Author: editor.udayarashmi@gmail.com

ಮುದ್ದೇಬಿಹಾಳ: ಸಮಾಜದಲ್ಲಿ ತಮ್ಮ ಕಷ್ಟಗಳನ್ನು ಮರೆತು, ತನಗಾಗಿ ಅಲ್ಲದೇ ತಮ್ಮವರಿಗೋಸ್ಕರ ಬದುಕುವವಳು ಹೆಣ್ಣು ಅವಳು ಮನಸ್ಸು ಮಾಡಿದಲ್ಲಿ ಇಡೀ ಜಗತ್ತನ್ನೇ ಆಳಬಲ್ಲಳು ಎಂದು ವಿಜಯಪುರದ ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕಿ ಸಂಯುಕ್ತ ಪಾಟೀಲ ಹೇಳಿದರು.ತಾಲೂಕಿನ ಕುಂಟೋಜಿ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ದೇವರ ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ನಡೆದ ಮಹಿಳಾ ಸಂಪದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.ಸಧ್ಯದ ಕಾಲಘಟ್ಟದಲ್ಲಿ ಹಣಕ್ಕೆ, ಆಸ್ತಿಗೆ ಇರುವ ಮೌಲ್ಯಕ್ಕಿಂತ ಹೆಚ್ಚಿಗೆ ವಿದ್ಯೆಗೆ ಬೆಲೆ ಇದೆ. ಗಳಿಸಿದ ಹಣ, ಆಸ್ತಿ, ಸಂಪತ್ತು ಹಾಳಾಗಬಹುದು ಆದರೆ ವಿದ್ಯೆ ಯಾವತ್ತೂ ಹಾಳಾಗಲಾರದು. ಪ್ರತಿಯೊಬ್ಬರೂ ನಿಮ್ಮ ಮಕ್ಕಳಿಗೆ ವಿದ್ಯೆ ಕೊಡಿಸಬೇಕು. ಗಂಡು ಮಕ್ಕಳಷ್ಟೇ ಹೆಣ್ಣು ಮಕ್ಕಳಿಗೂ ಸಮಾನತೆ ಇರುವ ಸಧ್ಯದ ಬೆಳವಣಿಗೆಯಲ್ಲಿ ನಿಮ್ಮ ಮಗು ಹೆಣ್ಣು ಅಂತಾ ವಿದ್ಯೆಯಿಂದ ವಂಚಿತರಾಗಿ ಮಾಡಿದಲ್ಲಿ ಆ ಮಗು ಮುಂದೆ ಕಣ್ಣೀರಿಡುವ ಪರಿಸ್ಥಿತಿ ಎದುರಾಗಬಹುದು ಎಂದರು.ಸ್ವಯಂಭೂ ಆರ್ಟ್ ಫೌಂಡೇಶನ್ ನ ಸಂಸ್ಥಾಪಕಿ ದೀಕ್ಷಾ ಬಿಸೇ ಮಾತನಾಡಿ, ಪ್ರತೀ ಹೆಣ್ಣು ಮಗುವಿಗೆ ವಿದ್ಯೆಯ ಜೊತೆಗೆ ಕಲೆ ಸಂಸ್ಕೃತಿಯನ್ನೂ ಕಲಿಸಬೇಕು.…

