷೇತ್ರದ ಅಭಿವೃದ್ದಿಯಲ್ಲಿ ಪ್ರಸಿದ್ದಿ ಪಡೆಯುತ್ತಿರುವ ಇಂಡಿ ಪಟ್ಟಣವು ಮುಂಬರುವ ದಿನಗಳಲ್ಲಿ ಶಿಕ್ಷಣ ರಂಗದಲ್ಲಿಯೂ ಉತ್ತಮ ಪ್ರಗತಿಯತ್ತ ಸಾಗುತ್ತಿದ್ದು ಈ ದಿಶೆಯಲ್ಲಿ ಸಾರ್ವಜನಿಕರು ಸೇರಿದಂತೆ ಸಮುದಾಯದಿಂದ ಸರ್ವರ ಸಹಕಾರ ತುಂಬ ಅಗತ್ಯವಾಗಿದೆ ಎಂದು ರಾಣಿ ಚೆನ್ನಮ್ಮ ವಿವಿ ಸಿಂಡಿಕೇಟ ಸದಸ್ಯ ಮತ್ತು ಪ್ರಾಚಾರ್ಯ ಡಾ. ಶಶಿಕಾಂತ ಪತಂಗಿ ಹೇಳಿದರು.ಅವರು ಮಂಗಳವಾರ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ೨೦೨೩-೨೪ ನೇ ಸಾಲಿನ ಸಾಂಸ್ಕೃತಿಕ ಕ್ರೀಡಾ ಹಾಗೂ ವಿವಿಧ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಹಾಗೂ ಪ್ರಥಮ ವರ್ಷದ ಬಿ.ಎ. ಬಿ.ಕಾಂ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು.ಪ್ರಾಚಾರ್ಯ ಡಾ.ಆರ್.ಎಚ್. ರಮೇಶ ಮಾತನಾಡಿ, ಶಿಕ್ಷಣದ ವ್ಯವಸ್ಥೆಯು ವಿದ್ಯಾರ್ಥಿಗಳನ್ನು ಸರಿಯಾದ ದಿಕ್ಕಿನಲ್ಲಿ ಬೆಳೆಸಿದಾಗ ಮಾತ್ರ ಈ ದೇಶದ ಭವಿಷ್ಯವನ್ನು ಎತ್ತಿ ಹಿಡಿಯಲು ಸಾಧ್ಯವಿದೆ. ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರ ಮೂಡಿಸಿದರೆ ಶಿಕ್ಷಣದ ಪ್ರಗತಿ ಸಾಧ್ಯ ಎಂದರು.ಡಾ. ಜೆ.ಎಸ್. ಮಾಡ್ಯಾಳ, ಕವೀಂದ್ರ, ನಿವೃತ್ತ ಪ್ರಾಚಾರ್ಯ ಉಮೇಶ ಕೋಳೆಕರ, ಸಾಧನೆ ಗೈದ ಹಳೆಯ ವಿದ್ಯಾರ್ಥಿ ಡಾ. ಸತೀಶ…

Read More

ಸಿಂದಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಬೆಂಗಳೂರು, ತಾಲೂಕು ಘಟಕ, ದೇ.ಹಿಪ್ಪರಗಿ ಹಾಗೂ ಕನ್ನಡ ಜಾನಪದ ಪರಿಷತ್, ಬೆಂಗಳೂರು, ಜಿಲ್ಲಾ ಘಟಕ, ವಿಜಯಪುರ ವತಿಯಿಂದ ತಾಲೂಕಿನ ಬೋರಗಿ ಗ್ರಾಮದ ಆರಕ್ಷಕ ಮೌಲಾಲಿ ಆಲಗೂರ ಅವರ ಸಾಹಿತ್ಯ ಸೇವೆಯನ್ನು ಗುರುತಿಸಿ ಸುವರ್ಣ ಕರ್ನಾಟಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಫೆಬ್ರವರಿ ೨೫ ರಂದು ದೇ.ಹಿಪ್ಪರಗಿಯ ಪಡಗಾನೂರ ಗ್ರಾಮದಲ್ಲಿ ಜರುಗಲಿರುವ ಸುವರ್ಣ ಕರ್ನಾಟಕ ಸಂಭ್ರಮಾಚರಣೆ ಮತ್ತು ಸುವರ್ಣ ಕರ್ನಾಟಕ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸುವರ್ಣ ಕರ್ನಾಟಕ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ಸಂಗಮೇಶ ಉತ್ನಾಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Read More