Author: editor.udayarashmi@gmail.com

ವಿಜಯಪುರ: ಅಖಿಲ ಭಾರತ ಮಾನವೀಯತೆ ಸಂದೇಶ ವೇದಿಕೆ ವತಿಯಿಂದ ನಗರದ ಆಸ್ಪತ್ರೆಯಲ್ಲಿ ಹಾಗೂ ಪ್ರಮುಖ ಓಣಿಗಳಲ್ಲಿ ಹಸಿವು ಮುಕ್ತ ನಗರವನ್ನಾಗಿಸುವ ಉದ್ದೇಶದಿಂದ ಸಂಜಯ ಆಹಾರ ವಿತರಿಸಲಾಯಿತು.ಈ ಸಂದರ್ಭ ಸ್ಥಳೀಯ ವೇದಿಕೆಯ ಅಧ್ಯಕ್ಷ ಮೌಲಾನಾ ದಾವುದ ನದ್ವ ಹಾಗೂ ಪದಾಧಿಕಾರಿಗಳು ಮಾತನಾಡಿ, ಇಂದಿಗೂ ನಮ್ಮ ನೆರೆಹೊರೆಯಲ್ಲಿ ಹಸಿವಿನಿಂದ ಮಲಗುವ ಇಂತಹ ಅನೇಕ ಕುಟುಂಬಗಳು ಮತ್ತು ಜನರು ಇದ್ದಾರೆ ಎಂಬುದು ಬಹಳ ವಿಷಾದದ ಸಂಗತಿಯಾಗಿದೆ, ಅವರಿಗೆ ಆಹಾರ ಮತ್ತು ಸೇವೆ ಸಲ್ಲಿಸುವುದು ಒಂದು ದೊಡ್ಡ ಪುಣ್ಯದ ಕಾರ್ಯವಾಗಿದೆ. ನಾವು ನಮ್ಮ ಸಹೋದರರು, ದೇಶವಾಸಿಗಳು ಮತ್ತು ದೇಶದ ಬಗ್ಗೆ ಕಾಳಜಿ ವಹಿಸಬೇಕು. ಪ್ರತಿಯೊಬ್ಬರನ್ನು ಪ್ರೀತಿಸಬೇಕು. ಕಷ್ಟದಲ್ಲಿರುವವರಿಗೆ ಹಸಿದವರಿಗೆ, ಸಹಾಯ ಮಾಡಬೇಕು. ಹಸಿವು ನಿಯಂತ್ರಿಸಿದರೆ, ನಮ್ಮ ಸಮಾಜವು ಅನೇಕ ಅಪರಾಧಗಳಿಂದ ಪಾರಾಗುತ್ತದೆ. ಉತ್ತಮ ಪರಿಸರ ಸ್ಥಾಪನೆಯಾಗುತ್ತದೆ. ಹಸಿವು ಒಂದು ದೊಡ್ಡ ವಿಷಯ. ಇದರಿಂದಾಗಿ, ಮನುಷ್ಯನು ಭಿಕ್ಷೆ ಬೇಡುವ ಅನಿವಾರ್ಯತೆಗೆ ಸಿಲುಕುತ್ತಾನೆ. ಒಂದೊಂದು ಹೊತ್ತಿನ ಊಟಕ್ಕೂ ಹಾತೊರೆಯುತ್ತಾನೆ. ಇಂದು ನಾವು ನಮ್ಮ ಸ್ವಾರ್ಥ ಮತ್ತು ಸ್ವಹಿತಾಸಕ್ತಿಗೆ ಒಳಗಾಗುತ್ತೆವೆ ಎಂದು…

