ಆಲಮಟ್ಟಿಯಲ್ಲಿ ಸಂವಿಧಾನ ಜಾಗೃತಿ ಜಾಥಾ
ಆಲಮಟ್ಟಿ: ಭಾರತವು ವೈವಿಧ್ಯಮಯ ದೇಶವಾಗಿದ್ದರೂ, ಏಕತೆಯನ್ನು ನಂಬುತ್ತದೆ, ನಾವು ನಮ್ಮ ಸಂವಿಧಾನವನ್ನು ರಕ್ಷಿಸಿದರೆ ಸಂವಿಧಾನ ನಮ್ಮೆಲ್ಲರನ್ನು ರಕ್ಷಿಸುತ್ತದೆ, ಪ್ರಜಾಪ್ರಭುತ್ವ ಉಳಿಯಬೇಕಾದರೆ ನಮ್ಮ ಸಂವಿಧಾನ ಉಳಿಯಬೇಕು, ಪ್ರಜಾಪ್ರಭುತ್ವ ಹತ್ತಿಕ್ಕುವ ಶಕ್ತಿಗಳ ವಿರುದ್ಧ ದೇಶಧ ಪ್ರತಿಯೊಬ್ಬ ಪ್ರಜೆ ಜಾಗರೂಕತೆಯಿಂದ ಇರಬೇಕು ಎಂದು ಬಂಡಾಯ ಸಾಹಿತಿ ಮುತ್ತುರಾಜ ಹೆಬ್ಬಾಳ ಅಭಿಪ್ರಾಯಪಟ್ಟರು.
ಆಲಮಟ್ಟಿಯಲ್ಲಿ ಗುರುವಾರ ನಡೆದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು. ಡಾ.ಅಂಬೇಡ್ಕರ್, ಶೋಷಿತ, ದಮನಿತರ, ಕಾರ್ಮಿಕರ, ಮಹಿಳೆ, ರೈತರ ಹಿತವನ್ನು ಕಾಪಾಡುವ ಕೆಲಸವನ್ನು ಮಾಡಿದ್ದಾರೆ, ಅವರ ಅಪಾರ ಶ್ರಮ, ಸಂವಿಧಾನ ರಚನೆಯಲ್ಲಿಯ ಬದ್ಧತೆಯಿಂದಾಗಿ ಇಂದು ನಾವು ಚೆನ್ನಾಗಿದ್ದೇವೆ, ಇದಕ್ಕಾಗಿ ನಾವು ಬಾಬಾಸಾಹೇಬರಿಗೆ ಎಲ್ಲರೂ ಋಣಿಯಾಗಿರಬೇಕು ಎಂದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಕವಿತಾ ಬಡಿಗೇರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ತಾಲ್ಲೂಕು ಪಂಚಾಯ್ತಿ ಸಹಾಯಕ ನಿರ್ದೇಶಕ ವೆಂಕಟೇಶ ವಂದಾಲ ಸಂವಿಧಾನ ಪೀಠಿಕೆ ಪ್ರತಿಜ್ಞೆ ಬೋಧಿಸಿದರು.
ಬಿಇಓ ವಿ.ಯು. ರಾಠೋಡ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಕವಿತಾ ಬಡಿಗೇರ, ಉಪಾಧ್ಯಕ್ಷೆ ಸಿದ್ದಮ್ಮ ವಾಲೀಕಾರ, ಗ್ರೇಡ್-2 ತಹಶೀಲ್ದಾರ್ ಎಚ್.ಎನ್. ಬಡಿಗೇರ, ಡಿಎಸ್ ಎಸ್ ಸಂಘಟನಾ ಸಂಚಾಲಕ ಪ್ರಶಾಂತ ಚಲವಾದಿ, ಯುವ ಮುಖಂಡ ರಾಘವೇಂದ್ರ ವಡವಡಗಿ, ರಮೇಶ ವಂದಾಲ, ಉಪ ಮುಖ್ಯ ಎಂಜಿನಿಯರ್ ಎ. ಸುರೇಶ, ಕೃಷ್ಣಾ ಕಾಡಾದ ಕಾರ್ಯನಿರ್ವಾಹಕ ಎಂಜಿನಿಯರ್ ವಿ.ಜಿ. ಕುಲಕರ್ಣಿ, ಉಮೇಶ, ಸತೀಶ ಗಲಗಲಿ, ಬಾಳೇಶ ತಳವಾರ, ನೌಕರರ ಸಂಘದ ಅಧ್ಯಕ್ಷ ಎಸ್.ಬಿ. ದಳವಾಯಿ, ರಮೇಶ ಆಲಮಟ್ಟಿ, ಶಂಕರ ಜಲ್ಲಿ, ಸುರೇಶ ಹುರಕಡ್ಲಿ, ಪಿಡಿಓ ಹನುಮಂತ ಬಂಡಿವಡ್ಡರ, ಮಂಜುನಾಥ ಹಿರೇಮಠ, ಬಿ.ಡಿ. ಚಲವಾದಿ, ಯು.ಬಿ. ಬಶೆಟ್ಟಿ, ಜಿ.ಎಂ. ಕೊಟ್ಯಾಳ, ಎಸ್.ಆರ್. ವಿಭೂತಿ, ರಾಘವೇಂದ್ರ ವಂದಗನೂರ ಇದ್ದರು.
