ದೇವರಹಿಪ್ಪರಗಿ: ಬಸವಣ್ಣ, ಮಾಚಿದೇವರು ಸೇರಿದಂತೆ ಎಲ್ಲ ಶರಣರ ವಚನಗಳು ನಮ್ಮ ಭವಿಷ್ಯಕ್ಕೆ ದಾರಿದೀಪಗಳಾಗಿವೆ. ಅವುಗಳ ಅರಿಕೆ ಹಾಗೂ ಅಳವಡಿಕೆ ಇಂದು ಅತ್ಯಂತ ಅಗತ್ಯವಾಗಿದೆ ಎಂದು ಬಸವ ಶರಣಸಂಗಮ ಸೇವಾ ಸಮೀತಿ ಅಧ್ಯಕ್ಷ ಸಂಗಣ್ಣ ತಡವಲ ಹೇಳಿದರು.
ಪಟ್ಟಣದ ಚೈತನ್ಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಗುರುವಾರ ಜರುಗಿದ ಬಸವ ಶರಣ ಸಂಗಮ ವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ವಚನಗಳನ್ನು ಕೇವಲ ಕೇಳಿ ಆನಂದಿಸುವದಲ್ಲ. ಅವುಗಳ ಮಹತ್ವ ಹಾಗೂ ಅರಿಯುವಿಕೆ ಆಗಬೇಕಾಗಿದೆ. ಜೊತೆಗೆ ನಮ್ಮಗಳ ಜೀವನದಲ್ಲಿ ರೂಪಿಸಿಕೊಳ್ಳಬೇಕಾಗಿದೆ ಎಂದರು.
ವಚನ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಜೆ.ಆರ್.ಬಿರಾದಾರ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಕಾರ್ಯದರ್ಶಿ ಗುರುರಾಜ್ ಕುಲಕರ್ಣಿ ಹಾಗೂ ಚುಟುಕು ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಬಿ.ಸಿ.ಹಿರೇಮಠ, ಬಸವಣ್ಣನವರು ಪ್ರಜಾಪ್ರಭುತ್ವಕ್ಕೆ ನೀಡಿದ ಕೊಡುಗೆ, ಶರಣರ ಆಚಾರ ವಿಚಾರಗಳ ಕುರಿತು ಮಾತನಾಡಿದರು.
ಇದೇ ಸಂದರ್ಭದಲ್ಲಿ ಶರಣರ ವಚನ ಪಠಣ ಮಾಡಿದ ಎಲ್ಲ ವಿದ್ಯಾರ್ಥಿಗಳಿಗೆ ವಚನಭಂಡಾರಗಳನ್ನು ವಿತರಿಸಲಾಯಿತು.
ಕಸಾಪ ತಾಲ್ಲೂಕು ಅಧ್ಯಕ್ಷ ಜಿ.ಪಿ.ಬಿರಾದಾರ, ಚೈತನ್ಯ ಸಂಸ್ಥೆಯ ರಮೇಶ ಕೋರಿ, ಆರ್.ಬಿ.ಕಲಕೇರಿ, ಶಶಿಕಾಂತ ಕಠಾರೆ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