Read More

ಬೇನಾಳದಲ್ಲಿ ಶಾಲಾ ಕೊಠಡಿ ಉದ್ಘಾಟನೆ | ಕಬಡ್ಡಿ ಪಂದ್ಯಾವಳಿಗೆ ಚಾಲನೆ ಆಲಮಟ್ಟಿ: ನನ್ನ ಮತಕ್ಷೇತ್ರದ ಸರ್ವ ಗ್ರಾಮಗಳನ್ನು ಭಾವೈಕ್ಯತೆಯ ಗ್ರಾಮಗಳನ್ನಾಗಿ ನಿರ್ಮಾಣ ಮಾಡಲು ಪ್ರಯತ್ನಿಸುತ್ತಿದ್ದರೆ, ಭಾವೈಕ್ಯತೆಯನ್ನೇ ತನ್ನ ಉಸಿರನ್ನಾಗಿ ಜೀವಿಸುತ್ತಿರುವ ಪ್ರಗತಿ ಗ್ರಾಮ ಎಂದರೇ ಅದು ಬೇನಾಳ, ಆ ಗ್ರಾಮದ ಶಾಸಕನಾಗಿರುವುದಕ್ಕೂ ನಾನು ಹೆಮ್ಮೆ ಪಡುತ್ತೇನೆ ಎಂದು ಜವಳಿ, ಎಪಿಎಂಸಿ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿದರು.ಸಮೀಪದ ಬೇನಾಳ ಆರ್ ಎಸ್ ಗ್ರಾಮದಲ್ಲಿ ಶನಿವಾರ ರಾತ್ರಿ ಅಲ್ಲಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಎರಡು ಹೆಚ್ಚುವರಿ ಕೊಠಡಿಗಳು ಉದ್ಘಾಟನೆ ಹಾಗೂ ಟಿಪ್ಪು ಸುಲ್ತಾನ್ ಯುವಕ ಸಂಘ ಟಿಪ್ಪು ಸುಲ್ತಾನ ಮತ್ತು ಭಕ್ತ ಕನಕದಾಸ ಜಯಂತಿ ನಿಮಿತ್ತ ಹಮ್ಮಿಕೊಂಡ ರಾಜ್ಯ ಮಟ್ಟದ 55 ಕೆಜಿಯೊಳಗಿನ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಮಾತನಾಡಿ, ಬೇನಾಳ ಗ್ರಾಮ ಹಲವು ಸಂಸ್ಕೃತಿಕ ವಿಶಿಷ್ಠ್ಯತೆಯ ತಾಣ, ಗ್ರಾಮದ ಅಭಿವೃದ್ಧಿಗೆ ಇಡೀ ಗ್ರಾಮವೇ…

Read More

ವಿಜಯಪುರ: ಸಮಾಜ ಸೇವೆಯ ಮೂಲಕ ಗುರುತಿಸಿಕೊಂಡಿರುವ ವಿಜಯಪುರ ನಗರದ ತನು ಫೌಂಡೇಶನ್ ಪ್ರತಿ ವರ್ಷ ರಾಜ್ಯೋತ್ಸವವನ್ನು ಆಚರಿಸುವುರೊಂದಿಗೆ ಕನ್ನಡ ನಾಡು ನುಡಿ ಸೇರಿದಂತೆ ನಾಡಿನ ವಿವಿಧ ಕ್ಷೇತ್ರಗಳಿ ತಮ್ಮ ಅನುಪಮ ಸೇವೆ ಸಲ್ಲಿಸಿದ ವ್ಯಕ್ತಿಗಳನ್ನು ಗುರುತಿಸಿ ತನು ಕನ್ನಡ ಮನ ಕನ್ನಡ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಅರ‍್ವಯ ಈ ವರ್ಷದ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಇದೇ ತಿಂಗಳ ೨೯ ನೇ ತಾರೀಖಿನಂದು ನಗರದ ಕಂದಗಲ್ ಹಣಮಂತ್ರಾಯ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಹೆಲೆನ್ ಮೈಸೂರು, ಪುಷ್ಪಾ ಹಿರೇಮಠ, ಡಾ||ಪ್ರವೀಣ ಬಗಲಿ, ವೀರೇಶ ವಾಲಿ, ಶ್ರೀವಿಜಯಕುಮಾರ ಮಮದಾಪುರ, ಡಾ.ಸುರೇಶ ಲೋಣಿ, ಮಹಾಂತೇಶ ಮಾಹೂರ, ನಾಶಿ ದಂಪತಿಗಳು, ಸಿದ್ಧಣ್ಣ ವಿಜಾಪುರ, ಸಿದ್ರಾಮ ಅಗಸರ, ಕುಮಾರ ಅಮಾತೆಪ್ಪ ಪೂಜಾರಿ, ವಿಎಸ್‌ಜಿ ಗ್ರೂಪ್ ಪ್ರಶಸ್ತಿಯನ್ನು ಪಡೆದುಕೊಳ್ಳಲಿದ್ದಾರೆ. ಅನಿತಾ ಕೆ.ಆರ್ ಪೇಟೆ, ಗಿರೀಶ ಇಟ್ಟಂಗಿ, ಸೋಮನಾಥ ವಾಲಿಕಾರ, ಪ್ರೇಮ ಚಲವಾದಿ, ಧನ ಲಕ್ಷ್ಮಿ ದೊಡಮನಿ, ಸುರೇಶ ಜತ್ತಿ, ಸಂಗನಬಸವರಾಜ ಗೂಡ್ಲುಮನಿ ವಿಶೇಷ ಸನ್ಮಾನ ಪಡೆದುಕೊಳ್ಳಲಿದ್ದಾರೆ.ಇಂಡಿಯ ರಿಸರ್ವ…

