ಬಸವನಬಾಗೇವಾಡಿ: ತಾಲೂಕಿನ ಕಣಕಾಲ ಗ್ರಾಮದ ವಿವಿದ್ದೋದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದಲ್ಲಿ ನಡೆದಿರುವ ಸಹಕಾರ ಕಾನೂನುಗಳ ಉಲ್ಲಂಘನೆ, ಹಣ ದುರ್ಬಳಕೆ ಸೇರಿದಂತೆ ಅಲ್ಲಿನ ನಡೆದಿರುವ ಅವ್ಯವಹಾರ ಕುರಿತು ಸಮಗ್ರ ತನಿಖೆಯಾಗಬೇಕು. ಈ ಕುರಿತು ವಿಚಾರಣೆ ಮಾಡಿದ ತನಿಖಾಧಿಕಾರಿಗಳು ತನಿಖೆ ಮಾಡಿ ತಪ್ಪಿತಸ್ಥರನ್ನು ಸೇವೆಯನ್ನು ವಜಾಗೊಳಿಸದೇ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಕೂಡಲೇ ಸಂಬಂಧಿಸಿದ ಸಹಕಾರ ಇಲಾಖೆಯ ಅಧಿಕಾರಿಗಳು ತನಿಖಾ ಅಧಿಕಾರಿ ಸೇರಿದಂತೆ ವಿಪಿಕೆಪಿಎಸ್ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣದ ಜಿಲ್ಲಾ ಉಸ್ತುವಾರಿ ರಾಜಶೇಖರ ಹುಲ್ಲೂರ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಮಹಾಂತೇಶ ಚಕ್ರವರ್ತಿ ಆಗ್ರಹಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಹಕಾರಿಯಲ್ಲಿ ನಡೆದಿರುವ ಅವ್ಯವಹಾರ, ಸಹಕಾರ ಕಾನೂನುಗಳ ಉಲ್ಲಂಘನೆ, ಖರ್ಚು ವೆಚ್ಚಗಳ ಮಾಹಿತಿ ನೀಡದೇ ಇರುವದು, ಹಣ ದುರ್ಬಳಕೆ, ಸಾಲಗಾರರಿಗೆ, ಠೇವಣಿದಾರರಿಗೆ ಸಮರ್ಪಕ ಮಾಹಿತಿ ನೀಡದೇ ಇರುವದರ ಬಗ್ಗೆ ಸಹಕಾರ ಇಲಾಖೆಗೆ ದೂರು ನೀಡಿದಾಗ ಸಹಕಾರಿ ಅಭಿವೃದ್ಧಿ ಅಧಿಕಾರಿಗಳನ್ನು ವಿಚಾರಣೆಗೆ ಕಳುಹಿಸಲಾಗಿತ್ತು. ಅವರು ಮುಖ್ಯಕಾರ್ಯನಿರ್ವಾಹಣಾಧಿಕಾರಿಯ ರಕ್ಷಣಾತ್ಮಕವಾಗಿ ನೀಡಿದ ಸಮಜಾಯಿಸಿಗಳನ್ನು ಒಪ್ಪಿಕೊಂಡಿದ್ದಾರೆ. ಅವರಿಗೆ ಅನ್ವೇಷಕ ಬುದ್ದಿಯಿಂದ ದೋಷಗಳನ್ನು ಗುರುತಿಸದೇ ಸರಿಪಡಿಸಲು ಸಾಕಷ್ಟು ಸಮಯ ನೀಡಿದ್ದಾರೆ. ಇದು ಸರಿಯಲ್ಲ. ಕೂಡಲೇ ಮೇಲಾಧಿಕಾರಿಗಳು ಇದರ ಬಗ್ಗೆ ಗಮನ ಹರಿಸಿ ಸೂಕ್ತ ತನಿಖೆ ಮಾಡಬೇಕೆಂದರು.
