ವಿಜಯಪುರ: ನಗರದ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಐ.ಕ್ಯೂ.ಏ.ಸಿ ಹಾಗೂ ಪ್ಲೇಸಮೆಂಟ್ ಘಟಕಗಳ ಆಶ್ರಯದಲ್ಲಿ ‘ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆ – ಒಂದು ದಿನದ ಕಾರ್ಯಗಾರ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಆರ್. ಎಸ್ ಕಲ್ಲೂರ್ಮಠ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸತತ ಪರಿಶ್ರಮ, ನಿರಂತರ ಪ್ರಯತ್ನ ಮತ್ತು ತಾಳ್ಮೆಯಿಂದ ಅಧ್ಯಯನ ಮಾಡಿದರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಲು ಸಾಧ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಪುಸ್ತಕಗಳನ್ನು ಬಿಡುಗಡೆಗೊಳಿಸಿ ವಿದ್ಯಾರ್ಥಿಗಳಿಗೆ ಪರಿಚಯಿಸಲಾಯಿತು.
ಕಾರ್ಯಕ್ರಮದ ಮೊದಲು ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಪ್ರೊ ಪಿ. ಬಿ.ಬಿರಾದಾರ ವಿವಿದಾಸ್ ಸ್ಪರ್ಧಾತ್ಮಕ ಪರೀಕ್ಷೆಗಳಾದ ಐಎಎಸ್, ಕೆಎಎಸ್, ಎಫ್ ಡಿ ಎ, ಎಸ್ ಡಿ ಎ, ಪಿಡಿಒ, ಪಿಎಸ್ಐ,ಪಿ ಸಿ, ಮುಂತಾದ ಪರೀಕ್ಷೆಗಳಿಗೆ ತಯಾರು ಮಾಡಲು ಸೂಕ್ತ ಸಲಹೆ ಸೂಚನೆಗಳನ್ನು ನೀಡಿ ಮಾರ್ಗದರ್ಶನ ಮಾಡಿದರು.
ಎರಡನೆಯ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಡಾ. ಚಿದಾನಂದ ಎಸ್. ಆನೂರ, ವಿವಿಧ ಬ್ಯಾಂಕಿಂಗ್ ಆರ್ ಆರ್ ಬಿ ಪರೀಕ್ಷೆಗಳ ಬಗ್ಗೆ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ ಫೋಟೋ ಪೂಜೆ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ. ರಾಜಶೇಖರ್ ಬೆನಕನಹಳ್ಳಿ,ಪ್ರೊ. ಎಂ ಆರ್ ಜೋಶಿ, ಪ್ರೊ ಬಿ ಎ ಹೊಸಟ್ಟಿ ಪ್ರೊ. ಆರ್ ಟಿ ಬಳ್ಳೊಳ್ಳಿ, ಡಾ. ದೌಲಸಾಬ್ ಪಿಂಜಾರ್,ಡಾ. ಎಂ ಆರ್ ಕೆಂಭಾವಿ, ಪ್ರೊ ಲಕ್ಷ್ಮಿ ಮೋರೆ, ಶಿವಾನಂದ ಸಂಗೊಲಿ ವೀರನಗೌಡ ಬಿರಾದಾರ್, ನವೀನ್ ಗೌಡ ಬಿರಾದಾರ್,ಸುಜಾತಾ ಬಿರಾದಾರ, ಪ್ರೊ ಮಂಜುನಾಥ ಗಾಣಿಗೇರ,ಪ್ರೊ. ರಾಜೇಶ್ವರಿ ಪುರಾಣಿಕ, ಪ್ರೊ ರಾಮಣ್ಣ ಕಳ್ಳಿ, ಪ್ರೊ ಬೋರಮ್ಮ ಗಂಜಿಹಾಳ, ಪ್ರೊ ನಾಥುರಾಮ್ ಪವಾರ, ಪ್ರೊ ಫೈರೋಜ್ ಪಠಾಣ, ಪ್ರೊ ಸದಾಶಿವ ಚಲವಾದಿ,ಡಾ. ಆನಂದ ಕುಲಕರ್ಣಿ, ಹಾಗೂ ಇತರರ ಬೋಧಕ -ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಪ್ರೊ ಲಕ್ಷ್ಮಿ ಮೋರೆ ಸ್ವಾಗತಿಸಿದರು. ಡಾ. ರಾಘವೇಂದ್ರ ಗುರುಜಾಲ ನಿರೋಪಿಸಿದರು. ಪ್ರೊ ರಾಮಪ್ಪ ಕೋಮಟಗಿ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