Read More

ಆರೆಸ್ಸೆಸ್ ನಗರ ವಾರ್ಷಿಕೋತ್ಸವ | ಉತ್ತರ ಕರ್ನಾಟಕ ಪ್ರಾಂತ ಪ್ರಚಾರಕ ನರೇಂದ್ರ ಸ್ಪಷ್ಠನೆ ವಿಜಯಪುರ: ಕೊರೊನಾದಂಥ ಅನೇಕ ವೈರಸ್ ನಮ್ಮ ಜೊತೆಗಿದ್ದು ಜಾತಿಗಳ ನಡುವೆ ವಿಘಟನೆ ಮತ್ತು ಹಿಂದೂ ಸಮಾಜದಲ್ಲಿ ಒಡಕು ಮೂಡಿಸುವ ಪ್ರಯತ್ನ ಮಾಡುತ್ತವೆ ಎಂದು ಆರ್ ಎಸ್ ಎಸ್ ಉತ್ತರ ಕರ್ನಾಟಕ ಪ್ರಾಂತ ಪ್ರಚಾರಕ ನರೇಂದ್ರ ಹೇಳಿದ್ದಾರೆ.ನಗರದ ದರಬಾರ ಹೈಸ್ಕೂಲ್ ಮೈದಾನದಲ್ಲಿ ಆರ್ ಎಸ್ ಎಸ್ ನಗರ ವಾರ್ಷಿಕೋತ್ಸವದ ಅಂಗವಾಗಿ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.ಹಿಂದೂ ಎಂಬುದು ಕೇವಲ ಮೆರವಣಿಗೆಯ ಘೋಷಣೆಗೆ ಸೀಮಿತವಾಗಬಾರದು. ಪ್ರತಿದಿನ ಹಿಂದೂ ಆಗಬೇಕು. ಹಿಂದೂ ಸಮಾಜ ಎಷ್ಟು ಬೇಗ ಸಂಘಟಿತವಾಗುತ್ತದೆಯೋ ಅಷ್ಟೇ ಸಮಯದಲ್ಲಿ ಗುಂಪುಗಳಾಗಿ ವಿಭಜನೆಯಾಗುತ್ತದೆ. ಇದು ಸಮಾಜಕ್ಕೆ ದೊಡ್ಡ ಸವಾಲಾಗಿದೆ. ದುಷ್ಟಶಕ್ತಿಗಳು ಈ ರೀತಿಯ ಸವಾಲುಗಳನ್ನು ಭಾರತದಲ್ಲಿ ಯಾವಾಗಲೂ ಇರಿಸುತ್ತಿರುತ್ತವೆ. ಅವುಗಳನ್ನು ನಾವು ಸಂಘಟಿತರಾಗಿ ಸಮರ್ಥವಾಗಿ ಎದುರಿಸಬೇಕಿದೆ ಎಂದು ಹೇಳಿದರು.ಅಧಿಕಾರಿಯೊಬ್ಬರನ್ನು ನಾವು ಕರೆದು ಚಹಾ ಕುಡಿಸುತ್ತೇವೆ. ಆದರೆ ಪೌರ ಕಾರ್ಮಿಕ ಬಂಧುಗಳನ್ನು ಕರೆದು ಚಹಾ ಕುಡಿಸುತ್ತೆವೆಯೇ? ಈ ಕಾರಣಕ್ಕಾಗಿಯೇ ಅವರು ರಾಬರ್ಟ್…

