ಮುದ್ದೇಬಿಹಾಳ: ತಾಲೂಕಿನ ಮಾದಿನಾಳ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಮೊಸಳೆಯನ್ನು ಅರಣ್ಯ ಇಲಾಖೆಯ ತಂಡ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ಗ್ರಾಮದ ಈಶ್ವರ ಹಿರೇಮಠ ಎನ್ನುವವರ ಜಮೀನಿನ ಭಾವಿಯಲ್ಲಿ ಮೊಸಳೆ ಕಾಣಿಸಿಕೊಂಡಿತ್ತು. ಗ್ರಾಮಸ್ಥರ ದೂರಿನ ಅನ್ವಯ ಮೊಸಳೆ ಸೆರೆ ಹಿಡಿಯುವ ಪರಿಣಿತರ ಸಹಾಯದೊಂದಿಗೆ ಮೊಸಳೆಯನ್ನು ಹಿಡಿಯಲು ಕಾರ್ಯಾಚರಣೆಗೆ ಇಳಿದ ತಂಡ ಮೊಸಳೆಯನ್ನು ಜೀವಂತವಾಗಿ ಹಿಡಿದು ಆಲಮಟ್ಟಿ ಕೃಷ್ಣಾ ನದಿಯ ಹಿನ್ನೀರಿನಲ್ಲಿ ಬಿಟ್ಟಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ರಮೇಶ ಮೆಟಗುಡ್ದ, ಗಸ್ತು ಅರಣ್ಯಪಾಲಕ ಯಲ್ಲಪ್ಪ ಹಿರೇಕುರುಬರ, ಗುರಣ್ಣ ಮಾಡಗಿ, ಈಶ್ವರಯ್ಯ ಹಿರೇಮಠ, ಸೇರಿದಂತೆ ಮೊಸಳೆ ಕರ್ಯಚರಣೆಯ ಪರಿಣಿತ ನಾಗೇಶ ಮೋಪಗಾರ ತಂಡದವರು ಭಾಗಿಯಾಗಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