Read More

‘ಆರೋಗ್ಯ ಅಂಗಳ’- ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ-ಗದಗ ಆ ಮನೆಯ ಯಜಮಾನ ದಿನದ ಮೂರು ಹೊತ್ತು ಅನ್ನವನ್ನು ಉಣ್ಣುತ್ತಾನೆ. ಆದರೆ ಆತನದು ಜೋರಾಗಿ ಗಾಳಿ ಬಿಟ್ಟರೆ ಹಾರಿ ಹೋಗುವಷ್ಟು ಸಣಕಲು ಮೈಕಟ್ಟು. ಹಾಗಾದರೆ ಅನ್ನ ತಿಂದರೆ/ಉಂಡರೆ ಮೈ ಬರುವುದಿಲ್ಲವೇ!?? ಇನ್ನೊಂದು ಮನೆಯಲ್ಲಿ ಒಂದು ಚೂರು ಸಿಹಿಯನ್ನು ಬಾಯಿಗೆ ಹಾಕದ, ಸಕ್ಕರೆಯನ್ನು ತಿನ್ನದ, ಕೇವಲ ಚಪಾತಿ, ರೊಟ್ಟಿ, ತರಕಾರಿ, ಹಣ್ಣುಗಳನ್ನು ಸೇವಿಸುವ ಆ ಮನೆಯ ಪ್ರತಿಯೊಬ್ಬ ಸದಸ್ಯರು ತುಸು ಸ್ಥೂಲಕಾಯರೇ??? ಮತ್ತೊಂದೆಡೆ ಇನ್ನೊಬ್ಬ ವ್ಯಕ್ತಿ ಏನೆಲ್ಲವನ್ನು ತಿಂದು ಉಂಡು ಅರಗಿಸಿಕೊಂಡರೂ ಆತನದ್ದು ಕೃಶ ಶರೀರ. ಹಾಗಾದರೆ ಆತನ ಬೊಜ್ಜು ಹೋಯಿತೆಲ್ಲಿಗೆ ?? ಮತ್ತೂ ಕೆಲವು ಜನ ಅದೆಷ್ಟೇ ವಿವಿಧ ಬಗೆಯ ಡಯಟ್ಗಳನ್ನು ಪಾಲಿಸಿದರೂ ಆ ಸಮಯಕ್ಕೆ ಇಳಿಯುವ ತೂಕ ಕೆಲವೇ ತಿಂಗಳುಗಳಲ್ಲಿ ‘ಹೋದೆಯಾ ಪಿಶಾಚಿ ಅಂದರೆ ಬಂದೆ ಗವಾಕ್ಷಿಯಲಿ’ ಎಂಬಂತೆ ಮತ್ತೆ ಮತ್ತೆ ಕಾಡುತ್ತದೆ. ಹಾಗಾದರೆ ಅವರ ಡಯೆಟ್ ಸುಳ್ಳೇ!? ಪ್ರತಿ ಆರು ತಿಂಗಳು, ವರ್ಷಕ್ಕೊಮ್ಮೆ ಪ್ರಕೃತಿ ಚಿಕಿತ್ಸಾ ಕೇಂದ್ರಗಳಲ್ಲಿ ಅವರು…

Read More

ಆಲಮಟ್ಟಿ: ಪ್ರಯಾಸದ ಪ್ರಯಾಣವಾಗಿದ್ದ ರೈಲು ಈಗ ಆರಾಮದಾಯಕ ಪ್ರಯಾಣವಾಗುತ್ತಿದೆ. ಇದಕ್ಕೆ ಕಾರಣ ದೇಶದ ಪ್ರಧಾನಿ ನರೇಂದ್ರ ಮೋದಿ ಎಂದು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಅಭಿಪ್ರಾಯಪಟ್ಟರು.ಆಲಮಟ್ಟಿ ರೈಲು ನಿಲ್ದಾಣದಲ್ಲಿ ಸೋಮವಾರ ನಡೆದ, 15.21 ಕೋಟಿ ರೂ ವೆಚ್ಚದಲ್ಲಿ ಆಲಮಟ್ಟಿ ರೈಲು ನಿಲ್ದಾಣದ ಆಧುನೀಕರಣದ ಚಾಲನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಬಡ, ಮಧ್ಯಮ ವರ್ಗದವರೇ ಹೆಚ್ಚಿನ ಪ್ರಮಾಣದಲ್ಲಿ ಪ್ರಯಾಣಿಸುವ ರೈಲ್ವೆ ಸಾರಿಗೆಯೂ ವಿಮಾನ ಸಾರಿಗೆಯಷ್ಟೇ ಸುಖಕರವಾಗಿರಲಿ ಎನ್ನುವ ಉದ್ದೇಶದಿಂದ ದೇಶಾದ್ಯಂತ ರೈಲು ನಿಲ್ದಾಣ ಹಾಗೂ ರೈಲ್ವೆಯ ಸ್ವರೂಪವನ್ನೇ ಬದಲಾವಣೆ ಮಾಡಲಾಗುತ್ತಿದೆ ಎಂದರು.ಇಡೀ ದೇಶಾದ್ಯಂತ ಬಹುತೇಕ ರೈಲ್ವೆ ಮಾರ್ಗಗಳು ಡಬಲಿಂಗ್ ಜತೆಗೆ ವಿದ್ಯುದೀಕರಣಗೊಂಡಿವೆ ಎಂದರು. ಸಾಗರಮಾಲಾ, ಪರ್ವತಮಾಲಾ, ಭಾರತಮಾಲಾ ಯೋಜನೆಯಿಂದ ಇಡೀ ದೇಶಾದ್ಯಂತ ಸಾರಿಗೆ ಕ್ಷೇತ್ರದಲ್ಲಿ ಭಾರಿ ಬದಲಾವಣೆಯಾಗಿದೆ ಎಂದರು.ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಕವಿತಾ ಬಡಿಗೇರ ಅಧ್ಯಕ್ಷತೆ ವಹಿಸಿದ್ದರು.ರೈಲ್ವೆ ಅಧಿಕಾರಿ ಎಂ. ಚೇತನಕುಮಾರ, ರೈಲ್ವೆ ಇಲಾಖೆಯ ಹಿರಿಯ ಹಣಕಾಸು ವ್ಯವಸ್ಥಾಪಕ ಜಿ.ಬೂ.ಝಕಾಬ್, ಎಂ.ಚೇತನಕುಮಾರ, ಚಂದ್ರಹಾಸ್, ಜಯಶ್ರೀ ರಾಠೋಡ, ಲಕ್ಷ್ಮೀ ರಾಠೋಡ, ರಮೇಶ ಆಲಮಟ್ಟಿ, ಕಲ್ಲು ಸೊನ್ನದ,…