Read More

ನವದೆಹಲಿ: ಪತ್ರಕರ್ತೆ ಸೌಮ್ಯ ವಿಶ್ವನಾಥನ್ ಹತ್ಯೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ದೆಹಲಿಯ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.2008 ರಲ್ಲಿ ಟಿವಿ ಪತ್ರಕರ್ತೆ ಸೌಮ್ಯ ವಿಶ್ವನಾಥನ್ ಅವರನ್ನು ಹತ್ಯೆ ಮಾಡಲಾಗಿತ್ತು. ಪ್ರಕರಣದ 5 ನೇ ಆರೋಪಿಗೆ 3 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ.ಆರೋಪಿಗಳಾದ ರವಿ ಕಪೂರ್, ಅಮಿತ್ ಶುಕ್ಲಾ, ಬಲ್ಜೀತ್ ಮಲೀಕ್ ಹಾಗೂ ಅಜಯ್ ಕುಮಾರ್ ಎಂಬ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿರುವ ನ್ಯಾಯಾಲಯ ಅಪರಾಧಿಗಳಿಗೆ ತಲಾ 1.25 ಲಕ್ಷ ರೂಪಾಯಿ ದಂಡ ವಿಧಿಸಿದೆ. ಐದನೇ ಅಪರಾಧಿ ಅಜಯ್ ಸೇಥಿಗೆ ಮೂರು ವರ್ಷಗಳ ಸಾದಾ ಜೈಲು ಶಿಕ್ಷೆ ಹಾಗೂ 7.25 ಲಕ್ಷ ರೂ ದಂಡ ವಿಧಿಸಲಾಗಿದೆ.ಆದಾಗ್ಯೂ, ಅಪರಾಧಿಗಳು ಈಗಾಗಲೇ 14 ವರ್ಷಗಳಿಗಿಂತ ಹೆಚ್ಚು ಜೈಲು ಶಿಕ್ಷೆಯನ್ನು ಅನುಭವಿಸಿದ್ದಾರೆ ಎಂಬುದನ್ನು ನ್ಯಾಯಾಲಯ ಗಮನಿಸಿದೆ. ಅಪರಾಧಿಗಳಿಗೆ ವಿಧಿಸಲಾದ ಒಟ್ಟು ದಂಡದ ಮೊತ್ತದಲ್ಲಿ 12 ಲಕ್ಷ ರೂ.ಗಳನ್ನು ಸಂತ್ರಸ್ತೆಯ ಕುಟುಂಬಕ್ಕೆ ಪಾವತಿಸುವಂತೆ ನ್ಯಾಯಾಲಯ ಆದೇಶಿಸಿದೆ.ಶಿಕ್ಷೆಯ ಪ್ರಮಾಣವನ್ನು ಆದೇಶಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು, ಅಪರಾಧವು ಅಪರೂಪದ ಅಪರೂಪದ…

