ಸಿಂದಗಿ: ಸಿಂದಗಿಯ ವಿದ್ಯಾಚೇತನ ಪ್ರಕಾಶನದಿಂದ ಕೊಡಮಾಡುವ ಬಾಲಸಾಹಿತ್ಯ ಪುರಸ್ಕಾರಕ್ಕಾಗಿ ೨೦೨೩ರಲ್ಲಿ ಮೊದಲ ಮುದ್ರಣವಾಗಿ ಪ್ರಕಟಗೊಂಡ ಮಕ್ಕಳ ಸಾಹಿತ್ಯ ಕೃತಿಗಳನ್ನು ಆಹ್ವಾನಿಸಲಾಗಿದೆ.
ಈ ಪ್ರಶಸ್ತಿಗೆ ಆಸಕ್ತ ಲೇಖಕರು ಮಕ್ಕಳ ಸಾಹಿತ್ಯದ ಕಥೆ, ಕವನ, ಕಾದಂಬರಿ ಈ ಮೂರು ಪ್ರಕಾರಗಳ ಕೃತಿಗಳನ್ನು ಕಳಿಸಬಹುದು.೨೦೨೩ರಲ್ಲಿ ಪ್ರಕಟಗೊಂಡ ಕೃತಿಯ ನಾಲ್ಕು ಪ್ರತಿಗಳನ್ನು ರಜಿಸ್ಟರ್ಡ ಅಂಚೆ ಅಥವಾ ಕೋರಿಯರ್ ಮೂಲಕ ಕಳುಹಿಸಬೇಕು. ಈ ಕೃತಿಗಳನ್ನು ಹಿಂತಿರುಗಿಸಲಾಗುವುದಿಲ್ಲ. ಕೃತಿಗಳನ್ನು ಮಾರ್ಚ ೩೧ರೊಳಗಾಗಿ ತಲುಪುವಂತೆ ಹ.ಮ. ಪೂಜಾರ, ನಿವೃತ್ತ ಶಿಕ್ಷಕರು, ಶ್ರೀ ಸಂಗಮೇಶ್ವರ ಕಾಲನಿ, ಸಿಂದಗಿ-೫೮೬ ೧೨೮, ಜಿಲ್ಲಾ ವಿಜಯಪುರ ಈ ವಿಳಾಸಕ್ಕೆ ಕಳುಹಿಸಬೇಕು. ಪ್ರಶಸ್ತಿಯು ಮೂರು ಪ್ರಕಾರಗಳಿಗೆ ತಲಾ ಐದು ಸಾವಿರ ನಗದು ಬಹುಮಾನ, ಪ್ರಶಸ್ತಿ ಫಲಕ ಹಾಗೂ ಸನ್ಮಾನ ಒಳಗೊಂಡಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಹ.ಮ.ಪೂಜಾರ ಮೊಬೈಲ್ ನಂ.:೯೪೪೮೬೪೪೨೨೮ಗೆ ಸಂಪರ್ಕಿಸಬೇಕು ಎಂದು ವಿದ್ಯಾಚೇತನ ಪ್ರಕಾಶನದ ಪ್ರಕಟಣೆ ತಿಳಿಸಿದೆ.
Subscribe to Updates
Get the latest creative news from FooBar about art, design and business.
Related Posts
Add A Comment