Read More

ಇಂದು ರಾಜ್ಯಸಭೆ ಚುನಾವಣೆ | ನಾಲ್ಕು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಐವರು ಅಭ್ಯರ್ಥಿಗಳು ಸ್ಪರ್ಧೆ ಬೆಂಗಳೂರ: ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಇಂದು ಸೋಮವಾರ(ಫೆ.27) ಚುನಾವಣೆ ನಡೆಯಲಿದೆ. ಇದಕ್ಕಾಗಿ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಮೈತ್ರಿ ಅಭ್ಯರ್ಥಿ ಕಣದಲ್ಲಿ ಇರುವುದರಿಂದ ಚುನಾವಣಾ ಕಣ ರಂಗೇರಿದೆ.ಕಣದಲ್ಲಿ ಐವರು ಅಭ್ಯರ್ಥಿಗಳು:ನಾಲ್ಕು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಐವರು ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಕಾಂಗ್ರೆಸ್‌ನಿಂದ ಅಜಯ್ ಮಾಕನ್, ಜಿಸಿ ಚಂದ್ರಶೇಖರ್, ಡಾ. ಸೈಯದ್ ನಾಸೀರ್ ಹುಸೇನ್, ಬಿಜೆಪಿಯಿಂದ ನಾರಾಯಣ ಎಸ್ ಭಾಂಡಗೆ, ಮೈತ್ರಿ ಅಭ್ಯರ್ಥಿಯಾಗಿ ಡಿ ಕುಪೇಂದ್ರ ರೆಡ್ಡಿ ಕಣದಲ್ಲಿದ್ದಾರೆ.ವಿಧಾನಸಭೆಯಲ್ಲಿ ಕಾಂಗ್ರೆಸ್ ಬಲಾಬಲ 135 ಇತ್ತು. ಇದೀಗ ರಾಜಾ ವೆಂಕಟಪ್ಪ ನಾಯಕ ಮೃತಪಟ್ಟ ಹಿನ್ನೆಲೆಯಲ್ಲಿ ಸದ್ಯ ಕಾಂಗ್ರೆಸ್ ಬಲ 134 ಆಗಿದೆ. ಇನ್ನು ಬಿಜೆಪಿ 66, ಜೆಡಿಎಸ್ 19 ಸ್ಥಾನಗಳನ್ನು ಹೊಂದಿವೆ. ನಾಲ್ವರು ಪಕ್ಷೇತರ ಶಾಸಕರಿದ್ದಾರೆ.ಪಕ್ಷೇತರರು ನಾಲ್ವರೂ ಕಾಂಗ್ರೆಸ್‌ ಅಭ್ಯರ್ಥಿಗೆ ಮತ ಹಾಕುವ ಸಾಧ್ಯತೆ ಇದೆ. ವಿಶೇಷವಾಗಿ ಗಾಲಿ ಜನಾರ್ದನ ರೆಡ್ಡಿ ಸೋಮವಾರ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ…