Read More

ಚಡಚಣ: ಧುಮಕನಾಳ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಭೀರಲಿಂಗೇಶ್ವರ ಜಾತ್ರಾ ಮಹೋತ್ಸವ ಜರುಗಲಿದ್ದು ರವಿವಾರ ದಿನಾಂಕ:೧೯-೧೧-೨೦೨೩ ರಂದು ಬೆಳಿಗ್ಗೆ ೬ ಗಂಟೆಗೆ ಗ್ರಾಮದ ಎಲ್ಲ ದೇವಾದಿಗಳ ಅಭಿಷೇಕ ಕಾರ್ಯಕ್ರಮ ಜರುಗುವುದು,ಮುಂಜಾನೆ ೧೦-೦೦ ಗಂಟೆಗೆ ಗ್ರಾಮದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕ ಸಂಘದಿಂದ ವಾಲಗ ಕಾರ್ಯಕ್ರಮ ಜರುಗುವುದು.ಮದ್ಯಾಹ್ನ ೩-೦೦ ಗಂಟೆಗೆ ಶ್ರೀ ಭೀರಲಿಂಗೇಶ್ವರ ಪಲ್ಲಕ್ಕಿ ಧುಮಕನಾಳ,ಶ್ರೀ ಲಾಯಗಂಗಾ ದೇವಿ ಪಲ್ಲಕ್ಕಿ ಹಡಲಸಂಗ,ಹಾಗೂ ಶ್ರೀ ಲಕ್ಷ್ಮಿ ದೇವಿ ಪಲ್ಲಕ್ಕಿ ಸಾತಲಗಾಂವ, ಶ್ರೀ ಭೀರಲಿಂಗೇಶ್ವರ ಪಲ್ಲಕ್ಕಿ ನಂದರಗಿ ಹಾಗೂ ಶ್ರೀ ಮಾಳಿಂಗರಾಯ ಪಲ್ಲಕ್ಕಿ ಶಿಗಣಾಪುರ ದೇವರುಗಳ ಭೇಟಿ ಕಾರ್ಯಕ್ರಮ ಸಕಲ ವಾದ್ಯ ವೈಭವದೊಂದಿಗೆ ಎಲ್ಲ ದೇವರುಗಳನ್ನು ಬರಮಾಡಿಕೊಂಡು ಸಮಾಗಮ ಭೇಟಿ ಕಾರ್ಯಕ್ರಮ ಜರುಗುವುದು. ನಂತರ ನುಡಿಮುತ್ತು ಕಾರ್ಯಕ್ರಮ ಜರುಗುವುದು. ಸಾಯಂಕಾಲ ೬-೦೦ ಗಂಟೆಗೆ ದೇವರುಗಳ ಪೂಜಾ ಕಾರ್ಯಕ್ರಮ ಜರುಗುವುದು. ರಾತ್ರಿ ೯-೩೦ ಗಂಟೆಯಿಂದ ಬೆಳಿಗ್ಗೆ ೬-೦೦ ಗಂಟೆಯ ವರೆಗೆ ಧುಮಕನಾಳ ಗ್ರಾಮದ ಶ್ರೀ ಭೀರಲಿಂಗೇಶ್ವರ ಡೊಳ್ಳಿನ ಗಾಯನ ಸಂಘದಿಂದ ಸುಪ್ರಸಿದ್ದ ಡೊಳ್ಳಿನ ಗಾಯಕ ಶ್ರೀ…

Read More

ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಠನೆ ಸರ್ಕಾರದಿಂದ ಆಶ್ವಾಸನೆಗಳ ಈಡೇರಿಕೆ | ಎಚ್ಡಿಕೆಯಿಂದ ದ್ವೇಷಾಸೂಯೆ ರಾಜಕಾರಣ | ವಿದ್ಯುತ್ ಕಳವು ಮಾಡಿದವರಿಗೆ ಆರೋಪಿಸುವ ನೈತಿಕತೆಯಿಲ್ಲ ಮೈಸೂರು: ಪ್ರತಿಪಕ್ಷದ ನಾಯಕರು ಯಾರಾದರೂ ನಮಗೆ ಅಭ್ಯಂತರವಿಲ್ಲ. ಜನರ ಆಶೀರ್ವಾದದಿಂದ ಸರ್ಕಾರ ರಚಿಸಿರುವ ನಮ್ಮ ಕಾಂಗ್ರೆಸ್ ಸರ್ಕಾರ ಜನರಿಗೆ ನೀಡಿರುವ ಆಶ್ವಾಸನೆಗಳನ್ನು ಈಡೇರಿಸುತ್ತಿದೆ. ರಾಜ್ಯದಲ್ಲಿ ದ್ವೇಷದ ರಾಜಕಾರಣ ಮಾಡದೇ, ಶಾಂತಿಯುತವಾದ ವಾತಾವರಣವನ್ನು ಸರ್ಕಾರ ನಿರ್ಮಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಈ ಕುರಿತು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ದ್ವೇಷದ ರಾಜಕಾರಣ ಮಾಡದೇ, ಶಾಂತಿಯುತವಾದ ವಾತಾವರಣವನ್ನು ಸರ್ಕಾರ ನಿರ್ಮಿಸುತ್ತಿದೆ. ಬಿಜೆಪಿಯವರು ಸರ್ಕಾರದ ವಿರುದ್ಧ ಮಾಡುತ್ತಿರುವ ಭ್ರಷ್ಟಾಚಾರದ ಆರೋಪಗಳಿಗೆ ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಉತ್ತರವನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಇಂದು ಚುನಾವಣೆ ನಡೆದರೂ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ಯಡಿಯೂರಪ್ಪನವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಚುನಾವಣೆಯಲ್ಲಿ ಕೇವಲ 66 ಸೀಟು ಪಡೆದು ವಿರೋಧ ಪಕ್ಷದಲ್ಲಿ ಕುಳಿತಿದ್ದಾರೆ. ಅವರ ಮಗ ವಿಜಯೇಂದ್ರರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಿರುವುದರಿಂದ ಅವರ ಪಕ್ಷದ…

