ವಿಜಯಪುರ: ಜಿಲ್ಲೆಯಲ್ಲಿ ಇನ್ನೂ ಶೇಕಡಾ 20% ಕಬ್ಬು ರೈತರ ಜಮೀನಿನಲ್ಲಿ ಇದೆ, ಅವುಗಳು ಮುಗಿಯುವವರೆಗೂ ಕಾರ್ಖಾನೆ ಕಬ್ಬು ಖರೀದಿಸುವುದನ್ನು ಮುಂದುವರೆಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಅವರು ಪತ್ರಿಕೆಯ ಮೂಲಕ ಕಾರ್ಖಾನೆಯ ಆಡಳಿತ ಮಂಡಳಿಗೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.
ಸಕ್ಕರೆ ಕಾರ್ಖಾನೆಯನ್ನೆ ಅವಲಂಬನೆ ಇಟ್ಟುಕೊಂಡು ಕಬ್ಬು ಬೆಳೆದಿರುವ ರೈತರಿಗೆ ಕಬ್ಬು ಕಾರ್ಖಾನೆಗೆ ಕಳುಹಿಸದಿದ್ದರೆ ತುಂಬಾ ನಷ್ಟವಾಗುವುದು, ಇನ್ನೊಂದು ಹದಿನೈದು ದಿನಗಳ ವರೆಗೆ ಕಬ್ಬು ಖರೀದಿ ಮುಂದುವರೆಸಬೇಕು, ಇನ್ನು ಅಲ್ಲಲ್ಲಿ ಉಳಿದ ಕಬ್ಬನ್ನು ರೈತರು ಕಳಿಸಲು ಸಾಧ್ಯವಾಗುತ್ತದೆ .
ಒಂದು ವೇಳೆ ಎಲ್ಲಾ ರೈತರ ಕಬ್ಬು ಮುಗಿಯುವ ಮುಂಚೆನೆ ಕಬ್ಬು ಕರೀದಿ ಬಂದ್ ಮಾಡಿದ್ದೆ ಆದರೆ ಉಗ್ರವಾದ ಹೋರಾಟ ಮಾಡುವುದು ಅನಿವಾರ್ಯವಾಗಲಿದೆ ಎಂದು ಸಂಗಮೇಶ ಸಗರ ಅವರು ಪತ್ರಿಕೆಯ ಮೂಲಕ ಆಗ್ರಹಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