Read More

ಅತ್ಯಾಚಾರ ಯತ್ನದ ಆರೋಪಿಗಳ ಬಂಧನಕ್ಕೆ ಮಾದಿಗರ ಸಂಘ ಆಗ್ರಹ ವಿಜಯಪುರ: ಕರ್ನಾಟಕ ಮಾದಿಗರ ಸಂಘ ವಿಜಯಪುರ ವತಿಯಿಂದ ಮುದ್ದೇಬಿಹಾಳ ತಾಲೂಕಿನ ಕವಡಿಮಟ್ಟಿ ಗ್ರಾಮದ ದಲಿತ ಯುವತಿ ದುರ್ಗಮ್ಮ ಮಾದರ ಮೇಲೆ ದೌರ್ಜನ್ಯ ಮತ್ತು ಹಲ್ಲೆ ಮಾಡಿ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಗಳನ್ನು ಬಂದಿಸಲು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ಸಂಘದ ವಿಜಯಪುರ ಜಿಲ್ಲಾಧ್ಯಕ್ಷ ಶ್ರೀಶೈಲ ರತ್ನಾಕರ್ ಮಾತನಾಡಿ ಕವಡಿಮಟ್ಟಿ ಗ್ರಾಮದ ಯುವತಿ ದುರ್ಗಮ್ಮ ಮಾದರ ಬಡ ಕೂಲಿ ಕಾರ್ಮಿಕರಾಗಿದ್ದು ಅದೇ ಗ್ರಾಮದ ಹೊಲದಲ್ಲಿ ಕಬ್ಬು ಕಡಿಯಲು ಕೂಲಿಗೆ ಕೆಲಸಕ್ಕೆ ಹೋದಾಗ ಹೊಲದ ಮಾಲೀಕನ ಸೊಸೆ ಸಾಬವ್ವ ಮಂಜುನಾಥ್ ವಾಲಿಕಾರ, ಸಂಗಪ್ಪ ವಾಲಿಕಾರ, ಬಸಪ್ಪ ಸಂಗಪ್ಪ ವಾಲಿಕಾರ್, ಇವರು ಕ್ಷುಲ್ಲಕ ಕಾರಣಕ್ಕೆ ಯುವತಿಯ ಮೇಲೆ ಹಲ್ಲೆ ಮಾಡಿ ಜಾತಿನಿಂದನೆ ಮಾಡಿರುತ್ತಾರೆ. ಸುರೇಶನು ಕೂಲಿ ಕಾರ್ಮಿಕರ ಎದುರಿನಲ್ಲಿಯೇ ಯುವತಿಯ ಮೇಲೆ ಬಿದ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಇದಕ್ಕೆ ಅವನ ಸೋದರಿ ಸಾಬವ್ವ ವಾಲಿಕಾರ್ ಸಹಕರಿಸಿರುತ್ತಾಳೆ. ಯುವತಿಯನ್ನು ಅವರ ಸಂಬಂಧಿಕರು ಆಸ್ಪತ್ರೆಗೆ ದಾಖಲಿಸಿ ಪೊಲೀಸ್ ಠಾಣೆಯಲ್ಲಿ ದೂರನ್ನು…

Read More

ಮುದ್ದೇಬಿಹಾಳ: ಸಾಹಿತಿಗಳು ಇಷ್ಟಪಟ್ಟು ಬರೆದು, ಕಷ್ಟಪಟ್ಟು ಮುದ್ರಸಿ ಪುಸ್ತಕಗಳನ್ನು ಹೊರತರುತ್ತಾರೆ. ಆದರೆ ಆ ಪುಸ್ತಕಗಳನ್ನು ಕೊಂಡು ಓದುವ ಓದುಗರ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವುದು ಸಾಹಿತಿಗಳ ಆತಂಕಕ್ಕೆ ಕಾರಣವಾಗಿದೆ ಎಂದು ಹಿರಿಯ ಸಾಹಿತಿ ಡಾ.ಸತ್ಯಾನಂದ ಪಾತ್ರೋಟ ಕಳವಳ ವ್ಯಕ್ತಪಡಿಸಿದರು.ತಾಲೂಕಿನ ಅಮರಗೋಳ ಗ್ರಾಮದಲ್ಲಿ ಬಾವೈಕ್ಯ ಸಾಹಿತ್ಯ ವೇದಿಕೆ, ಡಾ.ಸಿಂಪಿಲಿಂಗಣ್ಣ ಸಾಹಿತ್ಯ ವೇದಿಕೆ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ದಿ.ಮಲಕಣ್ಣ ಮಾಸ್ತರ ಇವರ ೭ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ದತ್ತಿ ಕಾರ್ಯಕ್ರಮದಲ್ಲಿ “ಸಾಹಿತ್ಯ ರತ್ನ” ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.ಇಂದಿನ ಮೊಬೈಲ್ ಹಾಗೂ ಟಿ.ವ್ಹಿ.ಹಾವಳಿಗೆ ಸಿಲುಕಿ ಪುಸ್ತಕಗಳು ಓದುಗರ ಕೈಯಲ್ಲಿರದೆ ಗೆದ್ದಲು ಹತ್ತುತ್ತಿರುವುದು ವಿಷಾದನೀಯ. ಬಡತನದ ಬವಣೆಯಲ್ಲಿ ನೊಂದು ಬೆಂದು ಕಷ್ಟದಲ್ಲಿಯೇ ಕೈತೊಳೆದುಕೊಂಡು ಜೀವನ ಸಾಗಿಸಿದ್ದ ಅದೆಷ್ಟೋ ಸಾಹಿತಿಗಳಿಗೆ ಕೈ ಹಿಡಿದದ್ದೇ ಸಾಹಿತ್ಯ ಕ್ಷೇತ್ರ. ಇತ್ತೀಚಿನ ದಿನಮಾನಗಳಲ್ಲಿ ಪುಸ್ತಕಗಳನ್ನು ಕೊಂಡು ಓದುವವರ ಸಂಖ್ಯೆ ಕಡಿಮೆಯಾಗುತ್ತಿರುವದರಿಂದ ಬಡಸಾಹಿತಿಗಳ ಬದುಕು ಗಂಭೀರ ಹಂತ ತಲುಪಿದೆ. ಪುಸ್ತಕಗಳನ್ನು ಕೊಂಡುಕೊಂಡು ಓದುವ ಹವ್ಯಾಸವನ್ನು ಪ್ರತಿಯೊಬ್ಬ ಓದುಗರು ಬೆಳಸಿಕೊಳ್ಳಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆ…