Read More

ಕೊಲ್ಹಾರ: ಮಹಿಳೆಯರಿಗೆ ಹೊರ ಜಗತ್ತನ್ನು ಪರಿಚಯಿಸಿ ಆರ್ಥಿಕತೆಯ ಸ್ವಾವಲಂಭಿ ಬದುಕಿಗೆ ದಾರಿದೀಪವಾಗಿರುವುದು ಸಹಕಾರಿ ಸಂಘದ ಹೆಗ್ಗಳಿಕೆಯಾಗಿದೆ ಎಂದು ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಹೇಳಿದರು.ತಾಲೂಕಿನ ಕೂಡಗಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ೭೦ ನೇ ಅಖಿಲ ಭಾರತ ಸಹಕಾರಿ ಸಪ್ತಾಹ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ರಾಜ್ಯ ಸಹಕಾರ ವಿಮಾ ಮಹಾಮಂಡಳದ ನಿರ್ದೇಶಕ ಶಿವನಗೌಡ ಬಿರಾದಾರ ಮಾತನಾಡಿ, ಕೇವಲ ೧೦-೧೨ ವರ್ಷಗಳ ಕಾಲಾವಧಿಯಲ್ಲಿ ಕೂಡಗಿ ಸಹಕಾರಿ ಸಂಘ ಸುಸಜ್ಜಿತ ಕಟ್ಟಡ ಹೊಂದಿ ಪ್ರಗತಿಯ ಪಥದತ್ತ ಮುನ್ನಡೆದು ಪ್ರಸ್ತುತ ವರ್ಷ ೭.೯೩ ಲಕ್ಷ ರೂ., ಲಾಭ ಗಳಿಸಿ ಗ್ರಾಮೀಣಾಭಿವೃದ್ಧಿಗೆ ಮುನ್ನುಡಿ ಬರೆಯುತ್ತಿರುವುದು ಶ್ಲಾಘನೀಯ ಸಂಗತಿ ಎಂದರು.ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮಕ್ಕಳ ಸಾಹಿತಿ ಫ.ಗು. ಸಿದ್ದಾಪುರ ಮಾತನಾಡುತ್ತ ಬಸವಣ್ಣನವರ ಕಾಲದಿಂದಲೂ ಸಹಕಾರ ತತ್ವ ಮುನ್ನಡೆದು ಬಂದ ದಾರಿಯನ್ನು ಸ್ಮರಿಸುತ್ತ ಉಪನ್ಯಾಸ ನೀಡಿದರು.ಸಾನಿಧ್ಯ ವಹಿಸಿದ್ದ ಮಸೂತಿ ಜಗದೀಶ್ವರ ಹಿರೇಮಠದ ಪ್ರಭುಕುಮಾರ ಶಿವಾಚಾರ್ಯರು ಆಶೀರ್ವಚನ ನೀಡಿದರು. ಜಿಲ್ಲಾ ಸಹಕಾರಿ…