ಕಾರ್ಯಕ್ರಮ ಅಂಗವಾಗಿ ಏರ್ಪಡಿಸಿದ್ದ ಚಿತ್ರಕಲೆ, ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಂವಿಧಾನದ ಪೀಠಿಕೆಯ ಚಿತ್ರಗಳನ್ನು ನೀಡಲಾಯಿತು.
ಅದ್ಧೂರಿ ಮೆರವಣಿಗೆ:
ಆಲಮಟ್ಟಿ ಡ್ಯಾಂಸೈಟ್ ನಿಂದ ಆಲಮಟ್ಟಿ ಗ್ರಾಮ ಪಂಚಾಯ್ತಿಯವರೆಗೆ ಸುಮಾರು ನಾಲ್ಕು ಗಂಟೆಗಳ ಕಾಲ ನಡೆದ ಸಂವಿಧಾನ ಜಾಗೃತಿ ಜಾಥಾ ಮೆರವಣಿಗೆ ಅದ್ಧೂರಿಯಾಗಿ ಜರುಗಿತು.
ರಾಮಲಿಂಗೇಶ್ವರ ದೇವಸ್ಥಾನದ ಬಳಿ ಜಾಥಾಕ್ಕೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಕವಿತಾ ಬಡಿಗೇರ, ಬಿಇಓ ವಸಂತ ರಾಠೋಡ, ತಹಶೀಲ್ದಾರ್ ಎಸ್.ಎಸ್. ನಾಯ್ಕಲ್ ಮಠ, ನೌಕರರ ಸಂಘದ ಅಧ್ಯಕ್ಷ ಸದಾಶಿವ ದಳವಾಯಿ ಮತ್ತಿತರರು ಚಾಲನೆ ನೀಡಿದರು.
ಅಲ್ಲಿಂದ ಆರಂಭಗೊಂಡ ಜಾಥಾದಲ್ಲಿ ಸಹಸ್ರಾರು ವಿದ್ಯಾರ್ಥಿಗಳು, ಸಾರ್ವಜನಿಕರು, ನಾನಾ ಸಂಘಟನೆಯ ಮುಖಂಡರು, ಮಹಿಳಾ ಮಂಡಳದವರು, ಸ್ತ್ರೀಶಕ್ತಿ ಸಂಘಟನೆಯವರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಆಲಮಟ್ಟಿ ಗ್ರಾಮ ಪಂಚಾಯ್ತಿಯ ಎಲ್ಲಾ ಶಾಲೆಯ ಶಿಕ್ಷಕರು, ಕೆಬಿಜೆಎನ್ ಎಲ್ ಅಧಿಕಾರಿಗಳು, ನಾನಾ ಇಲಾಖೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ನಂತರ ಜರುಗಿದ ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯ್ತಿ ಸಹಾಯಕ ನಿರ್ದೇಶಕ ವೆಂಕಟೇಶ ವಂದಾಲ ಸಂವಿಧಾನ ಪೀಠಿಕೆ ಪ್ರತಿಜ್ಞೆ ಬೋಧಿಸಿದರು. ಅಂಬೇಡ್ಕರ ಭಾವಚಿತ್ರಕ್ಕೆ ಹಾಗೂ ಸಂವಿಧಾನ ಫೋಟೋಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ಮಕ್ಕಳ ಕೋಲಾಟದ ನೃತ್ಯ, ಹಲಗೆ ಮೇಳ, ಬ್ಯಾಂಜೋ ಧ್ವನಿಗೆ ನೃತ್ಯಗೈದ ಹಲವರು ಗಮನಸೆಳೆದರು. ವಿವಿಧ ರಾಷ್ಟ್ರನಾಯಕರ ಛದ್ಮವೇಷಧಾರಿಗಳು ಗಮನಸೆಳೆದರು. ಸುಮಾರು ಒಂದು ಕಿ.ಮೀ ಉದ್ದಕ್ಕೂ ಮೆರವಣಿಗೆಯಿತ್ತು.