Read More

ಯಡ್ರಾಮಿ: ಭಕ್ತಿ ಪರಂಪರೆಗೆ ಮತ್ತು ಅಂಕಿತ ಸಾಹಿತ್ಯಕ್ಕೆ ಅಡಿಪಾಯ ಹಾಕಿದ ಕೀರ್ತಿ ಕೊಂಡಗೂಳಿ ಕೇಶಿರಾಜನಿಗೆ ಸಲ್ಲುತ್ತದೆ ಎಂದು ಉಪನ್ಯಾಸಕ ಡಾ| ಕಾಶಿಲಿಂಗಯ್ಯ ಮಠ ಹೇಳಿದರು.ಯಡ್ರಾಮಿಯ ಸಗರಾದ್ರಿ ಸಾಂಸ್ಕೃತಿಕ ಸಂಗಮ ಟ್ರಸ್ಟ್ ಹಾಗೂ ಶ್ರೀ ಮುರಘೇಂದ್ರ ಶಿವಯೋಗಿ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಿದ್ದ ಹುಣ್ಣಿಮೆಯ ಸಂಗಮ -57ರ ಆನ್ಲೈನ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕೊಂಡಗೂಳಿ ಕೇಶಿರಾಜ ಬಸವಪೂರ್ವದ ವೀರಶೈವ ಕವಿ. 11ನೇ ಶತಮಾನದ ಆರಂಭದ ಕಾಲಘಟ್ಟದಲ್ಲಿ ಕಲ್ಯಾಣ ಚಾಲುಕ್ಯರ ಅರಸ 6ನೇ ವಿಕ್ರಮಾದಿತ್ಯನ ಅರಸೊತ್ತಿಗೆಯಲ್ಲಿ ಮಹಾ ದಂಡನಾಯಕನಾಗಿ, ಸಂದಿವಿಗ್ರಹಿಯಾಗಿ ಕೆಲಸ ಮಾಡುವುದರ ಜೊತೆಗೆ ಕೇಶಿರಾಜ ಒಬ್ಬ ಅಪ್ರತಿಮ ಶಿವಭಕ್ತನಾಗಿದ್ದನು. ಈ ಕೊಂಡಗೂಳಿ ಕೇಶಿರಾಜ ಯಡ್ರಾಮಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಕೊಂಡಗೂಳಿ ಈತನ ಹುಟ್ಟೂರು. ಶಿವಾನುಭವದ ಅತಿಯಾದ ಹಂಬಲದಿಂದ ಅರಸೊತ್ತಿಗೆಯನ್ನೇ ಧಿಕ್ಕರಿಸಿ ಹುಟ್ಟೂರು ಕೊಂಡಗೂಳಿ ಗ್ರಾಮಕ್ಕೆ ಬಂದು ನೆಲೆ ನಿಲ್ಲುತ್ತಾನೆ. ಕೇಶಿರಾಜನು ಮಂತ್ರ ಮಹತ್ವದ ಕಂದ, ಶೀಲ ಮಹತ್ವದ ಕಂದ, ಸೇರಿದಂತೆ ಏಳಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾನೆ. ಓಂ ನಮಃ ಶಿವಾಯ ಈತನ ಕಂದ ಪದ್ಯಗಳ ವಚನಾಂಕಿತವಾಗಿದೆ.…

