ಚಡಚಣ: ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಚಡಚಣ ಸಮೀಪದ ನಿವರಗಿಯ ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವಿಯ ಜಾತ್ರೆಯು ಭಾರತ ಹುಣ್ಣಿಮೆ ನಿಮಿತ್ತ ಜಾತ್ರೆಯನ್ನು ಅತೀ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಶುಕ್ರವಾರ ನಸುಕಿನ ಜಾವ 5.00 ಗಂಟೆಗೆ ಅಭಿಷೇಕ ಹಾಗೂ ಉಡಿ ತುಂಬುವ ಕಾರ್ಯಕ್ರಮ ಜರುಗುತ್ತದೆ. ಅದೇ ದಿವಸ ರಾತ್ರಿ 08.00 ಗಂಟೆಗೆ ಪಲ್ಲಕ್ಕಿ ಉತ್ಸವ ಮತ್ತು ಶ್ರೀ ಘೂಳೇಶ್ವರರಿಂದ ನುಡಿ ಮುತ್ತುಗಳು ಜರುಗುವುದು.
ಮತ್ತು ದಿನಾಂಕ: 24.02.2024 ರಂದು ಶನಿವಾರ ಮುಂಜಾನೆ 11.00 ಗಂಟೆಗೆ ಜಾನುವಾರುಗಳ ಮೇಳ ಮತ್ತು ಮಧ್ಯಾಹ್ನ 3.30 ಗಂಟೆಗೆ ಟಗರಿನ ಕಾಳಗ ಜರುಗುವುದು ಅಂದೇ ರಾತ್ರಿ 09.30 ಗಂಟೆಗೆ ಸೊಸೆ ತಂದ ಸಂಪತ್ತು ಎಂಬ ಸಾಮಾಜಿಕ ನಾಟಕ ಇರುವದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಈ ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ಜಾತ್ರಾ ಕಮೀಟಿ ತಿಳಿಸಿದೆ.