ಮುಖ್ಯಕಾರ್ಯನಿರ್ವಾಹಣಾಧಿಕಾರಿ ಅವರು ಅಧಿಕಾರ ವಹಿಸಿಕೊಂಡ ನಂತರ ಲೆಕ್ಕಪರಿಶೋಧನಾ ವರದಿ ಯಾವ ಸದಸ್ಯರಿಗೂ ನೀಡಿಲ್ಲ . ಇದುವರೆಗೂ ರೈತರಿಗೆ ಕಳೆದ ೯ ವರ್ಷದಿಂದ ಲಾಭಾಂಶ ನೀಡಿಲ್ಲ. ಕೋರಂ ಭರ್ತಿ ಇರದೇ ಇದ್ದರೂ ಸಭೆ ಮಾಡಲಾಗಿದೆ. ಮಾಹಿತಿ ಹಕ್ಕು ಅಧಿನಿಯಮದಡಿ ಮಾಹಿತಿ ಕೇಳಿದರೂ ಯಾವ ಮಾಹಿತಿ ನೀಡಲು ಬರುವುದಿಲ್ಲ ಎಂದು ಪತ್ರ ನೀಡಿದ್ದಾರೆ. ಪ್ರತಿ ರೈತರಿಂದ ಸ್ವಾದಿಲಾರಕ್ಕೆಂದು ರೂ.೨೫೦ ತೆಗೆದುಕೊಳ್ಳುತ್ತಾರೆ. ರೂ..೫೦೦ ಅನ್ನು ತೆಗೆದುಕೊಂಡರೂ ಅದಕ್ಕೆ ರಸೀದಿ ಸಂಖ್ಯೆ ಇಲ್ಲ. ಇವರು ಮಾಡಿರುವ ಅವ್ಯವಹಾರದ ಪ್ರತಿಯೊಂದು ದಾಖಲೆಗಳು ನಮ್ಮ ಬಳಿ ಇವೆ. ಇವರು ಬಿಜೆಪಿ ಪಕ್ಷದ ಕಾರ್ಯಕ್ರಮದಲ್ಲಿ ಸಹ ಭಾಗಿಯಾಗುವ ಮೂಲಕ ಸಕ್ರಿಯ ರಾಜಕಾರಣಿಯಾಗಿದ್ದಾರೆ. ಇದಕ್ಕೆ ಪುಷ್ಟಿಕರಿಸುವ ಅಗತ್ಯ ದಾಖಲೆಗಳಿವೆ. ಎಂದರು.
ಸಂಘದಲ್ಲಿ ಕುರಿಸಾಲ, ಟ್ರ್ಯಾಕ್ಟರ್ ಸಾಲ, ಪಶು ಸಾಲ, ದ್ರಾಕ್ಷಿ ಸಾಲ ಸಂಘದಿಂದ ಕೊಡುವ ಯೋಜನೆಗಳು ಯಾವ ರೈತರು ಫಲಾನುಭವಿಗಳಾಗಿದ್ದಾರೆ. ಎಷ್ಟು ಸಂಘದಿಂದ ಅವರಿಗೆ ನೀಡಿದ್ದಾರೆ ಎಂದ ತನಿಖೆಯಾಗಬೇಕಿದೆ. ಈ ಸಹಕಾರಿಯಲ್ಲಿ ಸಾಕಷ್ಟು ಅವ್ಯವಹಾರವಾಗಿದೆ. ಈ ಕುರಿತು ಸಹಕಾರ ಇಲಾಖೆಯ ಮೇಲಾಧಿಕಾರಿಗಳು, ನಮ್ಮ ಭಾಗದ ಶಾಸಕರು ಸೇರಿದಂತೆ ಸಂಬಂಧಿಸಿದ ಎಲ್ಲ ಅಧಿಕಾರಿಗಳು ಗಮನ ಹರಿಸಿ ಕೂಡಲೇ ತನಿಖೆ ಮಾಡಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯನ್ನು ವಜಾ ಗೊಳಿಸಬೇಕು. ಇದೇ ರೀತಿಯಲ್ಲಿ ಜಿಲ್ಲೆಯಲ್ಲಿರುವ ಎಲ್ಲ ಪಿಕೆಪಿಎಸ್ ಬ್ಯಾಂಕುಗಳಲ್ಲಿ ನಡೆದಿರುವ ವ್ಯವಹಾರದ ಕುರಿತು ಡಿಸಿಸಿ ಬ್ಯಾಂಕಿನ ಅಧಿಕಾರಿಗಳು ಗಮನ ಹರಿಸಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ರಾಜುಗೌಡ ಬಿರಾದಾರ, ತಾಲೂಕಾಧ್ಯಕ್ಷ ಸುನೀಲ ರಾಠೋಡ, ಸಾಬಣ್ಣ ಇಟಗಿ, ಹಣಮಂತ ದಿನ್ನಿ, ಪವನಕುಮಾರ ಹುಣಶ್ಯಾಳ, ಶಿವರಾಜ ಹಚ್ಯಾಳ, ಮಲ್ಲಿಕಾರ್ಜುನ ಕೋಟಿ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