Read More

ಕೊಲ್ಹಾರ: ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಕೊಲ್ಹಾರ ತಾಲೂಕಾ ಯುವ ಘಟಕದ ಪದಾಧಿಕಾರಿಗಳನ್ನು ಅಧ್ಯಕ್ಷ ವಿಜಯಮಹಾಂತೇಶ ಗಿಡ್ಡಪ್ಪಗೋಳ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.ಯುವ ಘಟಕದ ಅಧ್ಯಕ್ಷರನ್ನಾಗಿ ಸಂತೋಷ ಬಸಪ್ಪ ಹಡರೊಳ್ಳಿ, ಗೌರವ ಅಧ್ಯಕ್ಷರಾಗಿ ಯಲ್ಲಪ್ಪ ಹಣಮಂತ ಪೂಜಾರಿ, ಉಪಾಧ್ಯಕ್ಷರಾಗಿ ಶಶಿಧರ ಮಠ, ಪದಾದಿಕಾರಿಗಳಾಗಿ ಮಲ್ಲು ಉಗ್ರಾಣ, ಆನಂದ ಬಡಿಗೇರ, ಕಲಬಸಯ್ಯ ಕಂಬಿ, ಕಲ್ಲಪ್ಪ ಬೆಳ್ಳುಬ್ಬಿ, ಸಚಿನ ನೀಲವಾಣಿ, ಶಾಲು ಬಿಜಾಪೂರ, ಶಿವಶಂಕರ ಏಳಗಂಟಿ, ಶಿವಪ್ಪ ಸಂಧಿಮನಿ, ಸಂಗು ಹಡರೊಳ್ಳಿ ಇವರನ್ನು ನೇಮಕ ಮಾಡಲಾಗಿದೆ ಎಂದು ಪತ್ರಿಕಾಪ್ರಕಟಣೆ ಮೂಲಕ ತಿಳಿಸಿದ್ದಾರೆ.

Read More

ಕೊಲ್ಹಾರ: ವಿಧಾನಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ಆರ್.ಅಶೋಕ ಅವರನ್ನು ವರಿಷ್ಠರು ಹಾಗೂ ಶಾಸಕರು ಸರ್ವಾನುಮತದಿಂದ ಆಯ್ಕೆ ಮಾಡಿರುವುದನ್ನು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹರ್ಷ ವ್ಯಕ್ತಪಡಿಸಿದ್ದಾರೆ.ಈ ಕುರಿತು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಶಾಸನಸಭೆಯ ಅನುಭವಿ ರಾಜಕಾರಣಿ ಪಕ್ಷದ ನಿಷ್ಟಾವಂತ ಸಾಮಾನ್ಯ ಕಾರ್ಯಕರ್ತನಿಗೆ ಒಲಿದ ಅದೃಷ್ಟ ಆರ್.ಅಶೋಕ ಅವರ ಪಾಲಾಗಿರುವದು ಬಿಜೆಪಿ ಪಕ್ಷವು ಹಿರಿತನಕ್ಕೆ ಮತ್ತು ಪಕ್ಷ ನಿಷ್ಟೆಗೆ ಒಲಿಯುತ್ತದೆ ಎನ್ನುವದಕ್ಕೆ ಸಾಕ್ಷಿಯಾಗಿದೆ. ಅದರಂತೆ ಯುವ ಮುಖಂಡ ಬಿ.ವಾಯ್.ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಲು ಅನುಕೂಲ ಮಾಡಿಕೊಟ್ಟಿರುವ ಹೈಕಮಾಂಡ್ ನಿರ್ಧಾರವನ್ನು ಕಾರ್ಯಕರ್ತರು ಸ್ವಾಗತಿಸಿದ್ದಾರೆ ಎಂದರು.ಯುವಕರಾದ ವಿಜಯೇಂದ್ರ ಹಾಗೂ ಹಿರಿಯರಾದ ಆರ್.ಅಶೋಕ ಅವರು ರಾಜ್ಯದಲ್ಲಿ ಮುಂಬರುವ ಎಲ್ಲ ಚುನಾವಣೆಗಳಲ್ಲಿ ಜೋಡೆತ್ತಿನ ಹಾಗೆ ಪಕ್ಷದ ಸಂಘಟಣೆಯಲ್ಲಿ ಪ್ರತಿಯೊಬ್ಬ ಕಾರ್ಯಕರ್ತನ ಕರ್ತವ್ಯ ನಿಭಾಯಿಸಲು ಕೆಲಸಮಾಡಿ ಭಾರತೀಯ ಜನತಾಪಕ್ಷ ಅಭೂತಪೂರ್ವ ಯಶಸ್ಸು ಸಾಧಿಸಲು ಹಿರಿಯರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಾರೆ ಎನ್ನುವ ಆಶಾಭಾವನೆ ಮೂಡಿದೆ ಎಂದರು.

Read More