ಸಿಂದಗಿ: ಜಗತ್ತಿಗೆ ದಾನದ ಮಹಿಮೆಯನ್ನು ಸಾರಿ ಲಿಂಗಮ್ಮ ದಾನಮ್ಮಳಾಗಿ ಬೇಡಿದ ವರ ಕರುಣಿಸುವ ವರದಾನೇಶ್ವರಿ ಎಂದೇ ಪ್ರಸಿದ್ಧಿಯಾಗಿರುವ ಗುಡ್ಡಾಪುರ ದಾನಮ್ಮದೇವಿ ಭಕ್ತರ ಎಲ್ಲ ಇಷ್ಟಗಳನ್ನು ಪೂರೈಸಿದ್ದಾಳೆ ಎಂದು ಕಾಶಿ ಪೀಠದ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯ ಭಗವತ್ಪಾದಂಗಳ ಹೇಳಿದರು.
ಪಟ್ಟಣದ ಸಾರಂಗಮಠದಲ್ಲಿ ನೂತನವಾಗಿ ನಿರ್ಮಾಣವಾದ ಗುಡ್ಡಾಪುರ ದಾನಮ್ಮ ದೇವಿ ಹಾಗೂ ಸೋಮನಾಥೇಶ್ವರ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಕಾರ್ಯವನ್ನು ನೆರವೇರಿಸಿ ಮಾತನಾಡಿದ ಅವರು, ಕಲ್ಯಾಣ ಕ್ರಾಂತಿಯ ನಂತರ ಶರಣರ ವಚನಗಳನ್ನು ಕಾಪಾಡುವ, ಪ್ರಸಾರ ಮಾಡುವ ಕಾರ್ಯವನ್ನು ಮಾಡಿದವಳು ಗುಡ್ಡಾಪುರ ದಾನಮ್ಮ ದೇವಿ ಶಿವ ಶರಣರ ಸಂಸ್ಕೃತಿಯಿಂದ ಬೆಳೆದು ಬಂದ ಲಿಂಗಮ್ಮಳು, ದಿನದಲಿತರ ಸೇವೆಯನ್ನು ಮನಗಂಡ ಬಸವಣ್ಣನವರಿಂದ ದಾನಮ್ಮಳಾಗಿ ಪ್ರಖ್ಯಾತಿಯನ್ನು ಹೊಂದಿದಳು. ತನಗೆ ನಂಬಿ ಬಂದ ಭಕ್ತರನ್ನು ಉದ್ದರಿಸುತ್ತಾ ಬಂದಿದ್ದಾಳೆ. ಇದೀಗ ಸಿಂದಗಿಯಲ್ಲಿಯೂ ನೆಲೆಗೊಂಡಿದ್ದಾಳೆ ಎಂದರು.
ಮೂರ್ತಿ ಪ್ರಾಣ ಪ್ರತಿಷ್ಠಾಪನೆಯ ಪೂಜಾ ಕಾರ್ಯದಲ್ಲಿ ಶ್ರೀಶೈಲದ ವೀರಶೈವ ಗುರುಕುಲ ವೇದ ಸಂಸ್ಕೃತ ಪಾಠ ಶಾಲೆಯ ಚಂದ್ರಶೇಖರ ಶಿವಾಚಾರ್ಯರು, ಮಲ್ಲಿಕಾರ್ಜುನ ಸ್ವಾಮಿಗಳ ಶಿಷ್ಯ ಬಳಗ, ಶಿವಶಂಕರ ಶಾಸ್ತ್ರಿ, ದಿವಾಕರ ಸ್ವಾಮಿ, ವಿಜಯಕುಮಾರ್ ಸ್ವಾಮಿ, ಮಂಜುನಾಥ ಸ್ವಾಮಿ, ರವಿಶಂಕರ ಸ್ವಾಮಿ, ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ, ಗುಡ್ಡಾಪುರದ ಗುರುಪಾದೇಶ್ವರ ಶಿವಾಚಾರ್ಯರು, ಶಹಾಪುರದ ಸೂಗರೇಶ್ವರ ಶಿವಾಚಾರ್ಯರು, ಸಿಂದಗಿ ಊರಣ ಹಿರಿಯ ಮಠದ ಶಿವಾನಂದ ಶಿವಾಚಾರ್ಯರು, ಜಮಖಂಡಿಯ ಕೊಣ್ಣೂರಿನ ಹೊರಗಿನ ಮಠದ ಡಾ.ವಿಶ್ವ ಪ್ರಭುದೇವ ಶಿವಾಚಾರ್ಯರು, ಕನ್ನೊಳ್ಳಿಯ ಸಿದ್ದಲಿಂಗ ಶಿವಾಚಾರ್ಯರು, ಕಲಕೇರಿ ಗದ್ದಿಗೆಮಠದ ಮಡಿವಾಳೇಶ್ವರ ಶಿವಾಚಾರ್ಯರು, ಅಶೋಕ ವಾರದ, ಗಂಗಾಧರ ಜೋಗುರ, ರವಿ ಗೋಲಾ, ವೀರೇಶ ಜೋಗುರ, ಶರಣಬಸವ ಜೋಗುರ, ಚೆನ್ನಪ್ಪ ಕತ್ತಿ, ಬಸವರಾಜ ಮಕ್ಕಳಮೇಲಿ, ಎಂ.ಎಸ್. ಹಯ್ಯಾಳಕರ ಸೇರಿದಂತೆ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ವಿವಿಧ ಅಂಗ ಸಂಸ್ಥೆಗಳ ಪ್ರಾಚಾರ್ಯರು, ಉಪನ್ಯಾಸಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಮತ್ತು ಶ್ರೀಮಠದ ಭಕ್ತರು ಉಪಸ್ಥಿತರಿದ್ದರು. ಈ ವೇಳೆ ೩೦೦೦ಕ್ಕೂ ಹೆಚ್ಚು ಮುತ್ತೈದೆಯರಿಗೆ ಉಡಿ ತುಂಬಲಾಯಿತು.
Subscribe to Updates
Get the latest creative news from FooBar about art, design and business.
Related Posts
Add A Comment