Read More

ವಿಜಯಪುರ: ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಅವರು ಫೆ.೨೫ರಂದು ತಾಳಿಕೋಟಿ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಕಾಮಗಾರಿಗಳ ಪರಿಶೀಲನೆ ನಡೆಸಿದರು.ಕೊಣ್ಣೂರ ಗ್ರಾಮದ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನಿರ್ಮಿಸಲಾದ ಶಾಲಾ ಕಂಪೌಂಡ್, ಪ್ರಗತಿ ಹಂತದಲ್ಲಿರುವ ಅಡುಗೆ ಕೋಣೆ ಮತ್ತು ಹೈಟೆಕ್ ಶೌಚಾಲಯ ಕಾಮಗಾರಿ ವೀಕ್ಷಣೆ ಮಾಡಿ, ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆಯೂ, ಕುಡಿಯುವ ನೀರು, ಶಾಲಾ ಆವರಣದಲ್ಲಿ ವಿವಿಧ ಸಸಿಗಳನ್ನು ನೆಡಲು ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು. ಬಳಿಕ ಕೊಣ್ಣೂರ ಗ್ರಾಮದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸಲಾದ ಐತಿಹಾಸಿಕ ಕಲ್ಯಾಣಿ ಕಾಮಗಾರಿ ಪರಿಶೀಲನೆ ನಡೆಸಿದರು.ಪಡೆಕನೂರ ಗ್ರಾಮಕ್ಕೆ ಭೇಟಿ ನೀಡಿ, ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ನಿರ್ಮಾಣವಾದ ಸಮುದಾಯ ಶೌಚಾಲಯ, ಸ್ವಚ್ಛ ಭಾರತ ಮಿಷನ್ ಯೋಜನೆ ಮತ್ತು ಮಹಾತ್ಮ ಗಾಂಧಿ ನರೇಗಾ ಯೋಜನೆಯ ಒಗ್ಗೂಡಿಸುವಿಕೆಯಡಿ ನಿರ್ಮಾಣವಾದ ಬೂದು ನೀರು ನಿರ್ವಹಣಾ ಕಾಮಗಾರಿ ಪರಿಶೀಲಿಸಿದರು. ಸಮರ್ಪಕವಾಗಿ ನಿರ್ವಹಿಸಲು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ…

Read More

ಆಲಮೇಲ ಹಾಗೂ ಸಿಂದಗಿ ತಾಲೂಕಿನ ವಿವಿಧ ಸ್ಥಳಗಳಿಗೆ ಭೇಟಿ-ಪರಿಶೀಲನೆ ವಿಜಯಪುರ: ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕುಡಿಯುವ ನೀರಿಗೆ ಪ್ರಥಮಾಧ್ಯತೆ ನೀಡಿ, ಸಮರ್ಪಕವಾಗಿ ಕುಡಿಯುವ ನೀರು ಪೂರೈಸಬೇಕು ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.ಫೆ.೨೪ರಂದು ಸಿಂದಗಿ ಹಾಗೂ ಆಲಮೇಲ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ವಿವಿಧ ಇಲಾಖೆಗಳಡಿ ಕೈಗೊಂಡ ಕಾಮಗಾರಿಗಳ ಪರಿಶೀಲನೆ ನಡೆಸಿದ ಅವರು, ಕುಡಿಯುವ ನೀರು ಒದಗಿಸಲು ಕ್ರಮವಹಿಸಿಬೇಕು. ಯಾವುದೇ ರೀತಿಯ ಸಮಸ್ಯೆಯಾಗದಂತೆ ಗಮನ ಹರಿಸಿ ಕಾರ್ಯ ನಿರ್ವಹಿಸಬೇಕು ಎಂದು ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.ಆಲಮೇಲ ತಾಲೂಕಿನ ಕಡಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಾಣಗೊಂಡ ಶಾಲಾ ಆಟದ ಮೈದಾನ, ಶೌಚಾಲಯ, ಶಾಲಾ ಕಾಂಪೌಂಡ್ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಪರಿಶೀಲಿಸಿ, ಪ್ರಗತಿಯಲ್ಲಿರುವ…

Read More